Asianet Suvarna News Asianet Suvarna News

ಕಾಂಗ್ರೆಸ್‌ ಸೇರಿದ ಶಿವಲಿಂಗೇಗೌಡ: ಜೆಡಿಎಸ್‌ನಲ್ಲಿ ಪ್ರಶ್ನೆ ಮಾಡಿದ್ದಕ್ಕೆ ಉಚ್ಛಾಟನೆ

ಜೆಡಿಎಸ್‌ನಲ್ಲಿ ಪ್ರಶ್ನೆ ಮಾಡಿದ ಶಿವಲಿಂಗೇಗೌಡರನ್ನು ಉಚ್ಛಾಟನೆ ಮಾಡಲಾಗಿದೆ. ಅರಸೀಕೆರೆಗೆ ನೀರು ತಂದಿಕೊಟ್ಟ ಸ್ವಾಭಿಮಾನಿಯನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿ ಎಂದು ಸಿದ್ದರಾಮಯ್ಯ ಹೇಳಿದರು.

Sivalingegowda Join Congress expelled for JDS questioning Siddaramaiah sat
Author
First Published Apr 9, 2023, 10:00 PM IST | Last Updated Apr 9, 2023, 10:00 PM IST

ಹಾಸನ (ಏ.09): ದೇವೇಗೌಡರ ಕುಟುಂಬ ಸದಸ್ಯರು ಹೇಳಿದ ಹಾಗೆ ಕೇಳಿಕೊಂಡು ಬಿದ್ದಿರಬೇಕು. ಆದರೆ, ಇದನ್ನು ಪ್ರಶ್ನೆ ಮಾಡಿದ್ದ ಶಿವಲಿಂಗೇಗೌಡ ಅವರನ್ನು ಕೂಡ ಪಕ್ಷದಿಂದ ಕಿತ್ತು ಎಸೆದಿದ್ದಾರೆ. ಅರಸೀಕೆರೆಗೆ ನೀರು ಕೊಟ್ಟ ಸ್ವಾಭಿಮಾನಿ ಶಿವಲಿಂಗೇಗೌಡರನ್ನು ನೀವು ಗೆಲ್ಲಿಸುವ ಮೂಲಕ ದೇವೇಗೌಡರ ಕುಟುಂಬಕ್ಕೆ ಪಾಠ ಕಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಾಜಿ ಶಾಸಕ ಶಿವಲಿಂಗೇಗೌಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಅವರು, ಅರಸೀಕೆರೆ ಕ್ಷೇತ್ರಕ್ಕೆ ಕುಡಿಯೋ ನೀರು ಸಿಕ್ಕಿದ್ದರೆ ಶಿವಲಿಂಗೇಗೌಡ ಕಾರಣ ಬೇರೆ ಯಾರು ಅಲ್ಲ. ಅವರು ಒತ್ತಾಯ ಮಾಡಿದ್ದರಿಂದ ಕಾಂಗ್ರೆಸ್ ಸರ್ಕಾರ ಅನುದಾನ ಮಂಜೂರು ಮಾಡಿತ್ತು. ಎತ್ರಿನಹೊಳೆ ಯೋಜನೆ ಉದ್ಘಾಟನೆ ಗೆ ಕುಮಾರಸ್ವಾಮಿ ರೇವಣ್ಣರನ್ನ ಕರೆದಿದ್ದೊ ಅವರು ವಿರೋಧ ಮಾಡಿ ಬರಲಿಲ್ಲ. ಶಿವಲಿಂಗೇಗೌಡ ಅವರು ಅರಸೀಕೆರೆ ಸೇರಿಸಿ ಎಂದು ಹೇಳಿದ್ರು, ಮೊದಲು ಅರಸೀಕೆರೆ ಮೂಲ ಯೋಜನೆಯಲ್ಲಿ ಇರಲಿಲ್ಲ. ಕುಮಾರಸ್ವಾಮಿ ಅವರು ಯೋಜನೆ ವಿರೋಧಿಸಿದ್ದರು. ಹಣ ಹೊಡೆಯೋಕೆ ಮಾಡ್ತಾ ಇದಾರೆ ಎಂದಿದ್ದರು ಅವರ ಮಾತಿಗೆ ನಾನು ಸೊಪ್ಪು ಹಾಕಲಿಲ್ಲ. ಯೋಜನೆ ಜಾರಿ ಆಗಿ ಈಗಲೂ ಕುಂಟುತ್ತಾ ಸಾಗುತ್ತಿದೆ. ನಾವು ಅಧಿಕಾರ ಬಿಟ್ಟಮೇಲೆ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿದೆ. ಕುಮಾರಸ್ವಾಮಿ ಅವರಿಗೆ ಈಗಲೂ ಆ ಯೋಜನೆ ಬಗ್ಗೆ ನಂಬಿಕೆ ಇಲ್ಲ. ಎಲ್ಲಾ ಗೊತ್ತಿದ್ದು ಕಾಂಗ್ರೆಸ್‌ಗೆ ಒಳ್ಳೆ ಹೆಸರು ಬರುತ್ತೆ ಎಂದು ವಿರೋಧ ಮಾಡಿರಬಹುದು ಎಂದು ಹೇಳಿದರು.

ಕಾಂಗ್ರೆಸ್‌ಗೆ ಸೆಡ್ಡುಹೊಡೆದು ಬಿಜೆಪಿ ಸೇರಿದ ನಾಗರಾಜ್‌ ಛಬ್ಬಿ: ಸಂತೋಷ್‌ ಲಾಡ್‌ಗೆ ಪೈಪೋಟಿ

ಜೆಡಿಎಸ್‌ನಲ್ಲಿ ಉಸಿರುಗಟ್ಟಿಸುವ ವಾತಾವರಣ: ಜೆಡಿಎಸ್ ನಲ್ಲಿ ಅವರಿಗೆ ಉಸಿರುಗಟ್ಟಿಸುವ ವಾತಾವರಣ ಇತ್ತು. ಜೆಡಿಎಸ್‌ನಲ್ಲಿ ದೇವೇಗೌಡರ ಕುಟುಂಬದವರು ಹೇಳಿದ್ದನ್ನು ಕೇಳಿಕೊಂಡು ಬಿದ್ದಿರಬೇಕು. ಪ್ರಶ್ನೆ ಮಾಡಿದರೆ ಯಾರು ಉಳಿಯಲು ಸಾಧ್ಯವಿಲ್ಲ. ಶಿವಲಿಂಗೇಗೌಡ ಕೂಡ ಬಹುಶ ಪ್ರಶ್ನೆ ಮಾಡಿರಬೇಕು. ಅದಕ್ಕೆ ಹೊರಗೆ ಎಸೆದಿದ್ದಾರೆ. ಈ ಹಿಂದೆ ನಾನು ಕೂಡ ಪ್ರಶ್ನೆ ಮಾಡಿದ್ದಕ್ಕೆ ತೆಗೆದು ಎಸೆದುಬಿಟ್ಟರು. ನಾನು ಜೆಡಿಎಸ್ ಬಿಟ್ಟಾಗ ಸೊನಿಯಾ ಗಾಂದಿಯವರು ಬಂದು ಪಕ್ಷಕ್ಕೆ ಸೇರಿಸಿಕೊಂಡರು ಎಂದು ತಾವು ಜೆಡಿಎಸ್‌ನಿಂದ ಹೊರಗೆ ಬಂದ ಬಗ್ಗೆ ಮಾಹಿತಿ ಬಿಚ್ಚಿಟ್ಟರು.

ಕಾಂಗ್ರೆಸ್‌ನಿಂದ ಹಾಲಿಗೆ ಹಾಕುವ ಕೆಲಸ:  ಶಿವಲಿಂಗೇಗೌಡ ಹಾಲಿಗಾದರು ಹಾಕಿ ನೀರಿಗಾದರೂ ಹಾಕಿ ಅಂದಿದಾರೆ. ಕಾಂಗ್ರೆಸ್ ಯಾವತ್ತು ನೀರಿಗೆ ಹಾಕಲ್ಲ ಹಾಲಿಗೆ ಹಾಕೋದು. ನಾವೆಲ್ಲ ನಿಮ್ಮ ಜೊತೆ ಇದೀವಿ, ಶಿವಲಿಂಗೇಗೌಡ ಈಗ ನಮ್ಮ ಮನೆ ಸದಸ್ಯ. ನಿಮ್ಮ ಯೋಗಕ್ಷೇಮ ಚನ್ನಾಗಿ ನೋಡಿಕೊಳ್ಳುತ್ತೇವೆ. ಜೊತೆಗೆ, ಕ್ಷೇತ್ರದ ಯೋಗಕ್ಷೇಮ ಕೂಡ ನೋಡ್ಕೊತಿವಿ. ಶಿವಲಿಂಗೇಗೌಡ ಅವರಿಗೆ ಟಿಕೆಟ್‌ ಕೊಡಿಸಿಯೇ ಕೊಡಿಸ್ತೇವೆ ಗೆಲ್ಲಿಸೊ ಕೆಲಸ ನಿಮ್ಮದು. ನೀವು ಗೆಲ್ಲಿಸಿದರೆ ನಿಮ್ಮ ಸ್ವಾಭಿಮಾನ ರಕ್ಷಣೆ ಮಾಡಿದಂತೆ. ಶಿವಲಿಂಗೇಗೌಡರನ್ನು ಸಚಿವರನ್ನಾಗಿ ಮಾಡಿ ಎಂದು ಹೇಳುತ್ತಿದ್ದೀರಿ, ಅದಕ್ಕೂ ಮೊದಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.

Bengaluru Crime: ಕುದುರೆ ಮೇಲೆ ಕೂರಿಸಲಿಲ್ಲವೆಂದು ಅಪ್ರಾಪ್ತ ಬಾಲಕನ ಕೊಲೆ!

ಭರವಸೆ ಈಡೇರಿಸದಿದ್ದರೆ 1 ಸೆಕೆಂಡ್‌ ಅಧಿಕಾರದಲ್ಲಿರೊಲ್ಲ:  ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರು ಅಧಿಕಾರಕ್ಕೆ ಬರುತ್ತದೆ. ಈ ರಾಜ್ಯದ ಜನರು ಈ ಸರ್ಕಾರದ ಆಡಳಿತ ದಿಂದ ಬೇಸತ್ತು ಹೋಗಿದ್ದಾರೆ. ಅವರು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ನಾವು ಕೊಟ್ಟ ಭರವಸೆ ಈಡೇರಿಸಲು ಆಗಲ್ಲ ಎಂದು ಹೇಳುತ್ತಿದ್ದಾರೆ. ನಾವು ಕೊಟ್ಟ ಭರವಸೆ ಈಡೇರಿಸಲು ಆಗದಿದ್ದರೆ ಒಂದು ಸೆಕೆಂಡ್ ಕೂಡ ಅಧಿಕಾರದಲ್ಲಿ ಇರಲ್ಲ. ನಾವು ನುಡಿದಂತೆ ನಡೆಯುತ್ತೇವೆ. ನಾವು ನೂರಕ್ಕೆ ನೂರು ಕೊಟ್ಟ ಮಾತು ಈಡೇರಿಸುತ್ತೇನೆ. ಒಂದುವೇಳೆ ನಾವು ಕೊಟ್ಟ ಮಾತು ಈಡೇರಿಸಲು ಆಗದಿದ್ದರೆ ನಿಮಗೆ ನಮಸ್ಕಾರ ಮಾಡಿ ನಿವೃತ್ತಿ ಆಗುತ್ತೇವೆ ಎಂದ ಸಿದ್ದರಾಮಯ್ಯ ಹೇಳಿದರು.

Latest Videos
Follow Us:
Download App:
  • android
  • ios