ಚನ್ನಪಟ್ಟಣಕ್ಕೆ ಡಿ.ಕೆ.ಸುರೇಶ್ ಅಭ್ಯರ್ಥಿಯಾಗಲಿ: ಸಚಿವ ಜಮೀರ್ ಅಹಮದ್ ಖಾನ್
ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಕುರಿತು ಕುತೂಹಲ ಮುಂದುವರಿದಿರುವ ನಡುವೆಯೇ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಹೆಸರನ್ನು ಬಹಿರಂಗವಾಗಿಯೇ ತೇಲಿಬಿಟ್ಟಿದ್ದಾರೆ.
ಚನ್ನಪಟ್ಟಣ (ಸೆ.21): ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಕುರಿತು ಕುತೂಹಲ ಮುಂದುವರಿದಿರುವ ನಡುವೆಯೇ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಹೆಸರನ್ನು ಬಹಿರಂಗವಾಗಿಯೇ ತೇಲಿಬಿಟ್ಟಿದ್ದಾರೆ. ಚನ್ನಪಟ್ಟಣ ಕ್ಷೇತ್ರ ಸಾಕಷ್ಟು ಬಡವಾಗಿದ್ದು, ಕ್ಷೇತ್ರದ ಹಿತದೃಷ್ಟಿಯಿಂದ ಉಪಚುನಾವಣೆಯಲ್ಲಿ ಡಿ.ಕೆ.ಸುರೇಶ್ ರನ್ನೇ ಕಣಕ್ಕಿಳಿಸಬೇಕೆಂದು ಬಹಿರಂಗ ವೇದಿಕೆಯಲ್ಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಜಮೀರ್ ಅಹಮದ್ ಖಾನ್ ಮನವಿ ಮಾಡಿದರು.
ನಗರದ ಆದಿಲ್ ಶಾ ಟಿಪ್ಪು ಮೈದಾನದಲ್ಲಿ ಆಯೋಜಿಸಿದ್ದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಚನ್ನಪಟ್ಟಣ ಕ್ಷೇತ್ರ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಬಡವಾಗಿದ್ದು, ತಬ್ಬಲಿಯಾಗಿದೆ. ಈ ಕ್ಷೇತ್ರಕ್ಕೆ ಸಮರ್ಥರೊಬ್ಬರು ಶಾಸಕರಾಗಿ ಆಯ್ಕೆ ಆಗಬೇಕು. ಕ್ಷೇತ್ರದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು ಸ್ಪರ್ಧೆಗೆ ಇಳಿಸಬೇಕು. ಈ ಸಂಬಂಧ ಪಕ್ಷದ ಹೈಕಮಾಂಡ್ ಜತೆ ಡಿ.ಕೆ.ಸುರೇಶ್ ಅವರನ್ನೇ ಸ್ಪರ್ಧೆಗೆ ಒಪ್ಪಿಸಿ ಎಂದು ಜಮೀರ್ ಅಹಮ್ಮದ್ ಅವರು ಮನವಿ ಮಾಡಿದರು.
ಪ್ಯಾಲೆಸ್ತೀನ್‌ಗೆ ಕೇಂದ್ರವೇ ಬೆಂಬಲಿಸಿದೆ, ಧ್ವಜ ಹಿಡಿದ್ರೆ ತಪ್ಪಲ್ಲ ಅನ್ಸುತ್ತೆ: ಕೇಂದ್ರ ಸರ್ಕಾರವೇ ‘ವಿ ಆರ್ ವಿತ್ ಪ್ಯಾಲೆಸ್ತೀನ್’ ಎನ್ನುವ ಮೂಲಕ ಆ ದೇಶಕ್ಕೆ ಬೆಂಬಲ ಕೊಟ್ಟಿದ್ದು, ಪ್ಯಾಲೆಸ್ತೀನ್ ದೇಶದ ಧ್ವಜ ಹಿಡಿದರೆ ತಪ್ಪೇನೂ ಇಲ್ಲ ಅನ್ನಿಸುತ್ತದೆ ಎಂದು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು ರಾಜ್ಯದ ಹಲವಡೆ ಕಿಡಿಗೇಡಿಗಳು ಪ್ಯಾಲೆಸ್ತೀನ್ ಧ್ವಜ ಹಾರಿಸುತ್ತಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮುಂದೆ ಬೇರೆ ರಾಜ್ಯಕ್ಕೆ ಹೋಗ್ತಾರೆ: ಸಚಿವ ಜಮೀರ್ ಅಹ್ಮದ್
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ದೇಶದಲ್ಲಿ ಬೇರೆ ದೇಶದ ಪರ ಘೋಷಣೆ ಕೂಗಬಾರದು. ಘೋಷಣೆ ಕೂಗಿದರೆ ಅಂತವರು ದೇಶದ್ರೋಹಿಗಳು. ಅವರು ಯಾರೇ ಆಗಿರಲಿ ಗಲ್ಲು ಶಿಕ್ಷೆಯಾಗಬೇಕು. ನಾನು ಮೊದಲು ಹಿಂದೂಸ್ತಾನಿ, ಕನ್ನಡಿಗ, ಆ ಬಳಿಕ ಮುಸ್ಲಿಂ. ಆದರೆ, ಕೇಂದ್ರ ಸರ್ಕಾರವೇ ಪ್ಯಾಲೆಸ್ತೀನ್‌ಗೆ ಬೆಂಬಲ ಕೊಟ್ಟಿದ್ದರಿಂದ ಧ್ವಜದ ಮೆರವಣಿಗೆ ಮಾಡಿರುವುದು ತಪ್ಪಲ್ಲ ಅನ್ನಿಸುತ್ತದೆ ಎಂದು ಈದ್ ಮಿಲಾದ್ ಹಬ್ಬಗಳಲ್ಲಿ ಪ್ಯಾಲಿಸ್ತೀನ್ ಪರ ಮುಸ್ಲಿಮರ ಒಲವನ್ನು ಸಮರ್ಥಿಸಿಕೊಂಡಿದ್ದಾರೆ.