Asianet Suvarna News Asianet Suvarna News

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಣಕ್ಕೆ ಇಳಿದಿರುವೆ, ಜನಸೇವೆಗೆ ಬಿಜೆಪಿ ಬೆಂಬಲಿಸಿ: ಬಾಲಚಂದ್ರ ಜಾರಕಿಹೊಳಿ

ಪ್ರಸಕ್ತ ಸಾಲಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದು, ಜನಸೇವೆಗೆ ಮತ್ತೊಮ್ಮೆ ಬಿಜೆಪಿಯನ್ನು ಬೆಂಬಲಿಸಿ ಆಶೀರ್ವಾದ ಮಾಡುವಂತೆ ಅರಭಾವಿ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.

I contested again for development  support BJP says balachandra jarkiholi at belgum rav
Author
First Published Apr 28, 2023, 10:13 AM IST

ಗೋಕಾಕ (ಏ.28) : ಪ್ರಸಕ್ತ ಸಾಲಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದು, ಜನಸೇವೆಗೆ ಮತ್ತೊಮ್ಮೆ ಬಿಜೆಪಿಯನ್ನು ಬೆಂಬಲಿಸಿ ಆಶೀರ್ವಾದ ಮಾಡುವಂತೆ ಅರಭಾವಿ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ(Balachandra jarkiholi) ಮನವಿ ಮಾಡಿದರು.

ತಾಲೂಕಿನ ಕೌಜಲಗಿ ಪಟ್ಟಣದಲ್ಲಿ ಬುಧವಾರ ಜರುಗಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದ ಅವರು, ಸತತ 6ನೇ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವುದಾಗಿ ಅವರು ಹೇಳಿದರು.

ಶೇ.98ರಷ್ಟುಭರವಸೆ ಈಡೇರಿಸಿದ್ದೇನೆ, ಇನ್ನಷ್ಟುಅಭಿವೃದ್ಧಿಗೆ ಕೈ ಜೋಡಿಸಿ : ಲಕ್ಷ್ಮೀ ಹೆಬ್ಬಾಳ್ಕರ್

ಈ ಚುನಾವಣೆಯಲ್ಲಿ ಅಭಿವೃದ್ಧಿ ತತ್ವದಡಿ ಮತಯಾಚಿಸುತ್ತಿರುವೆ. ಅರಭಾವಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಬಿಜೆಪಿ ಅಭ್ಯರ್ಥಿ(BJP candidate )ಯಾಗಿ ಕಣಕ್ಕೆ ಇಳಿದಿದ್ದೇನೆ. ಆದರೆ ಬೇರೆಯವರಂತೆ ವಿನಾಕಾರಣ ಟೀಕಿಸಿ ಮತ ಕೇಳುತ್ತಿಲ್ಲ. ಅರಭಾವಿ ಕ್ಷೇತ್ರದಲ್ಲಿ ಎಲ್ಲದರಲ್ಲೂ ಪ್ರಗತಿ ಸಾಧಿಸಲಾಗಿದೆ. ಶಿಕ್ಷಣ, ನೀರಾವರಿ, ರಸ್ತೆ, ಕುಡಿಯುವ ನೀರು, ಆರೋಗ್ಯ ಮುಂತಾದ ಕ್ಷೇತ್ರಗಳಿಗೆ ಪ್ರಮುಖ ಆದ್ಯತೆ ನೀಡಿದ್ದೇನೆ. ಅದರಲ್ಲೂ ಕೌಜಲಗಿ ಭಾಗದ ರೈತರ ಪ್ರಮುಖ ಬೇಡಿಕೆಯಾಗಿದ್ದ ಕಲ್ಮಡ್ಡಿ ಏತ ನೀರಾವರಿ ಯೋಜನೆಯನ್ನು ಲೋಕಾರ್ಪಣೆ ಮಾಡುವ ಮೂಲಕ ರೈತ ಬಾಂಧವರಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ. ಜೊತೆಗೆ ಶಿಕ್ಷಣ ಕ್ಷೇತ್ರದಲ್ಲೂ ಗಣನೀಯ ಸೇವೆ ಮಾಡಿದ್ದೇನೆ ಎಂದು ಅವರು ತಿಳಿಸಿದರು.

ಕ್ಷೇತ್ರದಲ್ಲಿ ಸಣ್ಣಸಣ್ಣ ಸಮಾಜಗಳನ್ನು ಕ್ರೋಢಿಕರಿಸಲು ಪ್ರಾಮಾಣಿಕ ಸೇವೆ ಮಾಡಿದ್ದೇನೆ. ಎಲ್ಲ ಸಮಾಜಗಳಲ್ಲೂ ಪರಸ್ಪರ ಪ್ರೀತಿ ವಿಶ್ವಾಸವನ್ನು ಮೂಡಿಸಲು ಪ್ರಯತ್ನಿಸಿದ್ದೇನೆ. ಜೊತೆಗೆ ಎಲ್ಲ ಸಮಾಜಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಿದ್ದೇನೆ. ಸರ್ವ ಸಮಾಜಗಳ ನಾಗರಿಕರು ಸಹ ನನ್ನನ್ನು ಒಬ್ಬ ಶಾಸಕನನ್ನಾಗಿ ನೋಡದೇ ತಮ್ಮ ಮನೆಯ ಮಗನಂತೆ ನೋಡುತ್ತಾ ಅಗಾಧ ಪ್ರೀತಿ ವಿಶ್ವಾಸವನ್ನು ತೋರುತ್ತಿದ್ದಾರೆ. ಕ್ಷೇತ್ರದ ಎಲ್ಲ ಮತದಾರ ಪ್ರಭುಗಳಿಗೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದರು.

ರಾಜ್ಯದಲ್ಲಿ ಅರಭಾವಿ ಮತಕ್ಷೇತ್ರವನ್ನು ಇನ್ನಷ್ಟುಅಭಿವೃದ್ಧಿಪಡಿಸಬೇಕಿದೆ. ಅದಕ್ಕಾಗಿ ಈ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಕೆಲವರು ಅಧಿಕಾರ ಇಲ್ಲದೆಯೇ ಏನೇನೋ ಮಾತನಾಡುತ್ತಿದ್ದಾರೆ. ಜನರ ಬಳಿ 5 ವರ್ಷಕ್ಕೊಮ್ಮೆ ಬಂದು ಹೋಗುವ ಮುಖಗಳಿಗೆ ಯಾವುದೇ ಕಾರಣಕ್ಕೂ ಮಣೆ ಹಾಕಬೇಡಿ. ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ವ್ಯಕ್ತಿಗಳಿಗೆ ಆಶೀರ್ವಾದ ಮಾಡಿ. ನಿಮ್ಮ ಸೇವೆಗೆ ನಾನು ಸದಾ ಸಿದ್ಧನಿದ್ದೇನೆ. ಮೇ-10 ರಂದು ನಡೆಯುವ ಚುನಾವಣೆಯಲ್ಲಿ ಶೇಜ ನಂ 5ರ ಮುಂದೆಯಿರುವ ಕಮಲ ಗುರುತಿಗೆ ಬಟನ್‌ ಒತ್ತುವ ಮೂಲಕ ನಿಮ್ಮ ಮನೆಯ ಮಗನ ದಾಖಲೆಯ ವಿಜಯಕ್ಕೆ ಮುನ್ನುಡಿ ಬರೆಯುವಂತೆ ಮನವಿ ಮಾಡಿಕೊಂಡರು.

ಮೀಸಲಾತಿ ಕೇವಲ ರಾಜಕೀಯ ಗಿಮಿಕ್‌: ಸಿದ್ದರಾಮಯ್ಯ

ವಿಠ್ಠಲ ಕುರಗುಂದ, ಪ್ರಮುಖರಾದ ಆರ್‌.ವೈ.ಸಣ್ಣಕ್ಕಿ, ಎಂ.ಆರ್‌.ಭೋವಿ, ಬಿ.ಎ.ಲೋಕನ್ನವರ, ಪರಮೇಶ್ವರ ಹೊಸಮನಿ, ರವೀಂದ್ರ ಪರುಶೆಟ್ಟಿ, ನೀಲಪ್ಪ ಕೇವಟಿ, ಎಸ್‌.ಆರ್‌.ಭೋವಿ, ಅಡಿವೆಪ್ಪ ದಳವಾಯಿ, ಸಿದ್ದಪ್ಪ ಹಳ್ಳೂರ, ಅಶೋಕ ಉದ್ದಪ್ಪನವರ, ಎಂ.ಎನ್‌.ಶಿವನಮಾರಿ, ರಾಯಪ್ಪ ಬಳೋಲದಾರ, ಗಂಗಾಧರ ಲೋಕನ್ನವರ, ಸುಭಾಶ ಕೌಜಲಗಿ, ಹಾಸೀಮ್‌ ನಗಾರ್ಚಿ, ಶಾಂತಪ್ಪ ಹಿರೇಮೇತ್ರಿ, ಮಹಾದೇವ ಬುದ್ನಿ, ಮೆಹಬೂಬಸಾಬ ಮುಲ್ತಾನಿ, ಅಶೋಕ ಹೊಸಮನಿ, ಝಾಕೀರ ಜಮಾದಾರ, ಅಲ್ಲಾಭಕ್ಷ ಹೂನ್ನೂರ, ಬಸು ಜೋಗಿ, ವಿವಿಧ ಸಮಾಜಗಳ ಪ್ರಮುಖರು, ಬಿಜೆಪಿ ಪದಾಧಿಕಾರಿಗಳು, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.

Follow Us:
Download App:
  • android
  • ios