ನಾನು ಮುಂದೆನೂ ಮುರುಘಾ ಮಠಕ್ಕೆ ಹೋಗ್ತೀನಿ; ಮಾಜಿ ಸಚಿವ ಎಂ.ಬಿ.ಪಾಟೀಲ್

  • ತುಮಕೂರು ಸಿದ್ದಗಂಗಾ ಮಠದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಸುದ್ದಿಗೋಷ್ಠಿ
  • ನಾನು ಮುಂದೆನೂ ಮುರುಘಾ ಮಠಕ್ಕೆ ಹೋಗ್ತೀನಿ. ಸಿದ್ದಗಂಗಾ ಮಠದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್.
  • ಚಿತ್ರದುರ್ಗ ಮುರುಘಾ ಮಠ ಬಹಳ ಐತಿಹಾಸಿಕ ಮಠ. 5 ಸಾವಿರ ವಿರಕ್ತ ಶಾಖಾ ಮಠ ಹೊಂದಿದ್ದಂತಹ ದೊಡ್ಡ ಮಠ

 

I will go to Muruga Math again says Former minister MB Patil at tumakuru siddaganga mutt rav

ತುಮಕೂರು (ಸೆ.3) : "ನಾನು ಮುಂದೆನೂ ಮುರುಘಾ ಮಠಕ್ಕೆ ಹೋಗ್ತೀನಿ" ಸಿದ್ದಗಂಗಾ ಮಠದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ. ಚಿತ್ರದುರ್ಗ ಮುರುಘಾ ಮಠದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳ ಕುರಿತಂತೆ ಮಾಧ್ಯಮವರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಚಿತ್ರದುರ್ಗ ಮುರುಘಾ ಮಠ(Chitradurga Murugha mutt) ಬಹಳ ಐತಿಹಾಸಿಕ ಮಠ(A historic monastery). 5 ಸಾವಿರ ವಿರಕ್ತ ಶಾಖಾ ಮಠ ಹೊಂದಿದ್ದಂತಹ ದೊಡ್ಡ ಮಠ. ಅಲ್ಲಿ ಯಾರು ಇರ್ತಾರೆ, ಯಾರು ಇರಲ್ಲ ಅನ್ನೋದು ಮುಖ್ಯವಲ್ಲ. ನಾಳೆ ನಾನು ಚಿತ್ರದುರ್ಗಕ್ಕೆ ಹೋದರೆ ಮುರುಘಾ ಮಠಕ್ಕೆ ಹೋಗ್ತಿನಿ. ಗದ್ದುಗೆಯಲ್ಲಿ ದರ್ಶನ ಮಾಡಿ ಆಶೀರ್ವಾದ ಪಡೆಯುತ್ತೇನೆ  ಜಯದೇವ ಸ್ವಾಮಿಗಳು ಬಹಳ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಮುರುಘಾ ಮಠಕ್ಕೆ ಎಲ್ಲ ಪಕ್ಷದವರು ಹೋಗಿದ್ದಾರೆ, ಮುಂದೆನೂ ಹೋಗ್ತಾರೆ. ಇತ್ತೀಚೆಗೆ ಯಡಿಯೂರಪ್ಪ, ಅಮಿತ್ ಶಾ, ರಾಹುಲ್‌ ಗಾಂಧಿ ಸೇರಿದಂತೆ ಎಲ್ಲ ಪಕ್ಷದ ನಾಯಕರು ಹೋಗಿದ್ದಾರೆ. ನಾನೂ ಹೋಗಿದ್ದೆ. ಮಠದಲ್ಲಿ ತಂಗಿದ್ದೆ ಎಂದು ತಿಳಿಸಿದರು.

ಸಾವರ್ಕರ್‌ ಬದಲು ಚನ್ನಮ್ಮ, ರಾಯಣ್ಣರ ಯಾತ್ರೆ ಮಾಡಲಿ: ಎಂ.ಬಿ.ಪಾಟೀಲ್‌

ಮುರುಘಾ ಶರಣರ ಪ್ರಕರಣದ ಬಗ್ಗೆ ಮಾತನಾಡುವುದು ಸರಿಯಲ್ಲ. ಪ್ರಕರಣ ಈಗ ಕೋರ್ಟ್‌ನಲ್ಲಿದೆ. ಎಲ್ಲ ಆಯಾಮದಲ್ಲೂ ತನಿಖೆ ನಡೆಸಿದರೆ ಸತ್ಯಾಂಶ ಹೊರಗೆ ಬರಲಿದೆ. ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದರೂ ಕಠಿಣ ಶಿಕ್ಷೆಯಾಗಲಿ. ಕಾಂಗ್ರೆಸ್ ಮಾಜಿ ಸಂಸದ ಮುದ್ದಹನುಮೇಗೌಡ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪಾಟೀಲರು, ಸ್ಥಳೀಯವಾಗಿ ಪ್ರಭಾವಿ ರಾಜಕಾರಣಿಗಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಇದ್ದಾರೆ. ಈ ಬಗ್ಗೆ ಮಾತುಕತೆ ನಡೆಸುತ್ತೇವೆ. ಬಳಿಕ ಕೆಪಿಸಿಸಿ ಅಧ್ಯಕ್ಷರು ಅಧಿಕೃತವಾಗಿ ಈ ವಿಚಾರದ ಬಗ್ಗೆ ಹೇಳಿಕೆ ನೀಡುತ್ತಾರೆ ಎಂದು ಈ ಬಗ್ಗೆ ಹೇಳಿಕೆ ನೀಡಲು ನಿರಾಕರಿಸಿದರು.

ಮೋದಿ ಕಾರ್ಯಕ್ರಮಕ್ಕೆ ಹಣಕೊಟ್ಟು ಜನರನ್ನ ಕರೆಸಿದ್ದಾರೆ:

ಮಂಗಳೂರಿನಲ್ಲಿ ನರೇಂದ್ರ ಮೋದಿ(Narendra Modi)ಯವರ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ(BJP) ಜನರಿಗೆ ಹಣ ಕೊಟ್ಟು ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿದ್ದಾರೆ ಸಿದ್ದರಾಮಯ್ಯ(Siddaramaih) ನವರದ್ದು ಅಮೃತ ಮಹೋತ್ಸವ(Amrit Mahotsava) ಕಾರ್ಯಕ್ರಮವಿತ್ತು. ಆ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ 15 ರಿಂದ 20 ಲಕ್ಷ ಜನರು ಸೇರಿದ್ದರು. ಅಷ್ಟೊಂದು ಇದುವರೆಗೆ ಯಾವ ನಾಯಕರಿಗೂ ಸೇರಿರಲಿಲ್ಲ. ಇದು ಸಿದ್ದರಾಮಯ್ಯನವರ ನಾಯಕತ್ವಕ್ಕೆ ರಾಜ್ಯದ ಜನರು ಮೆಚ್ಚಿದ್ದಾರೆ ಎಂಬುದನ್ನು ಸೂಚಿಸುತ್ತದೆ.  ಆದರೆ ನಿನ್ನೆಯ ಕಾರ್ಯಕ್ರಮಕ್ಕೆ ಬಿಜೆಪಿ ಸರ್ಕಾರ ಅಫೀಶಿಯಲ್‌ ಆಗಿ ನೋಡಲ್‌ ಆಫೀಸರ್‌(Nodal Officer) ನ ನೇಮಕ ಮಾಡಿ ಜನರನ್ನು ಸೇರಿಸಿದ್ದಾರೆ. ಎಲ್ಲಾ ಗ್ರಾಮ ಪಂಚಾಯ್ತಿ ಪಿಡಿಒ, ತಾ.ಪಂ-ಜಿ.ಪಂ ಅಧಿಕಾರಿಗಳ ಮೂಲಕ ಜನ ಸೇರಿದ್ದಾರೆ. ಇದೊಂದು ರೀತಿ ಒತ್ತಾಯಪೂರ್ವಕವಾಗಿ ಜನರನ್ನು ಕೂಡಿ ಹಾಕಿ ನಡೆಸಿದ ಕಾರ್ಯಕ್ರಮ ಎಂದು ಲೇವಡಿ ಮಾಡಿದರು.

ಮೋದಿಯವರ ಕಾರ್ಯಕ್ರಮಕ್ಕೆ ಜನ ಅಭಿಮಾನದಿಂದ ಬಂದಿಲ್ಲ. ಗ್ರಾಮಪಂಚಾಯ್ತಿ ಪಿಡಿಒಗಳ ಮೂಲಕ ಊಟ, ಹಣ ನೀಡಿ ಜನರನ್ನು ಸೇರಿಸಲಾಗಿತ್ತು. ಮೋದಿ ಕಾರ್ಯಕ್ರಮಕ್ಕೆ ಸರ್ಕಾರದ ಹಣ ಬಳಸಿ ಜನ ಸೇರಿಸಿದ ಬಗ್ಗೆ ನನ್ನ ಬಳಿ ಸಾಕ್ಷ್ಯವಿದೆ ಬಿಡುಗಡೆ ಮಾಡ್ತೀನಿ. ಪಂಚಮಸಾಲಿ ಹೋರಾಟ ವಿಚಾರ ಪ್ರಸ್ತಾಪಿಸಿದ ಎಂ.ಬಿ.ಪಾಟೀಲ್, ಪಂಚಮಸಾಲಿ ಸಮುದಾಯ ಸಣ್ಣ ಹಿಡುವಳಿದಾರರಿದ್ದಾರೆ.
 ಮಕ್ಕಳಿಗೆ ಶಿಕ್ಷಣ, ಉದ್ಯೋಗ ಸಿಗಬೇಕೆಂದು ಹೀಗಾಗಿ ಮೀಸಲಾತಿಗಾಗಿ ಹೋರಾಟ ಮಾಡ್ತಾರೆ. ಅದಕ್ಕೆ ನಾನು ಬೆಂಬಲ ನೀಡಿದ್ದೇನೆ, ಅವರಿಗೆ ನ್ಯಾಯ ಸಿಗಬೇಕು. ನ್ಯಾಯ ಸಿಗುತ್ತದೆಂದು ಭರವಸೆ ವ್ಯಕ್ತಪಡಿಸಿದರು.

ಪಂಚಮಸಾಲಿ ಸಮುದಾಯ(Panchmasali community) ಸಣ್ಣ ಹಾಗೂ ಮಳೆ ಆಶ್ರಿತ ಕೃಷಿಕರು. ಅವರಿಗೆ 2ಎ ಮೀಸಲಾತಿ ಸಿಗಬೇಕು, ಇದು ನ್ಯಾಯಯುತ ಬೇಡಿಕೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ, ಪಕ್ಷದಲ್ಲ ಎಂದರು. ಮುಂದುವರಿದು, ಬಿಜೆಪಿಯವ್ರು ಯಡಿಯೂರಪ್ಪ(B.S.Yadiyurappa) ಅವರನ್ನು ಸಿಎಂ ಕ್ಯಾಡಿಯೇಟ್ ಅಂತ ಘೋಷಿಸಲಿ. ಯಡಿಯೂರಪ್ಪನವರನ್ನು ಮತ್ತೆ ಮುಖ್ಯಮಂತ್ರಿ ಮಾಡ್ತಾರಾ? ಅವರನ್ನು ಪೂರ್ಣಾವಧಿ ಸಿಎಂ ಆಗಲು ಬಿಡಲಿಲ್ಲ. ಮುಂದೆ ಚುನಾವಣೆ ಇರುವುದರಿಂದ ಈಗ ಯಡಿಯೂರಪ್ಪ ನವರ ಮೇಲೆ ಪ್ರೀತಿ ಬಂದಿದೆ. ಹಾಗಾದರೆ ಯಡಿಯೂರಪ್ಪ ಅವರನ್ನು ಸಿಎಂ ಕ್ಯಾಡಿಯೇಟ್‌ ಅಂತ ಘೋಷಿಸಲಿ ಎಂದು ಸವಾಲು ಹಾಕಿದರು.

Vijayapura: ರೈತರಿಗೆ ಆಗ್ತಿರೋ ಅನ್ಯಾಯ ಬಟಾಬಯಲು ಮಾಡಿದ ಮಾಜಿ ಸಚಿವ ಎಂ.ಬಿ.ಪಾಟೀಲ್

ಬಿಜೆಪಿಯವರು ರಾಜ್ಯದ ಜನರನ್ನು ಮೂರ್ಖರೆಂದು ಭಾವಿಸಿದ್ದಾರೆ. ಆದರೆ ಜನರು ದಡ್ಡರಲ್ಲ. ಅವರು ಎಲ್ಲ ತಿಳಿದುಕೊಂಡಿದ್ದಾರೆ. ನಾನು ಯಡಿಯೂರಪ್ಪನವರ ಅಭಿಮಾನಿ ಇದ್ದೀನಿ. ಬಿಜೆಪಿಯವರು ಯಡಿಯೂರಪ್ಪನವರನ್ನು ತಮ್ಮ ಅಧಿಕಾರಕ್ಕಾಗಿ ಉಪಯೋಗಿಸುತ್ತಿದ್ದಾರೆ. ಆದರೆ ಚುನಾವಣೆ ಮುಗಿದ ಬಳಿಕ ಅವರನ್ನು ಅಧಿಕಾರದಿಂದ ದೂರವಿಡುವ ಪ್ರಯತ್ನ ನಡೆದಿದೆ. ಹೀಗಾಗಿ ಅವರು ಕೆಳಗೆ ಕುಸಿದಿದ್ದಾರೆ. ಬಿಜೆಪಿ ಯಡಿಯೂರಪ್ಪ ಸಹಾಯದಿಂದ ಮೇಲೆ ಬರಲು ಯತ್ನಿಸುತ್ತಿದ್ದಾರೆ ಎಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಎಂ.ಬಿ ಪಾಟೀಲ್‌ ಹೇಳಿದರು.

Latest Videos
Follow Us:
Download App:
  • android
  • ios