ಕಾಂಗ್ರೆಸ್ ಗೆದ್ದರೆ ಕರ್ನಾಟಕದಲ್ಲಿ ಮತ್ತೆ ಪಿಎಫ್‌ಐ ಸಕ್ರಿಯ: ಅಮಿತ್ ಶಾ
ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಬರಬೇಕು ಎಂದಾದರೆ ರಾಜ್ಯದಲ್ಲೂ ಬಿಜೆಪಿ ಸರ್ಕಾರ ರಚನೆಯಾಗಬೇಕು. ಕರಾವಳಿ ಜಿಲ್ಲೆಗಳು ಸುರಕ್ಷತವಾಗಿರಬೇಕಾದರೆ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಬೇಕು. ಕಾಂಗ್ರೆಸ್‌ಗೆ ನೀಡುವ ಮತ ರಾಜ್ಯದಲ್ಲಿ ರಿವರ್ಸ್ ಗೇರ್ ಸರ್ಕಾರ ಅಧಿಕಾರಕ್ಕೆ ತರುತ್ತದೆ. ಆ ಸರ್ಕಾರ ಕರ್ನಾಟಕಕ್ಕೆ ಸುರಕ್ಷತೆ ನೀಡುವುದಿಲ್ಲ, ಅನುದಾನ ನೀಡುವುದಿಲ್ಲ, ಅಭಿವೃದ್ಧಿ ನೀಡುವುದಿಲ್ಲ ಎಂದ ಅಮಿತ್ ಶಾ.
ಕಾಪು/ಕುಂದಾಪುರ(ಏ.30): ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಕರ್ನಾಟಕವನ್ನು ಸುರಕ್ಷಿತವಾಗಿಟ್ಟಿದೆ. ನಮಗೆ ನೀಡುವ ಒಂದು ಮತದಿಂದ ಬಿಜೆಪಿ ರಾಜ್ಯದಲ್ಲಿ ಮಾತ್ರವಲ್ಲದೆ, 2024ರಲ್ಲಿ ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲೂ ಬಿಜೆಪಿ ಗೆದ್ದು ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪಿಎಫ್‌ಐ ರಾಜ್ಯದಲ್ಲಿ ಮತ್ತೆ ಸಕ್ರಿಯವಾಗುತ್ತದೆ. ಡಬಲ್ ಎಂಜಿನ್ ಸರ್ಕಾರ ಬೇಕೋ, ಬೇಡ್ವೋ ಎಂದು ನೀವೇ ನಿರ್ಧರಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಉಡುಪಿ ಜಿಲ್ಲೆಯ ಕಟಪಾಡಿಯ ಗ್ರೀನ್ ವ್ಯಾಲಿ ಮೈದಾನದಲ್ಲಿ ಶನಿವಾರ ಬೃಹತ್ ಚುನಾವಣಾ ರಾರಯಲಿ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರದಲ್ಲಿ ರೋಡ್ ಶೋನಲ್ಲಿ ಪಾಲ್ಗೊಂಡು ಮಾತನಾಡಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಉಡುಪಿಯಲ್ಲಿ ಅಮಿತ್ ಶಾ ಬಿರುಸಿನ ಪ್ರಚಾರ: ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳಿಗೆ ತಿರುಗೇಟು
ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಬರಬೇಕು ಎಂದಾದರೆ ರಾಜ್ಯದಲ್ಲೂ ಬಿಜೆಪಿ ಸರ್ಕಾರ ರಚನೆಯಾಗಬೇಕು. ಕರಾವಳಿ ಜಿಲ್ಲೆಗಳು ಸುರಕ್ಷತವಾಗಿರಬೇಕಾದರೆ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಬೇಕು. ಕಾಂಗ್ರೆಸ್‌ಗೆ ನೀಡುವ ಮತ ರಾಜ್ಯದಲ್ಲಿ ರಿವರ್ಸ್ ಗೇರ್ ಸರ್ಕಾರ ಅಧಿಕಾರಕ್ಕೆ ತರುತ್ತದೆ. ಆ ಸರ್ಕಾರ ಕರ್ನಾಟಕಕ್ಕೆ ಸುರಕ್ಷತೆ ನೀಡುವುದಿಲ್ಲ, ಅನುದಾನ ನೀಡುವುದಿಲ್ಲ, ಅಭಿವೃದ್ಧಿ ನೀಡುವುದಿಲ್ಲ ಎಂದರು.
ಯಾವ ಗ್ಯಾರಂಟಿ ಬೇಕು?:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ತುಷ್ಟೀಕರಣ ಗ್ಯಾರಂಟಿ, ವಂಶವಾದ ಗ್ಯಾರಂಟಿ, ಪಿಎಫ್‌ಐ ನಿಷೇಧ ರದ್ದು ಗ್ಯಾರಂಟಿ, ಸಮಾಜದಲ್ಲಿ ಅಸುರಕ್ಷತೆ ಗ್ಯಾರಂಟಿ ಎಂದು ಲೇವಡಿ ಮಾಡಿದ ಶಾ, ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದರೆ ಅಭಿವೃದ್ಧಿ, ಶಾಂತಿ, ಸಮೃದ್ಧಿ, ಸುರಕ್ಷತೆಯ ಗ್ಯಾರಂಟಿ ಸಿಗುತ್ತದೆ. ನಿಮಗೆ(ಮತದಾರರಿಗೆ) ಯಾವ ಗ್ಯಾರಂಟಿ ಬೇಕು ಎಂದವರು ಇದೇ ವೇಳೆ ಮತದಾರರನ್ನು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಅಸ್ತಿತ್ವದಲ್ಲಿರುವುದೇ ಗ್ಯಾರಂಟಿ ಇಲ್ಲ. ಇನ್ನು ಅದರ ಗ್ಯಾರಂಟಿಗಳನ್ನು ಯಾರು ನಂಬುತ್ತಾರೆ? ಗುಜರಾತ್ ಚುನಾವಣೆ ಸಂದರ್ಭದಲ್ಲೂ ಕಾಂಗ್ರೆಸ್ ಸಾಕಷ್ಟುಗ್ಯಾರಂಟಿಗಳನ್ನು ನೀಡಿತ್ತು. ಆದರೆ ಜನ ಮತ ನೀಡಲಿಲ್ಲ. ಅಸ್ಸಾಂ, ತ್ರಿಪುರ, ಮಣಿಪುರಗಳಲ್ಲೂ ಗ್ಯಾರಂಟಿಗಳನ್ನು ಘೋಷಣೆ ಮಾಡಿದರೂ ಅಲ್ಲಿನ ಜನ ಕಾಂಗ್ರೆಸ್ ಮುಕ್ತ ಮಾಡಿದರು. ಈಗ ಕರ್ನಾಟಕಕ್ಕೆ ಗ್ಯಾರಂಟಿ ಕಾರ್ಡ್ ತೆಗೆದುಕೊಂಡು ಬಂದಿದ್ದಾರೆ ಎಂದು ಶಾ ವ್ಯಂಗ್ಯವಾಡಿದರು.
ಲೆಕ್ಕ ತನ್ನಿ:
ಮನಮೋಹನ್ ಸಿಂಗ್ ಸರ್ಕಾರ ರಾಜ್ಯದಲ್ಲಿ .99,000 ಕೋಟಿ ಅನುದಾನ ನೀಡಿದ್ದರೆ, ಮೋದಿ ಸರ್ಕಾರ .2.26 ಕೋಟಿ ಅನುದಾನ ನೀಡಿದೆ. ಮೋದಿ ಸರ್ಕಾರ ಆರ್ಥಿಕತೆಯಲ್ಲಿ ವಿಶ್ವದ 11ನೇ ಸ್ಥಾನದಲ್ಲಿದ್ದ ದೇಶವನ್ನು 5ನೇ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಸೋನಿಯಾ-ಮನಮೋಹನ್ ಸಿಂಗ್ ಸರ್ಕಾರದ 10 ವರ್ಷಗಳ ಸಾಧನೆ ಲೆಕ್ಕ ತರಲಿ, ನಾವು ಮೋದಿ ಸರ್ಕಾರದ 5 ವರ್ಷಗಳ ಸಾಧನೆಗಳ ಲೆಕ್ಕ ತರುತ್ತೇವೆ, ಯಾವ ಸರ್ಕಾರ ಬೇಕು ಜನರೇ ನಿರ್ಧರಿಸಲಿ ಎಂದವರು ಸವಾಲು ಹಾಕಿದರು.
ಉಡುಪಿ: ಮೀನು ಮುಟ್ಟಿ ದೇಗುಲ ಪ್ರವೇಶಕ್ಕೆ ಹಿಂಜರಿದ ರಾಹುಲ್..!
ವಿಷ ಸರ್ಪ ಅಂದಿದ್ದು ಸರಿಯಾ?:
ಕಾಂಗ್ರೆಸ್ ನಾಯಕರು ಮೋದಿ ಅವರನ್ನು ವಿಷದ ಹಾವು ಎಂದು ಕರೆದರು. ಹೀಗೆ ಕರೆಯುವುದು ಸರಿಯಾ ಎಂದು ಪ್ರಶ್ನಿಸಿದ ಅಮಿತ್ ಶಾ, ಹಿಂದೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ, ಬಿ.ಕೆ.ಹರಿಪ್ರಸಾದ್ ಕೂಡ ಮೋದಿ ಇದೇ ರೀತಿಯ ಭಾಷೆ ಬಳಸಿದ್ದರು. ಆದರೆ ಬಿಜೆಪಿ ಇಂಥ ಭಾಷೆ ಬಳಸುವುದು ಬೇಡ. ನಾವು ಅಭಿವೃದ್ಧಿಗಾಗಿ ಮೋದಿಗೆ ಮತ ಹಾಕಿ ಎನ್ನೋಣ ಎಂದು ಸಲಹೆ ಮಾಡಿದರು.
ನೆಟ್ಟಾರು ಕೊಲೆ ಕಾರಣ ಪಿಎಫ್‌ಐ ನಿಷೇಧ: ಕರಾವಳಿ ಕರ್ನಾಟಕ ಬಿಜೆಪಿಯ ಭದ್ರಕೋಟೆಯಾಗಿದೆ. ಈ ಬಾರಿ ಕರಾವಳಿಯಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಬಾರದು. ಕರ್ನಾಟಕದಲ್ಲಿ ಮಂಗಳೂರು ಕುಕ್ಕರ್ ಬಾಂಬ್, ಡಿಜೆಹಳ್ಳಿ ಕೆಜೆ ಹಳ್ಳಿ ಘಟನೆ ಸಹಿತ 24 ಪ್ರಕರಣಗಳನ್ನು ಎನ್‌ಐಎಗೆ ವಹಿಸಿದ್ದೇವೆ. ನೆಟ್ಟಾರು ಪ್ರವೀಣ್ ಕೊಲೆಗೆ ಕಾರಣವಾದ ಪಿಎಫ್‌ಐಯನ್ನು ನಿಷೇಧಿಸಿ, ಅದರ 92 ಮಂದಿ ಕಾರ್ಯಕರ್ತರನ್ನು ಹುಡುಕಿ ಜೈಲಿಗಟ್ಟಿದ್ದೇವೆ. ಹಿಂದೆ ಸಿದ್ದರಾಮಯ್ಯ ಪಿಎಫ್‌ಐ ಕಾರ್ಯಕರ್ತರನ್ನು ರಕ್ಷಿಸಿತ್ತು. ಬಿಜೆಪಿ ಪಿಎಫ್‌ಐಯನ್ನು ನಿಷೇಧಿಸಿ ದೇಶವನ್ನು ರಕ್ಷಿಸಿದೆ ಎಂದರು.