Viral Audio: ನಮ್ಮ ಜಿಲ್ಲೆಗೆ ನಾನೇ ಮೋದಿ, ನಾನೇ ಟ್ರಂಪ್‌..' ಪ್ರಧಾನಿಯನ್ನೇ ಟೀಕಿಸಿದ ಬಿಜೆಪಿ ಶಾಸಕ?!

ಆಪ್ತರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದರಲ್ಲಿ ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡಿರುವ ಆಡಿಯೋ ಒಂದು ಈಗ ಎಲ್ಲೆಡೆ ವೈರಲ್ ಆಗುತ್ತಿದ್ದ. ಶಾಸಕರ ವಿರುದ್ಧ ಅಭಿಪ್ರಾಯಗಳು ಕೇಳಿಬಂದಿವೆ. ಅದ್ಯಾಗೂ ನಾನು ಹೀಗೆ ಮಾತಾಡಿಲ್ಲ ತಿರುಚಿರುವ ಆಡಿಯೋ ಎನ್ನುತ್ತಿರುವ ಶಾಸಕ

I am Mod, I am Trump in our district bjp MLA shivaraj patil Loose talk about Prime Minister Modi at raichur rav

ರಾಯಚೂರು (ಮಾ .31) : ಜಿಲ್ಲೆಯ ಬಿಜೆಪಿ ಶಾಸಕನೇ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹಗುರವಾಗಿ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ.

 ರಾಯಚೂರು ಜಿಲ್ಲೆಯ ಸ್ಥಳೀಯ ಬಿಜೆಪಿ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಈ ಆಡಿಯೋ ಸಾಮಾಜಿಕ ಜಾಲತಾಣದ ಮೂಲಕ ಸಾಕಷ್ಟು ವೈರಲ್ ಆಗಿದೆ. 

ರಾಯಚೂರು: ಚುನಾ​ವಣೆ ಘೋಷಣೆಯಾದ್ರೂ, 7 ಕ್ಷೇತ್ರಗಳಲ್ಲಿ ಮುಗಿಯದ ಅಭ್ಯರ್ಥಿಗಳ ಆಯ್ಕೆ ಗೊಂದಲ!

ಆಡಿಯೋದಲ್ಲಿ ಏನಿದೆ?

ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್(Dr Shivaraj patil MLA) ಆಪ್ತರೊಂದಿಗೆ ಮಾತನಾಡುವಾಗ ಪ್ರಧಾನಿ ಮೋದಿ ವಿರುದ್ಧವೇ ಮಾತನಾಡಿದ್ದಾರೆ. ಅಲ್ಲದೇ ಸಚಿವ ಶ್ರೀರಾಮುಲು(Sriramulu),ಶಾಸಕ ಸೋಮಶೇಖರ ರೆಡ್ಡಿ(Somashekhar reddy MLA) ಬಗ್ಗೆಯೂ ಉಡಾಫೆ ಮಾತನಾಡಿದ್ದಾರೆ.

ನಾನೇ ಮೋದಿ, ನಾನೇ ಟ್ರಂಪ್ ಎಂದಿರುವ ಶಾಸಕ:

ಆಡಿಯೋದಲ್ಲಿ ಉಡಾಫೆಯಾಗಿ ಮಾತನಾಡಿರುವ ಶಾಸಕ 'ನನಗೆ ಮೋದಿ ರೈಟ್ ಹ್ಯಾಂಡ್  ಹೇಳಿದರೂ ನಾನು ಕೇಳುವುದಿಲ್ಲ. ನಾನೇ ಸಿಂಗಲ್ ಆರ್ಮಿ. ನನಗೆ ರೈಟ್, ಲೆಫ್ಟ್ ಯಾವುದು ಇಲ್ಲ. ನಾನೇ ಮೋದಿ, ನಾನೇ ಟ್ರಂಪ್ ಎಂದಿದ್ದಾರೆ  ಮುಂದುವರಿದು, "ಎಲೆಕ್ಷನ್ ನಲ್ಲಿ ಸೋತರೂ ಚಿಂತೆಯಿಲ್ಲ, ಗೆದ್ದರೂ ಚಿಂತೆಯಿಲ್ಲ, ಮಲಗಿದರೂ ಚಿಂತೆಯಿಲ್ಲ. ಚಿಂತೆ ಇಲ್ಲದ ಪುರುಷ ಎಂದರೆ ಅದು ಶಿವರಾಜ್ ಪಾಟೀಲ್ ಮಾತ್ರ ಎಂದು ತನ್ನ ಬಗ್ಗೆ ತಾನೇ ಬಡಾಯಿ ಕೊಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲ ನಾನು ದೇವರಿದ್ದಂಗೆ. ಶಿವರಾಜ್ ಪಾಟೀಲ್ ದೈವ ಬರೆಸಿಕೊಳ್ಳಲ್ಲ. ನಾನೇ ದೈವ ಬರೆತೀನಿ ಎಂದೆಲ್ಲ ಆ ಆಡಿಯೋದಲ್ಲಿ ಮಾತನಾಡಿದ್ದಾರೆ. 

ಈ ಬಗ್ಗೆ  ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಶಾಸಕ ಶಿವರಾಜ್ ಪಾಟೀಲ್, ಇದು ಬಹಳ ಹಳೇ ಆಡಿಯೋ. ಆಡಿಯೋದಲ್ಲಿರುವ ಧ್ವನಿ ನನ್ನದೇ. ಆದರೆ, ನಾನು ಆ ರೀತಿ ಮಾತನಾಡಿಲ್ಲ. ಕೆಲ ಕುತಂತ್ರಿಗಳು ದುರುದ್ದೇಶಪೂರಕವಾಗಿ ತಮಗೆ ಬೇಕಾದ ರೀತಿ ಆಡಿಯೋ ಮಾಡಿ ಹರಿಬಿಟ್ಟಿದ್ದಾರೆ. ರಾಜಕಾರಣದಲ್ಲಿ ತಂತ್ರಗಾರಿಕೆ ಇರಬೇಕು ಈ ರೀತಿ ಕುತಂತ್ರ ಮಾಡಿದ್ದು ಆಡಿಯೋ ಕುರಿತು ಎಸ್ಪಿ ಜೊತೆ ಮಾತನಾಡಿದ್ದು, ಸೈಬರ್ ಕ್ರೈಂ(cyber crime) ಅಡಿ ದೂರು ದಾಖಲಿಸುವುದಾಗಿ ಶಾಸಕರು ತಿಳಿಸಿದ್ದಾರೆ

ರಾಯಚೂರು: ಮೊದಲ ಪಟ್ಟಿ​ಯಲ್ಲಿ ಜಿಲ್ಲೆಯ ಇಬ್ಬರು ಹಾಲಿ ಶಾಸ​ಕ​ರಿಗೆ ಟಿಕೆಟ್‌

ಇನ್ನು ವಿಧಾನಸಭಾ ಚುನಾವಣೆ(Assembly election)ಗೆ ದಿನಗಣನೆ ಶುರುವಾದ ವೇಳೆ ಈ ರೀತಿ ಆಡಿಯೋ ಹೊರ ಬಂದಿರುವುದು ಬಿಜೆಪಿಗೆ ಮುಜುಗರ ಉಂಟು ಮಾಡಿದೆ. ಇದು ಎಲ್ಲೆಡೆ ಹರಿದಾಡುತ್ತಿದ್ದು, ಶಾಸಕರ ಬಗ್ಗೆ ಪರ ವಿರೋಧದ ಅಭಿಪ್ರಾಯಗಳು ಕೇಳಿ ಬರುತ್ತಿವೆ.

Latest Videos
Follow Us:
Download App:
  • android
  • ios