Chikkamagaluru ; ಕಾಂಗ್ರೆಸ್ ಮುಖಂಡ ಉಗ್ರಪ್ಪ ಹೇಳಿಕೆಗೆ ಸಿ.ಟಿ ರವಿ ತಿರುಗೇಟು
RSS ಸಾಧನೆ ಬಗ್ಗೆ ಚರ್ಚೆಯಾಗಲಿ ಎಂಬ ವಿ.ಎಸ್.ಉಗ್ರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಟಿ ರವಿ ಸಂಘ ಎಷ್ಟು ವಿಸ್ತಾರವಾಗಿದೆ , ಯಾವ ಯಾವ ಕ್ಷೇತ್ರದಲ್ಲಿ ಕಲಸ ಮಾಡುತ್ತಿದೆ ಎನ್ನುವಂತ ಒಂದು ಪುಸ್ತಕ ಕಳುಹಿಸಿಕೊಡುತ್ತೇನೆ ಅದನ್ನು ಓದಲಿ ಸಂಶಯ ಬಂದರೆ ಚರ್ಚೆಗೆ ವೇದಿಕೆಗೆ ಬರಲಿ ಎಂದರು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜೂ.6): ಸಂಘ ಯಾವತ್ತು ತನ್ನ ಕೆಲಸವನ್ನು ಹೇಳಿಕೊಳ್ಳುವಂತಾ ಸ್ವಭಾವ ಮುಂಚಿನಿಂದಲೂ ಇಲ್ಲಾ ಉಗ್ರಪ್ಪನವರಿಗೆ ಒಂದು ಪುಸ್ತಕ ಕಳುಹಿಸಿಕೊಡುತ್ತೇನೆ ಏನೇನು ಮಾಡಿದೆ ಎಂದು ನೋಡಿ ಏನಾದರೂ ಡೌಟ್ ಬಂದರೆ ಚರ್ಚೆ ಮಾಡುವುದಾದರೆ ಮಾಡೋಣ ಸಂಘವೇನು ಬರುವುದಿಲ್ಲ ನಾವೇ ಬರುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
RSS ಸಾಧನೆ ಬಗ್ಗೆ ಚರ್ಚೆಯಾಗಲಿ ಎಂಬ ವಿ.ಎಸ್.ಉಗ್ರಪ್ಪ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ಸುದ್ದಿಗಾರಿಗೆ ಪ್ರತಿಕ್ರಯಿಸಿ, ಸಂಘ ಎಷ್ಟು ವಿಸ್ತಾರವಾಗಿದೆ , ಯಾವ ಯಾವ ಕ್ಷೇತ್ರದಲ್ಲಿ ಕಲಸ ಮಾಡುತ್ತಿದೆ ಎನ್ನುವಂತ ಒಂದು ಪುಸ್ತಕ ಕಳುಹಿಸಿಕೊಡುತ್ತೇನೆ ಅದನ್ನು ಓದಲಿ ಸಂಶಯ ಬಂದರೆ ಚರ್ಚೆಗೆ ವೇದಿಕೆಗೆ ಬರಲಿ ಎಂದರು. ಕಾಂಗ್ರೆಸ್ಸಿಗರಿಗೆ ಚೆಡ್ಡಿ ಕೊರತೆಯಾಗಬಾರದು ಹಾಗಾಗಿ ರಾಜ್ಯದಲ್ಲಿ ಎಲ್ಲರೂ ಹಳೆ ಚೆಡ್ಡಿಯನ್ನು ಕಳುಹಿಸಿಕೊಡಿ ಎಂದು ಹೇಳುತ್ತೇನೆ ಎಂದು ವ್ಯಂಗ್ಯವಾಡಿದರು.
Textbook Revision; ‘ಆಡಿಸಿ ನೋಡು’ ಗೀತೆಯ ಕರ್ತೃ ಹೆಸರೇ ಬದಲು ಮಾಡಿದ ಚಕ್ರತೀರ್ಥ ಸಮಿತಿ!
ಕಾಂಗ್ರೆಸ್ ನಾಯಕರು ಸುಳ್ಳನ್ನೇ ಮನೆ ದೇವರಾಗಿ ಮಾಡಿಕೊಂಡಿದ್ದಾರೆ: ಪರಿಷ್ಕೃತ ಪಠ್ಯ ಕಸದ ಬುಟ್ಟಿಗೆ ಎಸೆಯಿರಿ ಎಂದು ಹೇಳಿರುವ ಕೈ ನಾಯಕರ ಹೇಳಿಕೆ ವಿದ್ಯೆ ಮತ್ತು ಶಿಕ್ಷಣದ ಬಗ್ಗೆ ಅವರಿಗಿರುವ ಅಸಡ್ಡಯನ್ನು ಎತ್ತಿ ತೋರಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಸೋಮವಾರ ಸುದ್ದಿಗಾರರೊಂದಿಗೆ ಪ್ರತಿಕ್ರಯಿಸಿ, ಸುಳ್ಳು ಅಪ ಪ್ರಚಾರ ಮಾಡೋದು, ಅಸಡ್ಡೆಯನ್ನು ತೋರಿಸಿ ಸುಳ್ಳನ್ನೆ ಮನೆ ದೇವರಾಗಿ ಮಾಡಿಕೊಂಡಿದ್ದಾರೆ. ಸಮಾಜವನ್ನು ವಿಭಜನೆ ಮಾಡಬೇಕೆಂದು ಸಂಚು ರೂಪಿಸಿದ್ದಾರೆ ಹಾಗಾಗಿ ನ್ಯಾಯಾಲಯ ತೀರ್ಪು ನೀಡಿದರೂ ಕೂಡ ನಾವು ಹಿಜಾಬ್ ಪರ ಎಂದು ಹೇಳುತ್ತಾರೆ.
ಬಲತ್ಕಾರದ ಮತಾಂತರದ ವಿರುದ್ದ ಮಸೂದೆ ತಂದರೆ ನಾವು ಅದರ ವಿರುದ್ದ ಎಂದು ಹೇಳುತ್ತಾರೆ. ಅವರ ಮನಸ್ಥಿತಿಯೇ ಅರ್ಥವಾಗುತ್ತಿಲ್ಲ. ನನಗೆ ಒಂದು ದಿನ ಅಽಕಾರ ಸಿಕ್ಕಿದರೂ ಕೂಡ ಸಂಪೂರ್ಣ ಮತಾಂತರ ನಿಷೇಽಸುತ್ತೇನೆ ಎಂದು ಮಹಾತ್ಮ ಗಾಂಽಜಿಯೇ ಹೇಳಿದ್ದರು ಇವರು ಅದಕ್ಕೆ ತದ್ವಿರುದ್ದವಾಗಿ ನಡೆದುಕೊಳ್ಳುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ದೇಶದಲ್ಲಿ ಮಾಡಿರುವ ಅಭಿವೃದ್ದಿ ಕೆಲಸಗಳನ್ನು ಅವರೆಲ್ಲಿ ಮಾಡಿದ್ದಾರೆ ಅಂಕಿ ಅಂಶ ಹಿಡಿದುಕೊಂಡು ಬಂದರೆ ಉತ್ತರ ನೀಡುತ್ತೇವೆ.
ನಮ್ಮ ಯೋಜನೆಗಳು ಸಾಮಾನ್ಯ ಬಡ ಜನರಿಗೆ ಅನುಕೂಲ ಕರವಾದಂತದ್ದು ಅದು ಚರ್ಚೆಯಾಗಬಾರದೆಂದು ಕೈ ನಾಯಕರು ಇಂತಹ ಅನಗತ್ಯ ಚರ್ಚೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಇವರು ಏನೇ ಮಾಡಿದರೂ ಚುನಾವಣೆಯಲ್ಲಿ ಡಿಪಾಸಿಟ್ ಉಳಿಯಲ್ಲ. ಜನ ಸಾಮಾನ್ಯರು ಕಾಂಗ್ರೆಸ್ಗೆ ಬುದ್ದಿ ಕಲಿಸಲು ಕಾತರರಾಗಿದ್ದಾರೆ.
Srirangapatna Jamia Masjid Row; ದಶಕಗಳ ಹಿಂದಿನ ಪುಸ್ತಕದಲ್ಲಿ ಟಿಪ್ಪು ಕೆಡವಿರುವ ಉಲ್ಲೇಖ
ದೇಶದ ನೆಲದ ವಿಚಾರಧಾರೆಗೆ ಕಾಂಗ್ರೆಸ್ಸಿಗರಿಂದ ಬೆಂಕಿ : ಶಾಸಕ ಪಿ ರಾಜೀವ್
ಕಾಂಗ್ರೆಸ್ಸಿಗರು ಈ ದೇಶದ ನೆಲದ ವಿಚಾರಧಾರೆಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕುಡಚಿ ಶಾಸಕ ಪಿ.ರಾಜೀವ್ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಮಗಳೂರಿನಲ್ಲಿ ನಡೆದ ಬಂಜಾರ ಸಮುದಾಯ ಮುಖಂಡರೊಂದಿಗೆ ನಡೆದ ಸಂವಾದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಚೆಡ್ಡಿ ಸುಡುವುದರಿಂದ ನಮ್ಮ ವಿಚಾರಾಧಾರೆಯನ್ನು ಅವರು ಸುಡಲು ಸಾಧ್ಯವಿಲ್ಲ ಆದರೆ ಇದರಿಂದ ಕಾಂಗ್ರೆಸ್ಸಿನ ಮನಸ್ಥಿತಿ ಎಷ್ಟು ವಿಕೃತವಾಗಿದೆ ಎಂಬುದನ್ನು ತೋರಿಸುತ್ತದೆ.
ಈ ದೇಶದಲ್ಲಿ ರಾಷ್ಟ್ರೀಯತೆ, ದೇಶಾಭಿಮಾನ, ಈ ನೆಲ, ಭಾವನೆಯನ್ನು ಹೃದಯವನ್ನೇದಾರೂ ಕಟ್ಟುವ ಕೆಲಸ ಮಾಡಿದೆ ಎಂದರೆ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ದೂರದಿಂದ ನೋಡಿ ಏನೋ ಮಾತನಾಡೋದಲ್ಲ ಹತ್ತಿರಕ್ಕೆ ಬಂದು ನೋಡಿ. 1963ರಲ್ಲಿ ಜವಾಹಾರ್‌ಲಾಲ್ ನೆಹರು ಅವರು ರಾಜಪಥ್ ನಲ್ಲಿ ಸ್ವಯಂ ಸೇವಕ ಸಂಘ ಇರಬೇಕೆಂದು ಹೇಳಿದ್ದರು? ಭಾರತ ಪಾಕಿಸ್ಥಾನ ವಿಭಜನೆಯಾದ ಸಂದರ್ಭದಲ್ಲಿ ನಿಂತವರು ಸ್ವಯಂ ಸೇವಕ ಸಂಘದವರು. ಭಾರತ ಚೈನಾ ಯುದ್ದವಾದಾಗ ಆ ಯುದ್ದಭೂಮಿಯಲ್ಲಿ ನಿಂತು ಸೇವೆ ಮಾಡಿದವರು ಸಂಘ ಪರಿವಾರದವರು.
ಕರೊನಾ ಸಂದರ್ಭ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳನ್ನು ಮುಟ್ಟಲು ಹಿಂದೆ ಮುಂದೆ ನೋಡುತ್ತಿದ್ದಾಗ ಅವರನ್ನು ತೆಗೆದುಕೊಂಡು ಹೋಗಿ ಶವ ಸಂಸ್ಕಾರ ಮಾಡುವ ಮೂಲಕ, ಸಂತ್ರಸ್ಥರಿಗೆ ಆಹಾರ ಪೊಟ್ಟಣ ನೀಡುವ ಮೂಲಕ ಆರೈಕೆ ಮಾಡಿ ಸೇವೆ ಸಲ್ಲಿಸಿದವರು ಯಾವುದೆ ಒಬ್ಬ ಕಾಂಗ್ರೆಸ್ಸಿಗನಲ್ಲ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಅನ್ನೋದನ್ನು ಈ ಸಮಾಜ ಅರ್ಥೈಸಿಕೊಂಡಿದೆ. ಕಾಂಗ್ರೆಸ್ಸಿಗರು ಚೆಡ್ಡಿ ಸುಡುತ್ತಿಲ್ಲ, ನಿಮ್ಮ ನೈತಿಕತೆ, ಚಿಂತನೆ ಅವೆಲ್ಲವೂ ಏನಿದೆ ಎಂಬುದನ್ನು ತೋರುತ್ತಾ ಜನರ ಮನಸ್ಸಿಗೆ ಹೃದಯಕ್ಕೆ ಬೆಂಕಿ ಹಚ್ಚುತ್ತಿದ್ದೀರಾ ಎಂದು ತೀಕ್ಷ್ಣವಾಗಿ ಪ್ರತಿಕ್ರಯಿಸಿದರು.