ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ. ಈ ಬಗ್ಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ವರಿಷ್ಠರು ಸೇರಿ ತೀರ್ಮಾನಿಸುತ್ತಾರೆ. ಪ್ರಸ್ತುತ ಬೇರೆ ರಾಜ್ಯಗಳ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ನಮ್ಮ ರಾಜ್ಯದ ಚರ್ಚೆ ಬಂದಾಗ ನಮ್ಮ ಅಭಿಪ್ರಾಯ ಹೇಳುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಂಗಳೂರು (ಫೆ.16): ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ. ಈ ಬಗ್ಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ವರಿಷ್ಠರು ಸೇರಿ ತೀರ್ಮಾನಿಸುತ್ತಾರೆ. ಪ್ರಸ್ತುತ ಬೇರೆ ರಾಜ್ಯಗಳ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ನಮ್ಮ ರಾಜ್ಯದ ಚರ್ಚೆ ಬಂದಾಗ ನಮ್ಮ ಅಭಿಪ್ರಾಯ ಹೇಳುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಆಗಿದೆ. ಕೆಲವು ರಾಜ್ಯಗಳ ಬಗ್ಗೆ ಚರ್ಚೆಯಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ಕರ್ನಾಟಕದ ಬಗ್ಗೆ ಚರ್ಚೆಯಾಗಿಲ್ಲ. ನಮ್ಮ ರಾಜ್ಯದ ಚರ್ಚೆ ಬಂದಾಗ ನಮ್ಮ ಅಭಿಪ್ರಾಯ ತಿಳಿಸುತ್ತೇವೆ ಎಂದರು.
ಅಸ್ಪೃಶ್ಯತೆ ಭಯಯಿಂದ ಶೋಷಿತರು ಹೋರಬರಬೇಕು: ಅಸ್ಪೃಶ್ಯತೆ, ಮೌಢ್ಯತೆ ಬಗ್ಗೆ ಶೋಷಿತ ಸಮುದಾಯಗಳಲ್ಲಿ ಇರುವ ಭಯ ಹೋದಾಗ ಮಾತ್ರ ಸಾಮಾಜಿಕ ಸುಧಾರಣೆ ಸಾಧ್ಯ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಅರಿವು ಭಾರತ ವತಿಯಿಂದ ಸಮಾಜ ಸುಧಾರಣೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಒಳ-ಹೊರಗು ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಸಮಾಜ ಸುಧಾರಣೆ ಸುಲಭವಲ್ಲ: ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವ ಮನಸ್ಸು ಪ್ರತಿಯೊಬ್ಬರಲ್ಲೂ ಇರಬೇಕು. ಅದು ಬಿಟ್ಟು ಒಬ್ಬರನ್ನು ಇನ್ನೊಬ್ಬರು ತುಳಿಯುವ ಕೆಲಸ ಆಗಬಾರದು.ಅನಿಷ್ಠ ಪದ್ದತಿಗಳನ್ನು ದೂರ ಮಾಡಿ, ಎಲ್ಲರು ಒಂದೇ ಎಂಬ ಮನೋಭಾವ ಮೂಡಬೇಕು, ಸಮಾಜ ಸುಧಾರಣೆ ಕಾರ್ಯ ಮಾಡುವುದು ಸುಲಭವಲ್ಲ. ಬಹಳಷ್ಟು ಸಂಕಷ್ಟ ಎದುರಾಗುತ್ತವೆ ಎಂದರು. ಸಂವಿಧಾನ ರಚನೆಯಿಂದ ಸಾಕಷ್ಟು ಮಂದಿ ಎಚ್ಚರಗೊಂಡು ಜೀವನ ನಡೆಸುತ್ತಿದ್ದಾರೆ. ಶೋಷಿತ ಸಮುದಾಯಗಳಲ್ಲಿ ಇರುವ ಭಯ ಹೋಗಬೇಕು, ಅದ್ದರಿಂದಲೇ ನಾನು ನಾಲ್ಕು ಬಾರಿ ಶಾಸಕನಾದರು ರಾಹುಕಾಲದಲ್ಲೆ ನಾಮಪತ್ರ ಸಲ್ಲಿಸಿದೆ. ಅಮಾವಾಸ್ಯೆ ದಿನ ಗೃಹ ಪ್ರವೇಶ ಮಾಡಿದೆ, ಬದಲಾವಣೆ ಕಾಣಲು ಮಾನವ ಬಂಧುತ್ವ ವೇದಿಕೆ ಕಟ್ಟಲಾಗಿದೆ ಎಂದು ಹೇಳಿದರು.
ವಿಪಕ್ಷಗಳು ನನ್ನನ್ನು ಬಗ್ಗು ಬಡಿಯಲು ಹೊರಟಿವೆ, ಆದ್ರೆ ಆಗುತ್ತಾ?: ಎಚ್.ಡಿ.ಕುಮಾರಸ್ವಾಮಿ ಆಕ್ರೋಶ
ಮನಪರಿವರ್ತನೆ ಮಾಡಬೇಕು: ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಮಾತನಾಡಿ, ಅಸ್ಪೃಶ್ಯತೆ, ಮೌಢ್ಯಚಾರಕ್ಕೆ ಸಂಬಂಧವಿದ್ದು, ಇದನೆಲ್ಲ ಸುಧಾರಣೆ ಕಾಣಲು ಸಾಧ್ಯವಿಲ್ಲ. ಪ್ರೀತಿಯ ಮೂಲಕ ಮನ ಪರಿವರ್ತನೆ ಮಾಡಿ ಬದಲಾವಣೆ ಕಾಣಬೇಕು ಎಂದು ಎಚ್ಚರಿಸಿದರು. ಜಿಲ್ಲೆಯಲ್ಲಿ 10 ವರ್ಷಗಳ ಹಿಂದೆ ಗೃಹ ಪ್ರವೇಶ ಕಾರ್ಯಕ್ರಮ ಶುರುವಾಗಿ ಅದು ಈಗ ಅರಿವು ಭಾರತ ಸಂಘಟನೆಯಾಗಿ ರೂಪತಾಳಿ ಚಳವಳಿಯಾಗಿ ಹೋರಾಟ ನಡೆಸುತ್ತಿದೆ. ಈ ಹೋರಾಟವನ್ನು ಯಾರು ನಿಲ್ಲಸಲಾಗದು. ಮಾನವೀಯ ಪರಿವರ್ತನೆಯು ರಾಜ್ಯವಲ್ಲದೆ ದೇಶಾದ್ಯಂತ ಆಗುವ ನಿರೀಕ್ಷೆಯಿದೆ ಎಂದು ಅಭಿಪ್ರಾಯಪಟ್ಟರು.
