Asianet Suvarna News Asianet Suvarna News

Vijayapura: ರೈತರಿಗೆ ಆಗ್ತಿರೋ ಅನ್ಯಾಯ ಬಟಾಬಯಲು ಮಾಡಿದ ಮಾಜಿ ಸಚಿವ ಎಂ.ಬಿ.ಪಾಟೀಲ್

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮಾಜಿ ಸಚಿವ ಎಂ.ಬಿ.ಪಾಟೀಲ್ ವಿಜಯಪುರದ ತಮ್ಮ ನಿವಾಸದಲ್ಲಿ ಮಹತ್ವದ ಸುದ್ದಿಗೋಷ್ಟಿ ನಡೆಸಿದ್ದಾರೆ. ರೈತರ ಪಂಪ್ ಸೆಟ್‌ಗಳಿಗೆ ಪುರೈಕೆಯಾಗ್ತಿರೋ ವಿದ್ಯುತ್ ಸಂಬಂಧಿಸದಂತೆ ನಡೆಯುತ್ತಿರುವ ಅದ್ವಾನಗಳನ್ನ ದಾಖಲಾತಿ ಸಮೇತ ಬಟಾಬಯಲು ಮಾಡಿದ್ದಾರೆ. 

MB Patil revealed the injustice being done to the farmers at vijayapura gvd
Author
Bangalore, First Published Aug 25, 2022, 2:31 PM IST

ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಆ.25): ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮಾಜಿ ಸಚಿವ ಎಂ.ಬಿ.ಪಾಟೀಲ್ ವಿಜಯಪುರದ ತಮ್ಮ ನಿವಾಸದಲ್ಲಿ ಮಹತ್ವದ ಸುದ್ದಿಗೋಷ್ಟಿ ನಡೆಸಿದ್ದಾರೆ. ರೈತರ ಪಂಪ್ ಸೆಟ್‌ಗಳಿಗೆ ಪುರೈಕೆಯಾಗ್ತಿರೋ ವಿದ್ಯುತ್ ಸಂಬಂಧಿಸದಂತೆ ನಡೆಯುತ್ತಿರುವ ಅದ್ವಾನಗಳನ್ನ ದಾಖಲಾತಿ ಸಮೇತ ಬಟಾಬಯಲು ಮಾಡಿದ್ದಾರೆ. ಸರ್ಕಾರ ರೈತರ ಪಂಪ್ ಸೆಟ್‌ಗಳಿಗೆ ನೀಡಬೇಕಿರುವ ವಿದ್ಯುತ್ ಶಕ್ತಿ ಅನುದಾನದಲ್ಲಿ ಆಗ್ತಿರೋ ಅನ್ಯಾಯವನ್ನ ಬಹಿರಂಗ ಪಡೆಸಿದ್ದಾರೆ.

ಪಂಪ್‌ಸೆಟ್‌ಗಳ ಅನುದಾನ ವಿಚಾರದಲ್ಲಿ ರೈತರಿಗೆ ಬಾರಿ ಅನ್ಯಾಯ: ರಾಜ್ಯದಲ್ಲಿ ನೀರಾವರಿ ಪಂಪ್ ಸೆಟ್‌ಗಳಿಗೆ ಪುರೈಕೆಯಾಗ್ತಿರೋ ವಿದ್ಯುತ್ ಶಕ್ತಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತೆ. ಆದ್ರೆ ಈಗ ಬಿಡುಗಡೆಯಾಗ್ತಿದ್ದ ಅನುದಾನಕ್ಕೆ ಬಿಜೆಪಿ ಸರ್ಕಾರ ಕೊಕ್ಕೆ ಹಾಕಿದೆ.‌ ಇದು ರೈತರಿಗೆ ಮಾಡ್ತಿರೋ ಅನ್ಯಾಯ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ಆಕ್ರೋಶ ಹೊರ ಹಾಕಿದ್ದಾರೆ. ವಿಜಯಪುರ ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ರಾಜ್ಯ ಸರ್ಕಾರ ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ಪೂರೈಕೆ ವಿಚಾರದಲ್ಲಿ ನಡೆಸುತ್ತಿರುವ ಅದ್ವಾನಗಳನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 

ವಿಜಯಪುರದಲ್ಲಿ ಪದೇ ಪದೆ ಭೂಕಂಪನ: ಜಿಲ್ಲಾಧಿಕಾರಿ ದಾನಮ್ಮನವರ್‌ ಹೇಳಿದ್ದಿಷ್ಟು

ಪಂಪ್ ಸೆಟ್‌ಗಳಿಗೆ ಪುರೈಕೆಯಾಗುವ ವಿದ್ಯುತ್ ಗೆ ಈ ಹಿಂದೆ ನೀಡಲಾಗ್ತಿದ ಅನುದಾನದಲ್ಲಿ  4 ಸಾವಿರ ಕೋಟಿಯಷ್ಟು ಕಡಿತ ಮಾಡಲಾಗಿದೆ. ಇದರಿಂದ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗ್ತಿದೆ. ಈ ಮೂಲಕ ರೈತರಿಗೆ ಬಾರಿ ಪ್ರಮಾಣದಲ್ಲಿ ಅನ್ಯಾಯವಾಗ್ತಿದೆ ಎಂದಿದ್ದಾರೆ. ಇದನ್ನ ನೋಡುತ್ತಿದ್ದರೆ ರಾಜ್ಯ ಸರ್ಕಾರ ಅನುದಾನ‌ ನೀಡಲಾಗದೆ ದಿವಾಳಿ ಸ್ಥಿತಿಯಲ್ಲಿದೆ ಎಂದು ಆಕ್ರೋಶ ಹೊರಹಾಕಿದರು.

ಎಷ್ಟು ಅನುದಾನ ಬೇಕು, ಎಷ್ಟು ಕೊಡ್ತಿದ್ದಾರೆ..!
• ಕರ್ನಾಟಕ ರಾಜ್ಯದಲ್ಲಿ ನೀರಾವರಿ ಪಂಪಸೆಟ್‌ಗಳಿಗೆ ಬೇಕಾಗಿರುವ ವಿದ್ಯುಚ್ಛಕ್ತಿ ಸಹಾಯಧನ ಅಂದಾಜು 16000 ಕೋಟಿ ರೂ. ಅಂದ್ರೆ 21333 ಮಿಲಿಯನ್ ಯುನಿಟ್
• ಸರ್ಕಾರದಿಂದ ದೊರಕಿರುವುದು ಅಂದಾಜು 12000 ಕೋಟಿ ರೂ 16000 MU
• ಉಂಟಾಗಿರುವ ಕೊರತೆ ಅಂದಾಜು 4000ಕೋಟಿ ರೂ, ಅಂದ್ರೆ 5333 ಮಿಲಿಯನ್ ಯೂನಿಟ್ ವಿದ್ಯುತ್ 
• ಹೆಸ್ಕಾಂ (ಹುಬ್ಬಳ್ಳಿ ವಿಭಾಗ) ವ್ಯಾಪ್ತಿಗೆ ಬೇಕಾಗಿರುವುದು - ಅಂದಾಜು 6400 ಮಿಲಿಯನ್ ಯುನಿಟ್
• ಹಂಚಿಕೆಯಾಗಿರೋದು ಅಂದಾಜು - 5500 ಮಿಲಿಯನ್ ಯುನಿಟ್ 
• ವಿದ್ಯುಚ್ಛಕ್ರಿಯ ಕೊರತೆ ಅಂದಾಜು - 900 ಮಿಲಿಯನ್ ಯುನಿಟ್

ವಿಜಯಪುರ ಜಿಲ್ಲೆಯ ಏಪ್ರಿಲ್-2022 ದಿಂದ ಜುಲೈ 2022 ಹಂಚಿಕೆ ಎಷ್ಟೆಷ್ಟು..!?
• ಹಂಚಿಕೆಯಾಗಿರುವ ವಿದ್ಯುತ್‌ಚ್ಛಕ್ತಿ ಪ್ರಮಾಣ 400.625 ಮಿಲಿಯನ್ ಯುನಿಟ್
• ಬಳಕೆಯಾಗಿರುವ ವಿದ್ಯುತ್‌ ಚಕ್ರಿ ಪ್ರಮಾಣ 512,686 ಮಿಲಿಯನ್ ಯುನಿಟ್ 
• ಹಂಚಿಕೆಗಿಂತ ಹೆಚ್ಚಿಗೆ ಬಳಕೆಯಾಗಿರುವ ವಿದ್ಯುತ್ ಶಕ್ತಿ ಪ್ರಮಾಣ 11935 ಮಿಲಿಯನ್ 

ಅಧಿಕಾರಿಗಳಿಗೆ ಆಗಿರುವ ಆದೇಶವೇನು?: ನೀರಾವರಿ ಪಂಪಸೆಟ್‌ಗಳಿಗೆ ಸರ್ಕಾರದಿಂದ ಬರುವ ಸಹಾಯಧನವನ್ನು ಪರಿಗಣಿಸಿ ನೀಡಲವಾರು ವಿದ್ಯುಚ್ಚಕ್ತಿ ಹಂಚಿಕೆ ಮಾಡಲಾಗಿದೆ. ಹಂಚಿಕೆಯ ಪ್ರಮಾಣ ಮೀರದಂತೆ ಕಟ್ಟುನಿಟ್ಟಾಗಿ ಪರಿಶೀಲಿಸಲು ಅಧಿಕಾರಿಗಳಿಗೆ ಆದೇಶ ಮಾಡಲಾಗಿದೆ ಎಂದು ಎಂ ಬಿ ಪಾಟೀಲರು ಹೇಳಿದ್ದಾರೆ.

ಹೇಗೆ ವಿದ್ಯುತ್ ಕಡಿತವಾಗ್ತಿದೆ: ಹಂಚಿಕೆಗಿಂತ ಹೆಚ್ಚುವರಿಯಾದ ಬಳಕೆಯ ಪ್ರಮಾಣ  ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ಪೂರೈಕೆಯ ಅವಧಿ ಹಾಗೂ ಪ್ರಮಾಣವನ್ನು ಕಡಿತಗೊಳಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಥಮವಾಗಿ ಸಾಯಂಕಾಲ 06.00 ರಿಂದ 10.00 ಗಂಟೆಯ ಅವಧಿಯಲ್ಲಿ 20 ಆಂಪೀಯರ್ ಲೋಡ್‌ಗೆ ಸೀಮಿತಗೊಳಿಸಿ ವಿತರಣಾ ಕೇಂದ್ರಗಳಲ್ಲಿ, ಡರಗಳನ್ನು ನಿಯಂತ್ರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ, ಫೆಜ ವಿದ್ಯುತ್‌ ಪೂರೈಕೆಯನ್ನು ಕೂಡ 7 ತಾಸುಗಳ ಬದಲಾಗಿ ಕಡಿಮೆ ಅವಧಿಗೆ ಪೂರೈಸಲು ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ. 

ಇದರಿಂದ ರೈತಾಪಿ ಜನರು ಇನ್ನೂ ಸಂಕಷ್ಟಕ್ಕಿಡಾಗಲಿದ್ದಾರೆ. ಸಾಲ ಮಾಡಿ ಸಾಗುವಳಿ ಮಾಡಿ ಬೆಳೆಗೆ ನೀರು ಪೂರೈಸುವ ಅವಶ್ಯಕತೆ ಇರುವ ಈ ಸಂದರ್ಭದಲ್ಲಿ, ಸಮರ್ಪಕ ವಿದ್ಯುತ್‌ ಪೂರೈಕೆ ಆಗದೇ ಹೋದರೆ ಸಂಪೂರ್ಣ ಬೆಳೆ ನಾಶವಾಗಿ ಅನ್ನದಾತರು ಬೀದಿ ಪಾಲಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ, ಈ ಕಾರಣದಿಂದ ಭವಿಷ್ಯದ ಕುರಿತು ರೈತರಿಗೆ ಏಕ ತೋಚದಂತಾಗಿ ರೈತರಿಂದ ಪ್ರತಿಭಟನೆಗಳು ಸಂಭವಿಸುತ್ತಿವೆ.

ಅವೈಜ್ಞಾನಿಕ ವಿದ್ಯುತ್ ಹಂಚಿಕೆ: ವಿಜಯಪುರ ಜಿಲ್ಲೆ, ನೀರಾವರಿ ಕ್ಷೇತ್ರದಲ್ಲಿ ಅತಿ ವೇಗವಾಗಿ ಪ್ರಗತಿಯನ್ನು ಹೊಂದುತ್ತಲಿರುವ ಅಪಾರ ಪ್ರಮಾಣದ ಭೂಮಿಯಲ್ಲಿ ನೀರಾವರಿ (ವಾಣಿಜ್ಯ) ಬೆಳೆಗಳನ್ನು ಬೆಳೆಯುತ್ತಿದ್ದಾರೆ, ಕಾರಣ ಒಂದೇ ವರ್ಷದಲ್ಲಿ ಲೋಡ್ ಗೋರ ಪ್ರಮಾಣದಲ್ಲಿ, 66% ವೃದ್ಧಿಯಾಗಿರುವುದು ಕಂಡುಬಂದಿದ್ದು, ವಿದ್ಯುತ್ ಜಾಲದ ಸಾಮರ್ಥ್ಯವನ್ನು ಹೆಚ್ಚುವರಿಯಾಗಿ 60 MW ನಮ್ಮ ಅಭಿವೃದ್ಧಿಪಡಿಸಲಾಗಿದೆ. 

75 ವರ್ಷದ ಬಳಿಕ ಸ್ವಾತಂತ್ರ್ಯಕ್ಕೆ ಹೋರಾಡಿದ ಮಠವನ್ನ ಗುರುತಿಸಿದ ಡಿಸಿ..!

ಅದರಂತೆ ತಿಕೋಟಾ ಹಾಗೂ ಇನ್ನುಳಿದ ತಾಲೂಕುಗಳಲ್ಲಿಯೂ ಕೂಡ ಸಾಕಷ್ಟು ಪ್ರಮಾಣದಲ್ಲಿ, ಲೋಡ್ ಗ್ರೋಥ್ ಕಂಡು ಬಂದಿದೆ, ಇದಾವುದನ್ನು ಪರಿಗಣಿಸದೆ ವಿದ್ಯುತ್‌ ಹಂಚಿಕೆಯನ್ನು ನಿಗದಿಪಡಿಸಿರುವುದು ಅವೈಜ್ಞಾನಿಕವಾಗಿದೆ. ಈಗಾಗಲೇ ಸಂಕಷ್ಟದಲ್ಲಿರುವ ರೈತರ ಭವಿಷ್ಯಕ್ಕೆ ಮಾರಕವಾಗಿರುವ ಈ ಕ್ರಮವನ್ನು ರದ್ದು ಪಡಿಸಬೇಕು, ಕರ್ನಾಟಕ ಸರ್ಕಾರ ಈ ವಿಷಯದಲ್ಲಿ ಗಮನಹರಿಸಿ ಅವಶ್ಯವಿರುವ ಪೂರ್ಣ ಪ್ರಮಾಣದ ಸಹಾಯ ಧನವನ್ನು ನೀಡುವ ಮೂಲಕ ನೀರಾವರಿ ಪಂಪಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಲು ಕೋರಿದೆ.

Follow Us:
Download App:
  • android
  • ios