2028ರಲ್ಲಿ 150 ಸ್ಥಾನ ಗೆದ್ದು ಇತಿಹಾಸ ನಿರ್ಮಿಸುವೆ: ಜನಾರ್ದನ ರೆಡ್ಡಿ

ಪ್ರಸಕ್ತ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಸಹಕಾರ ಇಲ್ಲದೇ ಯಾವ ಸರ್ಕಾರವೂ ರಚನೆ ಆಗಲ್ಲ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ 

I will Create History by Win 150 Seats in 2028 at Karnataka Says Janardhana Reddy grg

ಕಲಾದಗಿ(ಏ.11):  ಕಲ್ಯಾಣ ರಾಜ್ಯ ಪ್ರಗತಿ ಪಕ್ಷ 2023ರ ಈ ಚುನಾವಣೆಯಲ್ಲಿ 31 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಮುಂದೆ 2028ರ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಇತಿಹಾಸ ಬರೆಯುತ್ತೇನೆ ಎಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಘೋಷಿಸಿದ್ದಾರೆ.

ಬಾಗಲಕೊಟೆ ಜಿಲ್ಲೆ ಬೀಳಗಿ ಮತಕ್ಷೇತ್ರದ ಕಲಾದಗಿ ಗ್ರಾಮದದಲ್ಲಿ ಸೋಮವಾರ, ಕಾರ್ಯಕರ್ತರ ಬೃಹತ್‌ ಸಮಾವೇಶ ಉದ್ಘಾಟಿಸಿ ಮಾತನಾಡಿ, ಪ್ರಸಕ್ತ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಸಹಕಾರ ಇಲ್ಲದೇ ಯಾವ ಸರ್ಕಾರವೂ ರಚನೆ ಆಗಲ್ಲ ಎಂದು ಹೇಳಿದರು.

Karnataka Assembly Elections 2023: ಬಂಡಾಯ ಬಿಸಿ, ಕಾಂಗ್ರೆಸ್‌ಗೆ ಮತ ವಿಭಜನೆ ಭೀತಿ..!

ಜನರ ಸೇವೆಗೆ ನನ್ನ ಬದುಕನ್ನೇ ಮುಡಿಪಾಗಿಡುತ್ತೇನೆ. ನಾನು ವಿಧಾನ ಸೌಧದ ಮೆಟ್ಟಿಲೇರಿ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದ ರೆಡ್ಡಿ, ಕೆಆರ್‌ಪಿಪಿ ಪಕ್ಷದಿಂದ 51 ಕ್ಷೇತ್ರಗಳಲ್ಲಿ ಕೆಲಸ ನಡೆಯುತ್ತಿದೆ. 31 ಅಭ್ಯರ್ಥಿಗಳು ಶಾಸಕರಾಗಿ ಗೆಲ್ಲುವ ವಿಶ್ವಾಸವಿದೆ ಎಂದರು.

ಚುನಾವಣೆಯಲ್ಲಿ ಮಾತ್ರ ಜನರ ಮನೆ ಬಾಗಿಲಿಗೆ ಹೋಗಿ ಕೈ ಮುಗಿಯುವ ರಾಜಕೀಯ ನಮಗೆ ಬೇಡ. ನಿರಂತರ ಐದು ವರ್ಷಗಳ ಕಾಲ ಜನರೊಂದಿಗೆ ಬೆರೆಯುವ, ಅವರ ಸಮಸ್ಯೆಗಳಿಗೆ ಸ್ಪಂದಿಸುವಂಐ ಅಭಿವೃದ್ಧಿ ಪರವಾದ ರಾಜಕೀಯ ಬೇಕು. ಇದಕ್ಕಾಗಿ ಯಾರೆಷ್ಟೇ ದೊಡ್ಡವರಾದರೂ ಸರಿ ಅವರನ್ನು ಸಣ್ಣವರನ್ನಾಗಿ ಮಾಡುವ ಶಕ್ತಿ ನಿಮ್ಮ ಮತಕ್ಕೆ ಇದೆ ಎಂದು ಹೇಳಿದರು.
ಬೀಳಗಿ ಮತಕ್ಷೇತ್ರದ ಕೆಆರ್‌ಪಿಪಿ ಅಭ್ಯರ್ಥಿ ರಾಜು ನ್ಯಾಮಗೌಡ ಅಭಿಮಾನಿ ಬಳಗ, ಕಾರ್ಯಕರ್ತರು ಜಯಘೋಷ ಹಾಕಿದರು. ಜನಾರ್ದನ ರೆಡ್ಡಿ ಕಲಾದಗಿ ಗ್ರಾಮ ಪ್ರವೇಶಿಸುತ್ತಿದ್ದಂತೆ ಸಾಯಿ ಮಂದಿರದ ಬಳಿ ಕ್ರೇನ್‌ ಮೂಲಕ ಬೃಹತ್‌ ಹೂ ಮಾಲೆ ಹಾಕಿ ಸ್ವಾಗತಿಸಿದರು.

ಪಕ್ಷ ಕಟ್ಟಿದ ಹಿರಿಯನನ್ನು ಕಣ್ಣೀರು ಹಾಕಿಸಿದ್ರು..

ಕರ್ನಾಟಕವನ್ನು ಕಲ್ಯಾಣ ರಾಜ್ಯವನ್ನಾಗಿ ಮಾಡೋ ಕನಸು ಹೊತ್ತು ಬಿ.ಎಸ್‌.ಯಡಿಯೂರಪ್ಪ ರಾಜ್ಯ ಸುತ್ತಿದರು. ಪರಿಶ್ರಮ ವಹಿಸಿ ಪಕ್ಷ ಕಟ್ಟಿದ ಇಂಥ ಹಿರಿಯ ನಾಯಕನನ್ನೇ ವಿಧಾನ ಸೌಧದಲ್ಲಿ ಕಣ್ಣೀರು ಹಾಕಿಸಿದ್ರು!
ಕೆಆರ್‌ಪಿಪಿ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಪರ ಹೀಗೆ ಮೃದುವಾಗಿ ಮಾತನಾಡುತ್ತ ಬಿಜೆಪಿಯಲ್ಲಿ ತಮಗಾದ ಅನ್ಯಾಯವನ್ನೂ ಜನರೆದುರು ತೋಡಿಕೊಂಡರು. ಯಡಿಯೂರಪ್ಪ ಅವರ ಜತೆ ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪಕ್ಷವನ್ನು ಅಧಿಕಾರಕ್ಕೆ ತರಲು ಕಾರಣನಾದವನೇ ನಾನು ಎಂದು ಹೇಳಿದರು.

'ಅಪಮಾನ ಮಾಡಿದ ಕಾಂಗ್ರೆಸ್‌ನಲ್ಲಿ ನಾನಿರಲ್ಲ ಎಂದ 'ಕೈ' ನಾಯಕ..!

ರಾಜಕಾರಣದಲ್ಲಿ ವೇಗವಾಗಿ ಮುನ್ನಡೆಯುತ್ತಿದ್ದ ನನ್ನನ್ನು ಮೀನಿಗೆ ಬಲೆ ಹಾಕಿದಂತೆ ಬಂಧಿಸಿ ಜೈಲಿಗೆ ಹಾಕಿಸಿದರು. ಈಜೋ ಮೀನಿಗೆ ಮುಂದೆ ಬಲೆ ಇದೆ ಎನ್ನುವುದೇ ಗೊತ್ತಾಗದಂತಹ ಅನುಭವ ನನ್ನದಾಯಿತು. ಜನರಿಂದ 12 ವರ್ಷ ದೂರ ಆಗುವಂತೆ ಮಾಡಿದರು. ಏಳು-ಬೀಳುಗಳ ನಡುವೆ 31 ವರ್ಷಗಳ ರಾಜಕೀಯ ಅನುಭವ ಹೊಂದಿದ್ದೇನೆ. ಮುಂದಿನ ದಿನಗಳಲ್ಲಿ ಕೆಆರ್‌ಪಿಪಿ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios