*  ನಾನು ಯಾವುದೇ ಪಕ್ಷದ ನಾಯಕರ ಸಂಪರ್ಕದಲ್ಲೂ ಇಲ್ಲ. ಆದ​ರೆ ನಾನು ಪಕ್ಷ ಬಿಡುವುದು ಖಚಿತ*  ಜೆಡಿಎಸ್‌ನಲ್ಲಿ ದುಡಿಮೆಗಿಂತ ದುಡ್ಡಿಗೆ ಬೆಲೆ*  ಜೆಡಿಎಸ್‌ನಲ್ಲಿ ಆಂತರಿಕ ಸ್ವಾತಂತ್ರ್ಯ ಇಲ್ಲ

ಮೈಸೂರು(ಮೇ.18): ಸ್ವಾಭಿಮಾನ ಬಿಟ್ಟು ಗುಲಾಮನಾಗಿ ಕೆಲಸ ಮಾಡಲು ಸಿದ್ಧ​ನಿಲ್ಲ. ಮುಂದೆ ಜೆಡಿಎಸ್‌ನಿಂದ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ. ಸದ್ಯದಲ್ಲೇ ಜೆಡಿಎಸ್‌ ತ್ಯಜಿಸಲಿದ್ದೇನೆ ಎಂದು ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಹೇಳಿದರು. 

ನಾನು ಯಾವುದೇ ಪಕ್ಷದ ನಾಯಕರ ಸಂಪರ್ಕದಲ್ಲೂ ಇಲ್ಲ. ಆದ​ರೆ ನಾನು ಪಕ್ಷ ಬಿಡುವುದು ಖಚಿತ. ಜೆಡಿಎಸ್‌ನಲ್ಲಿ ದುಡಿಮೆಗಿಂತ ದುಡ್ಡಿಗೆ ಬೆಲೆ. ಆದ್ದರಿಂದಲೇ ಜಯರಾಂ ಕೀಲಾರ ಅವರಂಥ ನಿಷ್ಠಾವಂತರ ಬದಲಿಗೆ ಎಚ್‌.ಕೆ.ರಾಮು ಅವರಿಗೆ ದಕ್ಷಿಣ ಪದವೀಧರರ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ ಅಂತ ತಿಳಿಸಿದ್ದಾರೆ. 

ಆರ್‌ಎಸ್‌ಎಸ್‌, ಭಜರಂಗದಳ ಇವೆ, ನಾವು ಬಿಜೆಪಿ ಅಲ್ಲ ಎಂದ ಪ್ರಮೋದ್ ಮುತಾಲಿಕ್

ಹಣವಿದ್ದವರಿಗೆ ಮಣೆ ಹಾಕಲಾಗುತ್ತಿದೆ. ಜೆಡಿಎಸ್‌ನಲ್ಲಿ ಆಂತರಿಕ ಸ್ವಾತಂತ್ರ್ಯ ಇಲ್ಲ. ನಾಯಕರ ದೌರ್ಬಲ್ಯ, ತಪ್ಪುಗಳ ವಿಮರ್ಶೆ ನಡೆಯುತ್ತಿಲ್ಲ. 2018ರ ಲೋಕಸಭಾ ಚುನಾವಣೆ ನಂತರ ಹಿರಿಯ ನಾಯಕರು ಏಕೆ ಪಕ್ಷ ಬಿಡುತ್ತಿದ್ದಾರೆ ಎಂಬುದು ಚರ್ಚೆಯಾಗಿಲ್ಲ. ಈ ಬಗ್ಗೆ ಕುಮಾರಸ್ವಾಮಿ ಮೊದಲು ಚಿಂತಿಸಿ ಸರಿಪಡಿಸಿಕೊಳ್ಳಲು ಮುಂದಾದರೆ ಒಳ್ಳೆಯದು ಎಂದು ತಿರುಗೇಟು ನೀಡಿದರು.

ಜೆಡಿಎಸ್‌ ಎಂಎಲ್ಸಿ ಮರಿತಿಬ್ಬೇಗೌಡ ಕಾಂಗ್ರೆಸ್‌ಗೆ?: ದಳದ ಮತ್ತೊಂದು ವಿಕೆಟ್‌ ಪತನ

ಬೆಂಗಳೂರು/ಮಂಡ್ಯ: ಜೆಡಿಎಸ್‌ನಾಯಕತ್ವದ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿರುವ ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಪಕ್ಷ ತೊರೆಯುವುದು ಖಚಿತ. ಅವರ ಮುಂದಿನ ರಾಜಕೀಯ ನಿಲ್ದಾಣ ಕಾಂಗ್ರೆಸ್‌ ಆಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಮಾಜಿ ಸಚಿವ ಎಸ್‌.ಡಿ. ಜಯರಾಂ ಪುತ್ರ ಅಶೋಕ್‌ ಜಯರಾಂ, ಮಾಜಿ ಐಆರ್‌ಎಸ್‌ ಅಧಿಕಾರಿ ಲಕ್ಷ್ಮೇ ಅಶ್ವಿನ್‌ಗೌಡ ಬೆನ್ನಲ್ಲೇ ಇದೀಗ ಮಂಡ್ಯದ ಮತ್ತೊಬ್ಬ ಮುಖಂಡ, ವಿಧಾ​ನ ಪರಿ​ಷತ್‌ ಸದ​ಸ್ಯ ಮರಿತಿಬ್ಬೇಗೌಡ ಜೆಡಿ​ಎಸ್‌ ತೊರೆ​ಯುವ ಸುಳಿವು ನೀಡಿ​ದ್ದಾರು. 

ದಳ​ಪ​ತಿ​ಗ​ಳ ವಿರುದ್ಧ ಬಹಿ​ರಂಗ​ವಾ​ಗಿಯೇ ತಿರು​ಗಿ​ಬಿ​ದ್ದಿ​ರುವ ಅವರು, ದಕ್ಷಿಣ ಪದ​ವೀ​ಧರ ಕ್ಷೇತ್ರದ ಚುನಾ​ವ​ಣೆ​ಯಲ್ಲಿ ಜೆಡಿ​ಎಸ್‌ ಅಭ್ಯ​ರ್ಥಿಗೆ ಮತ ಹಾಕ​ದಂತೆ ಸೋಮವಾರ ನಡೆದ ಬೆಂಬ​ಲಿ​ಗರ ಸಭೆ​ಯಲ್ಲಿ ಮನವಿ ಮಾಡಿದ್ದಾ​ರೆ. ಇದರ ಬೆನ್ನಲ್ಲೇ ಸೋಮವಾರ ಪರಿಷತ್‌ನ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರ ನಿಯೋಜನೆ ಕುರಿತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌ ವಿರುದ್ಧ ಕಾಂಗ್ರೆಸ್ಸಿಗರ ಜತೆ ಧರಣಿ ನಡೆಸಿದ್ದರು.