Asianet Suvarna News Asianet Suvarna News

ರಾಜಕೀಯ ದುರುದ್ದೇಶದಿಂದ ನಮ್ಮನ್ನು ಪಕ್ಷದಿಂದ ಅಮಾನತು: ಕಾಂಗ್ರೆಸ್‌ ನಾಯಕ ಕುರಕುಂದಿ

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಾ. ಮಾಲಕರಡ್ಡಿ ಪರಾಜಯಗೊಂಡ ಬಳಿಕ, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅವರು ಪಕ್ಷ ತೊರೆದರು. ಆ ಸಂದರ್ಭದಲ್ಲಿ ನಾನು ಮೊದಲಿನಿಂದ ನಿರಂತರ ಕಾರ್ಯಕರ್ತರ ಸಂಪರ್ಕದಲ್ಲಿದ್ದ ಕಾರಣ ಅವರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಅಲ್ಲದೇ ಮತಕ್ಷೇತ್ರದಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನಕ್ಕೆ ತರುವ ಮೂಲಕ ಪರಿಹಾರಕ್ಕೆ ಹೋರಾಟ ಮಾಡಿದ್ದೇನೆ: ಮಾಣೀಕ್‌ರೆಡ್ಡಿ ಕುರಕುಂದಿ 

I was Suspended from the Congress Party for Political Malice Says Manikreddy Karakundi grg
Author
First Published Jun 10, 2023, 9:00 PM IST

ಯಾದಗಿರಿ(ಜೂ.10):  ನಾವು ಹಲವಾರು ವರ್ಷಗಳಿಂದ ಅಧಿಕಾರ ಇರಲೀ, ಬಿಡಲಿ ಕಾಂಗ್ರೆಸ್‌ ಪಕ್ಷದಲ್ಲಿ ಕ್ರೀಯಾಶೀಲರಾಗಿ ಯಾದಗಿರಿ ಮತಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ, ಕಾರ್ಯಕರ್ತರ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇವೆ. ನಮ್ಮ ಬೆಳವಣಿಗೆ ಸಹಿಸದೇ ಜಿಲ್ಲಾ ಕಾಂಗ್ರೆಸ್‌ ಘಟಕ ಪಕ್ಷ ವಿರೋಧಿ ಚಟುವಟಿಕೆ ನಿರ್ಧಾರ ಆರೋಪ ಮಾಡಿ ಪಕ್ಷದಿಂದ ಅಮಾನತು ಮಾಡಿದ್ದಾರೆ ಎಂದು ಕಾಂಗ್ರೆಸ್‌ ಕಿಸಾನ್‌ ಘಟಕದ ಜಿಲ್ಲಾಧ್ಯಕ್ಷ ಮಾಣೀಕ್‌ರೆಡ್ಡಿ ಕುರಕುಂದಿ ಆರೋಪಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಡಾ. ಎ.ಬಿ. ಮಾಲಕರಡ್ಡಿ ಹಾಗೂ ಹಾಲಿ ಶಾಸಕ ಚನ್ನಾರಡ್ಡಿ ಪಾಟೀಲ್‌ ತುನ್ನೂರ ಹಲವಾರು ದಶಕಗಳ ಕಾಲ ಕಾಂಗ್ರೆಸ್‌ ಪಕ್ಷದಲ್ಲಿ ಕೆಲಸ ಮಾಡಿದ್ದಾರೆ. ನಾನು ಕೂಡ ಹಿರಿಯ ರಾಜಕಾರಣಿ ಡಾ. ರೆಡ್ಡಿ ಅವರ ಅಧೀನದಲ್ಲಿ ಕೆಲಸ ಮಾಡಿದ್ದೇನೆ. ಅವರು ಕೆಲವು ಕಾರಣಾಂತರಗಳಿಂದ ಬಿಜೆಪಿ ಸೇರ್ಪಡೆಯಾದರು. ಆದರೆ, ನಾವು ಕಾರ್ಯಕರ್ತರು ಯಾರು ಪಕ್ಷ ಬಿಡಲಿಲ್ಲ ಎಂದು ತಿಳಿಸಿದರು.

ಯಾದಗಿರಿ: ಗರ್ಭದಲ್ಲೇ ಶಿಶು ಮರಣ: ವೈದ್ಯರ ನಿರ್ಲಕ್ಷ್ಯ ಆರೋಪ

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಾ. ಮಾಲಕರಡ್ಡಿ ಪರಾಜಯಗೊಂಡ ಬಳಿಕ, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅವರು ಪಕ್ಷ ತೊರೆದರು. ಆ ಸಂದರ್ಭದಲ್ಲಿ ನಾನು ಮೊದಲಿನಿಂದ ನಿರಂತರ ಕಾರ್ಯಕರ್ತರ ಸಂಪರ್ಕದಲ್ಲಿದ್ದ ಕಾರಣ ಅವರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಅಲ್ಲದೇ ಮತಕ್ಷೇತ್ರದಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನಕ್ಕೆ ತರುವ ಮೂಲಕ ಪರಿಹಾರಕ್ಕೆ ಹೋರಾಟ ಮಾಡಿದ್ದೇನೆ ಎಂದರು.

2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಯಾದಗಿರಿ ಮತಕ್ಷೇತ್ರದಿಂದ ಟಿಕೇಟ್‌ ಪಡೆಯಲು ಹಲವಾರು ಆಕಾಂಕ್ಷಿಗಳು ಅರ್ಜಿ ಹಾಕಿದ್ದರು. ಆದರೆ, ಕೊನೆಗಳಿಗೆಯಲ್ಲಿ ಚನ್ನಾರಡ್ಡಿ ಪಾಟೀಲ್‌ ತುನ್ನೂರ ಅವರಿಗೆ ಅವಕಾಶ ನೀಡಿತು. ಅವರು ಪಕ್ಷದ ಪ್ರಮುಖರ ಸಭೆ ಕರೆದರು. ಆ ಸಭೆಗೆ ನನ್ನನ್ನು ಸೇರಿದಂತೆ ಹಲವಾರು ಪ್ರಮುಖರನ್ನು ಕರೆಯಲಿಲ್ಲ. ಅಲ್ಲದೇ ತಮ್ಮ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೂ ಕೂಡ ತಿಳಿಸಲಿಲ್ಲ, ನಾನು ಈ ವಿಷಯವನ್ನು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಸರಡ್ಡಿ ಪಾಟೀಲ್‌ ಅನಪೂರ ಅವರ ಗಮನಕ್ಕೆ ತರುವ ಮೂಲಕ ತುನ್ನೂರ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ ಎಂದು ತಿಳಿಸಿದೆ. ನನ್ನ ಅಭಿಪ್ರಾಯದಂತೆ ಯಾದಗಿರಿಗೆ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆಯವರು ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಬೃಹತ್‌ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ತುನ್ನೂರ ಅವರಿಗೂ ಕೂಡ ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ಕೆಲಸ ಮಾಡಿ ಎಂದು ಚಾಟಿ ಬೀಸಿದ್ದರು. ಆದರೂ ಅವರು ತಮ್ಮ ವರ್ತನೆಯಲ್ಲಿ ಬದಲಾವಣೆ ಕಂಡುಕೊಳ್ಳಲಿಲ್ಲ ಎಂದು ಅಸಮಧಾನ ತೋಡಿಕೊಂಡರು.

ನಾನೂ ಜೆಡಿಎಸ್‌ ಅಭ್ಯರ್ಥಿಯನ್ನು ಬೆಂಬಲಿಸಿದ್ದೇನೆ ಎಂದು ಆರೋಪಿಸಿದ್ದಾರೆ. ಅದು ಸತ್ಯಕ್ಕೆ ದೂರವಾದದ್ದು, ನಾನು ಚುನಾವಣೆ ಪ್ರಕ್ರಿಯೆಯಲ್ಲಿ ಬೇಜಾರಾಗಿ ತಟಸ್ಥ ನಿಲುವು ಹೊಂದಿದರೂ ಹಲವಾರು ಕಾರ್ಯಕರ್ತರು ಗೊಂದಲದಲ್ಲಿ ಸಿಲುಕಿ ನನಗೆ ಕರೆ ಮಾಡಿ, ಯಾರನ್ನೂ ಬೆಂಬಲಿಸಬೇಕು ಎಂದು ಅಭಿಪ್ರಾಯ ಕೇಳಿದಾಗ, ನಾನು ನಿವೇಲ್ಲರೂ ಕಳೆದ 5 ವರ್ಷಗಳಲ್ಲಿ ಮತಕ್ಷೇತ್ರಗಳಲ್ಲಿ ಹಲವಾರು ತೊಂದರೆಗಳನ್ನು ಎದುರಿಸಿದ್ದೀರಿ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ, ಕಾರಣ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗೆ ಮತ ಹಾಕಿಸಿ ಎಂದು ಹೇಳಿದ್ದೇನೆ ಎಂದು ತಿಳಿಸಿದರು.

ನಾನು ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಜೊತೆ ಎಲ್ಲೂ ವೇದಿಕೆ ಹಂಚಿಕೊಂಡಿಲ್ಲ, ಸಾರ್ವಜನಿಕವಾಗಿ ಅವರ ಪರ ಮಾತನಾಡಿಲ್ಲ, ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ಅವರ ಪರ ಮಾತನಾಡಿಲ್ಲ, ಜಾತ್ರೆಯ ಸಮಯದಲ್ಲಿ ಅವರು ಆಕಸ್ಮಿಕ ನನಗೆ ಭೇಟಿಯಾದರು, ಸೌಜನ್ಯಕ್ಕೆ ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಯಾದಗಿರಿ: ಕುಡಿಯಲು ಯೋಗ್ಯವಲ್ಲದ ನೀರು ಸರಬರಾಜು

ಹಾಲಿ ಶಾಸಕ ಚನ್ನಾರಡ್ಡಿ ಪಾಟೀಲ್‌ ತುನ್ನೂರ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಪಕ್ಷದಲ್ಲಿರುವ ಪ್ರಮುಖ ನಾಯಕರು, ಅಸಮಾಧಾನದಿಂದ ಅವರನ್ನು ಸೋಲಿಸಲು ಪಕ್ಷೇತರ ಅಭ್ಯರ್ಥಿ ಹಾಗೂ ಜೆಡಿಎಸ್‌ ಅಭ್ಯರ್ಥಿ ಜೊತೆ ಮಾತನಾಡಿ ಬೆಂಬಲಿಸಿದ್ದಾರೆ. ಇದರ ಬಗ್ಗೆ ಹಲವಾರು ಸಾಕ್ಷಿಗಳು ನನ್ನ ಹತ್ತಿರ ಇವೆ ಎಂದ ಅವರು, ಚನ್ನಾರಡ್ಡಿ ಅವರ ಪಕ್ಕದಲ್ಲಿಯೇ ಇದ್ದು, ಸೋಲಿಸಲು ಯತ್ನಿಸಿದ ನಾಯಕರ ಮೇಲೆ ಜಿಲ್ಲಾ ಕಾಂಗ್ರೆಸ್‌ ಮೊದಲು ಕ್ರಮ ಕೈಗೊಳ್ಳದೇ ಪಕ್ಷ ಸಂಘಟನೆಗೆ ದುಡಿದ ನಮ್ಮ ಮೇಲೆ ಕ್ರಮ ಕೈಗೊಂಡಿದ್ದಾರೆ. ನಾವು ಇದರಿಂದ ದೃತಿಗೆಟ್ಟಿಲ್ಲ, ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪೂರ ಹಾಗೂ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಸರಡ್ಡಿ ಅನಪೂರ ಅವರ ಗಮನಕ್ಕೆ ತಂದಿದ್ದೇವೆ. ಒಂದು ವಾರದೊಳಗೆ ಅವರ ತೀರ್ಮಾನ ಮರು ಪರಿಶೀಲನೆ ಮಾಡಿ ರದ್ದುಗೊಳಿಸಬೇಕು. ಇಲ್ಲದಿದ್ದರೇ ನಾವು ಮತ್ತೊಮ್ಮೆ ಹಲವಾರು ನಾಯಕರು ನಡೆಸಿರುವ ಭಿನ್ನಮತ ಚಟುವಟಿಕೆಗಳನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕವಾಗಿ ಅನಾವರಣಗೊಳಿಸುತ್ತೇವೆ ಎಂದು ಎಚ್ಚರಿಸಿದರು.

ಇಲ್ಲಿ ನ್ಯಾಯ ಸಿಗದಿದ್ದರೇ ನಾವು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರನ್ನು ಭೇಟಿಯಾಗಿ ವಾಸ್ತವಿಕ ಪರಿಸ್ಥಿತಿಯನ್ನು ವಿವರಿಸುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭೀಮರಾಯ ನಾಯ್ಕಲ್‌ ಉಪಸ್ಥಿತರಿದ್ದರು.

Follow Us:
Download App:
  • android
  • ios