ಕುಮಾರಸ್ವಾಮಿ ಸಮೀಕ್ಷೆ ಕುರಿತು ನನಗೆ ಗೊತ್ತಿಲ್ಲ: ರೇವಣ್ಣ
ನಾನೇಕೆ ಎರಡು ಕ್ಷೇತ್ರಗಳಲ್ಲಿ ನಿಲ್ಲಲಿ? ನನ್ನ ಕ್ಷೇತ್ರ ಹೊಳೇನರಸೀಪುರ. ಅಲ್ಲಿನ ಜನ ನನ್ನನ್ನು 30 ವರ್ಷ ಸಾಕಿದ್ದಾರೆ. ನನ್ನ ಆದ್ಯತೆ ಹೊಳೆನರಸೀಪುರ. ಆ ಕ್ಷೇತ್ರವನ್ನು, ಅಲ್ಲಿನ ಜನರನ್ನು ಯಾವತ್ತೂ ಬಿಡುವ ಪ್ರಶ್ನೆಯೇ ಇಲ್ಲ: ರೇವಣ್ಣ
ಚನ್ನರಾಯಪಟ್ಟಣ(ಏ.12): ರೇವಣ್ಣ ಹೊಳೆನರಸೀಪುರ ಮತ್ತು ಹಾಸನ ಎರಡು ಕ್ಷೇತ್ರಗಳ ಟಿಕೆಟ್ ಕೇಳಿರುವ ಕುರಿತು ಪಕ್ಷದಲ್ಲಿ ಚರ್ಚೆ ಆಗಿಲ್ಲ. ಇದೆಲ್ಲವೂ ಮಾಧ್ಯಮಗಳ ಸೃಷ್ಟಿ. ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಅಂತ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ನಾನೇಕೆ 2 ಕಡೆ ಸ್ಪರ್ಧೆ ಮಾಡಲಿ?
ನಾನೇಕೆ ಎರಡು ಕ್ಷೇತ್ರಗಳಲ್ಲಿ ನಿಲ್ಲಲಿ? ನನ್ನ ಕ್ಷೇತ್ರ ಹೊಳೇನರಸೀಪುರ. ಅಲ್ಲಿನ ಜನ ನನ್ನನ್ನು 30 ವರ್ಷ ಸಾಕಿದ್ದಾರೆ. ನನ್ನ ಆದ್ಯತೆ ಹೊಳೆನರಸೀಪುರ. ಆ ಕ್ಷೇತ್ರವನ್ನು, ಅಲ್ಲಿನ ಜನರನ್ನು ಯಾವತ್ತೂ ಬಿಡುವ ಪ್ರಶ್ನೆಯೇ ಇಲ್ಲ ಅಂತ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.
ಹಾಸನದಲ್ಲಿ ಭವಾನಿ ರೇವಣ್ಣ ಗೆಲ್ಲೋದಿಲ್ಲ: ಕೊನೆಗೂ ಸತ್ಯ ಬಾಯ್ಬಿಟ್ಟ ಕುಮಾರಸ್ವಾಮಿ
‘ಭವಾನಿ ಅವರು ಹಾಸನದಲ್ಲಿ ಗೆಲ್ಲುವುದಿಲ್ಲ ಎಂಬ ಕುಮಾರಸ್ವಾಮಿಯವರ ಸರ್ವೇ ಬಗ್ಗೆ ನನಗೇನೂ ಗೊತ್ತಿಲ್ಲ’ ಎಂದು ತಿರುಗೇಟು ನೀಡಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ, ಹಾಸನ ಟಿಕೆಟ್ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ತೀರ್ಮಾನವೇ ಅಂತಿಮ. ನಾನು ಅವರ ಮಾತು ಮೀರಿ ಎಂದೂ ಹೋಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕುಟುಂಬ ಸಮೇತರಾಗಿ ತಾಲೂಕಿನ ಆನೇಕೆರೆಯಲ್ಲಿ ನಡೆದ ದೊಡ್ಡಮ್ಮ, ಚಿಕ್ಕಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಬಳಿಕ, ಸುದ್ದಿಗಾರರ ಜೊತೆ ಅವರು ಮಾತನಾಡಿದರು. ‘ಆರು ತಿಂಗಳ ಹಿಂದೆಯೇ ನನ್ನ ನಿರ್ಣಯ ಏನು ಅಂತ ಹೇಳಿದ್ದೇನೆ. ಜಿಲ್ಲೆಯಲ್ಲಿ 7 ಕ್ಷೇತ್ರಗಳನ್ನು ಗೆಲ್ಲಬೇಕು, ನಮ್ಮ ಜನ ಉಳಿಯಬೇಕು ಎಂಬ ಉದ್ದೇಶದಿಂದ ಜನವರಿಯಲ್ಲೇ ಹಾಸನದ ಟಿಕೆಟ್ ವಿಚಾರದ ಬಗ್ಗೆ ತೀರ್ಮಾನ ಮಾಡಿಯಾಗಿದೆ. ಹಾಸನ ಕ್ಷೇತ್ರದಲ್ಲಿ ಸ್ಪರ್ಧೆ ಮಾಡೋ ಸಾಮಾನ್ಯ ಕಾರ್ಯಕರ್ತ ಯಾರು ಅಂತ ದೇವೇಗೌಡರು ತೀರ್ಮಾನಿಸುತ್ತಾರೆ’ ಎಂದರು. ಇದೇ ವೇಳೆ, ಸ್ವರೂಪ್ ಬಗ್ಗೆ ಪ್ರತಿಕ್ರಿಯಿಸಿ, ಅವರು ಸಾಮಾನ್ಯ ಕಾರ್ಯಕರ್ತರಲ್ಲ. ಈ ಹಿಂದೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ ಅಧಿಕಾರ ಅನುಭವಿಸಿದವರು ಎಂದು ಹರಿಹಾಯ್ದರು.
ಕಾಂಗ್ರೆಸ್ ಸೇರಿದ ಶಿವಲಿಂಗೇಗೌಡ: ಜೆಡಿಎಸ್‌ನಲ್ಲಿ ಪ್ರಶ್ನೆ ಮಾಡಿದ್ದಕ್ಕೆ ಉಚ್ಛಾಟನೆ
ಇದೇ ವೇಳೆ, ಎರಡು ಕ್ಷೇತ್ರಗಳಲ್ಲಿ ನಿಲ್ಲುವ ಸಾಧ್ಯತೆಯನ್ನು ತಳ್ಳಿಹಾಕಿದ ಅವರು, ‘ನಾನೇಕೆ ಎರಡು ಕ್ಷೇತ್ರಗಳಲ್ಲಿ ನಿಲ್ಲಲಿ?. ನನ್ನ ಕ್ಷೇತ್ರ ಹೊಳೇನರಸೀಪುರ. ಅಲ್ಲಿನ ಜನ ನನ್ನನ್ನು 30 ವರ್ಷ ಸಾಕಿದ್ದಾರೆ. ನನ್ನ ಮೊದಲ ಆದ್ಯತೆ ಹೊಳೆನರಸೀಪುರ. ಆ ಕ್ಷೇತ್ರವನ್ನು, ಅಲ್ಲಿನ ಜನರನ್ನು ಯಾವತ್ತೂ ಬಿಡುವ ಪ್ರಶ್ನೆಯೇ ಇಲ್ಲ. ಜಿಲ್ಲೆಯ 7 ಸ್ಥಾನಗಳನ್ನು ಗೆದ್ದು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ’ ಎಂದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.