Hijab Row: ಹಿಜಾಬ್‌ ವಿವಾದದ ಹಿಂದಿರುವ ಸಂಘಟನೆಗಳ ಬಗ್ಗೆ ಮಾಹಿತಿ ಇದೆ: ಎಚ್‌ಡಿಕೆ

*ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹಿಜಾಬ್‌ ಪರ, ವಿರೋಧ ಪ್ರತಿಭಟನೆ
*ಶಿವಮೊಗ್ಗ ಬಾಪೂಜಿ ಕಾಲೇಜಿನಲ್ಲಿ ಕಲ್ಲು ತೂರಾಟ
*ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ
*ವಿವಾದದ ಹಿಂದೆ  ಯಾವ ಸಂಘಟನೆಗಳು ಇದ್ದಾವೆ ಗೊತ್ತಿದೆ: ಎಚ್ಡಿಕೆ

I have information on which organizations are behind Hijab row says HD Kumarsawmy mnj

ರಾಮನಗರ (ಫೆ. 08): ಉಡುಪಿ ಪದವಿ ಪೂರ್ವ ಕಾಲೇಜಿನಲ್ಲಿ ಹೊತ್ತಿಕೊಂಡ ಹಿಜಾಬ್‌-ಕೇಸರಿ ಕಿಡಿ ಇದೀಗ ಉತ್ತರ ದಕ್ಷಿಣವೆನ್ನದೆ ರಾಜ್ಯವ್ಯಾಪಿ ವ್ಯಾಪಿಸಿಕೊಂಡಿದೆ. ಹಿಜಾಬ್ vs ಕೇಸರಿ ಶಾಲು ಗಲಾಟೆ ಈಗ ಜೋರಾಗಿದ್ದು ಶಿವಮೊಗ್ಗ ಬಾಪೂಜಿ ಕಾಲೇಜಿನಲ್ಲಿ ಕಲ್ಲು ತೂರಾಟ ನಡೆದಿದೆ. ಹಿಜಾಬ್ ಹೋರಾಟ ಸಂಘರ್ಷಕ್ಕೆ ತಿರುಗಿದೆ. ಈ ಬೆನಲ್ಲೇ ಮಂಗಳವಾರ ರಾಮನಗರದ ಮಿನಿ ವಿಧಾನಸೌಧದಲ್ಲಿ  ಮಾತನಾಡಿರುವ  ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ರಾಜ್ಯದಲ್ಲಿರುವ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲು ಇವರ ಬಳಿ ಸರುಕಿಲ್ಲ, ಹಾಗಾಗಿ ಇಂತಹ ಸೂಕ್ಷ್ಮ ವಿಷಯದಲ್ಲಿ ಮಕ್ಕಳ ಭವಿಷ್ಯ ಹಾಳು ಮಾಡ್ತಾರೆ. ಉಡುಪಿಯಲ್ಲಿ ಇದು ಹೇಗೆ ಪ್ರಾರಂಭವಾಯ್ತು, ಇದರ ಹಿಂದೆ  ಯಾವ ಸಂಘಟನೆಗಳು ಇದ್ದಾವೆ ಎಂದು ನನಗೆ ಮಾಹಿತಿ ಇದೇ ಆ ವಿಚಾರ ಚರ್ಚೆ ಮಾಡಿದರೆ ನಾನು ಖಳನಾಯಕ ಆಗ್ತೇನೆ" ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.

ಇದನ್ನೂ ಓದಿKarnataka Politics: ಸಂಘಟನೆಗಳ ಜೊತೆ ಎಚ್‌ಡಿಕೆ ರಹಸ್ಯ ಸಭೆ, ಏನಿದು ಜೆಡಿಎಸ್ ಲೆಕ್ಕಾಚಾರ.?

ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಜನರ ಸಮಸ್ಯೆ ಬಗೆಹರಿಸುವ ಕಮಿಟ್ಮೆಂಟ್ ಇಲ್ಲ ಎಂದು ಎಚ್‌ಡಿಕೆ ಹೇಳಿದ್ದಾರೆ. "ರಾಜ್ಯದಲ್ಲಿ ಶಾಂತಿಯುತ ವಾತವರಣ ಇತ್ತು, ಕುವೆಂಪುರವರ ಸರ್ವಜನಾಂಗದ ಶಾಂತಿಯ ತೋಟ ಇದು, ಇದನ್ನ ಹಾಳು ಮಾಡಲು ಹೊರಟ್ಟಿದ್ದಾರೆ. ಬಡವರ ಪರವಾಗಿ ಹೋರಾಟ ಮಾಡಿ ಎಂದು ಎಲ್ಲಾ ಸಮಾಜದವರಿಗೂ ಹೇಳ್ತೇನೆ.  ಉಡುಪಿ ಹಿಂದೂ - ಮುಸ್ಲಿಮರ ಶಕ್ತಿ ಕೇಂದ್ರ.  ಏನೇ ಪ್ರಾರಂಭ ಆದರೂ ಅಲ್ಲಿಂದಲೇ. ನಾಡಿನ‌ ಜನತೆ, ಯುವಕರು ಅರ್ಥ ಮಾಡಿಕೊಳ್ಳಬೇಕು " ಎಂದು ಎಚ್‌ಡಿಕೆ ಹೇಳಿದ್ದಾರೆ. 

ಹಿಜಾಬ್ - ಕೇಸರಿ ಅಂತಾ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ:  "ನಮಗೆ ಶಾಂತಿ ಬೇಕಿದೆ, ಬಡವರ ಬದುಕು ಕಟ್ಟಬೇಕಿದೆ. ಇವತ್ತು ಮಕ್ಕಳು ಎರಡು ತಿಂಗಳಲ್ಲಿ ಪರೀಕ್ಷೆ ಬರೆಯಬೇಕಿದೆ ಈ ವಿಚಾರ ಇಟ್ಟುಕೊಂಡು ಹಿಜಾಬ್ - ಕೇಸರಿ ಅಂತಾ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ.  ಕಲ್ಲು ತೂರಾಟ ನಡೆದಿರೋದು ಫೌಂಡೇಶನ್. ಇದು ಮುಂದೆ ಇದು ಯಾವ ಹಂತ ತಲುಪಬಹುದು, ಅಮಾಯಕರು ಬಲಿಯಾಗಬಹುದು ಹಾಗಾಗಿ ಇದನ್ನ ಇಲ್ಲಿಗೆ ನಿಲ್ಲಿಸಬೇಕಿದೆ"  ಎಂದು ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: Hijab Row: ಹಿಜಾಬ್ ವಿಚಾರದಿಂದಲೇ ಕಾಂಗ್ರೆಸ್ ಸರ್ವನಾಶವಾಗುವುದು ಖಚಿತ: ಈಶ್ವರಪ್ಪ!

ನಾನು ಹಸಿರು ಶಾಲಿನ ಬಗ್ಗೆ ಪ್ರಚೋದನೆ ಕೊಟ್ಟಿಲ್ಲ.  ನಾವು ರೈತ ಕುಟುಂಬದವರು ಅದನ್ನ ತೋರಿಸೋಣ ಎಂದಿದ್ದೇನೆ. ಹಸಿರು ಶಾಲು ಹಾಕಿಕೊಳ್ಳೋಣ ಎಂದಿದ್ದೇನೆ.  ರೈತರ ಶಾಲಿಗೆ ಯಾವುದೇ ಪ್ರಚೋದನೆ ಇಲ್ಲ. ಹಸಿರು ಶಾಲು ರೈತನ ಸಂಕೇತ, ಅದಕ್ಕೆ ಗೌರವವಿದೆ . ಇವರು ಮಾಡ್ತಿರೋದಕ್ಕೆ ಏನು ಗೌರವ ಇದೇ? ಅಶಾಂತಿ ಉಂಟು ಮಾಡುವುದಕ್ಕೆ ಇದು ಕಾರಣವಾಗಿದೆ" ಎಂದು  ರಾಮನಗರದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios