ಶಿವಲಿಂಗೇಗೌಡರು ಸಚಿವರು ಆಗಲಿಲ್ಲ. ಹೀಗಾಗಿ ಹಾಸನ ಜಿಲ್ಲೆಯ ಉಸ್ತುವಾರಿ ಖಾಲಿ ಇದೆ ಎಂಬ ಕಾರಣಕ್ಕೆ ನನಗೆ ಈ ಜಿಲ್ಲೆಯ ಉಸ್ತುವಾರಿ ವಹಿಸಿದ್ದಾರೆ: ಸಹಕಾರ ಸಚಿವ ಕೆ.ಎನ್‌.ರಾಜಣ್ಣ 

ಹಾಸನ(ಜೂ.18): ನನಗೆ ಹಾಸನ ಜಿಲ್ಲೆಯ ಉಸ್ತುವಾರಿ ಸಿಗಲು ಕಾರಣವೇನು ಎಂಬುದು ಗೊತ್ತಿಲ್ಲ. ಈ ಕುರಿತು ನಿರೀಕ್ಷೆಯನ್ನೇ ಮಾಡಿರಲಿಲ್ಲ. ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರು ಸಚಿವರಾಗುತ್ತಿದ್ದರೆ ಅವರೇ ಉಸ್ತುವಾರಿ ಆಗಿರುತ್ತಿದ್ದರು ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದರು. 

ಶನಿವಾರ ಮಾಧ್ಯಮದ ಜತೆಗೆ ಮಾತನಾಡಿ, ಶಿವಲಿಂಗೇಗೌಡರು ಸಚಿವರು ಆಗಲಿಲ್ಲ. ಹೀಗಾಗಿ ಹಾಸನ ಜಿಲ್ಲೆಯ ಉಸ್ತುವಾರಿ ಖಾಲಿ ಇದೆ ಎಂಬ ಕಾರಣಕ್ಕೆ ನನಗೆ ಈ ಜಿಲ್ಲೆಯ ಉಸ್ತುವಾರಿ ವಹಿಸಿದ್ದಾರೆ ಎಂದು ತಿಳಿಸಿದರು. ಇಲ್ಲಿರುವ ಎಲ್ಲರೂ ನೆಮ್ಮದಿಯಿಂದ ಜೀವನ ನಡೆಸುವ ವಾತಾವರಣ ಸೃಷ್ಟಿಸುವುದು ನನ್ನ ಉದ್ದೇಶ. ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ 2013ರಿಂದ 2018ರವರೆಗೂ ಇದ್ದರೂ ಈ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪ್ರತಿನಿ​ಧಿಗಳು ಇರಲಿಲ್ಲ. ಅಭಿವೃದ್ಧಿ ವಿಚಾರದಲ್ಲೂ ಸಾಕಷ್ಟು ತಾರತಮ್ಯ ಆಗಿದೆ ಎಂದರು.

ದೇವೇಗೌಡ್ರು ಮಧುಗಿರಿಗೆ ಬಂದು ಎದೆ ಬಡಕೊಂಡ್ರೂ ನನ್ನ ಸೋಲಿಸಲಾಗಲಿಲ್ಲ: ಕೆಎನ್ ರಾಜಣ್ಣ

ಒಂದು ಕ್ಷೇತ್ರಕ್ಕೆ ಮಾತ್ರ ಅಭಿವೃದ್ಧಿ ಮಾಡಿ ಇನ್ನೊಂದು ಕ್ಷೇತ್ರದ ಅಭಿವೃದ್ಧಿ ಕುಂಠಿತ ಆಗಿರುವುದು ಕಂಡು ಬಂದಿದೆ ಎಂಬ ದೂರು ಕೂಡ ಇದೆ ಎಂದು ಅವರ(ಜೆಡಿಎಸ್‌) ಪಕ್ಷದವರೇ ದೂರಿರುವ ಸಂದರ್ಭ ಇದೆ. ಹಿಂದಿನ ಲೋಪ, ಆರೋಪಗಳ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ಕೊಡುವುದಿಲ್ಲ. ಮುಂದೆ ನಮ್ಮ ಅವ​ಧಿಯಲ್ಲಿ ಜನರಿಗೆ ಉತ್ತಮ ಆಡಳಿತ ಕೊಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು.