ಮತ್ತೆ ಚುನಾವಣೆಗೆ ಸ್ಪರ್ಧಿಸಲ್ಲ ಅಂತ ಹೇಳಿದ್ದೀನೆಯೇ ಹೊರತು ರಾಜಕೀಯ ನಿವೃತ್ತಿ ತೆಗೆದುಕೊಂಡಿಲ್ಲ: ಬಿಎಸ್‌ವೈ
ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದೇನೆ, ಮತ್ತೆ ಚುನಾವಣೆಗೆ ಸ್ಪರ್ಧಿಸಲ್ಲ ಅಂತ ಹೇಳಿದ್ದೀನೆಯೇ ಹೊರತು ರಾಜಕೀಯ ನಿವೃತ್ತಿ ತೆಗೆದುಕೊಂಡಿಲ್ಲ. ನನ್ನ ಕೊನೆ ಉಸಿರಿರುವವರೆಗೂ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ದಾಬಸ್‌ಪೇಟೆ (ಮಾ.24): ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದೇನೆ, ಮತ್ತೆ ಚುನಾವಣೆಗೆ ಸ್ಪರ್ಧಿಸಲ್ಲ ಅಂತ ಹೇಳಿದ್ದೀನೆಯೇ ಹೊರತು ರಾಜಕೀಯ ನಿವೃತ್ತಿ ತೆಗೆದುಕೊಂಡಿಲ್ಲ. ನನ್ನ ಕೊನೆ ಉಸಿರಿರುವವರೆಗೂ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ತ್ಯಾಮಗೊಂಡ್ಲು ಹೋಬಳಿಯ ದೊಡ್ಡೇರಿ ಗ್ರಾಮದ ಸಮಾಧಾನ ಮಠದಲ್ಲಿ ಹಮ್ಮಿಕೊಂಡಿದ್ದ ಮೌನತಪಸ್ವಿ ಜಡೆಯ ಶಾಂತಲಿಂಗೇಶ್ವರ ಸ್ವಾಮೀಯ 81ನೇ ವರ್ಧಂತಿ, ಧ್ಯಾನ ಮಂದಿರ, ಮುಪ್ಪಿನ ಮನೆ, ಆರ್ಯುವೇದ ಚಿಕಿತ್ಸೆ ಯೋಗ ಸಾಧನಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ವಿರೋಧ ಪಕ್ಷದವರು ಯಡಿಯೂರಪ್ಪನವರನ್ನು ಮೋದಿ ಸರ್ಕಾರ ನಿರ್ಲಕ್ಷ್ಯ ಮಾಡಿ ಅಧಿಕಾರದಿಂದ ಇಳಿಸಿತು ಎಂದು ಅಪಪ್ರಚಾರ ನಡೆಸುತ್ತಿದ್ದಾರೆ. ಇದು ಸುಳ್ಳು, ನಾನು ನನ್ನ ಸ್ವಂತ ತೀರ್ಮಾನದಿಂದ್ಲೇ ಈ ನಿರ್ಧಾರ ತೆಗೆದುಕೊಂಡು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದಿರುವುದು. ಯಾರು ಒತ್ತಡದಿಂದ ನನ್ನನ್ನು ಅಧಿಕಾರದಿಂದ ಇಳಿಸಲಿಲ್ಲ. ನನಗೆ ಜಾತಿ, ಧರ್ಮ ಗೊತ್ತಿಲ್ಲ. ಎಲ್ಲರೂ ಗೌರವ ನೆಮ್ಮದಿಯಿಂದ ಬಾಳಬೇಕು. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ನನ್ನ ನೇತೃತ್ವದಲ್ಲಿ ನೀರಾವರಿಗೆ ಒತ್ತು ನೀಡಿದ್ದೇವೆ. ಬೇಸಿಗೆಯಲ್ಲೂ ಕೆರೆ ತುಂಬುವ ಕೆಲಸ ಮಾಡಿದ್ದೇವೆ. 10 ಲಕ್ಷ ಮಕ್ಕಳಿಗೆ ಭಾಗ್ಯಲಕ್ಷ್ಮೇ ಯೋಜನೆ ಸದುಪಯೋಗವಾಗಿದೆ ಎಂದು ಹೇಳಿದರು.
100 ಅಡಿ ಏಕಶಿಲಾ ಕೆಂಪೇಗೌಡರ ಕಲ್ಲಿನ ಪ್ರತಿಮೆ: ಸಚಿವ ಮುನಿರತ್ನ
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ಮಾರಾಟಕ್ಕೇ ಇಲ್ಲದಿರುವುದು ಸಮಾಧಾನ, ನೆಮ್ಮದಿ. ಅದನ್ನು ಅವರವರೇ ಪಡೆದುಕೊಳ್ಳಬೇಕಿದೆ. ಅವರ ಮಾನಸಿಕ ಸ್ಥಿತಿ, ಸಾಧನೆ, ಅರಿಷಡ್ವರ್ಗಗಳಿಂದ ಪಡೆದುಕೊಳ್ಳಬಹುದು. ಅದನ್ನು ಪೂಜ್ಯರು ಪಡೆದುಕೊಂಡಿದ್ದಾರೆ. ಅದನ್ನು ಭಕ್ತರಿಗೆ ಇದೀಗ ದಾನ ಎರೆಯುತ್ತಿದ್ದಾರೆ. ನಾಡಿನ ಮಠಮಾನ್ಯಗಳು, ಸಂತರು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು. ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ನಾಡಿನ ಸಂಸ್ಕೃತಿ, ಧರ್ಮ ಉಳಿಯುವುದಾದರೆ ಪ್ರತಿಯೊಂದು ಮಠವನ್ನು ನಂಬಿರುವ ಭಕ್ತರು ಕೂಡ ಸುಸಂಸ್ಕೃತರಾಗುತ್ತಾರೆ.
ಎಸ್‌ಸಿ, ಎಸ್‌ಟಿ ಮೀಸಲು ಹೆಚ್ಚಳ ಶೆಡ್ಯೂಲ್ 9ಕ್ಕೆ ಸೇರಿಸಿ: ಕೇಂದ್ರಕ್ಕೆ ರಾಜ್ಯದಿಂದ ಪತ್ರ
ಜಗತ್ತಿನಲ್ಲಿರುವ 200 ದೇಶಗಳಲ್ಲಿ ಒಂದೊಂದು ದೇಶಕ್ಕೂ ಒಂದೊಂದು ಶಕ್ತಿಯುಂಟು. ಭಾರತ ಅಧ್ಯಾತ್ಮಿಕ ಜ್ಞಾನ ಶಕ್ತಿಯ ಕೇಂದ್ರವಾಗಿದೆ. ಯೋಗ, ಧ್ಯಾನ ಮಾಡುವುದರಿಂದ ಬದುಕಿನಲ್ಲಿ ನಾವು ಸಮಾಧಾನಿಗಳಾಗಬಹುದು ಎಂದು ಹೇಳಿದರು. ಮೌನತಪಸ್ವಿ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಹಿರಿಯ ವಿದ್ವಾಂಸ ಗೊ.ರು.ಚನ್ನಬಸಪ್ಪ, ವಿಶ್ರಾಂತ ಕುಲಪತಿ ಮಲ್ಲೇಪುರ ಜಿ.ವೆಂಕಟೇಶ್, ಬಿಬಿಎಂಪಿ ಮಾಜಿ ಮೇಯರ್ ಪುಟ್ಟರಾಜು, ಮಾಜಿ ಶಾಸಕ ನಾಗರಾಜು, ಜಿಪಂ ಮಾಜಿ ಅಧ್ಯಕ್ಷ ಮರಿಸ್ವಾಮಿ, ನಿರ್ದೇಶಕ ಲಿಂಗರಾಜು, ಮುಖಂಡರಾದ ಅಲ್ಲಂ ವೀರಭದ್ರಪ್ಪ, ಸಪ್ತಗಿರಿ ಶಂಕರ್‌ನಾಯ್‌್ಕ, ವೆಂಕಟೇಶ್ ದೊಡ್ಡೇರಿ, ಶಿವಾನಂದಮೂರ್ತಿ ಮತ್ತಿತರಿದ್ದರು.