ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿಯೇ ಮಾಡ್ತೀನಿ: ಕೇಂದ್ರ ಸಚಿವೆ ಕರಂದ್ಲಾಜೆ
ದೊಡ್ಡ ಪ್ರಮಾಣದಲ್ಲಿ ಎಲ್ಲರ ಕ್ಷೇತ್ರಗಳಲ್ಲೂ ಕೆಲಸ ಆಗಿದೆ. ರಸ್ತೆ, ರೈಲ್ವೆ, ಅಮೃತ ರೈಲ್ವೆ ಯೋಜನೆಗಳು ಜಾರಿಗೆ ಬಂದಿದೆ. ಯಾವುದೇ ಹಳ್ಳಿಗೆ ಹೋದರೂ ಜನ ಅಭಿವೃದ್ಧಿ ಕಂಡಿದ್ದಾರೆ. ಅಭಿವೃದ್ಧಿ ಆಧಾರದಲ್ಲಿ ನಾವು ಮತ ಕೇಳುತ್ತೇವೆ. ಕರ್ನಾಟಕದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂಬುದು ನಮ್ಮ ವಿಶ್ವಾಸ. ಪ್ರಧಾನಿ ಮೋದಿ ಅವರನ್ನು ಜನ ಪ್ರೀತಿಸುತ್ತಾರೆ, ಜನ ಗೆಲ್ಲಿಸುತ್ತಾರೆ. ಸೀಟು ಕೇಳುವಾಗ ಗೊಂದಲ ಸಹಜ. ಇದಕ್ಕೂ ಚುನಾವಣೆಗೂ ಸಂಬಂಧ ಇಲ್ಲ. ನಾನು ಸ್ಪರ್ಧೆ ಮಾಡಿಯೇ ಮಾಡುತ್ತೇನೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಪುತ್ತೂರು(ಮಾ.12): ರಾಜಕೀಯದಲ್ಲಿ ಗೆಲ್ಲುವ ಸೀಟನ್ನು ಎಲ್ಲರೂ ಕೇಳುತ್ತಾರೆ. ಹೀಗಾಗಿ ಗೊಂದಲ ಸಹಜ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಕಡಬದ ಬಿಳಿನೆಲೆಯಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿ, ಒಂದೆರಡು ದಿನಗಳಲ್ಲಿ ಬಿಜೆಪಿ ಟಿಕೆಟ್ ಘೋಷಣೆಯಾಗಲಿದೆ. ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧ ಎಂದರು.
ದೊಡ್ಡ ಪ್ರಮಾಣದಲ್ಲಿ ಎಲ್ಲರ ಕ್ಷೇತ್ರಗಳಲ್ಲೂ ಕೆಲಸ ಆಗಿದೆ. ರಸ್ತೆ, ರೈಲ್ವೆ, ಅಮೃತ ರೈಲ್ವೆ ಯೋಜನೆಗಳು ಜಾರಿಗೆ ಬಂದಿದೆ. ಯಾವುದೇ ಹಳ್ಳಿಗೆ ಹೋದರೂ ಜನ ಅಭಿವೃದ್ಧಿ ಕಂಡಿದ್ದಾರೆ. ಅಭಿವೃದ್ಧಿ ಆಧಾರದಲ್ಲಿ ನಾವು ಮತ ಕೇಳುತ್ತೇವೆ. ಕರ್ನಾಟಕದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂಬುದು ನಮ್ಮ ವಿಶ್ವಾಸ. ಪ್ರಧಾನಿ ಮೋದಿ ಅವರನ್ನು ಜನ ಪ್ರೀತಿಸುತ್ತಾರೆ, ಜನ ಗೆಲ್ಲಿಸುತ್ತಾರೆ. ಸೀಟು ಕೇಳುವಾಗ ಗೊಂದಲ ಸಹಜ. ಇದಕ್ಕೂ ಚುನಾವಣೆಗೂ ಸಂಬಂಧ ಇಲ್ಲ. ನಾನು ಸ್ಪರ್ಧೆ ಮಾಡಿಯೇ ಮಾಡುತ್ತೇನೆ. ಆದಾಗ್ಯೂ, ಕೇಂದ್ರ ಚುನಾವಣಾ ಮಂಡಳಿ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾವು ಬದ್ಧ ಎಂದು ಹೇಳಿದರು.
ಬಿಜೆಪಿ ಕಛೇರಿಯಲ್ಲಿ ಮತ್ತೆ 'ಗೋ ಬ್ಯಾಕ್ ಶೋಭಾ' ಘೋಷಣೆ; ಟಿಕೆಟ್ ಬದಲಾವಣೆಗೆ ಕಾರ್ಯಕರ್ತರು ಪಟ್ಟು!
ಚಿಕ್ಕಮಗಳೂರು ಕ್ಷೇತ್ರದಲ್ಲಿ ತಮ್ಮ ಸ್ಪರ್ಧೆಗೆ ವಿರೋಧವಿದೆ ಎಂಬುದನ್ನು ಸಚಿವರು ಅಲ್ಲಗಳೆದರು. ‘ಶೋಭಾ ಗೋ ಬ್ಯಾಕ್ ’ಎಂಬುದು ರಾಜಕೀಯ ಷಡ್ಯಂತ್ರ ಎಂದು ಆರೋಪಿಸಿದರು.