ಭ್ರಷ್ಟಚಾರದ ರಾಜಕಾರಣ ನನಗೆ ಇಷ್ಟವಿಲ್ಲ: ಸಂಸದೆ ಸುಮಲತಾ
ಅಂಬರೀಶ್ ಅವರ ರಾಜಕೀಯ ಮಾರ್ಗದಲ್ಲಿ ನಡೆಯುತ್ತಿದ್ದೇನೆ. ಭ್ರಷ್ಟಚಾರದ ರಾಜಕಾರಣ ಮಾಡುವುದು ನನಗೆ ಇಷ್ಟವಿಲ್ಲ ಎಂದು ಸಂಸದೆ ಸುಮಲತಾ ತಿಳಿಸಿದರು.
ಶ್ರೀರಂಗಪಟ್ಟಣ (ನ.03): ಅಂಬರೀಶ್ ಅವರ ರಾಜಕೀಯ ಮಾರ್ಗದಲ್ಲಿ ನಡೆಯುತ್ತಿದ್ದೇನೆ. ಭ್ರಷ್ಟಚಾರದ ರಾಜಕಾರಣ ಮಾಡುವುದು ನನಗೆ ಇಷ್ಟವಿಲ್ಲ ಎಂದು ಸಂಸದೆ ಸುಮಲತಾ ತಿಳಿಸಿದರು. ತಾಲೂಕಿನ ಕೆ.ಶೆಟ್ಟಹಳ್ಳಿಯಲ್ಲಿ ನೂತನವಾಗಿ ಪುನರ್ ನಿರ್ಮಾಣಗೊಂಡ ಗ್ರಾಮದೇವತೆ ಶ್ರೀಮಾರಮ್ಮ ತಾಯಿ ದೇವಾಲಯದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಶ್ರೀರಂಗಪಟ್ಟಣದಲ್ಲಿ ಕೋಟೆ-ಕಂದಕಗಳು ಕುಸಿದು ಬೀಳುತ್ತಿವೆ. ಈ ಬಗ್ಗೆ ಸಚಿವ ಆನಂದ್ ಸಿಂಗ್ ಅವರಿಗೆ ಪತ್ರ ಬರೆದ ಮನವಿ ಮೇರೆಗೆ 42 ಲಕ್ಷ ರು. ಗಳನ್ನು ನೀಡಿದ್ದಾರೆ.
ಕೇವಲ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿರುವವರಿಗೆ ಈ ಎಲ್ಲಾ ಅಭಿವೃದ್ಧಿ ಕೆಲಸಗಳ ಕಾಣುವುದಿಲ್ಲ ಎಂದು ಪರೋಕ್ಷವಾಗಿ ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಕಿಡಿಕಾರಿದರು. ಭ್ರಷ್ಟರಾಜಕಾರಣ ಮಾಡುವ ಶೈಲಿಯನ್ನು ಅನುಸರಿಸಿಕೊಂಡು ಹೋಗಲು ನನಗೆ ಸಾಧ್ಯವಿಲ್ಲ. ನಾನು ಅಂಬರೀಶ್ ಅವರ ರಾಜಕೀಯ ಮಾರ್ಗದಲ್ಲಿ ನಡೆಯುತ್ತಿರುವವಳು. ಒಂದು ವೇಳೆ ಅನುಸರಿಸಿಕೊಂಡು ಹೋಗುವ ಸನ್ನಿವೇಶ ಎದುರಾದರೆ ಅವತ್ತೇ ರಾಜಕಾರಣವನ್ನೇ ಬಿಟ್ಟು ಬಿಡುತ್ತೇನೆ ಎಂದರು. ಜೆಡಿಎಸ್ ಶಾಸಕರಿಗೆ ನನ್ನ ಬಗ್ಗೆ ಮಾತನಾಡದಿದ್ದರೆ ಮೈಲೇಜ್ ಸಿಗೊಲ್ಲ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ನನ್ನ ಹೆಸರು ಪ್ರಸ್ತಾಪಿಸಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಆರೋಪಕ್ಕೆ ಪ್ರತ್ಯುತ್ತರ ನೀಡಿದರು.
ಜೆಡಿಎಸ್ ಶಾಸಕರೇ ಸುಮಲತಾ ಟಾರ್ಗೆಟ್: ಶಾಸಕ ಸಿ.ಎಸ್.ಪುಟ್ಟರಾಜು
ಪುಟ್ಟರಾಜು ಅವರಿಗೆ 40 ವರ್ಷಗಳ ರಾಜಕೀಯ ಅನುಭವವಿದೆ. ಯಾವುದೋ ಒಂದು ದಿನ ದಿಶಾ ಸಭೆಗೆ ಆಗಮಿಸಿ ಮುಂದಿನ ಸಭೆಗಳಿಗೆ ಕಣ್ಮರೆಯಾಗುವುದಲ್ಲ. ಅವರು ಜಿಪಂನಿಂದಲೇ ರಾಜಕೀಯ ಆರಂಭಿಸಿ, ಶಾಸಕರಾಗಿ, ಸಂಸದರಾಗಿ ಹಾಗೂ ಸಚಿವರಾಗಿದ್ದವರು. ಇಷ್ಟೆಲ್ಲಾ ರಾಜಕೀಯ ಅನುಭವವಿದ್ದರೂ ಮೈಷುಗರ್ ಕಾರ್ಖಾನೆ ಆರಂಭದ ಬಗ್ಗೆ ಚಕಾರವೆತ್ತಲಿಲ್ಲ. ಅವರ ಕ್ಷೇತ್ರದಲ್ಲೇ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಯಾಕೆ ಮೌನವಹಿಸಿದ್ದಾರೆ ಎಂದು ಗುಡುಗಿದರು. ನಾನು ಸಂಸದರಾದ ಬಳಿಕ ಈ ಎಲ್ಲಾ ಕೆಲಸಗಳಿಗೆ ಚಾಲನೆ ನೀಡಿಸಿದ್ದೇನೆ ಎಂದರು.
Mandya: ಹೈಕೋರ್ಟ್ ಅಂಗಳಕ್ಕೆ ಜಾಮೀಯಾ ಮಸೀದಿ ವಿವಾದ
ಸೆಲ್ಫೀ ಕ್ಲಿಕ್ಕಿಸಿ ಅಜ್ಜಿಯ ಆಸೆ ಈಡೇರಿಸಿದ ಸಂಸದೆ: ದೇವಾಲಯದ ಉದ್ಘಾಟನೆ ಮುಗಿಸಿ ತೆರಳುತ್ತಿದ್ದ ಸಂಸದೆ ಸುಮಲತಾ ಅಂಬರೀಶ್ ಕಾರನ್ನು ಹಿಂಬಾಲಿಸಿ ಬಂದ ಅಜ್ಜಿಯೊಬ್ಬರು ಫೋಟೋ ಕ್ಲಿಕ್ಕಿಸಿಕೊಳ್ಳಬೇಕೆಂಬ ಬಯಕೆಯನ್ನು ಸಂಸದರ ಮುಂದಿಟ್ಟರು. ಅಜ್ಜಿ ಆಸೆಗೆ ಸಹಕರಿಸಿದ ಸಂಸದೆ ತಮ್ಮ ಬೆಂಬಲಿಗರಿಂದ ಫೋಟೋ ತೆಗೆಸಿದರಾದರೂ ಪಟ್ಟು ಬಿಡದ ಅಜ್ಜಿ ನನ್ನ ಮೊಬೈಲ್‌ನಿಂದಲೇ ಫೋಟೋ ತೆಗೆಯಬೇಕೆಂದು ಆಂಡ್ರಾಯ್ಡ… ಮೊಬೈಲ್ ಅನ್ನು ಸಂಸದರ ಕೈಗೆ ನೀಡಿದರು. ಸ್ವತಃ ಸಂಸದರೇ ಅಜ್ಜಿಯೊಂದಿಗೆ ಸೆಲ್ಫೀ ತೆಗೆದು ಅಜ್ಜಿಯ ಆಸೆ ಈಡೇರಿಸಿದ ಪ್ರಸಂಗ ನಡೆಯಿತು. ಇದಕ್ಕೂ ಮುನ್ನ ದೇವಾಲಯಕ್ಕೆ ಶಾಸಕ ರವೀಂದ್ರ ಶ್ರೀಕಂಠಯ್ಯ, ಎಲ್.ನಾಗೇಂದ್ರ, ಸಂದೇಶ್ ನಾಗರಾಜು, ಯುವ ಮುಖಂಡ ಸಚ್ಚಿದಾನಂದ ಸೇರಿದಂತೆ ಇತರೆ ಗಣ್ಯರು ಭೇಟಿ ನೀಡಿ ಪೂಜೆ ಸಲ್ಲಿಸಿದರು.