ನಾನು ಸಿಎಂ ಆಗೋದಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು: ಡಿಕೆಶಿ
ಯಾರೂ ಮುಖ್ಯವಲ್ಲ. ಪಕ್ಷ ಇದ್ದರೆ ಎಲ್ಲರೂ ಇದ್ದಂತೆ. ಮೊದಲು ಪಕ್ಷ ಸಂಘಟನೆ ಮಾಡಬೇಕು. ಆ ನಂತರ ಅಧಿಕಾರ ಎಂಬುದು ತಾನಾಗಿಯೇ ನಮ್ಮ ಬಳಿ ಬರುತ್ತದೆ ಎಂಬುದಕ್ಕೆ ನಾನೇ ಸಾಕ್ಷಿ ಎಂದು ತಮಗೆ ಆಗಿದ್ದ ಅವಮಾನ, ನೋವುಗಳನ್ನು ಡಿ.ಕೆ.ಶಿವಕುಮಾರ್ ಬಿಡಿಸಿಟ್ಟರು
ತುರುವೇಕೆರೆ(ತುಮಕೂರು) (ಸೆ.16) : ನಾನು ಮುಖ್ಯಮಂತ್ರಿ ಆಗೋದು ಮುಖ್ಯ ಅಲ್ಲ. ಮುಂಬರುವ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್‌ನ ಮುಖ್ಯಮಂತ್ರಿಗಳು ಇರಬೇಕು. ರಾಜ್ಯದ ಜನತೆಯ ಕಣ್ಣೀರು ಒರೆಸಬೇಕು ಅಷ್ಟೆಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
Chamarajanagar: ಭಾರತ್ ಜೋಡೋ ನಡಿಗೆ ದೇಶಕ್ಕೊಂದು ಕೊಡುಗೆ: ಡಿ.ಕೆ.ಶಿವಕುಮಾರ್
ತುರುವೇಕೆರೆ(Turuvekere)ಯಲ್ಲಿ ನಡೆದ ಭಾರತ ಐಕ್ಯತಾ ಯಾತ್ರೆ(Bharat Jodo Yatra)ಯ ಪೂರ್ವ ಸಿದ್ಧತಾ ಸಭೆ ಉದ್ದೇಶಿಸಿ ಗುರುವಾರ ಮಾತನಾಡಿ, ಪಕ್ಷಕ್ಕೆ ಯಾರೂ ಮುಖ್ಯವಲ್ಲ. ಪಕ್ಷ ಇದ್ದರೆ ಎಲ್ಲರೂ ಇದ್ದಂತೆ. ಮೊದಲು ಪಕ್ಷ ಸಂಘಟನೆ ಮಾಡಬೇಕು. ಆ ನಂತರ ಅಧಿಕಾರ ಎಂಬುದು ತಾನಾಗಿಯೇ ನಮ್ಮ ಬಳಿ ಬರುತ್ತದೆ ಎಂಬುದಕ್ಕೆ ನಾನೇ ಸಾಕ್ಷಿ ಎಂದು ತಮಗೆ ಆಗಿದ್ದ ಅವಮಾನ, ನೋವುಗಳನ್ನು ಡಿ.ಕೆ.ಶಿವಕುಮಾರ್ ಬಿಡಿಸಿಟ್ಟರು.ಮಂತ್ರಿಯಾಗಿದ್ದರೂ ಟಿಕೆಟ್ ನೀಡದಿದ್ದದ್ದು, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ವಿಳಂಬವಾಗಿ ಸಚಿವ ಸ್ಥಾನ ನೀಡಿದ್ದು, ಈ ಎಲ್ಲವನ್ನೂ ಕಾರ್ಯಕರ್ತರೆದುರು ಡಿ.ಕೆ.ಶಿವಕುಮಾರ್ ತೆರೆದಿಟ್ಟರು.
ನಾನು ಅಂದು ತಾಳ್ಮೆ ಕಳೆದುಕೊಂಡು ಪಕ್ಷದಿಂದ ದೂರವಾಗಿದ್ದರೆ, ಇಂದು ಈ ಹಂತಕ್ಕೆ ಬರುತ್ತಿರಲಿಲ್ಲ. ನಾನು ಪಕ್ಷಕ್ಕೆ ದುಡಿದದ್ದನ್ನು ಗಮನಿಸಿಯೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರು ಈಗ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದರು ಎಂದರು.
ಪಕ್ಷ ಸಂಘಟನೆ ಸಲೀಸಲ್ಲ. ಜನರ ಮಧ್ಯೆ ಹೋಗಬೇಕು. ಜನರ ಕಷ್ಟ-ಸುಖಗಳನ್ನು ಕೇಳಬೇಕು. ಜನರ ಮನಸ್ಸು ಗೆಲ್ಲಬೇಕು. ನಂತರವೇ ಜನರ ಆಶೀರ್ವಾದದಿಂದ ಅಧಿಕಾರ ಬರಲಿದೆ. ಪಕ್ಷದ ವಿರುದ್ಧ ಸಿಡಿದೆದ್ದು ಹೋಗುವವರು ಹೋಗಲಿ, ನನ್ನದೇನೂ ಅಭ್ಯಂತರವಿಲ್ಲ ಎಂದರು.
ಕೇರಳ ಬಳಿಕ ಕರ್ನಾಟಕಕ್ಕೆ ಭಾರತ್ ಜೋಡೋ: ಕಾಂಗ್ರೆಸ್ಸಿಗೆ ಎಷ್ಟೊಂದು ಬ್ಯಾಡ್ ನ್ಯೂಸ್!
ಪಕ್ಷದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷರಾಗಿದ್ದ ಎಂ.ಡಿ.ಲಕ್ಷಿತ್ರ್ಮೕನಾರಾಯಣ್ ದುಡುಕಿ ಪಕ್ಷ ತ್ಯಾಗ ಮಾಡಿದ್ದಾರೆ. ಮಾಜಿ ಲೋಕಸಭಾ ಸದಸ್ಯ ಮುದ್ದಹನುಮೇಗೌಡರು ಪಕ್ಷದಿಂದ ನೋವಾಗಿದ್ದು, ಹೊರ ಹೋಗುತ್ತಿರುವುದಾಗಿ ಹೇಳಿದರು. ಎಷ್ಟುಸಾರಿ ಸಮಾಧಾನ ಮಾಡಿದರೂ ಸಿದ್ಧರಿರಲಿಲ್ಲ. ನಾನೇನು ಮಾಡಲು ಸಾಧ್ಯ? ಹೋಗಲಿ ಬಿಡಿ, ಅವರೆಲ್ಲರ ಭವಿಷ್ಯ ಚೆನ್ನಾಗಿರಲಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.