ಚುನಾವಣಾ ವೇಳೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ನನ್ನ ಕ್ಷೇತ್ರ ಮಧುಗಿರಿಗೆ ಬಂದು ಎದೆ ಬಡಿದುಕೊಂಡರೂ ನನ್ನನ್ನು ಸೋಲಿಸಲಾಗಲಿಲ್ಲ ಎಂದು ಸಹಕಾರ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಜೆಡಿಎಸ್‌ ಕುಟುಂಬದ ಮೇಲೆ ಹರಿಹಾಯ್ದರು.

ಹಾಸನ (ಜೂ.13) ಚುನಾವಣಾ ವೇಳೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ನನ್ನ ಕ್ಷೇತ್ರ ಮಧುಗಿರಿಗೆ ಬಂದು ಎದೆ ಬಡಿದುಕೊಂಡರೂ ನನ್ನನ್ನು ಸೋಲಿಸಲಾಗಲಿಲ್ಲ ಎಂದು ಸಹಕಾರ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಜೆಡಿಎಸ್‌ ಕುಟುಂಬದ ಮೇಲೆ ಹರಿಹಾಯ್ದರು.

ನಗರದ ಜಿಲ್ಲಾ ಕಾಂಗ್ರೆಸ್‌ ಭವನದ ಆವರಣದಲ್ಲಿ ನಡೆದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು(HD Devegowda) ನನ್ನ ಕ್ಷೇತ್ರ ಮಧುಗಿರಿಗೆ ಬಂದು ಎದೆ ಬಡಿದುಕೊಂಡರು ನನ್ನನ್ನು ಸೋಲಿಸಲಾಗಲಿಲ್ಲ. ಶಿವಲಿಂಗೇಗೌಡರಿಗೂ ಕೂಡ ದೇವೇಗೌಡರು ಮತ್ತು ಅವರು ಮಕ್ಕಳು ರಾಹುಕೇತು ಆಗಿದ್ದರು. ನಾನು ಶಿವಲಿಂಗೇಗೌಡ ಇಬ್ಬರು ಜನರ ನಡುವೆ ಇದ್ದುದರಿಂದ ನಾನು 36 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದೇವೆ. ಇನ್ನೂ ಜಿಲ್ಲೆಯಲ್ಲಿ ಜೆಡಿಎಸ್‌ ದಬ್ಬಾಳಿಕೆಗೆ ಹೆದರಿ ಮತ ನೀಡಿದ್ದಾರೆ.

ಅಭಿಮಾನಿಗಳು ಹಚ್ಚಿದ ಪಟಾಕಿ ಸಿಡಿದು ಸಚಿವ ರಾಜಣ್ಣ ಕಣ್ಣಿಗೆ ಗಾಯ

ಕಡಿಮೆ ಮತಗಳ ಅಂತರದಿಂದ ಕೆಲವರು ಗೆದ್ದಿರುವುದನ್ನು ನೋಡಿ ಜನ ಈಗ ಯಾರಿಗೂ ಹೆದರುವುದಿಲ್ಲ . ನಾವು ದೊಡ್ಡ ಸಮಾಜದ ಕಡೆ ಗಮನಕೊಡದೆ ಮಧ್ಯಮ ವರ್ಗ ಹಾಗೂ ಸಣ್ಣ ಸಮಾಜವನ್ನು ನೋಡಬೇಕು. ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿಗೆ ಭೇಟಿ ನೀಡಿ ಎಲ್ಲಾ ಮುಖಂಡರ ಜೊತೆ ವೈಯಕ್ತಿಕವಾಗಿ ಮಾತನಾಡಿ ಪಕ್ಷಕ್ಕೆ ಶಕ್ತಿ ತರುವುದಾಗಿ ಕೆಲಸ ಮಾಡುತ್ತೆನೆ ಎಂದರು.

ರಾಜ್ಯದಲ್ಲಿ ಶೇ. 99 ರಷ್ಟುಮುಸ್ಲಿಂ ಸಮುದಾಯವರು ನಮಗೆ ಮತ ನೀಡಿದ್ದಾರೆ. ನಾವು ಅವರನ್ನು ಸುಮ್ಮನೆ ದುಡಿಸಿಕೊಳ್ಳದೇ ಅವರಿಗೂ ಕೆಲಸ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ನಾನು ಸಚಿವ ಹಾಗೂ ಉಸ್ತುವಾರಿ ಸಚಿವ ಅದು ಸರ್ಕಾರಕ್ಕೆ ಸಂಬಂದಪಟ್ಟರುವುದು. ಆದರೆ ನಾನು ಇಲ್ಲಿ ಸಾಮಾನ್ಯ ಕಾಂಗ್ರೆಸ್‌ ಕಾರ್ಯಕರ್ತ. ನಾನು ಕಾರ್ಯಕರ್ತರನಾಗಿದ್ದಾಗ ಸಚಿವರು ಹಾಗೂ ಸರ್ಕಾರದ ಬಳಿ ಎನು ನಿರೀಕ್ಷೆ ಮಾಡುತ್ತಿದ್ದೆ ಅದೆ ರೀತಿ ಕಾಂಗ್ರೆಸ್‌ ಕಾರ್ಯಕರ್ತರ ನಿರೀಕ್ಷೆ ಇರುತ್ತದೆ ಎಂದರು. ಕಾಂಗ್ರೆಸ್‌ ಪಕ್ಷದ ಮುಖಂಡರ ಭಾವನೆಗಳಿಗೆ ದಕ್ಕೆ ಭಾರದಂತೆ ನಾನು ಕೆಲಸ ಮಾಡುತ್ತೆನೆ.

ಹಾಸನ ಜಿಲ್ಲೆಯ ಕಾರ್ಯಕರ್ತರು ಮುಖಂಡರು ಚುನಾವಣೆಯಲ್ಲಿ ಸೋತ ಕಾರಣ ದೃತಿ​ಗೆÜಡುವ ಅವಶ್ಯಕತೆ ಇಲ್ಲ ಧೈರ್ಯ ತುಂಬಿದರು. ಮುಂದೆ ಬರುವ ಜಿಪಂ ಮತ್ತು ತಾಪಂ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಹೆಚ್ಚಿನ ಸ್ಥಾನ ಜಯಗಳಿಸಲು ಸಂಕಲ್ಪ ಮಾಡಬೇಕು.

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 20 ಸೀಟುಗಳಾನ್ನಾದರೂ ಕಾಂಗ್ರೆಸ್‌ ಪಕ್ಷ ಗೆಲ್ಲಲೇಬೇಕು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟು ಜಿಲ್ಲೆಯ ಕಾರ್ಯಕರ್ತರ ಮುಖಂಡರ ನಿರೀಕ್ಷೆ ಮೀರಿ ಕೆಲಸ ಮಾಡುವುದಾಗಿ ಹೇಳಿದರು.

ಪ್ರಧಾನಿ ಮೋದಿ ಅವರು ಹೇಳಿದಂತೆ ಉದ್ಯೋಗ ಕೊಟ್ಟಿಲ್ಲ. ಅದನ್ಯಾರೂ ಕೇಳಲ್ಲ. ಆದರೆ ಕೆಲಸ ಮಾಡುವವರನ್ನು ಮಾತ್ರ ಎಲ್ಲಿ ಮಾಡಲಿಲ್ಲ ಎಂದು ಕೇಳುತ್ತಾರೆ. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ 123 ಸೀಟು ಬರಲಿಲ್ಲ. ಅಂದರೆ ವಿಸರ್ಜನೆ ಮಾಡುತ್ತೇನೆ ಎಂದಿದ್ದರು. ಆದರೆ ಆ ರೀತಿ ಅವರು ಮಾಡಲಿಲ್ಲ. ಕುಮಾರಸ್ವಾಮಿ ಒಂದೊಂದು ಬಾರಿ ಒಂದೊದು ಬಣ್ಣ ಹಾಕುತ್ತಾನೆ. ಕಳೆದ ಬಾರಿ ಕಾಂಗ್ರೆಸ್‌ ಜೊತೆ ಬಂದು ಈ ಬಾರಿ ಬಿಜೆಪಿ ಜೊತೆ ಬರುತ್ತಾನೆ ಎಂದು ಟಾಂಗ್‌ ನೀಡಿದರು.

ಈ ಸಂದರ್ಭದಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ, ಮಾಜಿ ಶಾಸಕ ಸಿ.ಎಸ್‌. ಪುಟ್ಟೇಗೌಡ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಲಕ್ಷತ್ರ್ಮಣ್‌, ಹೆಚ್‌.ಕೆ. ಜವರೇಗೌಡ, ಎಚ್‌.ಕೆ. ಮಹೇಶ್‌, ಶ್ರೇಯಸ್‌ ಪಟೇಲ್‌, ದೇವರಾಜೇಗೌಡ, ಬಿ. ಶಿವರಾಂ, ಬನವಾಸೆ ರಂಗಸ್ವಾಮಿ, ಪಟೇಲ್‌ ಶಿವಪ್ಪ, ಅನೀಲ್‌ ಕುಮಾರ್‌, ಬಿ.ಪಿ. ಮಂಜೇಗೌಡ ಇತರರು ಉಪಸ್ಥಿತರಿದ್ದರು.

ಸಹಕಾರಿ ಸಂಘ ಒಂದು ಪಕ್ಷದ್ದು, ವ್ಯಕ್ತಿಯದ್ದಲ್ಲ

ಜಿಲ್ಲೆಯ ಕಾರ್ಯಕರ್ತರು ಹಾಗೂ ಮುಖಂಡರು ಸಹಕಾರಿ ಬ್ಯಾಂಕುಗಳಲ್ಲಿ ನಮಗೆ ನ್ಯಾಯ ಸಿಗುತ್ತಿಲ ಎಂದು ನಮಗೆ ತಿಳಿಸಿದ್ದಾರೆ. ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ನಾನು ತುಮಕೂರು ಜಿಲ್ಲೆ ಡಿಸಿಸಿ ಬ್ಯಾಂಕ್‌ ನ ಅಧ್ಯಕ್ಷನಾಗಿ ಸಾಲ ವಿತರಣೆಯಲ್ಲಿ ತಾರತಮ್ಯವನ್ನು ಎಂದು ಮಾಡಿಲ್ಲ ಮಾಡುವುದಿಲ್ಲ. ಸಾಲ ಪಡೆಯಲು ಅರ್ಹತೆ ಇರುವರಿಗೆ ಸಾಲ ನೀಡಬೇಕು. ಸಹಕಾರಿ ಬ್ಯಾಂಕುಗಳು ಯಾವುದೇ ಪಕ್ಷದ ಹಾಗೂ ವ್ಯಕ್ತಿಯದಲ್ಲ ಎಂದು ಪರೋಕ್ಷವಾಗಿ ಎಚ್‌.ಡಿ. ರೇವಣ್ಣನವರ ವಿರುದ್ಧ ಕಿಡಿಕಾರಿದರು.

ಚುನಾವಣೆಯ ವೇಳೆ ಹೇಳಿದ ರೀತಿಯಲ್ಲಿ ಗ್ಯಾರಂಟಿ ಜಾರಿ ಇಲ್ಲ: ಸಚಿವ ರಾಜಣ್ಣ

ಕಾರ್ಯಕರ್ತರ ಅಸಮಾಧಾನ

ಸಭೆಯ ವೇಳೆ ಜಿಲ್ಲಾ ಉಸ್ತುವಾರಿ ಸಚಿವರ ಎದುರು ಕಾಂಗ್ರೆಸ್‌ ಮುಖಂಡರ ವಿರುದ್ಧವಾಗಿ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್‌ ಜೊತೆ ಹೋಗಿ ಕಾಂಗ್ರೆಸ್‌ ಪಕ್ಷಕ್ಕೆ ದ್ರೋಹ ಬಗೆದವರನ್ನು ವೇದಿಕೆಯಿಂದ ಕೆಳಗೆ ಇಳಿಸುವಂತೆ ಆಗ್ರಹಿಸಿ ಕೂಗಾಟ ಮಾಡಿದಾಗ ಖುದ್ದಾಗಿ ಸಚಿವರೇ ಸಮಾಧಾನ ಮಾಡಿದ ಪ್ರಸಂಗ ನಡೆಯಿತು.