Asianet Suvarna News Asianet Suvarna News

ಹಲವರಿಗೆ ಸಿಎಂ ಆಗುವ ಆಸೆ, ಆದರೆ ಚಾಮುಂಡಿ ಇಚ್ಛೆಯೇ ಬೇರೆ: ಎಚ್‌ಡಿಕೆ

ನಾಡಿನಲ್ಲಿ ಅನೇಕ ಮಂದಿ ಮುಖ್ಯ​ಮಂತ್ರಿ ಆಗ​ಬೇ​ಕೆಂದು ಆಸೆ ಪಟ್ಟಿದ್ದಾರೆ. ಆದರೆ, ಚಾಮುಂಡೇಶ್ವರಿ ತಾಯಿಯ ಇಚ್ಛೆಯೇ ಬೇರೆ ಇದೆ. ಚಾಮುಂಡೇ​ಶ್ವರಿ ತಾಯಿ ಹಾಗೂ ಜನರ ಆಶೀ​ರ್ವಾ​ದ​ದಿಂದ ರಾಜ್ಯದಲ್ಲಿ ಜೆಡಿ​ಎಸ್‌ ಅಧಿ​ಕಾ​ರಕ್ಕೆ ಬರ​ಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

i am the next cm of karnataka says hd kumaraswamy in ramanagara gvd
Author
Bangalore, First Published Jul 21, 2022, 3:03 PM IST

ರಾಮ​ನ​ಗರ (ಜು.21): ನಾಡಿನಲ್ಲಿ ಅನೇಕ ಮಂದಿ ಮುಖ್ಯ​ಮಂತ್ರಿ ಆಗ​ಬೇ​ಕೆಂದು ಆಸೆ ಪಟ್ಟಿದ್ದಾರೆ. ಆದರೆ, ಚಾಮುಂಡೇಶ್ವರಿ ತಾಯಿಯ ಇಚ್ಛೆಯೇ ಬೇರೆ ಇದೆ. ಚಾಮುಂಡೇ​ಶ್ವರಿ ತಾಯಿ ಹಾಗೂ ಜನರ ಆಶೀ​ರ್ವಾ​ದ​ದಿಂದ ರಾಜ್ಯದಲ್ಲಿ ಜೆಡಿ​ಎಸ್‌ ಅಧಿ​ಕಾ​ರಕ್ಕೆ ಬರ​ಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ನಗ​ರ​ದ ಜಿಲ್ಲಾ ಕ್ರೀಡಾಂಗ​ಣ​ದ​ಲ್ಲಿ ಮಂಗಳವಾರ ರಾತ್ರಿ ಶ್ರೀ ​ಚಾ​ಮುಂಡೇ​ಶ್ವ​ರಿ ದೇವಿ ಕರ​ಗ ಮಹೋ​ತ್ಸ​ವ ​ಪ್ರ​ಯು​ಕ್ತ ನಡೆ​ದ ಸಾಂಸ್ಕೃ​ತಿ​ಕ ಕಾರ್ಯ​ಕ್ರ​ಮ​ದ​ಲ್ಲಿ ಮಾತ​ನಾ​ಡಿ ನಾಡಿನಲ್ಲಿ ರೈತ​ರು, ಬಡ​ವ​ರು ಹಾಗೂ ಯುವ​ಕ​ರ ​ಪ​ರ​ವಾ​ದ ಜೆಡಿ​ಎ​ಸ್‌ ನೇತೃ​ತ್ವ​ದ ಸರ್ಕಾ​ರ​ ಅಧಿಕಾರಕ್ಕೆ ಬರಲು ಜನರು ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ.

ನನಗೆ ತಾಯಿ ಚಾಮುಂಡೇಶ್ವರಿ ಮೇಲೆ ನಂಬಿಕೆ ಇದ್ದು, ನನ್ನ ಸಂಕಲ್ಪಕ್ಕೆ ನಿಮ್ಮ ಆರ್ಶಿವಾದ ಬೇಕು. ನಿಮ್ಮ ಸಮ್ಮುಖದಲ್ಲಿ ಪ್ರತಿಜ್ಞೆ ಮಾಡಿ ಹೊರಟಿದ್ದೇನೆ. ಜೆಡಿ​ಎಸ್‌ ಪಕ್ಷಕ್ಕೆ ಐದು ವರ್ಷದ ಸರ್ಕಾರ ನಡೆ​ಸುವ ಅವ​ಕಾಶ ಕೊಟ್ಟರೆ ನಿಮ್ಮ ಮನೆ ಮಗನಾಗಿ ಕೆಲಸ ಮಾಡುತ್ತೇನೆ ಎಂದರು. 2019ರ ಜುಲೈನಲ್ಲಿ ಜೆಡಿ​ಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾ​ರ​ದಲ್ಲಿ ನನ್ನ ಅಧಿಕಾರವನ್ನು ಕುತಂತ್ರದಿಂದ ಕಸಿದುಕೊಂಡರು. ನೀವು ನನ್ನನ್ನು ಸಸಿ​ಯಾಗಿ ನೆಟ್ಟು, ರಾಜ್ಯ​ದಲ್ಲಿ ಹೆಮ್ಮ​ರ​ವಾಗಿ ಬೆಳೆ​ಸಿ​ದ್ದೀರಿ. ನೀವು ಕೊಟ್ಟಶಕ್ತಿ​ಯನ್ನು ಲಕ್ಷಾಂತರ ಜನ​ರಿಗೆ ಧಾರೆ ಎರೆ​ದಿ​ದ್ದೇನೆ. ನಾನು ಒಂದೊಂದು ಕ್ಷಣವೂ ಬಡ​ವ​ರಿ​ಗಾಗಿ ಬದು​ಕು​ತ್ತಿ​ದ್ದೇನೆ. ಪಂಚ​ರತ್ನ ಯೋಜನೆ ಸಾಕಾ​ರ​ಗೊ​ಳಿ​ಸಲು ಮುಂಬರುವ ಚುನಾ​ವ​ಣೆ​ಯನ್ನು ಸವಾ​ಲ​ನ್ನಾಗಿ ಸ್ವೀಕರಿಸಿದ್ದೇನೆ ಎಂದು ಹೇಳಿ​ದ​ರು. 

ಬಿಜೆಪಿ ಸರ್ಕಾರದಿಂದ ಲೂಟಿ: ಎಚ್‌.ಡಿ.ಕುಮಾರಸ್ವಾಮಿ

ನನಗೆ ಆರೋಗ್ಯ ಸಮಸ್ಯೆ ಇದೆ. ಆದರೂ ನಿಮ್ಮ​ ಸೇವೆ ಮಾಡಲು ಹೊರ​ಟಿ​ದ್ದೇನೆ. ಪ್ರತಿ​ನಿತ್ಯ ಮನೆ ಬಳಿ ನೂರಾರು ಜನ ಸಹಾಯ ಕೇಳಿ ಬರು​ತ್ತಾರೆ. ಅವ​ರಿಗೆ ಎಲ್ಲಿಂದ ಸಹಾಯ ಮಾಡ​ಲಿ? ನಾನು ಯಾವು​ದೇ ಶಿಕ್ಷಣ ಸಂಸ್ಥೆ​ ಅಥವಾ ಕೈಗಾ​ರಿ​ಕೆ​ಯನ್ನು ಹೊಂದಿಲ್ಲ. ಕೇತ​ಗಾ​ನ​ಹಳ್ಳಿಯಲ್ಲಿ 45 ಎಕರೆ ಜಮೀನು ಹೊರತು ಪಡಿ​ಸಿ​ ಬೇರೇನೂ ಇಲ್ಲ ಎಂದರು. ಈಗ ರಾಮ​ನ​ಗ​ರ​ದಲ್ಲಿ ಕೆಲ​ವರು ತಪ್ಪಿನ ರಾಜ​ಕಾ​ರಣ ಮಾಡು​ತ್ತಿ​ದ್ದಾರೆ. ಯಾರೂ ಅಪ​ಪ್ರ​ಚಾ​ರಕ್ಕೆ ಕಿವಿ​ಗೊ​ಡ​ಬೇಡಿ. ನಾವು ಎಂದೂ ಜನರಿಗೆ ತೊಂದರೆ ಕೊಟ್ಟಿಲ್ಲ. ಏನೇ ಇದ್ದರು ನನ್ನ ಬಳಿ ಬಂದು ಮುಕ್ತ​ವಾಗಿ ಚರ್ಚೆ ನಡೆ​ಸುವಂತೆ ಕುಮಾ​ರ​ಸ್ವಾಮಿ ಹೇಳಿ​ದರು.

ನಿಮ್ಮ ಮನೆ ಮಗ​ನಾಗಿ ಕೆಲಸ ಮಾಡುವೆ: ನಿಮ್ಮ ಸಮ್ಮುಖದಲ್ಲಿ ಪ್ರತಿಜ್ಞೆ ಮಾಡಿ ಹೊರಟಿದ್ದೇನೆ. ಜೆಡಿ​ಎಸ್‌ ಪಕ್ಷಕ್ಕೆ ಐದು ವರ್ಷದ ಸರ್ಕಾರ ನಡೆ​ಸುವ ಅವ​ಕಾಶ ಕೊಟ್ಟರೆ ನಿಮ್ಮ ಮನೆ ಮಗನಾಗಿ ಕೆಲಸ ಮಾಡುತ್ತೇನೆ ಎಂದು ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಹೇಳಿ​ದರು. ಶ್ರೀ ​ಚಾ​ಮುಂಡೇ​ಶ್ವ​ರಿ ದೇವಿ ಕರ​ಗ ಮಹೋ​ತ್ಸ​ವ ​ಪ್ರ​ಯು​ಕ್ತ ನಡೆ​ದ ಸಾಂಸ್ಕೃ​ತಿ​ಕ ಕಾರ್ಯ​ಕ್ರ​ಮ​ದ​ಲ್ಲಿ ಮಾತ​ನಾ​ಡಿ​, ನಾಡಿನಲ್ಲಿ ರೈತ​ರು, ಬಡ​ವ​ರು, ಯುವ​ಕ​ರ ​ಪ​ರ​ವಾ​ದ ಜೆಡಿ​ಎ​ಸ್‌ ನೇತೃ​ತ್ವ​ದ ಸರ್ಕಾ​ರ​ ಅಧಿಕಾರಕ್ಕೆ ಬರಲು ಜನರು ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ ಎಂದ​ರು. 2019ರ ಜುಲೈನಲ್ಲಿ ಜೆಡಿ​ಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾ​ರ​ದಲ್ಲಿ ನನ್ನ ಅಧಿಕಾರವನ್ನು ಕುತಂತ್ರದಿಂದ ತೆಗೆದರು. 

ಈಗ ತಾಯಿ ಚಾಮುಂಡೇಶ್ವರಿಯ ಆಶಿರ್ವಾದ ಪಡೆದು ನಿಮ್ಮ ಸಮ್ಮುಖದಲ್ಲಿ ಪ್ರತಿಜ್ಞೆ ಮಾಡಿ ಹೊರಟಿದ್ದೇನೆ. ನಾಡಿನಲ್ಲಿ ಬಹಳ ಜನರು ಮುಖ್ಯ​ಮಂತ್ರಿ ಆಗ​ಬೇ​ಕೆಂದು ಆಸೆ ಪಟ್ಟಿದ್ದಾರೆ. ಆದರೆ, ಚಾಮುಂಡೇಶ್ವರಿ ತಾಯಿಯ ಇಚ್ಛೆಯೇ ಬೇರೆ ಇದೆ. ಚಾಮುಂಡೇ​ಶ್ವರಿ ತಾಯಿ ಹಾಗೂ ಜನರ ಆಶೀ​ರ್ವಾ​ದ​ದಿಂದ ಜೆಡಿ​ಎಸ್‌ ಅಧಿ​ಕಾ​ರಕ್ಕೆ ಬರ​ಲಿದೆ.  ನನಗೆ ತಾಯಿ ಚಾಮುಂಡೇಶ್ವರಿ ಮೇಲೆ ನಂಬಿಕೆ ಇದ್ದು, ನನ್ನ ಸಂಕಲ್ಪಕ್ಕೆ ನಿಮ್ಮ ಆರ್ಶಿವಾದ ಬೇಕು ಎಂ​ದರು. ನೀವು ನನ್ನನ್ನು ಸಸಿ​ಯಾಗಿ ನೆಟ್ಟು, ರಾಜ್ಯ​ದಲ್ಲಿ ಹೆಮ್ಮ​ರ​ವಾಗಿ ಬೆಳೆ​ಸಿ​ದ್ದೀರಿ. ನೀವು ಕೊಟ್ಟಶಕ್ತಿ​ಯನ್ನು ಲಕ್ಷಾಂತರ ಜನ​ರಿಗೆ ಧಾರೆ ಎರೆ​ದಿ​ದ್ದೇನೆ. ನಾನು ಒಂದೊಂದು ಕ್ಷಣವೂ ಬಡ​ವ​ರಿ​ಗಾಗಿ ಬದು​ಕು​ತ್ತಿ​ದ್ದೇನೆ. 

ಪಂಚ​ರತ್ನ ಯೋಜನೆ ಸಾಕಾ​ರ​ಗೊ​ಳಿ​ಸಲು ಮುಂಬ​ರುವ ಚುನಾ​ವ​ಣೆ​ಯನ್ನು ಸವಾ​ಲ​ನ್ನಾಗಿ ಸ್ವೀಕಾರ ಮಾಡಿ​ದ್ದೇನೆ ಎಂದ​ರು. ನನಗೆ ಆರೋಗ್ಯ ಸಮಸ್ಯೆ ಇದೆ. ಆದರೂ ನಿಮ್ಮ​ಗಳ ಸೇವೆ ಮಾಡಲು ಹೊರ​ಟಿ​ದ್ದೇನೆ. ಪ್ರತಿ​ನಿತ್ಯ ಮನೆಯ ಬಳಿ ನೂರಾರು ಜನರು ಸಹಾಯ ಕೇಳಿ ಬರು​ತ್ತಾರೆ.  ಅವ​ರಿಗೆ ಎಲ್ಲಿಂದ ಸಹಾಯ ಮಾಡ​ಲಿ. ನಾನು ಯಾವು​ದೇ ಶಿಕ್ಷಣ ಸಂಸ್ಥೆ​ ಅಥವಾ ಕೈಗಾ​ರಿ​ಕೆ​ಗ​ಳ​ನ್ನಾ​ಗಲಿ ಹೊಂದಿಲ್ಲ. ಕೇತ​ಗಾ​ನ​ಹಳ್ಳಿಯಲ್ಲಿ 45 ಎಕರೆ ಜಮೀನು ಹೊರತು ಪಡಿ​ಸಿ​ದರೆ ಬೇರೇನೂ ಇಲ್ಲ ಎಂದರು. ನನ್ನ ಮತ್ತು ರಾಮನಗರ ಸಂಬಂಧ ತಾಯಿ ಮಗನ ಸಂಬಂಧ. ನಿಮ್ಮ ಕಣ್ಣೀರು ಒರೆ​ಸು​ವುದು ನನ್ನ ಕರ್ತವ್ಯ. ನಿಮ್ಮ ಆಶೀ​ರ್ವಾ​ದವೇ ನನಗೆ ಶ್ರೀ ರಕ್ಷೆ​ಯಾ​ಗಿದೆ. 

ಜೆಡಿಎಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ಉಚಿತ ನೀರು, ವಿದ್ಯುತ್: ಎಚ್‌ಡಿಕೆ ಘೋಷಣೆ

ಉಸಿರು ನಿಂತ ಮೇಲೆ ನಾನು ಇದೇ ಮಣ್ಣಲ್ಲಿ ಮಣ್ಣಾ​ಗು​ತ್ತೇನೆ. ಕಳೆದ ರಾಜ​ಕೀಯ ಸನ್ನಿ​ವೇ​ಶ​ದಲ್ಲಿ ಕಾರ್ಯ​ಕ​ರ್ತರ ಒತ್ತ​ಡಕ್ಕೆ ಮಣಿದು ಎರಡು ಕಡೆ ಚುನಾ​ವ​ಣೆ​ಯಲ್ಲಿ ಸ್ಪರ್ಧೆ ಮಾಡಿದೆ. ಚನ್ನ​ಪ​ಟ್ಟಣ ಕ್ಷೇತ್ರಕ್ಕೆ ರಾಜೀ​ನಾಮೆ ಕೊಟ್ಟರೆ ಮತ್ತೆ ಅಲ್ಲಿ ಗೆಲ್ಲು​ವುದು ಕಷ್ಟ​ವೆಂದು ರಾಜೀ​ನಾಮೆ ಕೊಡ​ಲಿ​ಲ್ಲ ಎಂದು ತಿಳಿ​ಸಿ​ದ​ರು. ಈಗ ರಾಮ​ನ​ಗ​ರ​ದಲ್ಲಿ ಕೆಲ​ವ​ರಿಂದ ತಪ್ಪಿನ ರಾಜ​ಕಾ​ರಣ ಮಾಡು​ತ್ತಿ​ದ್ದಾರೆ. ಯಾರೂ ಅಪ​ಪ್ರ​ಚಾ​ರಕ್ಕೆ ಕಿವಿ​ಗೊ​ಡ​ಬೇಡಿ. ನಾವು ಎಂದೂ ಜನರಿಗೆ ತೊಂದರೆ ಕೊಟ್ಟಿಲ್ಲ. ಏನೇ ಇದ್ದರು ನನ್ನ ಬಳಿ ಬಂದು ಮುಕ್ತ​ವಾಗಿ ಚರ್ಚೆ ನಡೆ​ಸುವಂತೆ ಕುಮಾ​ರ​ಸ್ವಾಮಿ ಹೇಳಿದರು. ಜೆಡಿ​ಎಸ್‌ ರಾಜ್ಯಾ​ಧ್ಯಕ್ಷ ಸಿ.ಎಂ.​ಇ​ಬ್ರಾಹಿಂ, ಶಾಸ​ಕ​ರಾದ ಸಾ.ರಾ.​ಮ​ಹೇಶ್‌ , ಎ.ಮಂಜು​ನಾಥ್‌ , ಅನಿತಾ ಕುಮಾ​ರ​ಸ್ವಾಮಿ, ಜೆಡಿ​ಎಸ್‌ ತಾಲೂಕು ಅಧ್ಯಕ್ಷ ರಾಜ​ಶೇ​ಖರ್‌ ಮತ್ತಿ​ತ​ರರು ಹಾಜ​ರಿ​ದ್ದ​ರು.

Follow Us:
Download App:
  • android
  • ios