ಬೀಳಗಿಯಲ್ಲಿ ಈ ಬಾರಿಯೂ ಗೆಲುವು ನನ್ನದೇ: ಸಚಿವ ಮುರಗೇಶ ನಿರಾಣಿ

ನಮ್ಮ ಕುಟುಂಬದಿಂದ ನಾನು ಮತ್ತು ಸಹೋದರ ವಿಧಾನ ಪರಿಷತ್‌ ಸದಸ್ಯ ಹನಮಂತ ನಿರಾಣಿ ಮಾತ್ರ ರಾಜಕೀಯದಲ್ಲಿ ಇರುತ್ತೇವೆ. ಒಂದೊಮ್ಮೆ ನಮ್ಮ ಕುಟುಂಬದಿಂದ ಮತ್ತೊಬ್ಬರು ರಾಜಕೀಯಕ್ಕೆ ಬರುವುದಾದರೆ ನಾನೇ ರಾಜಕೀಯದಿಂದ ನಿವೃತ್ತಿ ಹೊಂದಿ ಅವರಿಗೆ ಅವಕಾಶ ನೀಡಿ ಕೈಗಾರಿಕೆಗಳನ್ನು ನೋಡಿಕೊಳ್ಳುತ್ತೇನೆ: ನಿರಾಣಿ 

I Will Win Again in Bilagi Says Minister Murugesh Nirani grg

ಬಾಗಲಕೋಟೆ(ಡಿ.04): ಬೀಳಗಿ ವಿಧಾನಸಭಾ ಕ್ಷೇತ್ರದಿಂದಲೇ ಬರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆ. ನಾನು ಕೈಗೊಂಡ ಅಭಿವೃದ್ಧಿ ಹಾಗೂ ನನ್ನ ಕೈಗಾರಿಕೆಗಳ ಮೂಲಕ ನೀಡಿದ ಸೌಲಭ್ಯಗಳು ಹಾಗೂ ನನ್ನ ಸೇವೆ ಗುರುತಿಸಿರುವ ಬೀಳಗಿ ಕ್ಷೇತ್ರದ ಮತದಾರರು ಬರುವ ಚುನಾವಣೆಯಲ್ಲಿ 25 ಸಾವಿರಕ್ಕೂ ಹೆಚ್ಚು ಮತಗಳಿಂದ ನನ್ನನ್ನು ಗೆಲ್ಲಿಸಲಿದ್ದಾರೆ. ನನ್ನ ವಿರುದ್ಧ ಯಾರೇ ಸ್ಪರ್ಧಿಸಲಿ ಗೆಲುವಿನ ಅಂತರ ಮಾತ್ರ ಕಡಿಮೆ ಆಗುವುದಿಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಮುರಗೇಶ ನಿರಾಣಿ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬದಿಂದ ನಾನು ಮತ್ತು ಸಹೋದರ ವಿಧಾನ ಪರಿಷತ್‌ ಸದಸ್ಯ ಹನಮಂತ ನಿರಾಣಿ ಮಾತ್ರ ರಾಜಕೀಯದಲ್ಲಿ ಇರುತ್ತೇವೆ. ಒಂದೊಮ್ಮೆ ನಮ್ಮ ಕುಟುಂಬದಿಂದ ಮತ್ತೊಬ್ಬರು ರಾಜಕೀಯಕ್ಕೆ ಬರುವುದಾದರೆ ನಾನೇ ರಾಜಕೀಯದಿಂದ ನಿವೃತ್ತಿ ಹೊಂದಿ ಅವರಿಗೆ ಅವಕಾಶ ನೀಡಿ ಕೈಗಾರಿಕೆಗಳನ್ನು ನೋಡಿಕೊಳ್ಳುತ್ತೇನೆ ಎಂದರು.

ಬಾಗಲಕೋಟೆ ಜಿಲ್ಲೆಯಲ್ಲಿ 64,000 ಮತದಾರರ ಕೈಬಿಡಲಾಗಿದೆ: ಕಾಂಗ್ರೆಸ್‌

ಇದೇ ಸಂದರ್ಭದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಬಗ್ಗೆ ಪ್ರಸ್ತಾಪಿಸಿದ ಅವರು, ಸಮಾವೇಶದ ನಂತರ ರಾಜ್ಯಕ್ಕೆ ಕೈಗಾರಿಕಾ ಕ್ಷೇತ್ರದಲ್ಲಿ ಹರಿದುಬರಲಿರುವ ಬಂಡವಾಳ .10 ಲಕ್ಷ ಕೋಟಿ ದಾಟಲಿದ್ದು, ಅದರಲ್ಲಿ ಬಾಗಲಕೋಟೆ ಜಿಲ್ಲೆಯ ಹಲಕುರ್ಕಿ ಪ್ರದೇಶದ ಕೈಗಾರಿಕಾ ವಲಯ ಮತ್ತು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆರಂಭಿಕ ಹಂತವಾಗಿ .15 ಸಾವಿರ ಕೋಟಿ ಹಣ ಹರಿದು ಬರಲಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲಿಯೇ ಮುಂಚೂಣಿ ಸ್ಥಾನದಲ್ಲಿದೆ. ಬಂಡವಾಳ ಹೂಡಿಕೆದಾರರ ಸಮಾವೇಶ ಹಾಗೂ ನಂತರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಪರಿಣಾಮ ಬರಲಿರುವ ದಿನಗಳಲ್ಲಿ ರಾಜ್ಯವು ಬಹುದೊಡ್ಡ ಕೈಗಾರಿಕಾ ವಲಯವಾಗಿ ವಿಸ್ತಾರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಲಕುರ್ಕಿ ಭಾಗಕ್ಕೆ 15 ಸಾವಿರ ಕೋಟಿ ಬಂಡವಾಳ:

ಬಾದಾಮಿ ತಾಲೂಕಿನ ಉದ್ದೇಶಿತ ವಿಮಾನ ನಿಲ್ದಾಣ ಹಾಗೂ ಕೈಗಾರಿಕಾ ವಲಯಗಳ ಸ್ಥಾಪನೆಗೆ ಆರಂಭಿಕ ಹಂತದಲ್ಲಿ .15 ಸಾವಿರ ಕೋಟಿ ಹಣವನ್ನು ಬಂಡವಾಳ ರೂಪದಲ್ಲಿ ವ್ಯಯಿಸಲು ನಿರ್ಧಾರ ಮಾಡಲಾಗಿದೆ. ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಹಲಕುರ್ಕಿ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸಂಬಂಧಿಸಿದಂತೆ 6 ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ ಸಚಿವರು, ಜವಳಿ ಉದ್ಯಮ, ಗ್ಲಾಸ್‌ ತಯಾರಿಕೆ, ವಿದ್ಯುತ್‌ ಉತ್ಪಾದನಾ ಘಟಕಗಳ ಸ್ಥಾಪನೆ ಜೊತೆಗೆ ವಿಮಾನ ನಿಲ್ದಾಣ ಸ್ಥಾಪನೆಯಾದರೆ ನಿಶ್ಚಿತವಾಗಿ ಈ ಭಾಗದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿ ಆರ್ಥಿಕ ಉತ್ತೇಜನಕ್ಕೆ ಬೇಕಾದ ಎಲ್ಲ ಅನುಕೂಲಗಳು ಲಭಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸದ್ಯ 2 ಸಾವಿರ ಎಕರೆ ಪ್ರದೇಶ ನಮಗೆ ಹಲಕುರ್ಕಿ ಹಾಗೂ ಇತರೆ ಸಮೀಪದ ಪ್ರದೇಶಗಳಿಂದ ಬೇಕಾಗಿದೆ. ಈಗಾಗಲೇ 800 ಎಕರೆ ರೈತರ ಜಮೀನು, 600 ಎಕರೆ ಸರ್ಕಾರಿ ಜಮೀನು ಲಭ್ಯವಿದೆ. ಇನ್ನುಳಿದ ಜಮೀನನ್ನು ರೈತರ ಒಪ್ಪಿಗೆ ಮೇರೆಗೆ ಪಡೆದು ನಂತರ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದರು.

ಜಮೀನು ಕಳೆದುಕೊಂಡ ರೈತರಿಗೆ ಪ್ರತಿ ಎಕರೆಗೆ .18 ಲಕ್ಷ ಮತ್ತು ಆಯಾ ಕುಟುಂಬದ ಓರ್ವ ಸದಸ್ಯರ ಶೈಕ್ಷಣಿಕ ಅರ್ಹತೆಯ ಮೇಲೆ ಉದ್ಯೋಗದ ಜೊತೆ ಭೂಮಿ ಕಳೆದುಕೊಂಡ ಪರಿಶಿಷ್ಟಜಾತಿ, ಪಂಗಡಗಳಿಗೆ ತಲಾ ಒಂದು ಎಕರೆ ಜಮೀನು ಸೇರಿ ಹಲವು ಉಪಯುಕ್ತ ಯೋಜನೆಗಳನ್ನು ಸರ್ಕಾರ ನೀಡಲಿದೆ ಎಂದು ತಿಳಿಸಿದರು.

ರಾಜ್ಯದ ಎಲ್ಲೆಡೆ ಬಂಡವಾಳ ಹೂಡಿಕೆ:

ಹೂಡಿಕೆದಾರರ ಸಮಾವೇಶದಲ್ಲಿ ವಿಶೇಷವಾಗಿ ಬೆಂಗಳೂರು ಕೇಂದ್ರೀಕೃತವಾಗಿ ಕೇವಲ ಹತ್ತರಷ್ಟುಮಾತ್ರ ಬಂಡವಾಳ ಹೂಡಿಕೆಯಾದರೆ, ಇನ್ನುಳಿದ ಶೇ 90ರಷ್ಟುರಾಜ್ಯದ ವಿವಿಧೆಡೆ ಕæೖಗಾರಿಕೆಗಳ ಸ್ಥಾಪನೆಯಾಗಲು ಹೂಡಿಕೆದಾರರ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅವರಿಗೆ ಅವಶ್ಯವಾದ ಜಮೀನು ಹಾಗೂ ಇತರೆ ಸೌಲಭ್ಯಗಳನ್ನು ನೀಡಲು ವ್ಯವಸ್ಥಿತವಾಗಿ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದ ಸಚಿವ ಮುರಗೇಶ ನಿರಾಣಿ ಕೈಗಾರಿಕೆ ಇಲಾಖೆಯಿಂದ ಪರಿಶಿಷ್ಟಜಾತಿ ಹಾಗು ಪಂಗಡಗಳಿಗೆ ಕೈಗಾರಿಕೆ ಸ್ಥಾಪನೆಗೆ ಸ್ಥಳ ಹಾಗೂ ರಿಯಾಯಿತಿ ನೀಡಲು ಆರಂಭಿಸಲಾಗಿದೆ ಎಂದು ಹೇಳಿದರು.

Bagalkote: ಹದಗೆಟ್ಟ ರಸ್ತೆ: ಕಬ್ಬು ಸಾಗಣೆಗೆ ಸಂಕಷ್ಟ

ಮತಕ್ಷೇತ್ರದಲ್ಲಿ 1.25 ಲಕ್ಷ ಸಾವಿರ ಎಕರೆ ನೀರಾವರಿ:

ಇದೇ ನನ್ನ ಶಾಸಕ ಅವಧಿಯಲ್ಲಿ ಬೀಳಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1.25 ಲಕ್ಷ ಎಕರೆ ಜಮೀನಿಗೆ ನೀರಾವರಿ ಒದಗಿಸಿದ್ದೇನೆ. ಇದಕ್ಕೆ ಸಾವಿರಾರು ಕೋಟಿ ಹಣ ವ್ಯಯ ಆಗಿರಬಹುದು. ಮತಕ್ಷೇತ್ರದಲ್ಲಿ 400 ದೇವಾಲಯಗಳಿಗೆ ಅನುದಾನ, ಶಾಲಾ ಕೊಠಡಿಗಳ ನಿರ್ಮಾಣ, .400 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಸಾವಿರಾರು ಕೋಟಿಯ ಕಾಮಗಾರಿಗಳು ನಡೆದಿವೆ ಎಂದು ತಿಳಿಸಿದರು. ಜಿ.ಪಂ. ಮಾಜಿ ಸದಸ್ಯ ಹೂವಪ್ಪ ರಾಠೋಡ ಉಪಸ್ಥಿತರಿದ್ದರು.

ವೀರಶೈವ, ಲಿಂಗಾಯತರಿಗೆ ಮೀಸಲಾತಿ ಸಿಗಲಿ

ವೀರಶೈವ ಹಾಗೂ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳಿಗೆ ಮೀಸಲಾತಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೌಲಭ್ಯಗಳು ಸಿಗಬೇಕು ಎಂಬುದು ನನ್ನ ಆಶಯ. ವೀರಶೈವ ಮತ್ತು ಲಿಂಗಾಯತ ಎರಡು ಒಂದೇ. ಹೀಗಾಗಿ, ಇವುಗಳ ವಿಭಜನೆಗೆ ಅವಕಾಶವೇ ಇಲ್ಲ. ನಾನಂತು ಲಿಂಗಾಯತ ಸಮುದಾಯದ ಒಂದೇ ಉಪಜಾತಿಗೆ ಮೀಸಲಾತಿ ಸಿಗಬೇಕು ಎಂದು ಬಯಸುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಕæೖಗಾರಿಕೆ ಸಚಿವ ಮುರಗೇಶ ನಿರಾಣಿ ತಿಳಿಸಿದರು.
 

Latest Videos
Follow Us:
Download App:
  • android
  • ios