ಸಿದ್ದರಾಮಯ್ಯಗೆ ಆರ್‌ಎಸ್‌ಎಸ್‌ ಪುಸ್ತಕ ಕಳುಹಿಸುವೆ: ಸಿ.ಟಿ.ರವಿ

ಆರ್‌ಎಸ್‌ಎಸ್‌ (ರಾಷ್ಟ್ರೀಯ ಸ್ವಯಂಸೇವಕ ಸಂಘ) ವಿರುದ್ಧ ಸತತ ಟೀಕೆಗಳನ್ನು ಮಾಡುತ್ತಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಆರ್‌ಎಸ್‌ಎಸ್‌ನ ಧ್ಯೆಯೋದ್ದೇಶಗಳನ್ನು ತಿಳಿಸುವ ‘ಕೃತಿರೂಪ; ಸಂಘದರ್ಶನ’ ಎಂಬ ಪುಸ್ತಕವನ್ನು ಕಳುಹಿಸಿಕೊಡಲು ನಿರ್ಧರಿಸಿದ್ದಾರೆ. 

i will send the rss book to siddaramaiah says ct ravi gvd

ಬೆಂಗಳೂರು (ಜೂ.08): ಆರ್‌ಎಸ್‌ಎಸ್‌ (ರಾಷ್ಟ್ರೀಯ ಸ್ವಯಂಸೇವಕ ಸಂಘ) ವಿರುದ್ಧ ಸತತ ಟೀಕೆಗಳನ್ನು ಮಾಡುತ್ತಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಆರ್‌ಎಸ್‌ಎಸ್‌ನ ಧ್ಯೆಯೋದ್ದೇಶಗಳನ್ನು ತಿಳಿಸುವ ‘ಕೃತಿರೂಪ; ಸಂಘದರ್ಶನ’ ಎಂಬ ಪುಸ್ತಕವನ್ನು ಕಳುಹಿಸಿಕೊಡಲು ನಿರ್ಧರಿಸಿದ್ದಾರೆ. ಹಿಂದುತ್ವವನ್ನು ಜಾತಿಯ ಆಧಾರದಲ್ಲಿ ವಿಭಜಿಸುವ ಷಡ್ಯಂತ್ರವನ್ನು ಕೆಲವು ಎಡಪಂಥೀಯರು ಮತ್ತು ಕಾಂಗ್ರೆಸ್‌ ಪಕ್ಷ ನಡೆಸುತ್ತಿದೆ. ಆರ್‌ಎಸ್‌ಎಸ್‌ನ ತತ್ವ ಏನು ಎಂಬುದು ತಿಳಿಯಬೇಕು. ಅಲ್ಲಿ ಅಸ್ಪೃಶ್ಯತೆ ಇಲ್ಲ. ಅಂಬೇಡ್ಕರ್‌ ಆರ್‌ಎಸ್‌ಎಸ್‌ನ ಕಾರ್ಯವನ್ನು ಪ್ರಶಂಸಿಸಿದ್ದಾರೆ. ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಕೂಡ ಆರ್‌ಎಸ್‌ಎಸ್‌ ಅನ್ನು ಹೊಗಳಿದ್ದಾರೆ ಎಂದರು.

‘ಆರ್‌ಎಸ್‌ಎಸ್‌ ನಡೆಯುವುದು ತತ್ವದ ಮೇಲೆ ಹೊರತು ಜಾತಿಯ ಮೇಲೆ ಅಲ್ಲ. ಸಂಘಕ್ಕೆ ಬರುವವರು ಜಾತಿ ಮತದ ಸ್ಪರ್ಶ ಇಲ್ಲದೇ ಕೆಲಸ ಮಾಡುತ್ತಾರೆ. ಜಾತಿ ತೋರಿಸಿಕೊಳ್ಳುವ ಪ್ರವೃತ್ತಿ ಇಲ್ಲಿ ಇಲ್ಲ. ರಾಷ್ಟ್ರೀಯತೆ, ಹಿಂದುತ್ವ ಜೋಡಣೆ ಇದು ಸಂಘದ ಕೆಲಸ. ಋುಷಿತುಲ್ಯವಾದದು ಸಂಘದ ಕೆಲಸ. ಇಲ್ಲಿ ವೈಯಕ್ತಿಕ ಹಿತಾಸಕ್ತಿ ಇಲ್ಲ. ಸಂಘದ ಹಿನ್ನೆಲೆಯಿಂದ ಬಂದ ರಾಮನಾಥ್‌ ಕೋವಿಂದ್‌ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದೆ. ಅನೇಕ ಸಮುದಾಯದವರು ಉನ್ನತ ಸ್ಥಾನ ಏರಿದ್ದಾರೆ’ ಎಂದರು. ‘ಹೀಗಾಗಿ, ಸಂಘದ ಧ್ಯೇಯೋದ್ದೇಶಗಳನ್ನು ವಿವರಿಸುವ ಹಾಗೂ ಯಾವ್ಯಾವ ನಾಯಕರು ಸಂಘದಿಂದ ಬೆಳೆದುಹೋದರು ಎನ್ನುವ ವಿವರಗಳನ್ನು ಒಳಗೊಂಡ ‘ಕೃತಿರೂಪ; ಸಂಘದರ್ಶನ’ ಪುಸ್ತಕವನ್ನು ಸಿದ್ದರಾಮಯ್ಯ ಅವರಿಗೆ ಕಳುಹಿಸಿಕೊಡಲಾಗುವುದು. ಅದನ್ನು ಅವರು ಓದಬೇಕು’ ಎಂದರು.

Chikkamagaluru ; ಕಾಂಗ್ರೆಸ್ ಮುಖಂಡ ಉಗ್ರಪ್ಪ ಹೇಳಿಕೆಗೆ ಸಿ.ಟಿ ರವಿ ತಿರುಗೇಟು

ಸಿಎಂ ಹುದ್ದೆಗೆ ಯೋಗ್ಯತೆ ಅನೇಕರಿಗೆ ಇದೆ: ಯೋಗ್ಯತೆ ಇರುವವರು ಅನೇಕರು ಇದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾರ್ಮಿಕವಾಗಿ ಹೇಳಿದ್ದಾರೆ. ಪಕ್ಷದ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರು ಮುಖ್ಯಮಂತ್ರಿ ಆಗಬೇಕು ಎಂಬ ಕೂಗಿನ ಬಗ್ಗೆ ಪ್ರತಿಕ್ರಿಯಿಸಿರುವ ರವಿ, ‘ಪ್ರಜಾಪ್ರಭುತ್ವ ದಲ್ಲಿ ಮತದಾರನೇ ಅಂತಿಮ ತೀರ್ಪು ನೀಡುತ್ತಾನೆ. ಯಾರಾರ‍ಯರ ಹಣೆಯಲ್ಲಿ ಏನು ಬರೆದಿದೆಯೋ ಎಂಬುದು ಗೊತ್ತಿರಲ್ಲ. ರಾಜಕಾರಣದಲ್ಲಿ ಅನೇಕರು ಗದ್ದುಗೆ ಏರಿರುವ ಉದಾಹರಣೆಗಳಿವೆ. ಕೆಲವರು ಅನಿರೀಕ್ಷಿತವಾಗಿ ಗದ್ದುಗೆ ಏರಿರುವುದೂ ಇದೆ’ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಯೋಗ್ಯತೆ ಇರುವವರು ಅನೇಕರು ಇದ್ದಾರೆ. ಯೋಗ್ಯತೆ ಇದ್ದವರು ಮೇಲೆ ಬಂದರೂ ಯೋಗ ಇರಬೇಕಲ್ಲ. ಯೋಗ ಇದ್ದವರು ಕೆಲವೊಮ್ಮೆ ಮುಖ್ಯಮಂತ್ರಿಯಾಗುತ್ತಾರೆ’ ಎಂದು ತಿಳಿಸಿದರು.

Textbook Revision Row: 70 ಜನರು ಕೂಗಿದ್ರೆ ಜನಾಕ್ರೋಶವಲ್ಲ: ಸಿ.ಟಿ.ರವಿ

ವಿದ್ಯೆ ಬಗ್ಗೆ ಕಾಂಗ್ರೆಸ್‌ ನಾಯಕರಿಗೆ ಅಸಡ್ಡೆ: ಪರಿಷ್ಕೃತ ಪಠ್ಯ ಕಸದ ಬುಟ್ಟಿಗೆ ಎಸೆಯಿರಿ ಎಂದು ಹೇಳಿರುವ ಕೈ ನಾಯಕರ ಹೇಳಿಕೆ ವಿದ್ಯೆ ಮತ್ತು ಶಿಕ್ಷಣದ ಬಗ್ಗೆ ಅವರಿಗಿರುವ ಅಸಡ್ಡೆಯನ್ನು ತೋರಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಳ್ಳು ಅಪಪ್ರಚಾರ ಮಾಡೋದು, ಅಸಡ್ಡೆಯನ್ನು ತೋರಿಸಿ ಸುಳ್ಳನ್ನೇ ಮನೆ ದೇವರಾಗಿ ಮಾಡಿಕೊಂಡಿದ್ದಾರೆ. ಸಮಾಜವನ್ನು ವಿಭಜನೆ ಮಾಡಬೇಕೆಂದು ಸಂಚು ರೂಪಿಸಿದ್ದಾರೆ. ಹಾಗಾಗಿ, ನ್ಯಾಯಾಲಯ ತೀರ್ಪು ನೀಡಿದರೂ, ನಾವು ಹಿಜಾಬ್‌ ಪರ ಎಂದು ಹೇಳುತ್ತಾರೆ. ಬಲವಂತದ ಮತಾಂತರದ ವಿರುದ್ಧ ಮಸೂದೆ ತಂದರೆ ನಾವು ಅದರ ವಿರುದ್ಧ ಎಂದು ಹೇಳುತ್ತಾರೆ. ಅವರ ಮನಸ್ಥಿತಿಯೇ ಅರ್ಥವಾಗುತ್ತಿಲ್ಲ ಎಂದರು.

Latest Videos
Follow Us:
Download App:
  • android
  • ios