Asianet Suvarna News Asianet Suvarna News

Family Politics: ಸಂಸದರ ಮಕ್ಕಳಿಗೆ ಟಿಕೆಟ್‌ ತಪ್ಪಿಸಿದ್ದು ನಾನೇ: ಮೋದಿ

*  ವಂಶ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ
*  ಬೇಕಂತಲೇ ಎಂಪಿ ಮಕ್ಕಳಿಗೆ ಟಿಕೆಟ್‌ ನೀಡಿಲ್ಲ
*  ಪಂಚರಾಜ್ಯ ಚುನಾವಣೆಯಲ್ಲಿ ಸಂಸದರ ಮಕ್ಕಳಿಗೆ ಟಿಕೆಟ್‌ ನೀಡಲಿಲ್ಲ
 

I am the One Who Missed The BJP MPs Sons Ticket in Election Says PM Narendra Modi grg
Author
First Published Mar 16, 2022, 4:52 AM IST

ನವದೆಹಲಿ(ಮಾ.16):  ‘ವಂಶಪಾರಂಪರ್ಯ ರಾಜಕೀಯ ಪ್ರಜಾಪ್ರಭುತ್ವಕ್ಕೆ(Democracy) ಮಾರಕವಾಗಿದ್ದು, ದೇಶದಲ್ಲೀಗ ಇಂಥ ಆಡಳಿತದ ವಿರೋಧಿ ವಾತಾವರಣವಿದೆ. ಜನರ ಈ ಭಾವನೆ ಗೌರವಿಸಲೆಂದೇ ಭಾರತೀಯ ಜನತಾ ಪಕ್ಷ ಇತ್ತೀಚೆಗೆ ಮುಕ್ತಾಯಗೊಂಡ ಪಂಚರಾಜ್ಯ ಚುನಾವಣೆಗಳಲ್ಲಿ ಪಕ್ಷದ ಸಂಸದರ ಮಕ್ಕಳಿಗೆ ಟಿಕೆಟ್‌ ನೀಡದೇ ಇರುವ ನಿರ್ಧಾರ ಕೈಗೊಂಡಿತ್ತು. ಈ ನಿರ್ಣಯಕ್ಕೆ ಕಾರಣ ನಾನೇ’ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ.

ಪಂಚರಾಜ್ಯ ಚುನಾವಣೆಗಳ(Election) ಬಳಿಕ ನಡೆದ ಪಕ್ಷದ ಮೊದಲ ಬಿಜೆಪಿ(BJP) ಸಂಸದೀಯ ಪಕ್ಷದ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ವಂಶಪಾರಂಪರ್ಯ ರಾಜಕೀಯವು(Family Politics) ಪ್ರಜಾಪ್ರಭುತ್ವಕ್ಕೆ ಮಾರಕ. ಹೀಗಾಗಿ ವೈಯಕ್ತಿಕವಾಗಿ ನಾನೇ ಹಲವು ಸಂಸದರ ಮಕ್ಕಳಿಗೆ ಪಂಚರಾಜ್ಯ ಚುನಾವಣೆಗಳ ವೇಳೆ ಟಿಕೆಟ್‌ ನಿರಾಕರಿಸಿದ್ದೆ ಮತ್ತು ನನ್ನಿಂದಾಗಿಯೇ ಈ ಟಿಕೆಟ್‌ ನಿರಾಕರಿಸಲಾಗಿದೆ ಎಂಬುದನ್ನೂ ಸ್ಪಷ್ಟಪಡಿಸಿದ್ದೆ’ ಎಂದರು.

Yogi Meet Modi ಪ್ರಧಾನಿ ಮೋದಿ ಭೇಟಿಯಾದ ಯೋಗಿ, ಇದೇ ವಾರದಲ್ಲಿ ಪ್ರಮಾಣವಚನ!

ಜೊತೆಗೆ, ‘ವಂಶಪಾರಂಪರ್ಯ ರಾಜಕೀಯದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಸಂಘಟನೆಯಲ್ಲೂ ಇಂಥ ರಾಜಕೀಯ ನುಸುಳದಂತೆ ಮಾಡಲು ಪರಿಶೀಲನೆ ನಡೆಸಬೇಕು’ ಎಂದು ಸಲಹೆ ನೀಡಿದರು ಎಂದು ಸಭೆಯ ಬಳಿಕ ಮಾಹಿತಿ ನೀಡಿದ ಸಂಸದೀಯ ಖಾತೆ ಸಚಿವ ಪ್ರಹ್ಲಾದ್‌ ಜೋಶಿ(Pralhad Joshi) ಮಾಹಿತಿ ನೀಡಿದರು.

ಕಡಿಮೆ ಮತಕ್ಕೆ ಕಾರಣ ಪತ್ತೆ ಹಚ್ಚಿ:

ಈ ನಡುವೆ ಇತ್ತೀಚಿನ ಪಂಚರಾಜ್ಯ ಚುನಾವಣೆ ನಡೆದ ರಾಜ್ಯಗಳ ಪ್ರತಿ ಸಂಸದರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷಕ್ಕೆ ಅತಿ ಕಡಿಮೆ ಮತ ದೊರೆತ ತಲಾ 100 ಮತಗಟ್ಟೆಗಳನ್ನು ಪಟ್ಟಿ ಮಾಡಿ, ಅಲ್ಲಿ ಮತ ಕಡಿಮೆ ಬಂದಿದ್ದು ಏಕೆ ಎಂಬುದರ ಕಾರಣಗಳನ್ನು ಪತ್ತೆ ಹಚ್ಚಬೇಕು ಎಂದು ಮೋದಿ ಸೂಚಿಸಿದರು.

ನಮೋ ಹೊಗಳಿದ ಕಾಂಗ್ರೆಸ್ ಹಿರಿಯ ನಾಯಕ ತರೂರ್, ಯುಪಿ ಗೆಲುವಿನ ಕ್ರೆಡಿಟ್ ಮೋದಿಗೆ!

ಲಕ್ನೋ: 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭೂತಪೂರ್ವ ವಿಜಯದ ನಂತರ, ಪಕ್ಷದ ಹಿರಿಯ ನಾಯಕರ ಕಣ್ಣುಗಳು ರಾಜ್ಯದಲ್ಲಿ ಪಕ್ಷವು ಹೇಗೆ ಅಧಿಕಾರಕ್ಕೆ ಮರಳಿತು ಎಂಬುದರ ಮೇಲೆ ಕೇಂದ್ರೀಕೃತವಾಗಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಬಿಟ್ಟರೆ ಈ ಬಗ್ಗೆ ಉಳಿದೆಲ್ಲ ಪಕ್ಷಗಳಲ್ಲಿ ಮಂಥನ ನಡೆಯುತ್ತಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಾಯಕತ್ವವನ್ನು ತೊರೆಯಲು ಮುಂದಾಗಿರಬಹುದು, ಆದರೆ ಕಾಂಗ್ರೆಸ್‌ನ ದೊಡ್ಡ ನಾಯಕರು ಕೂಡ ಪ್ರಧಾನಿ ನರೇಂದ್ರ ಮೋದಿಯವರ ಉತ್ಸಾಹವನ್ನು ನೋಡಲು ಉತ್ಸುಕರಾಗಿದ್ದಾರೆ. ಸದ್ಯದ ಬಿಕ್ಕಟ್ಟಿನಿಂದ ಪಕ್ಷವನ್ನು ಹೊರತರಲು ಸಂಸತ್ತಿನ ಅಧಿವೇಶನ ಮುಗಿದ ಕೂಡಲೇ ಕಾಂಗ್ರೆಸ್ 'ಚಿಂತನ್ ಶಿವರ್' ಕಾರ್ಯಕ್ರಮವನ್ನು ಆಯೋಜಿಸಲಿದೆ. ಹೀಗಿರುವಾಗಲೇ ಇತ್ತ ಶಶಿ ತರೂರ್ ಪ್ರಧಾನಿ ಮೋದಿಯವರನ್ನು ಹೊಗಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಅಗಾಧವಾದ ಶಕ್ತಿಯಿದೆ.

ಉಕ್ರೇನ್ ಬಿಕ್ಕಟ್ಟಿನ ಮೇಲೆ ಪಿಎಂ ಮೋದಿ ಕಣ್ಣು, CCS ಸಭೆಯಲ್ಲಿ ಸಿದ್ಧತೆಗಳ ಪರಿಶೀಲನೆ!

ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್(Shashi Tharoor) ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಾರೆ ಮತ್ತು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಗೆಲುವಿನ ಎಲ್ಲಾ ಶ್ರೇಯವನ್ನು ಅವರಿಗೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಸಂವಾದದ ವೇಳೆ ಕಾಂಗ್ರೆಸ್(Congress) ನಾಯಕ ಶಶಿ ತರೂರ್, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ನಾವು ಬಿಜೆಪಿಯಿಂದ ಹೆಚ್ಚಿನದನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ.

ಅವರಿಗೆ ಗೆಲುವು ಸಿಗುತ್ತದೆ ಎಂದುಕೊಂಡಿದ್ದೆವು, ಆದರೆ ಇಷ್ಟು ದೊಡ್ಡ ಗೆಲುವು ಸಿಗುವ ನಿರೀಕ್ಷೆ ಇರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಅಪಾರ ಉತ್ಸಾಹ ಮತ್ತು ಕ್ರಿಯಾಶೀಲತೆಯ ವ್ಯಕ್ತಿ ಎಂದು ತರೂರ್ ಹೇಳಿದ್ದಾರೆ. ಅದರಲ್ಲೂ ರಾಜಕೀಯವಾಗಿ ಬಹಳ ಪ್ರಭಾವ ಬೀರುವ ಕೆಲವು ವಿಷಯಗಳು ಅವರಲ್ಲಿವೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಇಷ್ಟೊಂದು ಮತಗಳ ಅಂತರದಿಂದ ಗೆಲ್ಲುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ, ಆದರೆ ಮೋದಿ ವರ್ಚಸ್ಸಿನಿಂದ ಬಿಜೆಪಿಗೆ ಭರ್ಜರಿ ಗೆಲುವು ಸಿಕ್ಕಿದೆ ಎಂದು ಹೊಗಳಿದ್ದಾರೆ.
 

Follow Us:
Download App:
  • android
  • ios