ಕಾಂಗ್ರೆಸ್ ಮೂವರನ್ನು ಡಿಸಿಎಂ ಮಾಡಿದ್ರೆ, ಎಲ್ಲ ಸಮುದಾಯಗಳ ಬೆಂಬಲ ಸಿಗುತ್ತದೆ: ಸಚಿವ ಕೆ.ಎನ್. ರಾಜಣ್ಣ
ರಾಜ್ಯದಲ್ಲಿ ಮೂರು ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನಗಳನ್ನು ಸೃಷ್ಟಿ ಮಾಡಿದರೆ, ಎಲ್ಲಾ ಸಮುದಾಯಗಳ ಬೆಂಬಲ ಸಿಗುತ್ತದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.

ತುಮಕೂರು (ಸೆ.16): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಮೂರು ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನಗಳನ್ನು ಸೃಷ್ಟಿ ಮಾಡಿದರೆ, ಎಲ್ಲಾ ಸಮುದಾಯಗಳು ನಮ್ಮಗೆ ಬೆಂಬಲ ನೀಡಲು ಅನುಕೂಲ ಆಗುತ್ತೆದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ಈ ಕುರಿತು ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರಿಗೆ ಹಾಗೂ ವೀರಶೈವ ಸಮುದಾಯಗಳಿಗೆ ಉಪಮುಖ್ಯಮಂತ್ರಿ ಸೃಷ್ಟಿ ಮಾಡಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಪತ್ರ ಬರೆಯಲು ಇಚ್ಚಿಸಿದ್ದೇನೆ. ಇವತ್ತು ಪತ್ರ ಬರೆಯುತ್ತೇನೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಹೈಕಮಾಂಡ್ ಮುಖಂಡರನ್ನು ಭೇಟಿ ಮಾಡುತ್ತೇನೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.
ಚೈತ್ರಾ ಕುಂದಾಪುರ ಹೈಡ್ರಾಮಾ: ಆರೋಗ್ಯ ಸ್ಥಿರ, ಸಿಟಿ ಸ್ಕ್ಯಾನ್ ಕೂಡ ನಾರ್ಮಲ್, ಆದ್ರೂ ಡಿಸ್ಚಾರ್ಜ್ ಆಗೊಲ್ಲ ಅಂತಾಳೆ
ಹೈ ಕಮಾಂಡ್ ತೀರ್ಮಾನವೇ ಅಂತಿಮ: ಇನ್ನು ಯಾರಾರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂಬುದರ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ನಿರ್ಣಯ ಮಾಡಬೇಕು. ಹೈ ಕಮಾಂಡ್ ತೀರ್ಮಾನವೇ ನಮ್ಮೆಲ್ಲಾರ ತೀರ್ಮಾನವಾಗಿರುತ್ತದೆ. ನಮಗೆ ಒಟ್ಟಾರೆ ಪಕ್ಷದ ಹಿತ ದೃಷ್ಟಿ ಒಳ್ಳೇಯದು. ಈ ಹೇಳಿಕೆಗೆ ಸಹಮತ ನೀಡುತ್ತಾರೋ ಅವರೆಲ್ಲಾರನ್ನು ಕರೆದುಕೊಂಡು ಹೋಗ್ತೀನಿ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್‌ನಲ್ಲಿ ಹೊಸ ಬಿಕ್ಕಟ್ಟು: ಕಾಂಗ್ರೆಸ್ ಪಾಳಯದಲ್ಲಿ ಹೊಸ ಬಿಕ್ಕಟ್ಟು ಶುರುವಾಯ್ತಾ ಎನ್ನುವ ಅನುಮಾನ ಕಾಡಿದೆ. ಹರಿಪ್ರಸಾದ್ ಬಂಡಾಯ ಆರುವ ಮುನ್ನವೇ ಹೊಸ ದಾಳವನ್ನು ಸಚಿವ ಕೆ.ಎನ್ ರಾಜಣ್ಣ ಬಿಚ್ಚಿಟ್ಟಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಮೂರು ಸಮುದಾಯಕ್ಕೆ ಮೂರು ಡಿಸಿಎಂ ಸೃಷ್ಟಿಗೆ ಕೆಎನ್ ರಾಜಣ್ಣ ಬೇಡಿಕೆ ಇಟ್ಟಿದ್ದಾರೆ. ಇದು ರಾಜಣ್ಣ ಅವರ ಆಗ್ರಹವೋ? ಸಲಹೆಯೋ ಎನ್ನುವುದು ಗೊತ್ತಿಲ್ಲ. ಆದರೆ, ಅವರ ಈ ಮಾತು ಮತ್ತೊಂದು ಬಿಕ್ಕಟ್ಟಿನ ಕಿಡಿ ಹೊತ್ತಿಸುವ ಸಾಧ್ಯತೆ ಇದೆ. ‘ಲೋಕಸಭಾ ಚುನಾವಣಾ ದೃಷ್ಟಿಯಿಂದ ಸಲಹೆ ಕೊಟ್ಟಿದ್ದೇನೆ. ಬಿಜೆಪಿ ಸರ್ಕಾರ ಇದ್ದಾಗ 2-3 ಡಿಸಿಎಂ ಇರಲಿಲ್ಲವಾ? ನಮ್ಮಲ್ಲಿ ಕೂಡಾ ಇದ್ರೆ ತಪ್ಪೇನು ಎಂದು ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ. ಇನ್ನು ಹರಿಪ್ರಸಾದ್ ಬಂಡಾಯದ ವಿರುದ್ಧ ಸಿದ್ದು ಬಣದಿಂದ ಡಿಸಿಎಂ ಅಸ್ತ್ರ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕಾಗಿ ಸಿದ್ದರಾಮಯ್ಯ ಬಣದ ಕೆ. ಎನ್ ರಾಜಣ್ಣ ಮೂರು ಹೊಸ ಡಿಸಿಎಂ ದಾಳ ಉರುಳಿಸಿದ್ದರು.
ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಹರಿಪ್ರಸಾದ್: ಕಾಂಗ್ರೆಸ್ಸಿಗರಿಂದ ಮನವೊಲಿಕೆ ಯತ್ನ
ಸಿಎಂ, ಡಿಸಿಎಂ ಸ್ಥಾನಗಳ ಬಗ್ಗೆ ಮಾತನಾಡಿದ್ದ ಬಿ.ಕೆ. ಹರಿಪ್ರಸಾದ್: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೇ ಇದ್ದ ಕಾರಣಕ್ಕೆ ತಮ್ಮ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಸರ್ಕಾರ ಹಾಗೂ ಸಿಎಂ ಸಿದ್ಧರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಮೂವರು ಉಪಮುಖ್ಯಮಂತ್ರಿ ಮಾಡುವ ಚಿಂತನೆಯನ್ನು ಬಿಚ್ಚಿಟ್ಟಿದ್ದರು. ಇನ್ನು ಮುಖ್ಯಮಂತ್ರಿ ಆಗಲು ಅರ್ಹತೆ ಹೊಂದಿದ್ದ ಸಚಿವ ಡಾ.ಜಿ. ಪರಮೇಶ್ವರ ಅವರ ಬಗ್ಗೆಯೂ ಮಾತನಾಡಿ, ಅವರನ್ನು ಕನಿಷ್ಠ ಡಿಸಿಎಂ ಆದರೂ ಮಾಡಬೇಕಿತ್ತು ಎಂದಿದ್ದರು. ಜೊತೆಗೆ, ಪರಿಶಿಷ್ಟ ಪಂಗಡದ ಸತೀಶ್ ಜಾರಕಿಹೊಳಿ ಅವರನ್ನು ಡಿಸಿಎಂ ಮಾಡಬೇಕು ಎಂದು ಹೇಳಿದ್ದರು. ಈಗ ಪುನಃ ಸಚಿವ ಕೆ.ಎನ್. ರಾಜಣ್ಣ ಮೂರು ಡಿಸಿಎಂ ಸ್ಥಾನದ ಸೃಷ್ಟಿಸುವ ಬಾಂಬ್ ಹಾಕಿದ್ದು, ಎಷ್ಟರಮಟ್ಟಿಗೆ ಸಿಡಿಯುತ್ತದೆಯೋ ಕಾದುನೋಡಬೇಕಿದೆ.