ಹಾಸನದಲ್ಲಿ ಭವಾನಿ ರೇವಣ್ಣ ಗೆಲ್ಲೋದಿಲ್ಲ: ಕೊನೆಗೂ ಸತ್ಯ ಬಾಯ್ಬಿಟ್ಟ ಕುಮಾರಸ್ವಾಮಿ
ಹಾಸನದಲ್ಲಿ ಭವಾನಿ ರೇವಣ್ಣ ಅವರಿಗೆ ಜೆಡಿಎಸ್ ಟಿಕೆಟ್ ನೀಡದರೆ ಅವರು ಗೆಲ್ಲೋದಿದಲ್ಲ, ಸೋಲುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಹುಬ್ಬಳ್ಳಿ (ಏ.11): ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ, ಭವಾನಿ ಅವರಿಗೆ ಹಾಸನದಿಂದ ಜೆಡಿಎಸ್ ಟಿಕೆಟ್ ನೀಡದರೆ ಅವರು ಗೆಲ್ಲೋದಿದಲ್ಲ ಸೋಲುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಪಂಚರತ್ನ ಯಾತ್ರೆಯಲ್ಲಿರುವ ಮಾಜಿ ಸಿಎಂ ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಹಾಗೂ ಹಾಸನಲ್ಲಿ ಕೆಲವರು ಶಕುನಿಗಳು, ದೇವೆಗೌಡರ ಕುಟುಂಬವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಹಾಸನ ಟಿಕೆಟ್ ಕಾರ್ಯಕರ್ತರಿಗೆ ನೀಡೋದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಕಳೆದ ಒಂದೂವರೆ ವರ್ಷದ ಹಿಂದೆಯೇ ಹೇಳಿದ್ದೇನೆ. ಭವಾನಿ ರೇವಣಗೆ ಟಿಕೆಟ್ ಕೊಟ್ಟರೆ ಸೋಲ್ತಾರೆ. ಅವರು ಗೆಲ್ಲೋದಿಲ್ಲ. ಯಾರ ಮಾತು ಕೇಳಿ ಅವರು ಟಿಕೆಟ್ ಗೆ ಪಟ್ಟು ಹಿಡಿದ್ದಾರೆ ಎಲ್ಲವೂ ಗೊತ್ತಿದೆ. ಮುಂಜಾನೆಯಿಂದ ಸಂಜೆವರೆಗೆ ಅವರ ತಲೆಗೆ ಯಾರು ತುಂಬುತ್ತಿದ್ದಾರೆ ನನಗೆ ಗೊತ್ತಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕರ್ತನೇ ಹಾಸನದ ಜೆಡಿಎಸ್ ಅಭ್ಯರ್ಥಿ..ರೇವಣ್ಣ ಫ್ಯಾಮಿಲಿ ವಿರೋಧಿಸಿದ್ರೂ ಸ್ವರೂಪ್‌ಗೆ ಟಿಕೆಟ್..?
ನಮ್ಮವರಿಗೆ ಅಧಿಕಾರಕ್ಕಿಂತ ಹಾಸನ ಮುಖ್ಯವಾಗಿದೆ: ರಾಜ್ಯದಲ್ಲಿ ಪಕ್ಷ ಕಟ್ಟಿ, ಅಧಿಕಾರಕ್ಕೆ ತರಲು ನಾನು ಹಗಲು ರಾತ್ರಿ ಓಡಾಡುತ್ತಿದ್ದೇನೆ. ಆದರೆ, ನಮ್ಮವರು ಒಂದು ಕ್ಷೇತ್ರದ ಟಿಕೆಟ್‌ಗಾಗಿ ಚಿಂತೆ ಮಾಡುತ್ತಿದ್ದಾರೆ. ಬೇರೆ ಪಕ್ಷಗಳಿಗೆ ನೂರಾರು ಸೀಟ್‌ಗಳ ಚಿಂತೆಯಿದೆ. ನಮಗೆ ಹಾಸನದ ಒಂದೇ ಸಿಂಹಾಸನದ ಚಿಂತೆಯಾಗಿದೆ. ಕೆಲವು ಪಕ್ಷಗಳ ಜೊತೆಗೆ ಹೊಂದಾಣಿಕೆಯ ಮಾತುಕತೆ ನಡೆಯುತ್ತಿದೆ. ಎಐಎಮ್‌ಐಎಮ್ ಪಕ್ಷದವರು ಕೆಲವು ಸೀಟ್ ಕೇಳಿದ್ದಾರೆ. ಈ ಬಗ್ಗೆ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ಮಾಧ್ಮಗಳಿಗೆ ತಿಳಿಸಿದರು.
ರೇವಣ್ಣ 2 ಕಡೆ ಟಿಕೆಟ್ ಕೇಳಿರುವುದು ಗಮನಕ್ಕೆ ಬಂದಿಲ್ಲ: ಹಾಸನದಲ್ಲಿ ಸದೃಢ ಕಾರ್ಯಕರ್ತರಿದ್ದಾರೆ, ಅವರ ನಿರ್ಧಾರ ಅಂತಿಮ. ಭವಾನಿಯವರು ಸ್ಪರ್ಧೆ ಮಾಡಿದರೆ ಹಾಸನದಲ್ಲಿ ಗೆಲ್ಲಲ್ಲ. ನಾನು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದೇನೆ. ನಾನು ನಿರಂತರವಾಗಿ ನಮ್ಮ ಪಕ್ಷರದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ನನಗೆ ಅವರಿಗೆ ಉತ್ತರ ಕೊಟ್ಟಗೊಂಡು ಕೂಡಲು ಆಗುವುದಿಲ್ಲ. ಕೆಲವು ಸಣ್ಣ- ಪುಟ್ಟ ಸಮಸ್ಯೆಗಳಿಂದ ಎರಡನೇ ಪಟ್ಟಿ ಬಿಡುಗಡೆ ಮಾಡಿಲ್ಲ. ಎರಡು ಕ್ಷೇತ್ರಗಳಲ್ಲಿ ರೇವಣ್ಣ ಟಿಕೇಟ್ ಕೇಳಿರುವ ವಿಚಾರ ನನ್ನ ಗಮನಕ್ಕೇ ಬಂದಿಲ್ಲ ಎಂದು ಹೇಳಿದರು.
ದೇವೇಗೌಡರನ್ನು ಮುಗಿಸಲು ಶಕುನಿಗಳ ಸಂಚು: ಶಕುನಿಗಳು ನಮ್ಮ ಕುಟುಂಬ ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಮಹಾಭಾರತ ಕಾಲದಿಂದ ನಡೆದು ಬಂದಿದ್ದೆ ಈಗಲೂ ನಡೆಯುತ್ತಿದೆ. ನಾನು ಮೊದಲಿಂದಲೂ ಹಾಸನದ ಟಿಕೆಟ್ ಸಾಮಾನ್ಯ ಕಾರ್ಯಕರ್ತರಿಗೆ ನೀಡುವ ಸಣ್ಣ ಸುಳಿವನ್ನು ನೀಡಿದ್ದೇನೆ. ಕುಟುಂಬದ ಸದಸ್ಯರಿಗೆ ಹಾಸನ ಟಿಕೆಟ್ ಕೊಟ್ಟು ಮಾಧ್ಯಮಗಳಿಗೆ ಆಹಾರ ಆಗಲ್ಲ. ರೇವಣ್ಣ ಕುಟುಂಬಕ್ಕೆ ತಲೆ ತುಂಬಿ ದಾರಿ ತಪ್ಪಿಸುತ್ತಿದ್ದಾರೆ. ಶಕುನಿಗಳು ದೇವೆಗೌಡರ ಕುಟುಂಬವನ್ನು ಮುಗಿಸಬೇಕು ಅಂತಿವೆ. ಅವರಿಗೆ ನಾವು ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಸರಿಯಾಗಿ ಪಾಠ ಕಲಿಸುತ್ತೇವೆ ಎಂದು ತಿಳಿಸಿದರು.
ದೇವೇಗೌಡರ ರೀತಿ ನನ್ನ ಬ್ಲಾಕ್ಮೇಲ್ ಅಸಾಧ್ಯ: ಭವಾನಿಗೆ ಪರೋಕ್ಷ ಟಾಂಗ್ ಕೊಟ್ಟ ಎಚ್‌ಡಿಕೆ
ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ಕೊಡಬೇಕು: ನಾನು ನಂದೇ ಆದ ಕ್ಯಾಲ್ಕುಲೇಷನ್ ಮಾಡಿ, ಮಾಹಿತಿ ಪಡೆದು ತೀರ್ಮಾನಕ್ಕೆ ಬರುತ್ತೇನೆ. ಹಾಸನ ಟಿಕೆಟ್ ಗೊಂದಲದ ಚರ್ಚೆ ನನಗೇನು ದೊಡ್ಡದ್ದಲ್ಲ. ಹಾಸನದಲ್ಲಿ ಸಧೃಡ ಕಾರ್ಯಕರ್ತರಿದ್ದಾರೆ, ಅವರ ಅಭಿಪ್ರಾಯಕ್ಕೆ ಮಣಿಬೇಕು ಅನ್ನೋದು ನನ್ನ ಅಭಿಪ್ರಾಯ. ಇಲ್ಲಿ ಪ್ರತಿಷ್ಠೆ ಮುಖ್ಯವಲ್ಲ, ಅಲ್ಲಿನ ಗ್ರೌಂಡ್ ರಿಯಾಲಿಟಿ ಮುಖ್ಯ. ಪಕ್ಷಕ್ಕಿಂತ ಸ್ವಾರ್ಥ ಮುಖ್ಯ ಅನ್ನೋದಾದ್ರೆ ನಾನೇನು ಮಾಡಕ್ಕಾಗಲ್ಲ. ದೇವೇಗೌಡರ ಕುಟುಂಬ ಮುಗಿಸಬೇಕೆಂದು ಯಾರು ಇವರ ತಲೆ ಕೆಡಿಸುತ್ತಿದ್ದಾರೆ ನಂಗೆ ಗೊತ್ತಿದೆ. ನಾವು ದೇವೇಗೌಡರ ಕುಟುಂಬದ ಹಿತೈಷಿಗಳೆಂದು ಕುಟುಂಬ ಮುಗಿಸಲು ಹೊರಟವರಿಗೆ ಹಾಲೆರೆದರೆ ನಾನು ಏನು ಮಾಡೋಕಾಗುತ್ತದೆ. ಬಿಜೆಪಿ, ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಮೇಲೆ ಹಲವರು ನಮ್ಮ ಬಳಿ ಬರ್ತಾರೆ. ನಮ್ಮ ಕಾರ್ಯಕರ್ತರೇ ನಮಗೆ ಸ್ಟಾರ್ ಪ್ರಚಾರಕರು ಎಂದು ಹೇಳಿದರು.