ಸಿಎಂ ದೆಹಲಿ ಪ್ರವಾಸ: ನಾನು ದಿಲ್ಲಿಗೆ ಹೋಗೋದಿಲ್ಲ, ಹೋಗ್ತೇನೆ ಅಂತ ಹೇಳಿದವರು ಯಾರು?, ಸಿದ್ದು ಗರಂ
ಖರ್ಗೆ ಅವರು ಯಾರು?, ಖರ್ಗೆ ಅವರು ಎಐಸಿಸಿ ಅಧ್ಯಕ್ಷರು. ಸತೀಶ್ ಜಾರಕಿಹೋಳಿ ಅವರು ಸಚಿವರು. ಎಐಸಿಸಿ ಅಧ್ಯಕ್ಷರು,ಸಚಿವರು ಭೇಟಿ ಆಗಬಾರದಾ? ಭೇಟಿ ಆದರೆ ಅದಕ್ಕೆ ರಾಜಕೀಯ ಬಣ್ಣ ಕಟ್ಟಿದರೆ ಹೇಗೆ ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ
ಕೊಪ್ಪಳ(ಅ.04): ಅ. 27, 28 ರಂದು ಸಿಎಂ ದೆಹಲಿ ಪ್ರವಾಸ ವಿಚಾರದ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಾನು ದೆಹಲಿಗೆ ಹೋಗುವುದಿಲ್ಲ. ನಾನು ದೆಹಲಿಗೆ ಹೋಗುತ್ತೇನೆ ಎಂದು ಹೇಳಿದವರು ಯಾರು?. ನಾನು ದೆಹಲಿಗೆ ಹೋಗುವುದಿಲ್ಲ ಎಂದ ಮೇಲೆ ನಾಯಕರನ್ನು ಭೇಟಿ ಎಲ್ಲಿಂದ ಆಗುವುದು ಎಂದು ಮಾಧ್ಯಮದವರ ವಿರುದ್ಧ ಗರಂ ಆಗಿದ ಘಟನೆ ಇಂದು(ಶುಕ್ರವಾರ) ನಡೆದಿದೆ.
ನಾನು ದೆಹಲಿಗೆ ಹೋಗ್ತೇನೆ ಅಂತ ತೀರ್ಮಾನವೇ ಮಾಡಿಲ್ಲಾ. ನಾನು ದೆಹಲಿಗೆ ಹೋಗ್ತಾಯಿಲ್ಲಾ. ಅವರೇನಾದ್ರು ಚರ್ಚೆ ಬಗ್ಗೆ ಹೇಳಿದ್ದಾರಾ?. ಅದಕ್ಕೆ ಅಪಾರ್ಥ ಕಲ್ಪಿಸಬಾರದು. ಯಾವಾಗಲು ಕೆಟ್ಟದೆ ಯೋಚನೆ ಮಾಡಬಾರದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ದಸರಾ ಚಾಲನೆ ವೇಳೆ ಚಾಮುಂಡೇಶ್ವರಿಗೆ ಅಪಮಾನ; ರಾಜಕೀಯ ಭಾಷಣ ಮಾಡಿದ ಸಾಹಿತಿ ಹಂಪನಾ ವಿರುದ್ಧ ಆರ್ ಅಶೋಕ್ ಗರಂ
ಖರ್ಗೆ-ಸತೀಶ್ ಜಾರಕಿಹೋಳಿ ಭೇಟಿ ವಿಚಾರದ ಬಗ್ಗೆ ಕೊಪ್ಪಳದ ಬಸಾಪೂರದ ಖಾಸಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಖರ್ಗೆ ಅವರು ಯಾರು?, ಖರ್ಗೆ ಅವರು ಎಐಸಿಸಿ ಅಧ್ಯಕ್ಷರು. ಸತೀಶ್ ಜಾರಕಿಹೋಳಿ ಅವರು ಸಚಿವರು. ಎಐಸಿಸಿ ಅಧ್ಯಕ್ಷರು,ಸಚಿವರು ಭೇಟಿ ಆಗಬಾರದಾ? ಭೇಟಿ ಆದರೆ ಅದಕ್ಕೆ ರಾಜಕೀಯ ಬಣ್ಣ ಕಟ್ಟಿದರೆ ಹೇಗೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಜಾತಿಗಣತಿ ಅನುಷ್ಟಾನ ಮಾಡಬೇಕು ಅನ್ನೋ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅವರ ಅಭಿಪ್ರಾಯ ಹೇಳಿದ್ದಾರೆ.
ರಾಯರೆಡ್ಡಿ ಈ ಬಗ್ಗೆ ನನ್ನ ಜೊತೆ ಚರ್ಚೆ ಮಾಡಿದ್ದು ನಿಜ. ಅದನ್ನು ಕ್ಯಾಬಿನೆಟ್ ನಲ್ಲಿ ತರಬೇಕು. ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ. ಹಿಂದುಳಿದ ವರ್ಗಗಳ ಆಯೋಗದ ಜೊತೆ ಚರ್ಚೆ ಮಾಡುತ್ತೇವೆ. ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಬೇಕು. ಅದಕ್ಕೆಲ್ಲಾ ಸಮಯ ತಗೋಳುತ್ತದೆ. ಒಳ ಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ಡಿಸಿಜನ್ ಹೇಳಿದೆ. ಅದರ ಬಗ್ಗೆ ಚರ್ಚೆ ಮಾಡ್ತೇವೆ ಎಂದು ತಿಳಿಸಿದ್ದಾರೆ.
'ಪಾಪದ ಕೊಡ ತುಂಬಿದಾಗ ಈ ಸರ್ಕಾರ ತಾನಾಗೇ ಬೀಳುತ್ತೆ..' ಸಚಿವ ಎನ್ಎಸ್ ಬೋಸರಾಜುಗೆ ಆರ್ ಅಶೋಕ್ ತಿರುಗೇಟು
ಸಿದ್ದರಾಮಯ್ಯ ಪರ ಶಾಸಕ ಜಿ.ಟಿ ದೇವೇಗೌಡ ಬ್ಯಾಟಿಂಗ್ ವಿಚಾರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಜಿ.ಟಿದೇವೇಗೌಡರು ಹೇಳಿರೋದು ಸರಿಯಿದೆ. ಅವರ ಪಕ್ಷದವರೇ ಅಲ್ವಾ, ಅವರು ಹೇಳಿದ ಮೇಲೆ ಏನು ಅರ್ಥ. ನನ್ನ ಬಗ್ಗೆ ಕುಮಾರಸ್ವಾಮಿಗೆ ಭಯ. ನಾನು ಅಧಿಕಾರದಲ್ಲಿ ಇದ್ರೆ ಅವರ ಪಕ್ಷ ದುರ್ಬಲವಾಗುತ್ತದೆ ಅನ್ನೋ ಭಯ ಎಂದು ತಿಳಿಸಿದ್ದಾರೆ.
ದಸರಾ ಸಮಯದಲ್ಲಿ ಒಂದು ವರ್ಷ ಅವಕಾಶ ನೀಡಿ ಅನ್ನೋ ಪ್ರಾರ್ಥನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮುಂದಿನ ವರ್ಷ ಮತ್ತೆ ಪೂಜೆ ಮಾಡ್ತೇವೋ ಇಲ್ವೋ. ಪ್ರತಿ ವರ್ಷ ದಸರಾ ಮಾಡ್ತೇವೆ. ಆ ಅರ್ಥದಲ್ಲಿ ನಾನು ಹೇಳಿದ್ದು ಎಂದು ಹೇಳಿದ್ದಾರೆ.