ಕದ್ದು ಮುಚ್ಚಿ ರಾಜಕಾರಣ ಮಾಡಲಾಗುವುದಿಲ್ಲ. ಏನು ಮಾಡುತ್ತೇನೆ ಅದನ್ನೇ ಹೇಳುತ್ತೇನೆ, ಹೇಳಿದ್ದನ್ನೇ ಮಾಡುತ್ತೇನೆ. ಮುಂದೆ ಕಾದು ನೋಡಿ ಎಂದು ಹೇಳುವ ಮೂಲಕ ಜಿಲ್ಲೆಯ ರಾಜಕೀಯದಲ್ಲಿ ಮತ್ತೆ ಸಂಚಲನ ಮೂಡಿಸಿದ ಶಾಸಕ ಶಿವರಾಮ ಹೆಬ್ಬಾರ 

ಮುಂಡಗೋಡ(ಮಾ.18): ನೀತಿ ಸಂಹಿತೆ ಹಿನ್ನೆಲೆ ಸರ್ಕಾರಿ ಕಾರ್ಯಕ್ರಮಗಳಿಗೆ ಬ್ರೇಕ್ ಬೀಳುವುದರಿಂದ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ. ಮುಂದಿನ ಕೆಲಸ ನಡೆಯುತ್ತದೆ. ಯಾವ ಪಕ್ಷದಿಂದ ಎಂದು ಹೇಳಲಾಗುವುದಿಲ್ಲ ಎನ್ನುವ ಮೂಲಕ ಶಾಸಕ ಶಿವರಾಮ ಹೆಬ್ಬಾರ ಕಾಂಗ್ರೆಸ್ ಸೇರುವ ಸುದ್ದಿಗೆ ಮತ್ತೆ ಪುಷ್ಟಿ ನೀಡಿದ್ದಾರೆ.

ಶನಿವಾರ ತಾಲೂಕಿನ ವಿವಿಧ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು, ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ ಮಾತಿಗೆ ಯಾವ ಪಕ್ಷದ ಪರವಾಗಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ.

ವರಿಷ್ಠರು ಸೂಚನೆ ನೀಡಿದರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ: ಜಗದೀಶ್ ಶೆಟ್ಟರ್‌

ಕದ್ದು ಮುಚ್ಚಿ ರಾಜಕಾರಣ ಮಾಡಲಾಗುವುದಿಲ್ಲ. ಏನು ಮಾಡುತ್ತೇನೆ ಅದನ್ನೇ ಹೇಳುತ್ತೇನೆ, ಹೇಳಿದ್ದನ್ನೇ ಮಾಡುತ್ತೇನೆ. ಮುಂದೆ ಕಾದು ನೋಡಿ ಎಂದು ಹೇಳುವ ಮೂಲಕ ಜಿಲ್ಲೆಯ ರಾಜಕೀಯದಲ್ಲಿ ಮತ್ತೆ ಸಂಚಲನ ಮೂಡಿಸಿದ್ದಾರೆ.