Asianet Suvarna News Asianet Suvarna News

Mandya: ಕಾಂಗ್ರೆಸ್‌ ಬಂದರೆ ದೆಹಲಿಗೆ ಎಟಿಎಂ, ಜೆಡಿಎಸ್‌ ಬಂದರೆ ಕುಟುಂಬಕ್ಕೆ ಎಟಿಎಂ: ಅಮಿತ್‌ ಶಾ ಕಿಡಿ

ಕಾಂಗ್ರೆಸ್ ಮತ್ತು ಜೆಡಿಎಸ್‌ ಕುಟುಂಬ ಪರಿವಾರದಿಂದ ತುಂಬಿರುವ ಪಕ್ಷಗಳಾಗಿದ್ದು, ಭ್ರಷ್ಟಾಚಾರವನ್ನು ಮಾಡುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ದೆಹಲಿಯಲ್ಲಿರುವ ಕುಟುಂಬಕ್ಕೆ ಎಟಿಎಂ ಆಗುತ್ತದೆ. ಇನ್ನು ಜೆಡಿಎಸ್‌ ಬಂದರೆ ತಮ್ಮ ಪರಿವಾರಕ್ಕೆ ಮಾತ್ರ ಎಟಿಎಂ ಆಗುತ್ತದೆ.

If Congress comes ATM for Delhi if JDS comes ATM for family Amit Shah sat
Author
First Published Dec 30, 2022, 3:50 PM IST

ಮಂಡ್ಯ (ಡಿ.30):  ಕಾಂಗ್ರೆಸ್ ಮತ್ತು ಜೆಡಿಎಸ್‌ ಕುಟುಂಬ ಪರಿವಾರದಿಂದ ತುಂಬಿರುವ ಪಕ್ಷಗಳಾಗಿದ್ದು, ಭ್ರಷ್ಟಾಚಾರವನ್ನು ಮಾಡುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ದೆಹಲಿಯಲ್ಲಿರುವ ಕುಟುಂಬಕ್ಕೆ ಎಟಿಎಂ ಆಗುತ್ತದೆ. ಇನ್ನು ಜೆಡಿಎಸ್‌ ಬಂದರೆ ತಮ್ಮ ಪರಿವಾರಕ್ಕೆ ಮಾತ್ರ ಎಟಿಎಂ ಆಗುತ್ತದೆ. ರಾಜ್ಯದ ಅಭಿವೃದ್ಧಿಗಾಗಿ ಹಳೇ ಮೈಸೂರು ಕ್ಷೇತ್ರ ಸೇರಿದಂತೆ ಎಲ್ಲೆಡೆ ಸೇರಿ 140ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಿಸುವ ಮೂಲಕ ರಾಜ್ಯ ಮತ್ತು ಕೇಂದ್ರದಲ್ಲಿ ಡಬಲ್‌ ಇಂಜಿನ್‌ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ಕೇಂದ್ರ ಸಚಿವ ಅಮಿತ್‌ ಶಾ ಮನವಿ ಮಾಡಿದರು.

ಮಂಡ್ಯ ನಗರದ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್ ಭ್ರಷ್ಟಾಚಾರದ ಆಡಳಿತ ಮಾಡಿವೆ. ಅವರಿಗೆ ರಾಜ್ಯದ ಅಭಿವೃದ್ಧಿಗಿಂತ ವೈಯಕ್ತಿಕ ಅಭೀವೃದ್ಧಿಯೇ ಮುಖ್ಯವಾಗಿದೆ. ಈ ಎರಡೂ ಪಕ್ಷಗಳು ಭ್ರಷ್ಟಚಾರ, ಜಾತಿವಾದಿಗಳು ಆಗಿದ್ದು, ಅನೇಕ ಕ್ರಿಮಿನಲ್‌ ಆಪಾದಿತರು ಅವರ ಪಕ್ಷದೊಳಗಿದ್ದಾರೆ. ಆಡಳಿತದ ಕಾಲದಲ್ಲಿ ದಲಿತರು ಮತ್ತು ಆದಿವಾಸಿಗಳಿಗೆ ಅನ್ಯಾಯ ಆಗಿದೆ. ಬಿಜೆಪಿ ಆಡಳಿತದಲ್ಲಿ ದಲಿತ ಮುಖಂಡ ರಾಮನಾಥ್‌ ಕೋವಿಂದ್‌ ಅವರನ್ನು ಮತ್ತು ದಲಿತ ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದೇವೆ. ಬಿಜೆಪಿ ದಲಿತರಿಗೆ ಮತ್ತು ದೀನ ದಲಿತರ ಕಲ್ಯಾಣ ಮಾಡುವ ಕಾರ್ಯ ಮಾಡಲಾಗುತ್ತದೆ ಎಂದರು.

Mandya: ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಹಾಲಿನ ಡೈರಿ ಸ್ಥಾಪನೆ: ಅಮಿತ್‌ ಶಾ ಘೋಷಣೆ

ಯಡಿಯೂರಪ್ಪರನ್ನು ನನೆದ ಅಮಿತ್‌ ಶಾ: ಮಂಡ್ಯದ ಅಭಿವೃದ್ಧಿ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಮತ್ತು ವಿಶ್ವೇಶ್ವರಯ್ಯ ಅವರನ್ನು ನೆನಪು ಮಾಡಿಕೊಳ್ಳುತ್ತೇನೆ. ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿಗೂ ಪ್ರಣಾಮ ಅರ್ಪಸುತ್ತೇನೆ. ಇನ್ನು ರಾಜ್ಯದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಜನ್ಮಸ್ಥಳವೂ ಮಂಡ್ಯ ಆಗಿದೆ. ಅವರು ಅನ್ಯ ಕಾರ್ಯ ನಿಮಿತ್ತ ವಿದೇಶದಲ್ಲಿದ್ದರೂ ಮಂಡ್ಯ ತಮ್ಮ ಜನ್ಮಸ್ಥಳ ಎಂದು ಕರೆ ಮಾಡಿದ್ದಾರೆ. 2018ರಲ್ಲಿ ಇಲ್ಲಿಂದಲೇ ಚುನಾವಣಾ ಕಾರ್ಯ ಮಾಡಿದ್ದೆವು. ಈ ವರ್ಷವೂ ಇಲ್ಲಿಂದಲೇ ಚುನಾವಣೆ ಪ್ರಚಾರ ಆರಂಭಿಸುತ್ತಿದ್ದು ಹಳೇ ಮೈಸೂರು ಭಾಗದ ಎಲ್ಲ ಕ್ಷೇತ್ರ ಸೇರಿದಂತೆ ಎಲ್ಲೆಡೆ ಸೇರಿ 140ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಿಸುವ ಮೂಲಕ ರಾಜ್ಯ ಮತ್ತು ಕೇಂದ್ರದಲ್ಲಿ ಡಬಲ್‌ ಇಂಜಿನ್‌ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದರು.

ಮೋದಿಗೆ ರಾಜ್ಯದಿಂದ ಶೇ.52 ಮತ:
ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ತಂದುಕೊಟ್ಟಿದೆ. ಮೋದಿ ಅವರ ನಾಯಕತ್ವಕ್ಕೆ ಶೇ.52 ಮತಗಳನ್ನು ಕೊಟ್ಟು ರಾಜ್ಯದಿಂದ 25 ಸ್ಥಾನ ಗೆಲ್ಲಿಸಿಕೊಡಲಾಗಿದೆ. ಇನ್ನು ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಒಮ್ಮೆ ಕಾಂಗ್ರೆಸ್‌ ಮತ್ತೊಮ್ಮೆ ಜೆಡಿಎಸ್‌ ಗೆಲ್ಲಿಸಿದ್ದೀರಿ. ಈಗ ಒಂದು ಬಾರಿ ಬಿಜೆಪಿಗೆ ಅವಕಾಶ ಕೊಡಿ. ಬಿಜೆಪಿ ಬಡವರಿಗೆ ಆಹಾರ, ಕಿಸಾನ್‌ ಸಮ್ಮಾನ್‌ ನಿಧಿ ಹಾಗೂ ಗ್ಯಾಸ್‌ ಸಿಲಿಂಡರ್‌ ವಿತರಣೆ ಮಾಡಿದೆ. ಬಡವರ ಮನೆಗಳಿಗೆ ಬೆಳಕು ನೀಡುವ, ಶೌಚಾಲಯ ನೀಡುವ ಮೂಲಕ ಗೌರವದ ವಾತಾವರಣ ನಿರ್ಮಾಣ ಮಾಡಿದೆ ಎಂದು ತಿಳಿಸಿದರು.

 

Mandya: ಮೈಶುಗರ್‌ನಲ್ಲಿ ಶೀಘ್ರ ಎಥೆನಾಲ್ ಘಟಕ ಆರಂಭ: ಸಿಎಂ ಬೊಮ್ಮಾಯಿ ಭರವಸೆ

2024ಕ್ಕೆ ರಾಮಮಂದಿರ ಲೋಕಾರ್ಪಣೆ:
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಕಟ್ಟವುದಕ್ಕೆ ಕಾಂಗ್ರೆಸ್‌ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆದರೆ, 2019ರಲ್ಲಿ ಮೋದಿ ಶಂಕು ಸ್ಥಾಪನೆ ನೆರವೇರಿಸಿದ್ದು, 2024ಕ್ಕೆ ಲೋಕಾರ್ಪಣೆ ಆಗಲಿದೆ. ಕೇದಾರನಾಥ, ಕಾಶಿ ವಿಶ್ವನಾಥ ದೇವಾಲಯಗಳ ಪುನಶ್ಚೇತನ ಮಾಡಿಸಿದ್ದೇವೆ. ರಾಜ್ಯದಲ್ಲಿ ಗೊಂಡ ಕುರುಬರನ್ನು ಎಸ್‌ಟಿ ವರ್ಗಕ್ಕೆ ಸೇರಿಸಲಾಗಿದೆ. ಕೋವಿಡ್‌ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಎಲ್ಲರಿಗೂ ಉಚಿತವಾಗಿ ಕೋವಿಡ್ ವ್ಯಾಕ್ಸಿನೇಷನ್‌ ಕೊಡುವ ಮೂಲಕ ಆರೋಗ್ಯ ರಕ್ಷಣೆ ಮಾಡಿದ್ದಾರೆ. ಈಗ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ರಸ್ತೆ ಮಾಡಿದ್ದೇವೆ. ಮೈಶುಗರ್ ಕಾರ್ಖಾನೆ ಪುನಾರಂಭವನ್ನು ಬೊಮ್ಮಾಯಿ ಮಾಡಿದ್ದಾರೆ. ಈ ಭಾಗದಲ್ಲಿ ಕಾಂಗ್ರೆಸ್ - ಜೆಡಿಎಸ್ ಏನು ಕೆಲಸ ಮಾಡಿಲ್ಲ ಎಂದು ಹೇಳಿದರು.

ದೇಶದ ರಕ್ಷಣೆಗೆ ಬಿಜೆಪಿ ಗೆಲ್ಲಿಸಿ: ದೇಶದ ರೈತರಿಗೆ ಕಿಸಾನ್‌ ಸಮ್ಮಾನ್‌ ಯೋಜನೆ ಅಡಿಯಲ್ಲಿ ಪ್ರಧಾನಿ ನರೇಂಂದ್ರ ಮೋದಿ ಅವರು 6 ಸಾವಿರ ರೂ. ಹಾಗೂ  ಯಡಿಯೂರಪ್ಪ ಅವರು 4 ಸಾವಿರ ಸೇರಿ ವಾರ್ಷಿಕ ಒಟ್ಟು ಹತ್ತು ಸಾವಿರ ನೇರವಾಗು ಹಣವನ್ನು ಹಾಕುವ ಕೆಲಸ ಮಾಡಿದ್ದೇವೆ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಕೃಷಿಗೆ ಉತ್ತೇಜನ ಕೊಡುವ ಕೆಲಸ ಮಾಡಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ಸರ್ಕಾರ ನೀತಿ ಆಯೋಗ ಇನ್ನೋವೇಟಿವ್ ಇಂಡೆಕ್ಸ್ ನಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಪಿಎಫ್ಐ ಕಾರ್ಯಕರ್ತ ಮೇಲಿನ ಕೇಸ್ ಪಡೆದಿದ್ದರು. ಆದರೆ, ಮೋದಿ ಸರ್ಕಾರ ಪಿಎಫ್‌ಐ ಬ್ಯಾನ್‌ ಮಾಡಿದೆ. ಕಾಶ್ಮೀರ ನಮ್ಮದು ಎಂದು ಹೇಳುವ ಮೂಲಕ ಆತಂಕವಾದಿಗಳಿಗೆ ಮೋದಿ ಎಚ್ಚರಿಕೆ ನೀಡಿದ್ದಾರೆ. ದೇಶದ ರಕ್ಷಣೆ ಮತ್ತು ಅಭಿವೃದ್ಧಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

Follow Us:
Download App:
  • android
  • ios