ರಾಹುಲ್‌ ಗಾಂಧಿ ಇಮೇಜ್‌ ಡೌನ್‌ ಮಾಡಲು ಬಿಜೆಪಿಯವರಿಂದ ಸಾವಿರಾರು ಕೋಟಿ ಖರ್ಚು: ಸಚಿವ ಸಂತೋಷ್ ಲಾಡ್‌

ಬಿಜೆಪಿಯವರಿಗೆ ಅಭಿವೃದ್ಧಿ ಬೇಕಿಲ್ಲ. ವಿವಾದಾತ್ಮಕ ವಿಚಾರಗಳೇ ಬೇಕು. ವಿವಾದಾತ್ಮಕವಾಗಿ ಮಾತನಾಡುವುದನ್ನು ಬಿಟ್ಟು ಬೇರೆ ಏನೂ ಮಾತನಾಡುವುದಿಲ್ಲ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್‌ ಹೇಳಿದರು.

Minister Santosh Lad Slams On BJP At Hubballi gvd

ಹುಬ್ಬಳ್ಳಿ (ಆ.17): ಬಿಜೆಪಿಯವರಿಗೆ ಅಭಿವೃದ್ಧಿ ಬೇಕಿಲ್ಲ. ವಿವಾದಾತ್ಮಕ ವಿಚಾರಗಳೇ ಬೇಕು. ವಿವಾದಾತ್ಮಕವಾಗಿ ಮಾತನಾಡುವುದನ್ನು ಬಿಟ್ಟು ಬೇರೆ ಏನೂ ಮಾತನಾಡುವುದಿಲ್ಲ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ರಾಜ್ಯದ ಪ್ರಗತಿ ಬಗ್ಗೆ ಮಾತನಾಡುವುದಿಲ್ಲ. ಡಾಲರ್‌ ಬೆಲೆಯಲ್ಲಿ ಏರಿಕೆ ಆಗಿದೆ, ಮಣಿಪುರ, ಹರಿಯಾಣದಲ್ಲಿ ಅಷ್ಟೊಂದು ಸಾವು-ನೋವು ಆಗಿವೆ, ಅದರ ಕುರಿತು ಚಕಾರ ಎತ್ತುತ್ತಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ 3 ತಿಂಗಳು ಕಳೆದಿಲ್ಲ. ಆಗಲೇ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ. 

ಹಾಗೆನಾದರೂ ಚರ್ಚೆ ಮಾಡಲೇಬೇಕು ಎಂದಿದ್ದರೆ ಬನ್ನಿ ಸೂಕ್ತ ವೇದಿಕೆಯಲ್ಲಿ ಬಹಿರಂಗವಾಗಿಯೇ ಚರ್ಚಿಸೋಣ. ಅದನ್ನು ಬಿಟ್ಟು ಸಿಕ್ಕಸಿಕ್ಕ ಕಡೆಗಳಲ್ಲಿ ಸುಳ್ಳು ಹೇಳಿಕೆ ನೀಡುತ್ತಾ ಹೋಗುವುದು ಸರಿಯಲ್ಲ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಶಾಸಕರಲ್ಲಿ ಅಸಮಾಧಾನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಲಾಡ್‌, ನಮ್ಮಲ್ಲಿ ಯಾವುದೇ ರೀತಿಯ ಅಸಮಾಧಾನವಿಲ್ಲ. ಮುಖ್ಯಮಂತ್ರಿಗಳು ಬೆಂಗಳೂರಿಗೆ ಎಲ್ಲ ಜಿಲ್ಲೆಗಳ ಶಾಸಕರನ್ನು ಕರೆದು ಅಭಿವೃದ್ಧಿ ವಿಷಯ ಕುರಿತು ಮಾತನಾಡಿದ್ದಾರೆ. ಇದರಲ್ಲಿ ಹೊಸತೇನೂ ಇಲ್ಲ. ಶಾಸಕ ಬಸವರಾಜ ರಾಯರಡ್ಡಿ ಅವರು ಹೇಳಿದ್ದು ಸಭೆ ಕರೆಯಿರಿ ಎಂದು. ಭ್ರಷ್ಟಾಚಾರದ ಬಗ್ಗೆ ಮಾತನಾಡಿಲ್ಲ. 

ಕೊಡಗು ಅಪರ ಜಿಲ್ಲಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ: 3.53 ಕೋಟಿ ಮೌಲ್ಯದ ನಗದು, ಆಸ್ತಿ ಪತ್ತೆ

ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ ಇಮೇಜ್‌ ಹಾಳು ಮಾಡಲು ಬಿಜೆಪಿಯವರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಕೇವಲ ಜನರಲ್‌ ಟ್ರಾನ್ಸಫರ್‌ ಆಗಿದೆ, ಇದಕ್ಕೆಲ್ಲ ದಾಖಲೆ ಬೇಕಲ್ವಾ?. ಐದು ಭಾಗ್ಯಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ಸರ್ಕಾರದ ಹೆಸರು ಕೆಡಿಸಲು ವಿನಾಕಾರಣ ಅಧಿಕಾರಿಗಳ ವರ್ಗಾವಣೆಯ ವಿಚಾರ ಮುಂದಿಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ. ಕಾಮಗಾರಿಗಳಿಗೆ ಟೆಂಡರ್‌ ಆಗಿ ಇನ್ನೂ ಹಣವೇ ಬಿಡುಗಡೆಯಾಗಿಲ್ಲ, ಭ್ರಷ್ಟಾಚಾರ ಹೇಗೆ ಆಗುತ್ತೆ?. ಬಿಜೆಪಿಯವರು ಮುಂದಿನ ಐದು ವರ್ಷ ನಡೆಯುವ ಕಾಗಮಗಾರಿಗೆ ಈಗಲೇ ಟೆಂಡರ್‌ ಕರೆದಿದ್ದರು, ಅದಕ್ಕೆ ಉತ್ತರ ಕೊಡಲಿ ಎಂದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪೆನ್‌ಡ್ರೈವ್‌ ಬಿಡುಗಡೆ ಮಾಡಿದರೆ ತಾನೇ ಅದರಲ್ಲಿರುವ ವಿಷಯ ಗೊತ್ತಾಗುವುದು. ಭ್ರಷ್ಟಾಚಾರಕ್ಕೆ ಸಾಕ್ಷಾಧಾರಗಳು ಇದ್ರೆ, ನಮ್ಮ ಮುಖ್ಯಮಂತ್ರಿಗಳು ಖಂಡಿತವಾಗಿ ಕ್ರಮ ಕೈಗೊಳ್ಳುತ್ತಾರೆ. ಕಾರ್ಮಿಕ ಇಲಾಖೆಯಲ್ಲಿ ಕಳೆದ ಮೂರು ವರ್ಷದಲ್ಲಿ 39 ಲಕ್ಷ ಕಾರ್ಮಿಕ ಸದಸ್ಯರು ಸೇರ್ಪಡೆಯಾಗಿದ್ದಾರೆ. ಇದರಲ್ಲಿ ಯಾರು ಅಕ್ರಮ, ಸಕ್ರಮ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ ಎಂದರು.

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಬಾಗಿಲು ಮುಚ್ಚಿದ ಬರೋಬ್ಬರಿ 13 ಸರ್ಕಾರಿ ಶಾಲೆಗಳು!

ಡಬಲ್‌ ಡೆಕ್ಕರ್‌ ಬಸ್‌ ಇದ್ದಂತೆ: ಕಾಂಗ್ರೆಸ್‌ ಸರ್ಕಾರ ಡಬಲ್‌ ಡೆಕ್ಕರ್‌ ಇದ್ದಂತೆ. ಯಾವುದೇ ಪಕ್ಷದವರು, ಯಾರೇ ಬಂದರೂ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ. ಯಾರು ಬೇಕಾದರೂ ಬರಬಹುದು. ಬಂದವರನ್ನು ಸ್ವಾಗತಿಸುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಪರೇಷನ್‌ ಮಾಡುವುದು ನಾವಲ್ಲ ಜನರು. ಬಿಜೆಪಿಯವರು ಸಾವಿರಾರು ಕೋಟಿ ರುಪಾಯಿ ಖರ್ಚು ಮಾಡಿ ರಾಹುಲ್‌ ಗಾಂಧಿ ಇಮೇಜ್‌ ಡೌನ್‌ ಮಾಡುವ ಯತ್ನ ಮಾಡಿದ್ದಾರೆ. ಅದನ್ನು ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದರು.

Latest Videos
Follow Us:
Download App:
  • android
  • ios