Asianet Suvarna News Asianet Suvarna News

ಬಾಗಲಕೋಟೆ ಜಿಲ್ಲೆಯಲ್ಲಿ 64,000 ಮತದಾರರ ಕೈಬಿಡಲಾಗಿದೆ: ಕಾಂಗ್ರೆಸ್‌

ಮಾಜಿ ಶಾಸಕ ಜೆ.ಟಿ.ಪಾಟೀಲ ಅವರು ವಾಮಮಾರ್ಗದ ಮೂಲಕ ಚುನಾವಣೆ ಗೆಲ್ಲಲು ಹೊರಟಿರುವ ಕೆಲವರು ಇಂಥ‚ ಕೀಳುಮಟ್ಟದ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್‌ ನಾಯಕರು 

64000 Voters Abandoned in Bagalkot says Congress grg
Author
First Published Dec 2, 2022, 1:00 PM IST

ಬಾಗಲಕೋಟೆ(ಡಿ.02): ಅರ್ಹ ಮತದಾರರನ್ನು ಮತದಾನದಿಂದ ವಂಚಿಸುವ ಪ್ರಯತ್ನ ಕೆಲವರಿಂದ ನಡೆದಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ 10 ತಿಂಗಳಿನಲ್ಲಿ 64,954 ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಸೂಕ್ತ ಕಾರಣದಿಂದ ಕೈಬಿಡಲಾಗಿದೆಯೇ ಎಂಬುದನ್ನು ಜಿಲ್ಲಾ ಕಾಂಗ್ರೆಸ್‌ ಪರಿಶೀಲಿಸುತ್ತಿದ್ದು, ಉದ್ದೇಶಪೂರ್ವಕವಾಗಿ ಮತದಾರರನ್ನು ಕೈಬಿಟ್ಟಿದ್ದೇ ಆದರೆ ಕಾಂಗ್ರೆಸ್‌ ಪಕ್ಷ ಸುಮ್ಮನೆ ಕೂರುವುದಿಲ್ಲ ಎಂದು ಪಕ್ಷದ ಮುಖಂಡರು ಎಚ್ಚರಿಸಿದ್ದಾರೆ.

ಗುರುವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ವಕ್ತಾರರು ಆಗಿರುವ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಜಿ.ನಂಜಯ್ಯನಮಠ, ಮಾಜಿ ಸಚಿವ ಎಚ್‌.ವೈ.ಮೇಟಿ, ಮಾಜಿ ಶಾಸಕ ಜೆ.ಟಿ.ಪಾಟೀಲ ಅವರು ವಾಮಮಾರ್ಗದ ಮೂಲಕ ಚುನಾವಣೆ ಗೆಲ್ಲಲು ಹೊರಟಿರುವ ಕೆಲವರು ಇಂಥ‚ ಕೀಳುಮಟ್ಟದ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Bagalkote: ಹದಗೆಟ್ಟ ರಸ್ತೆ: ಕಬ್ಬು ಸಾಗಣೆಗೆ ಸಂಕಷ್ಟ

ಬಾಗಲಕೋಟೆ ಜಿಲ್ಲೆಯಲ್ಲಿ 2022ರ ಜನವರಿಯಿಂದ ನವೆಂಬರ್‌ವರೆಗೆ ಒಟ್ಟು 64,954 ಮತದಾರರನ್ನು ಕೈಬಿಡಲಾಗಿದೆ. ಮುಧೋಳದಲ್ಲಿ 11,362, ತೇರದಾಳದಲ್ಲಿ 10260, ಜಮಖಂಡಿಯಲ್ಲಿ 5318, ಬೀಳಗಿಯಲ್ಲಿ 6797, ಬಾದಾಮಿಯಲ್ಲಿ 14830, ಬಾಗಲಕೋಟೆಯಲ್ಲಿ 8875, ಹುನಗುಂದದಲ್ಲಿ 7512 ಮತದಾರರನ್ನು ಕೈಬಿಡಲಾಗಿದ್ದು, ಕೈಬಿಟ್ಟ ಮತದಾರರ ಅರ್ಹತೆ ಮತ್ತು ಸೂಕ್ತ ದಾಖಲೆಗಳನ್ನು ಕಾಂಗ್ರೆಸ್‌ ಪಕ್ಷ ಪರಿಶೀಲಿಸುವ ಕಾರ್ಯ ಆರಂಭಿಸಿದೆ ಎಂದರು.

ಪಕ್ಷದ ವತಿಯಿಂದ ಜಿಲ್ಲಾಡಳಿತಕ್ಕೂ ಈ ಕುರಿತು ಮನವಿಯನ್ನು ಸಲ್ಲಿಸಲಾಗುವುದು. ಜೊತೆಗೆ ಮತದಾರರನ್ನು ಕæೖಬಿಟ್ಟಿರುವುದಕ್ಕೆ ಸೂಕ್ತ ಕಾರಣ ದೊರೆಯದೇ ಹೋದರೆ ಪಕ್ಷ ಆಯೋಗಕ್ಕೆ ದೂರು ನೀಡುವ ಜೊತೆಗೆ ಆಗಿರುವ ಲೋಪಗಳ ಕುರಿತು ಹೋರಾಟವನ್ನು ಸಹ ಕೈಗೊಳ್ಳಲಿದೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾಯಿತ ಸರ್ಕಾರ ರಚಿಸಬೇಕಾದರೆ ಮತದಾರರು ನೀಡುವ ತೀರ್ಪು ಬಹುಮುಖ್ಯವಾಗಿದೆ. ಇಂಥ ಹಕ್ಕುಗಳನ್ನು ನೀಡುವ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುವ ಷಡ್ಯಂತ್ರವನ್ನು ಚಿಲುಮೆ ಸಂಸ್ಥೆ ಮೂಲಕ ಮಾಡಲು ಹೊರಟಿದ್ದ ಕ್ರಮವನ್ನು ಬೆಳಕಿಗೆ ತಂದ ಕಾಂಗ್ರೆಸ್‌ ಪಕ್ಷದ ಮುಖಂಡರಾದ ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ ಹಾಗೂ ಹರಿಪ್ರಸಾದ ಅವರನ್ನು ಅಭಿನಂದಿಸಿದ ಮುಖಂಡರು, ಮತದಾರರ ಯಾದಿಯಲ್ಲಿನ ಗೊಂದಲಗಳ ನಿವಾರಣೆಗೆ ಚುನಾವಣಾ ಆಯೋಗ ಸಹ ಗಂಭೀರ ಕ್ರಮ ಕೈಗೊಳ್ಳುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ ಎಂದು ಬಣ್ಣಿಸಿದರು.

ಮಾಜಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ, 2004ರಲ್ಲಿ ಬೀಳಗಿ ವಿಧಾನಸಭಾ ಕ್ಷೇತ್ರದಲ್ಲಿ 35,400 ಮತದಾರರನ್ನು ನಿಯಮ ಬಾಹಿರವಾಗಿ ಸೇರ್ಪಡೆ ಮಾಡಲಾಗಿತ್ತು. ಆಗ ನನ್ನ ಸೋಲಿಗೆ ಈ ಷಡ್ಯಂತ್ರವೇ ಕಾರಣವಾಗಿತ್ತು. ಸದ್ಯ ಬೀಳಗಿ ತಾಲೂಕಿನ ಕಂದಗಲ್ಲ ಮತ್ತು ಸೊನ್ನ ಗ್ರಾಮದಲ್ಲಿ ಅರ್ಹ ಮತದಾರರನ್ನು ಕೈಬಿಡಲಾಗಿದೆ. ಅದರಲ್ಲೂ ಪ್ರಮುಖವಾಗಿ ದಲಿತ ಮತ್ತು ಅಲ್ಪಸಂಖ್ಯಾತ ಮತದಾರರನ್ನೇ ಕೈಬಿಡಲಾಗಿದೆ ಎಂದು ಹೇಳಿದರು.

ಬಿಜೆಪಿ ಸರ್ವಾ​ಧಿಕಾರಿ ಸರ್ಕಾರ: ಮಾಜಿ ಸಚಿವೆ ಉಮಾಶ್ರೀ

ಮಾಜಿ ಸಚಿವ ಎಚ್‌.ವೈ.ಮೇಟಿ ಮಾತನಾಡಿ, ಬಾಗಲಕೋಟೆಯ ಮತಗಟ್ಟೆಸಂಖ್ಯೆ 159ರಲ್ಲಿ 430ಕ್ಕೂ ಹೆಚ್ಚು ಮತದಾರರನ್ನು ಸೇರ್ಪಡೆ ಮಾಡಲಾಗಿದೆ. 36 ಮತದಾರರನ್ನು ಕೈಬಿಡಲಾಗಿದೆ. ಇದು ಕಾಲೇಜು ಒಂದರ ವ್ಯಾಪ್ತಿಯಾಗಿದ್ದು, ಈ ಕುರಿತು ಮರುಪರಿಶೀಲನೆ ಅಗತ್ಯವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಪದಾಧಿಕಾರಿಗಳಾದ ನಾಗರಾಜ ಹದ್ಲಿ ಹಾಗೂ ಆನಂದ ಶಿಲ್ಪಿ ಉಪಸ್ಥಿತರಿದ್ದರು.

ನಾನು ಬೀಳಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ, ಕಳೆದ ಬಾರಿಯ ಚುನಾವಣೆಯೇ ಕೊನೆಯ ಚುನಾವಣೆ ಎಂದು ಎಲ್ಲಿಯೂ ಹೇಳಿಲ್ಲ. ಹೀಗಿದ್ದರೂ ಸಹ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ನಾನು 2023ರ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಬೀಳಗಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಗಲಾಗಲು ಹತ್ತು ಜನ ಅಪೇಕ್ಷಿತರಿದ್ದಾರೆ. ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ನಾನು ಸಹ ಬದ್ಧನಾಗಿರುತ್ತೇನೆ ಅಂತ ಬೀಳಗಿ ಮಾಜಿ ಶಾಸಕ ಜೆ.ಟಿ.ಪಾಟೀಲ ತಿಳಿಸಿದ್ದಾರೆ. 
 

Follow Us:
Download App:
  • android
  • ios