ಕಳೆದ ನಾಲ್ಕು ವರ್ಷಗಳಿಂದ ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ಶ್ರಮಿಸಿದ್ದೇನೆ: ಸಂಸದೆ ಸುಮಲತಾ
ಸಂಸದೆಯಾಗಿ ಕಳೆದ ನಾಲ್ಕು ವರ್ಷಗಳಿಂದ ಮಂಡ್ಯ ಜಿಲ್ಲೆ ಅಭಿವೃದ್ದಿಗೆ ಶ್ರಮಿಸಿದ್ದೇನೆ. ಮುಂದೆಯೂ ನನ್ನ ಶಕ್ತಿಮೀರಿ ಜಿಲ್ಲೆಯ ಜನರ ಋಣ ತೀರಿಸಲು ಪ್ರಯತ್ನಿಸುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.

ಕೆ.ಆರ್.ಪೇಟೆ (ಅ.12): ಸಂಸದೆಯಾಗಿ ಕಳೆದ ನಾಲ್ಕು ವರ್ಷಗಳಿಂದ ಮಂಡ್ಯ ಜಿಲ್ಲೆ ಅಭಿವೃದ್ದಿಗೆ ಶ್ರಮಿಸಿದ್ದೇನೆ. ಮುಂದೆಯೂ ನನ್ನ ಶಕ್ತಿಮೀರಿ ಜಿಲ್ಲೆಯ ಜನರ ಋಣ ತೀರಿಸಲು ಪ್ರಯತ್ನಿಸುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು. ಪಟ್ಟಣದ ಕೆ.ಆರ್.ಪೇಟೆ ಕೃಷ್ಣ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸದರ ಅನುದಾನದಲ್ಲಿ ನಿರ್ಮಿಸಿರುವ ಶುದ್ದ ಕುಡಿಯುವ ನೀರಿನ ಘಟಕವನ್ನು ಉಧ್ಘಾಟಿಸಿ ಮಾತನಾಡಿ, ನೀರು ಜೀವಜಲವಾಗಿದೆ. ನೀರಿನ ಪ್ರಾಮುಖ್ಯತೆ ತಿಳಿದು ವ್ಯರ್ಥ ಮಾಡದೇ ಮಿತವಾಗಿ ಬಳಸಬೇಕು ಎಂದರು. ಭವಿಷ್ಯದಲ್ಲಿ ನೀರಿಗೆ ತೊಂದರೆ ಎದುರಾಗಲಿದೆ. ಕಾವೇರಿ ನೀರಿನ ವಿಚಾರದಲ್ಲಿ ನೀವೆಲ್ಲರೂ ನೋಡುತ್ತಿದ್ದೀರಿ.
ಹಲವು ವರ್ಷಗಳ ಹಿಂದೆ ಕೆ.ಆರ್.ಎಸ್ ಅಣೆಕಟ್ಟು ಕಟ್ಟುವುದಕ್ಕೆ ಮುಂಚೆ ಇಲ್ಲಿನ ಜನತೆಗೆ ನೀರಿನ ಅಭಾವದ ಅರಿವು ಇತ್ತು. ವಿಶ್ವೇಶ್ವರಯ್ಯನವರು ಜಿಲ್ಲೆಯ ಜನರಿಗೆ ನೀರಿನ ಕೊರತೆ ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಜಿಲ್ಲೆಯ ಜನತೆ ಅವರನ್ನು ಎಂದಿಗೂ ಮರೆಯಲಾರರು ಎಂದು ಹೇಳಿದರು ಕೆ.ಆರ್.ಪೇಟೆಕೃಷ್ಣರವರು ನಮ್ಮ ಇಂಜಿನಿಯರಿಂಗ್ ಕಾಲೇಜಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಿಕೊಡುವಂತೆ ಕೇಳಿದ್ದರು. ಅಲ್ಲದೇ ಅಂಬರೀಶ್ ಬಗ್ಗೆ ತುಂಬಾ ಅಭಿಮಾನ ಇಟ್ಟಿದ್ದರು. ಈ ಸವಿನೆನಪಿಗಾಗಿ ಸಾವಿರಾರು ಮಕ್ಕಳು ವ್ಯಾಸಂಗ ಮಾಡುವ ಕಾಲೇಜಿಗೆ ಶುದ್ದ ಕುಡಿಯುವ ನೀರಿನ ಘಟಕವನ್ನು ಎರಡುವರೆ ಲಕ್ಷ ರು ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಸನಾತನ ಧರ್ಮ ಉಳಿದರೆ ಮಾತ್ರ ಸಂವಿಧಾನ ಉಳಿಯುತ್ತದೆ: ಶಾಸಕ ಯತ್ನಾಳ್
ಜಿಲ್ಲೆಯಾದ್ಯಂತ ಸಂಸದರ ನಿಧಿಯಿಂದ 25ಕ್ಕೂ ಹೆಚ್ಚು ಶುದ್ದಕುಡಿಯುವ ನೀರಿನ ಘಟಕಗಳನ್ನು ಆಸ್ಪತ್ರೆ, ಪ್ರವಾಸಿ ಸ್ಥಳಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಸ್ಥಾಪಿಸಲಾಗಿದೆ. ನನಗೆ ಜಿಲ್ಲೆಯ ಜನ ಮತನೀಡಿ ಬೆಂಬಲಿಸಿದ್ದಾರೆ. ಮುಂದೆಯೂ ಜಿಲ್ಲೆಯ ಜನರ ಕಲ್ಯಾಣಕ್ಕಾಗಿ ನಿಮ್ಮೊಂದಿಗೆ ಹೆಜ್ಜೆ ಹಾಕಲಿದ್ದೇನೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಿಸರ್ಗಪ್ರಿಯ, ಪುರಸಭಾ ಸದಸ್ಯ ಗಿರೀಶ್, ಇಂದ್ರಾಣಿ ವಿಶ್ವನಾಥ್, ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಆರ್.ದಿನೇಶ್, ಡಾ. ಹೆಚ್.ಎಂ.ನಾಗಭೂಷಣ, ಡಾ.ಕೆ.ಅರುಣ್‌ಕುಮಾರ್, ಡಾ.ಬಿ.ಎಂ.ರುದ್ರೇಶ್, ಡಾ.ಕೆ.ಹರೀಶ್ ಮತ್ತು ಅಧ್ಯಾಪಕ ಸಿಬ್ಬಂದಿಗಳು ಹಾಗೂ ಜಿಪಂ ಗ್ರಾಮೀಣ ಕುಡಿಯುವ ನೀರು ವಿಭಾಗದ ಎಇಇ.ರಶ್ಮಿ, ಜೆ.ಇ.ಸ್ವಾಮಿ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.