ಬಿಜೆಪಿ ಪಕ್ಷದ ಡಬಲ್‌ ಎಂಜಿನ್‌ ಸರ್ಕಾರ ಓಡಿಸಿ ಈ ಬಾರಿ ಕಾಂಗ್ರೆಸ್‌ ಪಕ್ಷಕ್ಕೆ ಜನಾ​ಶೀ​ರ್ವಾದ ಸಿಗು​ವುದು ನಿಶ್ಚಿ​ತ ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ವಿಶ್ವಾ​ಸ ವ್ಯಕ್ತ​ಪ​ಡಿ​ಸಿ​ದರು. 

ಕನಕಪುರ (ಮೇ.11): ಬಿಜೆಪಿ ಪಕ್ಷದ ಡಬಲ್‌ ಎಂಜಿನ್‌ ಸರ್ಕಾರ ಓಡಿಸಿ ಈ ಬಾರಿ ಕಾಂಗ್ರೆಸ್‌ ಪಕ್ಷಕ್ಕೆ ಜನಾ​ಶೀ​ರ್ವಾದ ಸಿಗು​ವುದು ನಿಶ್ಚಿ​ತ ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ವಿಶ್ವಾ​ಸ ವ್ಯಕ್ತ​ಪ​ಡಿ​ಸಿ​ದರು. ಕನ​ಕ​ಪುರ ಕ್ಷೇತ್ರ ವ್ಯಾಪ್ತಿಯ ತಮ್ಮ ಸ್ವಗ್ರಾಮ ದೊಡ್ಡ ಆಲಹಳ್ಳಿಯ ಸರ್ಕಾರಿ ಶಾಲೆ ಮತಗಟ್ಟೆಯಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮತ್ತು ನಮ್ಮ ಪಕ್ಷದ ನಾಯಕರು ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಸಿಕ್ಕ ಜನಬೆಂಬಲವೇ ಇದಕ್ಕೆ ಸಾಕ್ಷಿಯಾಗಿದ್ದು ರಾಜ್ಯದ ಜನತೆ ಬದಲಾವಣೆ ಬಯಸಿದ ಹಾಗೆ ಜಿಲ್ಲೆಯಲ್ಲೂ ಈ ಬಾರಿ ಬದಲಾವಣೆ ಪರ್ವ ಆರಂಭವಾಗಲಿದೆ ಎಂದರು.

ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸಿದ್ದು ಮೇ 10 ಕೇವಲ ಮತದಾನ ದಿನ ಮಾತ್ರವಲ್ಲ. ರಾಜ್ಯದ ಜನ ತಮ್ಮ ಭವಿಷ್ಯ ತಾವೇ ಬರೆದುಕೊಳ್ಳುವ ದಿನ. ಜನರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಿನ. ಭ್ರಷ್ಟ ಬಿಜೆಪಿ ಬಡಿದೊಡಿಸುವ ದಿನ. ಈ ದಿನ ಎಲ್ಲರೂ ಬಹಳ ಹುರುಪಿನಿಂದ ಮತ ಹಾಕುತ್ತಿರುವುದೇ ಇದಕ್ಕೆ ಸಾಕ್ಷಿ. ಕಾಂಗ್ರೆಸ್‌ ಪಕ್ಷ ನೀಡಿರುವ ಗ್ಯಾರಂಟಿ ಯೋಜನೆಗಳ ಘೋಷಣೆ ಮಾಡಿರುವುದು ನಮ್ಮ ಬದ್ಧತೆ, ಇಚ್ಚೆಯ ಫಲವಾಗಿದ್ದು ನಮ್ಮ ಪ್ರಣಾಳಿಕೆಯಲ್ಲೂ ಈ ಅಂಶ ಗಳನ್ನು ಅಳವಡಿಸಿದೆ. ಈ ಬಾರಿ ನಮ್ಮ ಪಕ್ಷ 141ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುವುದು ಶತಃಸಿದ್ದ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Karnataka Election 2023: ಮತ​ದಾನ ಆಯ್ತು, ಮತ​ಗ​ಳಿಕೆ ಲೆಕ್ಕಾ​ಚಾರ ಶುರು

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಚಾರದಿಂದ ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ಡಬಲ ಎಂಜಿನ್‌ ಸರ್ಕಾರ ಕೆಲಸ ಮಾಡಿದ್ದರೆ ಅವರು ಇಷ್ಟುಬಾರಿ ಬಂದು ಪ್ರಚಾರ ನಡೆಸಬೇಕಿತ್ತಾ. ಮೋದಿಯವರ ಮುಖ ನೋಡಿ ಮತ ಹಾಕಲು ಮೋದಿ ಬಂದು ಇಲ್ಲಿ ಆಡಳಿತ ಮಾಡುತ್ತಾರಾ. ಅವರು ಹೋದ ಕಡೆಯಲ್ಲಾ ಸಿಎಂ ಬೊಮ್ಮಾಯಿ ಇಲ್ಲ, ಅಭ್ಯರ್ಥಿಯೂ ಇಲ್ಲ. ಎಲ್ಲಾ ಕಡೆ ಅವರೇ ಪ್ರಚಾರ ಮಾಡಿದರೆ ಉಳಿದ ನಾಯಕರು ಏನು ಮಾಡಬೇಕು. ರಾಜ್ಯದ ಜನ ಪ್ರಜ್ಞಾವಂತರಿದ್ದು ಈ ಭ್ರಷ್ಟಸರ್ಕಾರವನ್ನು ತೊಲಗಿಸಿ ಕಾಂಗ್ರೆಸ್‌ ಪಕ್ಷಕ್ಕೆ ಈ ಬಾರಿ ಅವಕಾಶ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯ ಬೆದರಿಕೆ ಕನ್ನಡಿಗರು ಹೆದರುವುದಿಲ್ಲ: ‘ಬಿಜೆಪಿಗೆ ಮತ ಹಾಕದಿದ್ದರೆ ಕೇಂದ್ರದ ಯೋಜನೆಗಳಿಂದ ವಂಚಿತರಾಗುತ್ತೀರಿ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಹೆದರಿಸುತ್ತಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಗಲಭೆಗಳಾಗುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯದ ಜನರಿಗೆ ಬೆದರಿಕೆ ಹಾಕಿದ್ದಾರೆ. ಆದರೆ, ಇಂತಹ ಬೆದರಿಕೆಗಳಿಗೆ ಕನ್ನಡಿಗರು ಹೆದರುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದರು.

ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕವೇ ಕೇಂದ್ರಕ್ಕೆ ಆದಾಯ ನೀಡಿ ಸಹಾಯ ಮಾಡುತ್ತಿದೆ. ಇಲ್ಲಿರುವ ವಿದ್ಯಾವಂತರು, ಪ್ರಜ್ಞಾವಂತರು ದೇಶಕ್ಕೆ ಆದಾಯ ನೀಡುತ್ತಿದ್ದಾರೆ. ವಿಶ್ವವೇ ಕರ್ನಾಟಕ ಹಾಗೂ ಬೆಂಗಳೂರು ಮೂಲಕ ಇಡೀ ದೇಶವನ್ನು ನೋಡುತ್ತಿದೆ ಎಂದು ವಾಜಪೇಯಿ ಅವರೇ ಹೇಳಿದ್ದರು. ಇದು ಈ ರಾಜ್ಯದ ಶಕ್ತಿ. ಬಿಜೆಪಿ ಗೆಲ್ಲದಿದ್ದರೆ ಕೇಂದ್ರದ ಯೋಜನೆಗಳು ದೊರೆಯುವುದಿಲ್ಲ ಎಂಬುದು ಅಹಂಕಾರದ ಪರಮಾವಧಿ. ಸ್ವಾಭಿಮಾನಿ ಕನ್ನಡಿಗರಿಗೆ ಹಾಕಿರುವ ಬೆದರಿಕೆ ಎಂದು ಕಿಡಿ ಕಾರಿದರು.

ರಾಜ್ಯ​ದಲ್ಲಿ ಬಿಜೆಪಿ ಸರ್ಕಾರ, ಶಿಕಾರಿಪುರದಲ್ಲಿ ವಿಜಯೇಂದ್ರ ಗೆಲುವು ನಿಶ್ಚಿ​ತ: ಯಡಿಯೂರಪ್ಪ

ಭ್ರಷ್ಟಾಚಾರದಿಂದಾಗಿ ಸೋಲಿನ ಭೀತಿ ಎದುರಿಸುತ್ತಿರುವ ಅವರು ಕನ್ನಡಿಗರಿಗೆ ಬೆದರಿಕೆ ಹಾಕಿ ಮತ ಪಡೆಯಲು ಮುಂದಾಗಿದ್ದಾರೆ. ಬಿಜೆಪಿಗೆ ಮತ ಹಾಕದಿದ್ದರೆ ಕೇಂದ್ರದ ಯೋಜನೆಗಳನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ. ಈ ದೇಶ ಒಕ್ಕೂಟ ವ್ಯವಸ್ಥೆಯಿಂದ ರೂಪುಗೊಂಡಿದೆ. ಕೇಂದ್ರ ಸರ್ಕಾರದ ಆದಾಯದಲ್ಲಿ ಶೇ.41ರಷ್ಟುಕರ್ನಾಟಕ ರಾಜ್ಯದಿಂದ ಹೋಗುತ್ತಿದೆ. ಇದರಲ್ಲಿ ನಮಗೆ ಮರಳಿ ಬರುತ್ತಿರುವುದು ಬಿಡಿಗಾಸಿನಷ್ಟುಮಾತ್ರ. ಯಾವುದ್ಯಾವುದಕ್ಕೋ ನಾವು ಹೆದರಲಿಲ್ಲ, ಇನ್ನು ಇದಕ್ಕೆ ಹೆದರುತ್ತೇವಾ? ಎಂದು ಪ್ರಶ್ನಿಸಿದರು.