ಸತ್ತರೂ ಬಿಜೆಪಿ ಧ್ವಜ ಹಾಕ್ಕೊಂಡೆ ಸಾಯ್ತಿನಿ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
ಸತ್ತರೂ ಬಿಜೆಪಿ ಧ್ವಜ ಹಾಕೊಂಡೆ ಸಾಯಿತಿನಿ ವಿನಃ ಬಿಜೆಪಿಯಿಂದ ಹೊರಗಿರೋನಲ್ಲ ನಾನು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವ ನಾನು ಒಪ್ಪಿಲ್ಲ.
ಬಾಗಲಕೋಟೆ (ಸೆ.21): ಸತ್ತರೂ ಬಿಜೆಪಿ ಧ್ವಜ ಹಾಕೊಂಡೆ ಸಾಯಿತಿನಿ ವಿನಃ ಬಿಜೆಪಿಯಿಂದ ಹೊರಗಿರೋನಲ್ಲ ನಾನು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವ ನಾನು ಒಪ್ಪಿಲ್ಲ. ನಾನು ಸತ್ತರೇ ಬಿಜೆಪಿ ಧ್ವಜ ಮೈಮೇಲೆ ಹಾಕಿಕೊಂಡೇ ಸಾಯುವೆ. ರಾಜಕೀಯದಲ್ಲೇ ಇದ್ದು ಸಮಾಜ ಸೇವೆ ಮಾಡಬಹುದಾ? ರಾಜಕೀಯ ಮಾಡುತ್ತಲೇ ಸಮಾಜ ಸೇವೆ ಮಾಡುತ್ತಲೇ ಇರುವೆ ಎಂದರು. ತಮ್ಮ ಮುಂದಿನ ರಾಜಕೀಯ ನಡೆ ಏನು ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ನಾನು ರಾಜಕಾರಣ ಮಾಡಿಕೊಂಡೆ ಸಮಾಜ ಸೇವೆ ಮಾಡ್ತೇನೆ. ಸಾಯೋ ತನಕ ರಾಜಕಾರಣ ಮಾಡಿಕೊಂಡೆ ಇರ್ತೇನೆ. ರಾಜಕಾರಣ ಸಮಾಜದ ಒಂದು ಅಂಗ. ಸತ್ತರೂ ಬಿಜೆಪಿ ಧ್ವಜ ಹಾಕೊಂಡೆ ಸಾಯ್ತಿನಿ ವಿನಃ ಬಿಜೆಪಿಯಿಂದ ಹೊರಗಿರಲ್ಲ.
ಬಿಜೆಪಿಯಲ್ಲಿ ಶುದ್ಧೀಕರಣ ಆಗಬೇಕು ಅನ್ನೋದು ನನ್ನೊಬ್ಬನ ಆಸೆ ಅಲ್ಲ. ನಾನು ಆರಂಭದಿಂದಲೂ ಶುರು ಮಾಡಿದ್ದೇನೆ. ನಂತರ ಯತ್ನಾಳ, ರಮೇಶ ಜಾರಕಿಹೊಳಿ, ಲಿಂಬಾವಳಿ ಶುರು ಮಾಡಿದ್ದಾರೆ. ಇವರೆಲ್ಲರೂ ಸೇರಿ ದೊಡ್ಡ ಸಭೆ ಕರಿಬೇಕು ಅಂತಿದ್ರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಅಸಮಾಧಾನ ಅತೃಪ್ತಿ ಇದೆ. ಅದು ಶುದ್ಧೀಕರಣ ಆಗಬೇಕು ಎಂದು ತಿಳಿಸಿದರು. ನಾನು ಚುನಾವಣೆಯಲ್ಲಿ ಸೋತೆ. ಅದು ಯಡಿಯೂರಪ್ಪ ಅವರ ಮಗನ ವಿರುದ್ಧ ಅಲ್ಲ, ಮೋದಿಗೆ ಸೋತೆ. ಶಿವಮೊಗ್ಗದ ಜನ ಮೋದಿಗೆ ವೋಟ್ ಕೊಟ್ಟಿದ್ದಾರೆ. ರಾಘವೇಂದ್ರನಿಗಲ್ಲ. ಯಡಿಯೂರಪ್ಪ ಕುಟುಂಬ ಮೋದಿನಾ ಬಿಟ್ಟು ಹೊರಬಂದು ಗೆಲ್ಲಲಿ ನೋಡೋಣ ಎಂದು ಸವಾಲೆಸೆದರು.
ಚನ್ನಪಟ್ಟಣಕ್ಕೆ ಡಿ.ಕೆ.ಸುರೇಶ್ ಅಭ್ಯರ್ಥಿಯಾಗಲಿ: ಸಚಿವ ಜಮೀರ್ ಅಹಮದ್ ಖಾನ್
ಬಿಜೆಪಿ ಶುದ್ಧೀಕರಣ ಆಗಬೇಕು: ಈ ಹಿಂದೆ ಒಮ್ಮೆ ಬಂದಿದ್ರು, ಆಗ ಏನಾಯಿತು. ನಂಗೆ ಅಖಿಲೇಶ್ ಯಾದವ್ ಕಾಲ್ ಮಾಡಿದ್ರು, ಕಾಲ್ ಮಾಡಬೇಡಿ ಅಂತಾ ಹೇಳಿದೆ. ಕಾಂಗ್ರೆಸ್ ನಾಯಕರು ನಂಗೆ ಫೋನ್ ಮಾಡಿದ್ರು. ನನ್ನ ಕುತ್ತಿಗೆ ಕೊಯ್ದರೂ ಬಿಜೆಪಿ ಬಿಟ್ಟು ಹೊರಗೆ ಹೋಗಲ್ಲ. ಇದೀಗ ನಾನು ಮೊದಲನೆ ಹೆಜ್ಜೆ ಇಟ್ಟಿರುವೆ. ಇದು ಯಶಸ್ವಿ ಆಗುತ್ತೆ ಅಂದುಕೊಂಡಿದ್ದೇನೆ. ನನ್ನಂಗೆ ಇದು ಬಹಳ ಜನರ ಆಸೆ ಇದೆ. ಬಿಜೆಪಿ ಶುದ್ಧೀಕರಣ ಆಗಬೇಕು ಅಂತಾ. ಮೋದಿ ಹೇಳಿದ್ದೇನು, ಕುಟುಂಬದಿಂದ ಪಕ್ಷ ಮುಕ್ತವಾಗಬೇಕು ಅಂತಾ. ಮೋದಿ ಅಪೇಕ್ಷೆ ಪಟ್ಟಂತೆ ಆಗಬೇಕು. ಯಡಿಯೂರಪ್ಪ, ಮಗ ಬಿವೈವಿ, ಬಿವೈಆರ್ ಅರ್ಥ ಮಾಡಿಕೊಳ್ಳಬೇಕು ತಾನೆ. ಇವರೇ ಕೇಂದ್ರ ಚುನಾವಣೆ ಸದಸ್ಯರು, ಇವ್ರೆ ಎಂಪಿ, ಇವ್ರೇ ರಾಜ್ಯಾಧ್ಯಕ್ಷರು. ಇದನ್ನ ಮೋದಿ ಒಪ್ಪುತ್ತಾರಾ? ಮೋದಿಗೆ ಸಮಾಧಾನ ಇದಿಯಾ? ಬಿಜೆಪಿ ಋಣ ತೀರಿಸಬೇಕು ಅನ್ನೋದಿದೆ. ಆದ್ರೆ ಅದಕ್ಕೆ ಪಕ್ಷ ಶುದ್ಧೀಕರಣ ಆಗಬೇಕು ಅಂತಾ ನಾನು ಹೊರಟಿರುವೆ ಎಂದರು.
30 ವರ್ಷಗಳಲ್ಲೇ ಕೆಳಮಟ್ಟಕ್ಕಿಳಿದ ರಾಜಕೀಯ: ರಾಜ್ಯದಲ್ಲಿ ವೈಯಕ್ತಿಕ ಟೀಕೆಗಳಿಗೆ ರಾಜಕಾರಣಕ್ಕೆ ಸೀಮಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಈಶ್ವರಪ್ಪ, ಇದು ಒಳ್ಳೆ ಬೆಳವಣಿಗೆಯಲ್ಲ, ಕಳೆದ 30 ವರ್ಷಗಳಲ್ಲಿ ಇದು ಕೆಳಮಟ್ಟದ ರಾಜಕಾರಣವಾಗಿದೆ. ಜನರಿಗೆ ಪೇಪರ್, ಟಿವಿ ನೋಡೋದು ಬೇಸರವಾಗಿದೆ. ಟಿವಿ ನೋಡಿದ್ರೆ ಪ್ರಜ್ವಲ್ ರೇವಣ್ಣ, ದರ್ಶನ, ಮತ್ತೇನೋ ಬೇರೆ ಎಪಿಸೋಡ್ ತೋರಿಸ್ತಾರೆ. ಮನೆಯಲ್ಲಿ ಕುಟುಂಬ ಸಮೇತ ನೋಡೋಕಾಗುತ್ತಿಲ್ಲ. ನಾನು ಎಲ್ಲ ರಾಜಕಾರಣಿಗಳಿಗೆ ಮನವಿ ಮಾಡ್ತೇನೆ. ವೈಯಕ್ತಿಕ ಟೀಕೆ ಬಿಟ್ಟಿಬಿಡಿ. ಟಿವಿ ಮಾಧ್ಯಮಗಳಿಗೂ ಸಹ ಮನವಿ ಮಾಡಿ, ಅಭಿವೃದ್ಧಿ, ಧಾರ್ಮಿಕ ಕಾರ್ಯಕ್ರಮಗಳನ್ನುಸುದ್ದಿ ಮಾಡಿ ಎಂದರು.ಕೆಲವು ಮುಸ್ಲಿಂ ಗೂಂಡಾಗಳಿಗೆ ಸಿಎಂ ಹೇಳಿಕೆ ಪ್ರೋತ್ಸಾಹ:
ಕೆಲವು ಮುಸ್ಲಿಂ ಗೂಂಡಾಗಳಿಗೆ ಸಿಎಂ ಸಿದ್ಧರಾಮಯ್ಯನವರ ಹೇಳಿಕೆಗಳು ಪ್ರೋತ್ಸಾಹ ಕೊಡುತ್ತಿದೆ. ಗಲಾಟೆಗೆ ಬಿಜೆಪಿಯವರು ಕಾರಣ ಅಂತಾರೆ, ಯಾರು ಆ ಬಿಜೆಪಿಯವರು ಅವರನ್ನು ಅರೆಸ್ಟ್ ಮಾಡಿ. ನಿಮ್ಮದೇ ಸರ್ಕಾರ ಇದೆ. ಸಿಎಂಗೆ ಕೈಮುಗಿದು ಪ್ರಾರ್ಥನೆ ಮಾಡ್ತೇನೆ, ಇಂತಹ ಹೇಳಿಕೆಗಳನ್ನು ಕೊಡಬೇಡಿ. ಮುಂದೆ ಮುಸ್ಲಿಂ ಸಮಾಜದ ಕೆಲವು ಗೂಂಡಾಗಳು ಹಿಂದೂಗಳ ಮೇಲೆ ಮನೆಗಳ ಮೇಲೆ ಕಲ್ಲು ಎಸೆಯುತ್ತಾರೆ. ರಾಷ್ಟ್ರ ದ್ರೋಹದ ಕೆಲಸ ಮಾಡುವ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ, ಜೈಲಿಗೆ ಕಳುಹಿಸಿ ಎಂದು ಹೇಳಿದರು.
ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ: ಸಿಎಂ ಸಿದ್ದರಾಮಯ್ಯ
ಕೃಷ್ಣಬೈರೇಗೌಡಗೆ ಮಂತ್ರಿ ಆಗೋ ಯೋಗ್ಯತೆ ಇದೆಯಾ?: ಮುನಿರತ್ನನ ಸಂಪರ್ಕದಲ್ಲಿರೋ ಬಿಜೆಪಿಗರು ಎಚ್‌ಐವಿ ಟೆಸ್ಟ್ ಮಾಡಿಕೊಳ್ಳಿ ಎಂದಿರುವ ಸಚಿವ ಕೃಷ್ಣ ಬೈರೇಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮಂತ್ರಿ ಆಗಲಿಕ್ಕೆ ಆತನಿಗೆ ಯೋಗ್ಯತೆ ಇದೆಯಾ? ಯೋಗ್ಯತೆ ಇರುವಂತ ವ್ಯಕ್ತಿಗಳು ಇಂತಹ ಪದ ಬಳಕೆ ಮಾಡಬಾರದು. ನಿಮ್ಮ ಕೈನಲ್ಲಿ ಅಧಿಕಾರ ಇದೆಯಲ್ಲ ತನಿಖೆ ಮಾಡ್ಸಿ. ಯಾರ ಹೇಳಿಕೆಯನ್ನು ನಾನು ಡಿಫೆಂಡ್ಸ್ ಮಾಡ್ತಿಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಲ್ಲಿ ಇರುವವರು ಎಲ್ಲರೂ ಸತ್ಯ ಹರಿಶ್ಚಂದ್ರರಲ್ಲ. ಪ್ರತಿಯೊಬ್ಬರಲ್ಲೂ ಸಣ್ಣ ಪುಟ್ಟ ದೌರ್ಬಲ್ಯ ಇದ್ದೆ ಇರುತ್ತದೆ. ಅದನ್ನ ವೈಭವೀಕರಿಸಿ ಇಂದು ಮಾಡ್ತಿದ್ದಿರಲ್ಲ ಇದು ಸರಿ ಅಲ್ಲ. ಇದು ರಾಜ್ಯದ ಸಮಾಜದ ಮೇಲೆ, ಯುವಕರ ಮೇಲೆ ಪರಿಣಾಮ ಬೀರುತ್ತದೆ. ಇಷ್ಟು ಜ್ಞಾನವಿಲ್ಲದವರು ಆಡಳಿತ ಪಕ್ಷ, ವಿರೋಧ ಪಕ್ಷದಲ್ಲಿ ಕೆಲಸ ಮಾಡ್ತಿದ್ದಾರೆ ಎಂದು ಬೇಸರಿಸಿದರು.