ತುಮಕೂರು[ಫೆ.10]: ಕರ್ನಾಟಕ ರಾಜಕೀಯ ವಲಯದಲ್ಲಿ ಆಪರೇಷನ್ ಕಮಲದ ಆಡಿಯೋ ವಾರ್ ಜೋತರಾಗಿದೆ. ಈಗಾಗಲೇ ಬಿ. ಎಸ್ ಯಡಿಯೂರಪ್ಪ ತಾನು ಶರಣುಗೌಡ ಜೊತೆ ಮಾತನಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಡಿಸಿಎಂ ಪರಮೇಶ್ವರ್ ಆಡಿಯೋದಲ್ಲಿರುವುದು ತನ್ನದೇ ಧ್ವನಿ ಎಂದು ಯಡಿಯೂರಪ್ಪ ಒಪ್ಪಿಕೊಂಡರೆ ತಮ್ಮ ಮಾತಿನಂತೆ ರಾಜಕೀಯ ನಿವೃತ್ತಿ ಘೋಷಿಸಲಿ ಎಂದಿದ್ದಾರೆ. 

ಸಿಎಂ ಶಪಥದ ಬೆನ್ನಲ್ಲೇ ಶರಣಗೌಡ ಜೊತೆ ಮಾತನಾಡಿದ್ದು ನಿಜ ಎಂದ್ರು ಬಿಎಸ್ ವೈ ಆದರೆ...

ತುಮಕೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ 'ಯಡಿಯೂರಪ್ಪ ಒಪ್ಪಿಕೊಂಡರೆ ಸ್ಪೀಕರ್ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡುತ್ತೇನೆ. ಆಡಿಯೋ ತನ್ನದು ಎಂದು ಸಾಬೀತಾದರೆ ರಾಜಕೀಯವಾಗಿ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದ್ದರು. ಈಗ ಅವರು ರಾಜಕೀಯ ನಿವೃತ್ತಿಯಾಗಲಿ. ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸದನದಲ್ಲಿ ಒತ್ತಾಯಿಸುತ್ತೇವೆ. ಅವರ ಶಾಸಕತ್ವವನ್ನು ವಜಾಗೊಳಿಸಬೇಕು' ಎಂದಿದ್ದಾರೆ.

ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿ ಕಾರಿದ ಪರಮೇಶ್ವರ್ ' ಬಿಜೆಪಿ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಟ್ಟಿಲ್ಲ ಅನ್ನೋದಕ್ಕೆ ಇದೆ ಉದಾಹರಣೆ. ಅವರು ಒಪ್ಪಿಕೊಂಡರೆ ಅದಕ್ಕಿಂತ ಕೀಳು ಮಟ್ಟದ ರಾಜಕಾರಣ ಇನ್ನೊಂದಿಲ್ಲ' ಎಂದಿದ್ದಾರೆ.