ಕ್ಷೇತ್ರದ ಜನರು ನನ್ನ ತಮ್ಮ ಮಗನಂತೆ ಕಾಪಾಡಿಕೊಂಡು ಬಂದಿದ್ದಾರೆ. ನನ್ನನ್ನು ಯಾವತ್ತೂ ಜನರು ಕೈಬಿಡಲ್ಲ: ಶಾಸಕ ಡಾ.ಶಿವರಾಜ್ ಪಾಟೀಲ್ 

ರಾಯಚೂರು(ಏ.12): ಬಿಜೆಪಿ ಹೈಕಮಾಂಡ್ ನಾಯಕರಿಗೆ ಕೃತಜ್ಞತೆ ತಿಳಿಸುವೆ. ನಾನಗೆ ಟಿಕೆಟ್ ಸಿಗುತ್ತೆ ಎಂಬ ಭರವಸೆ ಇತ್ತು. ಕಳೆದ ಐದು ವರ್ಷಗಳ ಕಾಲ ನಾನು ಮಾಡಿದ ಅಭಿವೃದ್ಧಿ ಕೆಲಸಗಳು, ಪಕ್ಷಕ್ಕಾಗಿ ನಾನು ಮಾಡಿದ ಸೇವೆಯನ್ನ ಹೈಕಮಾಂಡ್ ಗಮನಿಸಿದೆ. ವಿರೋಧ ಪಕ್ಷದವರು ನಮ್ಮ ಪಕ್ಷದ ಕಾರ್ಯಕರ್ತರನ್ನ ಕುಗ್ಗಿಸಲು ವದಂತಿ ಹಬ್ಬಿಸಿದ್ರು. ಸಹಜವಾಗಿ ಟಿಕೆಟ್ ಸಿಗುವ ವೇಳೆ ಸಿಗುವುದಿಲ್ಲ, ಸಿಗುವುದಿಲ್ಲ ಅಂತ ವದಂತಿ ಹಬ್ಬಿಸಿದ್ರು. ಟಿಕೆಟ್ ಸಿಕ್ಕ ಮೇಲೆ ಗೆಲ್ಲುವುದಿಲ್ಲ, ಗೆಲ್ಲುವುದಿಲ್ಲ ಅಂತ ಹಬ್ಬಿಸುತ್ತಾರೆ. ಕ್ಷೇತ್ರದ ಜನರಿಗೆ ನನ್ನ ಮೇಲೆ ವಿಶ್ವಾಸವಿದೆ. ನನ್ನ ಪಕ್ಷದ ‌ನಾಯಕರಿಗೆ ನನ್ನ ಮೇಲೆ ವಿಶ್ವಾಸವಿದೆ. ಸಂಪೂರ್ಣವಾಗಿ ಮತ್ತೊಮ್ಮೆ ರಾಯಚೂರು ನಗರದಲ್ಲಿ ಬಿಜೆಪಿ ಬಾವುಟ ಹಾರಿಸುತ್ತೇನೆ ಅಂತ ನಗರದ ಶಾಸಕ ಡಾ.ಶಿವರಾಜ್ ಪಾಟೀಲ್ ತಿಳಿಸಿದ್ದಾರೆ. 

ಬಿಜೆಪಿ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿದ ಬಳಿಕ ಮೊದಲ ಬಾರಿಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜತೆ ಮಾತನಾಡಿದ ಶಾಸಕ ಡಾ.ಶಿವರಾಜ್ ಪಾಟೀಲ್ ಅವರು, ಕ್ಷೇತ್ರದ ಜನರು ನನ್ನ ತಮ್ಮ ಮಗನಂತೆ ಕಾಪಾಡಿಕೊಂಡು ಬಂದಿದ್ದಾರೆ. ನನ್ನನ್ನು ಯಾವತ್ತೂ ಜನರು ಕೈಬಿಡಲ್ಲ ಅಂತ ಹೇಳಿದ್ದಾರೆ.

Viral Audio: ನಮ್ಮ ಜಿಲ್ಲೆಗೆ ನಾನೇ ಮೋದಿ, ನಾನೇ ಟ್ರಂಪ್‌..' ಪ್ರಧಾನಿಯನ್ನೇ ಟೀಕಿಸಿದ ಬಿಜೆಪಿ ಶಾಸಕ?!

ಬಿಜೆಪಿಯ 150 ಟಾರ್ಗೆಟ್‌ಗೆ ಮೊದಲ ಗೆಲುವು ನನ್ನದೇ ಆಗಿರುತ್ತೆ: ಹವಾಲ್ದಾರ್

ರಾಯಚೂರು ಗ್ರಾಮೀಣ ಕ್ಷೇತ್ರದ ಟಿಕೆಟ್ ನೀಡಿದಕ್ಕೆ ಹೈಕಮಾಂಡ್ ನಾಯಕರಿಗೆ ‌ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಕೃತಜ್ಞತೆ ಸಲ್ಲಿಸಿದ್ದಾರೆ. ಬಿಜೆಪಿಯ 150 ಟಾರ್ಗೆಟ್‌ಗೆ ಮೊದಲ ಗೆಲುವು ನನ್ನದೇ ಆಗಿರುತ್ತೆ. ಕ್ಷೇತ್ರದ ಜನರು ‌ನನಗೆ ಆರ್ಶಿವಾದ ಮಾಡುತ್ತಾರೆ ಎಂಬ ಭರವಸೆ ‌ಇದೆ. ಇಡೀ ರಾಜ್ಯದಲ್ಲಿಯೇ ಮೊದಲ ಜನ ಸಂಕಲ್ಪ ಯಾತ್ರೆ ನನ್ನ ಕ್ಷೇತ್ರದಲ್ಲಿ ಆಗಿತ್ತು. ರಾಯರು ನಡೆದಾಡಿದ ಪುಣ್ಯ ಸ್ಥಳದಲ್ಲಿ ಜನ ಸಂಕಲ್ಪ ಯಾತ್ರೆ ಆಗಿತ್ತು. ಗಿಲ್ಲೇಸೂಗೂರು ಗ್ರಾಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರು ಮಿಷನ್ 150 ಘೋಷಣೆ ಮಾಡಿದ್ರು. ಜನ ಸಂಕಲ್ಪ ಯಾತ್ರೆಯಲ್ಲಿಯೇ ನನಗೆ ಟಿಕೆಟ್ ಘೋಷಣೆ ಮಾಡಿದ್ರು. ಅಂದಿನಿಂದ ಇಂದಿನವರೆಗೂ ಕ್ಷೇತ್ರದಲ್ಲಿ ಓಡಾಟ ನಡೆಸಿದ್ದೇನೆ ನಾನು ಕ್ಷೇತ್ರದ ಜನರನ್ನು ನಂಬಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ನನಗೆ ಆಯ್ಕೆ ‌ಮಾಡುತ್ತಾರೆ ಅಂತ ಹೇಳಿದ್ದಾರೆ. 

ತುಂಗಭದ್ರಾ ಮತ್ತು ಕೃಷ್ಣ ನದಿ ಇದ್ರೂ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇದೆ. ಆ ನೀರಿನ ಸಮಸ್ಯೆ ದೂರ ಮಾಡಲು ಕೆರೆ ತುಂಬುವ ಯೋಜನೆಗೆ ಪ್ಲಾನ್ ಆಗಿದೆ. ಎಲ್ಲರ ಆರ್ಶಿವಾದದಿಂದ ನಾನು ಶಾಸಕನಾಗಿ ಆಯ್ಕೆ ಆಗುವೆ ಎಂದ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.