ಕನಕಪುರದಲ್ಲಿ ನೆಮ್ಮದಿಯ ಉಸಿರಾಟಕ್ಕೆ ಗೆದ್ದೇ ಗೆಲ್ಲುವೆ: ಆರ್ ಅಶೋಕ್

ಕನಕಪುರದಲ್ಲಿ  ಕುಂತತ್ರ ರಾಜಕಾರಣ, ಗೂಂಡಗಿರಿ ರಾಜಕಾರಣ ಹೋಗಬೇಕು. ಅದಕ್ಕೆ ಜ‌ನ ನನಗೆ ಬೆಂಬಲ ನೀಡುತ್ತಿದ್ದಾರೆ ಎಂದ ಆರ್ ಅಶೋಕ್

i will definitely win in Kanakapura says R ashok gow

ಬೆಂಗಳೂರು (ಮೇ.3): ನೂರಕ್ಕೆ ನೂರು ನಾನು ಗೆಲ್ಲುವ ಸಲುವಾಗಿ ನಾನು ಅಲ್ಲಿಗೆ ಹೋಗಿರೋದು. ಜನರಿಗೆ ವಂಶಪರಂಪರೆ ದುರಾಡಳಿತದ ಗಾಳಿ ಹೋಗಬೇಕು. ಕನಕಪುರ ದಲ್ಲಿ ಒಳ್ಳೆಯ ಉಸಿರಾಡುವ ಗಾಳಿ ಬರಬೇಕು. ಅಲ್ಲಿ ಉಸಿರುಗಟ್ಟಿದ ವಾತಾವರಣ ತೊಲಗಬೇಕು. ಅದಕ್ಕಾಗಿ ನಾನು ಅಲ್ಲಿ ಗೆದ್ದೇ ಗೆಲ್ಲುತ್ತವೆ ಅದಕ್ಕಾಗಿಯೇ ನಮ್ಮ ನಾಯಕರು ನನನ್ನು ಅಲ್ಲಿಗೆ ಕಳಿಸಿದ್ದಾರೆ. ನನ್ನ ಶ್ರೀಮತಿ ಅವರು ಸಹ ನನ್ನ ಪರವಾಗಿ ನಾಳೆ ಕನಕಪುರದಲ್ಲಿ ಪ್ರಚಾರ ಮಾಡುತ್ತಾರೆ. ಸಂಸದ ತೇಜಸ್ವಿ ಸೂರ್ಯ, ಅಮೀತ್ ಶಾ ಸೇರಿದಂತೆ ಹಲವು ನಾಯಕರು ಪ್ರಚಾರ ಮಾಡಲಿದ್ದಾರೆ. ನಾನು ಕನಕಪುರದಲ್ಲಿ ಗೆದ್ದೆ ಗೆಲ್ಲತ್ತೇನೆ ಎಂದು ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ. ಈ ಮೂಲಕ ಡಿಕೆ ಸಹೋದರರಿಗೆ ಟಾಂಗ್ ಕೊಟ್ಟಿದ್ದಾರೆ.

ಇವತ್ತು ಬಿಜೆಪಿ ಹವಾ ಕರ್ನಾಟಕದಲ್ಲಿದೆ. ಪ್ರಧಾನಿ ಮೋದಿ ಅವರ ಹವಾ ಇದೆ. ಸರ್ಕಾರ ರಚನೆಗೆ ಬೇಕಾಗಿರುವಷ್ಟು ಬಹುಮತ ನಮಗೆ ಸಿಗಲಿದೆ. ಅದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ನಾವು ಗೆಲ್ಲಲಿದ್ದೇವೆ. ಈಗಾಗ್ಲೇ ಹಲವಾರು ಸಮೀಕ್ಷೆಗಳು ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೆ ಅಂತ ರಿಪೋರ್ಟ್ ನೀಡಿವೆ. ಅದೇ ರೀತಿಯ ಜನ ಬೆಂಬಲ ಸಹ ಕಾಣುತ್ತಿದೆ. ಕಾಂಗ್ರೆಸ್ ಈ ದೇಶದಲ್ಲಿ ಧೂಳಿಪಟ ಆಗಿದೆ. ಇರುವಂತಹ ರಾಜ್ಯಗಳನ್ನೆಲ್ಲ ಕಾಂಗ್ರೆಸ್ ಕಳೆದುಕೊಳ್ಳುತ್ತಿದೆ.

ಭಜರಂಗದಳ ನಿಷೇಧಕ್ಕೆ ಸುರ್ಜೆವಾಲಾ ಹಠ, ಕಾಂಗ್ರೆಸ್ ಗೆ ಪ್ರಾಣಸಂಕಟ!

ರಾಜ್ಯಸ್ಥಾನ ಸರ್ಕಾರ ಸಹ ಇನ್ನೇನು ಎರಡು ತಿಂಗಳಲ್ಲಿ ಬಿದ್ದು ಹೋಗುತ್ತೆ. ಕಾಂಗ್ರೆಸ್ ನಲ್ಲಿ ಇರೋರೆಲ್ಲ ಒಂದು ಜೈಲ್ ನಲ್ಲಿ ಇದ್ದಾರೆ ಇಲ್ಲ ಬೇಲ್ ನಲ್ಲಿ ಇದ್ದಾರೆ. ಭ್ರಷ್ಟಾಚಾರ ಮಾಡಿ ಮಾಡಿ ಎಲ್ಲರೂ ಬೇಲ್ ತಕೊಂಡು ಬದುಕುತ್ತಿದ್ದಾರೆ. ಎಲೆಕ್ಷನ್ ಕಳೆದ ಮೇಲೆ ಎಲ್ರೂ ಮತ್ತೆ ಜೈಲ್ ಗೆ ಹೋಗುತ್ತಾರೆ. ಕನಕಪುರ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿರುವ ಸಚಿವ ಆರ್ ಅಶೋಕ್, ನಿನ್ನೆ ಕೂಡ ಕನಕಪುರದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದೆ. ಪ್ರಚಾರ ಕಾರ್ಯ ಚೆನ್ನಾಗಿ ನಡೀತಾ  ಇದೆ ಒಳ್ಳೆಯ ಹವಾ ಇದೆ.

ತೆನೆ ಹೊಲದಲ್ಲಿ, ಕಮಲ ಕೊಳದಲ್ಲಿ, ಕಾಂಗ್ರೆಸ್‌ ಅಧಿಕಾರದಲ್ಲಿ: ಡಿ.ಕೆ.ಶಿ

ನಾವು ಒಳ್ಳೆಯ ಫೈಟ್ ಕೊಡ್ತಾ ಇದ್ದೇವೆ. ಅವ್ರು ಕಳೆದ 50 ವರ್ಷದಲ್ಲಿ ಫೈಟೇ ಇಲ್ಲ ಅಂತ ಹೇಳ್ತಾ ಇದ್ದರು. ಅಲ್ಲಿ‌ನ ಕುಂತತ್ರ ರಾಜಕಾರಣ, ಗೂಂಡಗಿರಿ ರಾಜಕಾರಣ ಹೋಗಬೇಕು. ಅದಕ್ಕೆ ಜ‌ನ ನನಗೆ ಬೆಂಬಲ ನೀಡುತ್ತಿದ್ದಾರೆ. ಇದೇ ಎಂಟನೇ ತಾರೀಖು ಅಮಿತ್ ಶಾ ಅವರು ದೊಡ್ಡ ಮಟ್ಟದ ರೋಡ್ ಶೋನಲ್ಲಿ ಪಾಲ್ಗೊಳಲ್ಲಿದ್ದಾರೆ. ಆ ಮೂಲಕ ಬಿಜೆಪಿಯನ್ನು ಆಯ್ಕೆ ಮಾಡಿದರೆ ನಮಗೆ ರಕ್ಷೆ ಸಿಗುತ್ತದೆ ಅನ್ನುವ ಭರವಸೆ ಜನರಲ್ಲಿ ತರಲಿದ್ದೇವೆ ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios