Asianet Suvarna News Asianet Suvarna News

Ballari ST Convention: ನಮ್ಮ ಜನಾಂಗದ ಋಣ ತೀರಿಸಿದ್ದೇನೆ- ಸಚಿವ ಶ್ರೀರಾಮುಲು

ರಾಜ್ಯದಲ್ಲಿ ನಮ್ಮ ಜನಾಂಗದಿಂದ ನನಗೆ ನೀಡಲಾಗಿದ್ದ ಋಣವನ್ನು ನಾನು ಮೀಸಲಾತಿ ಹೆಚ್ಚಳದ ಮೂಲಕ ತೀರಿಸಿದ್ದೇನೆ ಎಂದು ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೊಡುತ್ತೇವೆ ಎಂದು ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ಹೇಳಿಕೆ ನೀಡಿದ್ದನ್ನು ವ್ಯಂಗ್ಯ ಮಾಡುತ್ತಿದ್ದ ಸಿದ್ಧರಾಮಯ್ಯ ಅವರೇ ಈಗ ಮುಂದೆ ಬನ್ನಿ. ಮೀಸಲಾತಿ ಕೊಟ್ಟಿದ್ದೇವೆ ಬಂದು ನೋಡಿ.

I have paid the rice debt of our nation: Minister Sriramulu
Author
First Published Nov 20, 2022, 1:58 PM IST


ಬಳ್ಳಾರಿ (ನ.20): ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೊಡುತ್ತೇವೆ ಎಂದು ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ಹೇಳಿಕೆ ನೀಡಿದ್ದನ್ನು ವ್ಯಂಗ್ಯ ಮಾಡುತ್ತಿದ್ದ ಸಿದ್ಧರಾಮಯ್ಯ ಅವರೇ ಈಗ ಮುಂದೆ ಬನ್ನಿ. ಮೀಸಲಾತಿ ಕೊಟ್ಟಿದ್ದೇವೆ ಬಂದು ನೋಡಿ. ನಮ್ಮ ಜನಾಂಗದಿಂದ ನನಗೆ ನೀಡಲಾಗಿದ್ದ ಋಣವನ್ನು ನಾನು ಮೀಸಲಾತಿ ಹೆಚ್ಚಳದ ಮೂಲಕ ತೀರಿಸಿದ್ದೇನೆ ಎಂದು ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ಬಳ್ಳಾರಿ ನಗರದಲ್ಲಿ ನಡೆಯುತ್ತಿರುವ ಬಿಜೆಪಿ ಎಸ್‌ಟಿ ಮೋರ್ಚಾದಿಂದ ನಡೆಯುತ್ತಿರುವ ಎಸ್‌ಟಿ ನವಶಕ್ತಿ ಸಮಾವೇಶ (ST Navashakti Convention)ದಲ್ಲಿ ಮಾತನಾಡಿದ ಅವರು, ಮೀಸಲಾತಿ (Reservation) ಹೆಚ್ಚಳ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ (Bommai) ಅವರು ಬಸವಣ್ಣ ಅವರಂತೆ ಕಾಣುತ್ತಿದ್ದಾರೆ. ನಮ್ಮ ಜನಾಂಗ ನನಗೆ ಹಾಕಿದ ಅನ್ನದ ಋಣವನ್ನು ನಾನು ಈಗ ತೀರಿಸಿದ್ದೇನೆ. ಮೀಸಲಾತಿಗಾಗಿ ಬೀದರ್ ದಿಂದ ಚಾಮರಾಜನಗರದವರೆಗೆ ಪಾದಯಾತ್ರೆ ಮಾಡಿದ್ದೇನೆ. ಸಿದ್ದರಾಮಯ್ಯನವರೇ (Siddaramaiah) ಈ ಚುನಾವಣೆ ಸುನಾಮಿ ಆಗುತ್ತದೆ ಎನ್ನುತ್ತಾರೆ. ಆದರೆ, ಚುನಾವಣೆಗಾಗಿ ಕಾಯಬೇಡಿ. ಈ ಸಮಾವೇಶ ಮುಗಿದ ಬಳಿಕ ನಾವೇ ಸುನಾಮಿ ಎಬ್ಬಿಸಿ ಕಾಂಗ್ರೆಸ್ (Congress) ಅಂತ್ಯಗೊಳಿಸುತ್ತೇವೆ. ಕಾಗ್ರೆಸ್ ಪಕ್ಷವನ್ನು ಛಿದ್ರ ಛಿದ್ರ ಮಾಡಿ ಸೋಲಿಸಲಿದ್ದೇವೆ ಎಂದು ಸಚಿವ ಶ್ರೀರಾಮುಲು ಹೇಳಿದರು.

ಎಸ್‌ಟಿ ಸಮಾವೇಶ ಕಾಂಗ್ರೆಸ್‌ ನಾಯಕರಿಗೆ ಉತ್ತರ ನೀಡಲಿದೆ: ಶ್ರೀರಾಮುಲು

ರಾಜ್ಯದಲ್ಲಿ 150  ಸೀಟು ಬಿಜೆಪಿ ಗೆಲ್ಲಲಿದೆ: ಸಮಾವೇಶ ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಎಸ್‌ಸಿ, ಎಸ್‌ಟಿ ಸಮಾಜ ನೂರಕ್ಕೆ ನೂರರಷ್ಟು ಬಿಜೆಪಿ (BJP) ಜೊತೆಗೆ ಬರಬೇಕಿದೆ. ಈ ಎಸ್‌ಟಿ ಸಮುದಾಯದ ಸಮಾವೇಶ ನೋಡಿ ಕಾಂಗ್ರೆಸ್ ಗೆ ಅಘಾತ (Shok) ಆಗಿರಬೇಕು. ಕರ್ನಾಟಕದಲ್ಲಿ 140-150 ಸೀಟು (Seats) ಗೆಲ್ಲುವ ಮೂಲಕ ಬಿಜೆಪಿ ಅಧಿಕಾರಕ್ಕೆ ತರಬೇಕಿದೆ ಎಂದು  ಮನವಿ ಮಾಡಿದರು. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಬಳ್ಳಾರಿಯ 10 ಕ್ಷೇತ್ರವನ್ನು ಗೆಲ್ಲಿಸಬೇಕು. ರಾಜ್ಯದಲ್ಲಿ ಎಸ್‌ಟಿ ಮೀಸಲಾತಿ ಹೆಚ್ಚಿಸಿರೋದು ನಮ್ಮ ಸರ್ಕಾರ. ನಾನು ಸಿಎಂ ಆಗಿದ್ದಾಗ ವಾಲ್ಮೀಕಿ (Valmiki) ಜಯಂತಿ ಘೋಷಣೆ ಮಾಡಿದೆ. ಕಾಂಗ್ರೆಸ್ ನವರು ಎಸ್‌ಟಿ ಜನಾಂಗಕ್ಕೆ ಏನೂ ಮಾಡಿಲ್ಲ. ದೇಶದಲ್ಲಿ ಬಿಜೆಪಿ ಸರ್ಕಾರದ ಮುಂದಾಳು ನರೇಂದ್ರ ಮೋದಿ ಅವರು ತಳ ಸಮುದಾಯದ ದ್ರೌಪದಿ ಮುರ್ಮು (Droupadi murmu) ಅವರನ್ನು ರಾಷ್ಟ್ರಪತಿಯಗಿ ಮಾಡಿದ್ದಾರೆ. ನಾನು ಸಿಎಂ ಆಗಿದ್ದಾಗ ರಾಮುಲು, ಜನಾರ್ದನ ರೆಡ್ಡಿ ಹೇಳಿದ ಎಲ್ಲಾ ಕೆಲಸ ಮಾಡಿದ್ದೇನೆ. ಇದನ್ನ‌ ನೆನಪಲ್ಲಿಟ್ಟುಕೊಂಡು ಹತ್ತು ಕ್ಷೇತ್ರವನ್ನು ಗೆಲ್ಲಿಸಬೇಕು ಎಂದರು.

ಕಾಂಗ್ರೆಸ್‌ನಿಂದ ಬರೀ ಭ್ರಷ್ಟಾಚಾರ: ಕಾಂಗ್ರೆಸ್ ಪಕ್ಷ ಮೂರು ತಲೆಮಾರಿಗೆ (Three generation) ಅಗುವ ಹಣ ಮಾಡಿದ್ದೇವೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar) ಹೇಳಿದ್ದಾರೆ. ಕಾಂಗ್ರೆಸ್‌ ಸರ್ಕಾರ ಬಂದರೆ ಅಧಿಕಾರಕ್ಕೆ ಬಂದ್ರೆ ಭ್ರಷ್ಟಾಚಾರ (Corruption) ಮಾಡುವುದೇ ಇವರ ಕೆಲಸವಾಗುತ್ತದೆ. ಈ ಹಿಂದೆ ಎಲ್ಲ ಎಸ್‌ಟಿ ಸಮುದಾಯವನ್ನು ಕಾಂಗ್ರೆಸ್‌ ಕೇವಲ ವೋಟ್ ಬ್ಯಾಂಕ್  (Vote Bank) ಆಗಿ ಪರಿಗಣಿಸಿ ದ್ರೋಹ ಮಾಡಿದ್ದರು. ಆದರೆ, ನಮ್ಮ ಸರ್ಕಾರದಿಂದ ಭಾರಿ ಪ್ರಮಾಣದಲ್ಲಿ ಬೆಂಬಲ ನೀಡಿದ್ದು, ಅಭಿವೃದ್ಧಿ ಕಾರ್ಯಗಳನ್ನುಮಾಡಲಾಗುತ್ತಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಬಳ್ಳಾರಿಯಲ್ಲಿ ಇಂದು ಬಿಜೆಪಿ ಎಸ್‌ಟಿ ರ‍್ಯಾಲಿ, ಮೀಸಲಾತಿ ಹೆಚ್ಚಳ ಬಳಿಕ ಮೊದಲ ಸಮಾವೇಶ

ರಾಹುಲ್‌ ಗಾಂಧಿಯಿಂದ ಭಾರತ ತೋಡೋ ಕೆಲಸ : ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಜನಪರ ಕಾರ್ಯ ಮಾಡುತ್ತಿದ್ದಾರೆ. ಮೀಸಲಾತಿ ಹೆಚ್ಚಳ ಮಾಡಿ ಜನರ ಭಾವನೆಗಳಿಗೆ ತಕ್ಕಂತೆ ಕೆಲಸ ಮಾಡಿದ್ದಾರೆ. ಪ್ರಧಾನಿ ಮೋದಿ (Modi) ಅವರು ಎಸ್ಸಿ ಎಸ್ಟಿ ಸಮಾಜಕ್ಕೆ ಗೌರವ ಸ್ಥಾನಮಾನ ಕೊಡುತ್ತಾರೋ ಅದೇ ರೀತಿ ರ್ನಾಟಕದಲ್ಲಿ ನಡೆಯುತ್ತಿದೆ. ಕಾಂಗ್ರೆಸ್ ಅಡಳಿತದ ಕಾಲದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಜನರಿಗೆ ಅನ್ಯಾಯ (Injustice) ಮಾಡಿದ್ದಾರೆ. ದೇಶದಲ್ಲಿ ಸ್ವಾತಂತ್ರ ಬಂದಾಗಿನಿಂದಲೂ ಕಾಂಗ್ರೆಸ್‌ ದೇಶದ ಸಂಪತ್ತು ಕೊಳ್ಳೆ ಹೊಡೆಯುವ (Loot) ಕಾರ್ಯ ಮಾಡಿದೆ. ಈಗ ರಾಹುಲ್ ಗಾಂಧಿ (Rahul gandhi) ಕೂಡ ಭಾರತ ತೋಡೋ (Bharath thodo) ಕೆಲಸ ಮುಂದುವರೆಸಿದ್ದಾರೆ. ಭಾರತ ಜೋಡಿಸೋ ಕೆಲಸ ಮೋದಿ ಮತ್ತು ಜೆಪಿ. ನಡ್ಡಾ ಮಾಡುತ್ತಿದ್ದಾರೆ. ದೇಶದಲ್ಲಿ ಅದಿವಾಸಿ ಗ್ರಾಮಗಳನ್ನು ಮಾದರಿ ಗ್ರಾಮವನ್ನಾಗಿ ಮಾಡಲಾಗುತ್ತಿದೆ. ಬಳ್ಳಾರಿಯಲ್ಲಿ ಏಕಲವ್ಯ ರೆಸಿಡೆನ್ಸಿ (Ekalavya Residency) ಶಾಲೆ ಮಾಡುತ್ತೇವೆ. ತಳವಾರ ಪರಿವಾರ ಸಮಸ್ಯೆಯನ್ನು ಇತ್ಯರ್ಥಗೊಳಿಸಿವೆ. ಕಾಡುಕುರುಬ ಸಮಸ್ಯೆ ಶೀಘ್ರದಲ್ಲೇ ನಿವಾರಣೆ ಮಾಡುತ್ತೇವೆ ಎಂದು ಕೇಂದ್ರದ ಬಿಜೆಪಿ ನಾಯಕ ಅರ್ಜುನ್‌ ಮುಂಡಾ ತಿಳಿಸಿದ್ದಾರೆ.
 

Follow Us:
Download App:
  • android
  • ios