ರಾಜ್ಯದ ಎಲ್ಲೆಡೆ ಸುತ್ತುವ ಮೂಲಕ 135 ಸೀಟುಗಳನ್ನು ಗೆಲ್ಲಿಸಿ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ರಚನೆ ಮಾಡುವ ತನಕ ತಾವು ವಿಶ್ರಮಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಗುಡುಗಿದರು.

ಕಡೂರು (ಮೇ.6) : ರಾಜ್ಯದ ಎಲ್ಲೆಡೆ ಸುತ್ತುವ ಮೂಲಕ 135 ಸೀಟುಗಳನ್ನು ಗೆಲ್ಲಿಸಿ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ರಚನೆ ಮಾಡುವ ತನಕ ತಾವು ವಿಶ್ರಮಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಗುಡುಗಿದರು.

ಶುಕ್ರವಾರ ಸಂಜೆ ಕಡೂರಿನ ಎಪಿಎಂಸಿ ಮೈದಾನದಲ್ಲಿ ಬಿಜೆಪಿ ಅಭ್ಯಥಿ} ಬೆಳ್ಳಿ ಪ್ರಕಾಶ್‌(Belli prakash bjp candidate) ಪರ ನಡೆದ ಬಹಿರಂಗ ಸಭೆಯಲ್ಲಿ ಮತ ಯಾಚಿಸಿದರು. ಕಾಂಗ್ರೆಸ್‌ ಮುಳುಗುತ್ತಿರುವ ಹಡಗು ಎಂದು ಮಾತು ಆರಂಭಿಸಿ, ಮೊನ್ನೆಯÜ ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್‌ ಕೇವಲ ಐದು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. —ಕಾಂಗ್ರೆಸ್‌ನ್ನು ಜನ ತಿರಸ್ಕರಿಸಿದ್ದಾರೆ. ಎಲ್ಲಿಯ ಮೋದಿ, ಅಮಿತ್‌ ಶಾ ಎಲ್ಲಿಯ ರಾಹುಲ್‌ ಗಾಂಧಿ ಹೋಲಿಕೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಬಜರಂಗದಳ ವಿಚಾರದಲ್ಲಿ ಕಾಂಗ್ರೆಸ್‌ ಮೂರ್ಖತನ ಮಾಡಿದೆ : ಬಿಎಸ್‌ವೈ

ಚುನಾವಣಾ ರಾಜಕೀಯದಿಂದ ದೂರವಿರುವ ನನಗೆ 81 ವರ್ಷವಾಗಿದ್ದರೂ ರಾಜ್ಯದ ಉದ್ದಗಲಕ್ಕೂ ಸಂಚರಿಸುತ್ತಿದ್ದು,ಕರ್ನಾಟಕದಲ್ಲಿ 135 ಸ್ಥಾನಗಳಲ್ಲಿ ಗೆದ್ದು ಬಿಜೆಪಿ ಸರ್ಕಾರವನ್ನು ರಚನೆ ಮಾಡುವುದು ಸೂರ್ಯ ಚಂದ್ರರಷ್ಟೇ ಸತ್ಯ ಎಂದು ನುಡಿದರು. ನಾಳೆ ಕಾಂಗ್ರೆಸ್‌ನವರು ಇಲ್ಲಿಗೆ ಬರುತ್ತಿದ್ದು, ಈಗಾಗಲೇ ಬೆಳ್ಳಿ ಪ್ರಕಾಶ್‌ ಗೆದ್ದಿದ್ದಾರೆ.ಯಾವ ಮುಖ ಇಟ್ಟುಕೊಂಡು ಬರುತ್ತಿದ್ದೀರಿ ಎಂದು ನೀವು ಕೇಳಬೇಕು ಎಂದರು.

ಹಿಂದೆಲ್ಲಾ ಕಾಂಗ್ರೆಸ್ಸಿನವರು ಹಣ, ಹೆಂಡ, ಜಾತಿಯಿಂದ ಗೆಲ್ಲುವ ಕಾಲ ಮುಗಿದು ಹೋಗಿದೆ. ಎಲ್ಲಿದೆ ನಿಮ್ಮ ಅಡ್ರೆಸ್‌ ಎಂದು ಪ್ರಶ್ನಿಸಿ. ಸಿದ್ರಾಮಣ್ಣನವರೇ(Siddaramaiah) ನೀವು ನಿಮ್ಮ ಕ್ಷೇತ್ರದಲ್ಲಿ ಸೋತು ಮನೆಗೆ ಹೋಗುತ್ತೀರಿ ಅಂತಹುದರಲ್ಲಿ ಏನು ಪ್ರಚಾರ ಮಾಡುತ್ತೀರಿ. ಈ ವೇದಿಕೆ ಮೂಲಕ ನಿಮಗೆ ಹೇಳುತ್ತಿದ್ದೇನೆ. ಅಲ್ಲಿ ವಿ ಸೋಮಣ್ಣ ಗೆದ್ದು ಸಿದ್ದರಾಮಯ್ಯಮನೆಗೆ ಹೋಗುವುದು ಶತ ಸಿದ್ದ ಎಂದರು. ಬೆಂಗಳೂರಿನಲ್ಲಿ ಮೋದಿ-ಅಮಿತ್‌ ಶಾ ರೋಡ್‌ ಶೋದಲ್ಲಿ ಲಕ್ಷಾಂತರ ಜನರು ಸ್ವಾಗತಿಸುತ್ತಿದ್ದಾರೆ. ತಾವು ರಾಜ್ಯ ಪ್ರವಾಸ ಮಾಡಿ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನ ಗೆಲ್ಲಿಸಿ ಮೋದಿಯವರನ್ನು ಪ್ರಧಾನಿ ಮಾಡುವುದು ನಮ್ಮ ಗುರಿ ಎಂದರು.

ಅಭ್ಯರ್ಥಿ ಬೆಳ್ಳಿ ಪ್ರಕಾಶ್‌ ಮಾತನಾಡಿ, ಐದು ವರ್ಷದ ಹಿಂದೆ ಇದೇ ವೇದಿಕೆಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ದಿ—ಗೆ ಬಸವರಾಜ ಬೊಮ್ಮಾಯಿ ಮತ್ತು ನನ್ನ ನಾಯಕ ಯಡಿಯೂ ರಪ್ಪನವರು ಆಧುನಿಕ ಭಗೀರಥರಾಗಿ 245 ಕೆರೆಗಳಿಗೆ ನೀರು ಹರಿಸಲು 1281 ಕೋಟಿ ರೂನ ಭದ್ರಾ ಉಪಕಣಿವೆ ಯೋಜನೆಗೆ ಹಣ ನೀಡಿ ನೀರಾವರಿ ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿದೆ. 21 ಬೃಹತ್‌ ಚೆಕ್‌ ಡ್ಯಾಂಗಳು, ಬಯಲು ಬಸವೇಶ್ವರ ದೇವಾಲಯದ ಬಳಿ 43 ಕೋಟಿ ರು. ವೆಚ್ಚದಲ್ಲಿ ಬೃಹತ್‌ ಕೈಗಾರಿಕಾ ವಲಯ ಅಭಿವೃದ್ದಿ ಸೇರಿದಂತೆ ನೀರು,ಸೂರು, ಟಾರು ಎಂದು ನೀಡಿದ್ದ ಭರವಸೆ ಈಡೇರಿಸುವಲ್ಲಿ ಯಶಸ್ವಿಯಾಗಿದ್ದೇನೆ.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ,ಬಿಜೆಪಿ ಮುಖಂಡರಾದ ದೇವಾನಂದ್‌, ಕೆ.ಬಿ.ಸೋಮೇಶ್‌,ಎಚ್‌.ಎಂ.ಲೋಕೇಶ್‌, ಕೆ.ಆರ್‌.ಮಹೇಶ್‌ ವಡೆಯರ್‌, ಡಾ.ದಿನೇಶ್‌, ಅರೇಕಲ್‌ ಪ್ರಕಾಶ್‌,ಅಡಕೆ ಚಂದ್ರು, ಎಚ್‌.ಎಂ.ರೇವಣ್ಣಯ್ಯ, ಮಾರ್ಗದ ಮಧು, ಶೂದ್ರ ಶ್ರೀನಿವಾಸ್‌, ಕೆ ಎನ್‌ ಬೊಮ್ಮಣ್ಣ, ಕಾವೇರಿ ಲಕ್ಕಪ್ಪ, ಜಿಗಣೇಹಳ್ಳಿ ನೀಲಕಂಠಪ್ಪ, ಮಲ್ಲಿಕಾರ್ಜುನ್‌, ಸುನೀತಾ ಜಗದೀಶ್‌, ಲಕ್ಕಪ್ಪ, ಶಾಮಿಯಾನ ಚಂದ್ರು, ಎನ್‌.ಇಮಾಮ್‌ ಮತ್ತಿತರರು ಇದ್ದರು.

ನಾರಾಯಣಗೌಡ ಗೆದ್ದು ಮಂತ್ರಿಯಾಗುವುದು ಖಚಿತ: ಯಡಿಯೂರಪ್ಪ ಭವಿಷ್ಯ

ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿರುವ ಬೆಳ್ಳಿ ಪ್ರಕಾಶ್‌ ಸುಮಾರು 35ಸಾವಿರ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ. ಪ್ರಕಾಶ್‌ ತಮಗೆ ಒಳ್ಳೆಯ ಸ್ನೇಹಿತ, ಅವರ ಆತ್ಮೀಯತೆಗೋಸ್ಕರ ಇಲ್ಲಿಗೆ ಬಂದಿದ್ದೇನೆ. ಈಗಾಗಲೇ ಅವರು ಗೆದ್ದಿದ್ದಾರೆ. ಇನ್ನು ಮುಂದೆ ಬೆಳ್ಳಿ ಪ್ರಕಾಶ್‌ ವಿರುದ್ದ ಸ್ಪರ್ಧಿಸಲು ಹಿಂದೆ ಮುಂದೆ ನೋಡಬೇಕು ಆ ರೀತಿಯಲ್ಲಿ ಬೆಳ್ಳಿ ಪ್ರಕಾಶ್‌ ಗೆ ಮತಹಾಕಿ ಎಂದು ಕೈ ಜೋಡಿಸಿ ಮತಹಾಕಿ ಎಂದರು