‘ರಾಜ್ಯ ರಾಜಕಾರಣದ ಬಗ್ಗೆ ನನಗೆ ಆಸಕ್ತಿ ಇಲ್ಲ. ಉಪ ಚುನಾವಣೆಗಳಿಂದ ರೋಸಿ ಹೋಗಿದ್ದೇನೆ. ಮತ್ತೊಮ್ಮೆ ಉಪ ಚುನಾವಣೆ ಮಾಡಲು ನಾನು ಸಿದ್ಧನಿಲ್ಲ. ಹೀಗಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ’ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ಮಾ.16): ‘ರಾಜ್ಯ ರಾಜಕಾರಣದ ಬಗ್ಗೆ ನನಗೆ ಆಸಕ್ತಿ ಇಲ್ಲ. ಉಪ ಚುನಾವಣೆಗಳಿಂದ ರೋಸಿ ಹೋಗಿದ್ದೇನೆ. ಮತ್ತೊಮ್ಮೆ ಉಪ ಚುನಾವಣೆ ಮಾಡಲು ನಾನು ಸಿದ್ಧನಿಲ್ಲ. ಹೀಗಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ’ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರವನ್ನು ತಳ್ಳಿ ಹಾಕಿದರು. ರಾಮನಗರ ಸ್ಪರ್ಧೆ ವಿಚಾರವಾಗಿ ನನಗೆ ಮಾಧ್ಯಮಗಳ ವರದಿ ಮೂಲಕ ಗೊತ್ತಾಗಿದೆ. ಚುನಾವಣಾ ಪ್ರಯುಕ್ತ ಬೇರೆ ಬೇರೆ ಕಾರ್ಯಗಳಲ್ಲಿ ಬ್ಯುಸಿ ಆಗಿದ್ದೇನೆ. ಇದುವರೆಗೆ ಯಾರೂ ರಾಜ್ಯ ನಾಯಕರು ಈ ಬಗ್ಗೆ ಚರ್ಚೆ ಮಾಡಿಲ್ಲ. ಕ್ಷೇತ್ರದ ಜನಾಭಿಪ್ರಾಯವನ್ನೂ ಕೇಳಿಲ್ಲ. ನನಗೆ ರಾಜ್ಯ ರಾಜಕಾರಣದ ಬಗ್ಗೆ ಆಸಕ್ತಿ ಇಲ್ಲ ಎಂದು ಹೇಳಿದರು.
ಜತೆಗೆ ನನ್ನ ವ್ಯಾಪ್ತಿಯ ಎಲ್ಲಾ ಕ್ಷೇತ್ರಗಳಿಂದಲೂ ಸ್ಪರ್ಧಿಸುವಂತೆ ನನಗೆ ಒತ್ತಡ ಇದೆ. ರಾಮನಗರ, ಚನ್ನಪಟ್ಟಣ, ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ ಕ್ಷೇತ್ರಗಳಿಂದ ಸ್ಪರ್ಧಿಸಲು ಒತ್ತಡವಿದೆ. ಚನ್ನಪಟ್ಟಣದಲ್ಲಿ ಉತ್ತಮ ಅಭ್ಯರ್ಥಿ ಇದ್ದಾರೆ. ರಾಮನಗರದಲ್ಲಿ ನಮ್ಮ ಪಕ್ಷದ ಇಕ್ಬಾಲ್ ಹುಸೇನ್ ನಾಲ್ಕೂವರೆ ವರ್ಷದಿಂದ ಕೆಲಸ ಮಾಡಿದ್ದಾರೆ. ಹೀಗಾಗಿ ನನ್ನ ವ್ಯಾಪ್ತಿಯ ಎಲ್ಲಾ ಕ್ಷೇತ್ರಗಳಿಗೂ ನಾನೇ ಅಭ್ಯರ್ಥಿ ಎಂದು ಮತ ಕೇಳುತ್ತಿದ್ದೇನೆ. ಲೋಕಸಭೆ ವ್ಯಾಪ್ತಿಯ ಎಲ್ಲ ಕ್ಷೇತ್ರಕ್ಕೂ ನಾನೇ ಅಭ್ಯರ್ಥಿ. ನನಗೆ ಶಕ್ತಿ ಕೊಡಿ ಎಂದು ಮತ ಯಾಚನೆ ಮಾಡುತ್ತಿದ್ದೇನೆ. ನನಗೆ ಜವಾಬ್ದಾರಿ ಇರುವುದರಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿದರು.
ವಿಶ್ವಸಂಸ್ಥೆಯಲ್ಲಿ ಮೊಳಗಲಿದೆ ರಿಷಬ್ ಶೆಟ್ಟಿ ಕನ್ನಡ ಭಾಷಣ: ಕಾಂತಾರ ಚಿತ್ರ, ಪರಿಸರದ ಬಗ್ಗೆ ನುಡಿ!
ನಾನು ನನ್ನ ಸ್ನೇಹಿತನ ಪರ ಇದ್ದೇನೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಪುತ್ರನಿಗೆ ಟಿಕೆಟ್ ನೀಡುವ ವಿಚಾರವಾಗಿ ಮಾತನಾಡಿದ ಅವರು, ಧ್ರುವನಾರಾಯಣ್ ಸಾವು ಅತ್ಯಂತ ದುಃಖಕರ ಸಂಗತಿ. ಕಾಂಗ್ರೆಸ್ ಪಕ್ಷಕ್ಕೆ ದುಡಿದ ಒಬ್ಬ ಪ್ರಾಮಾಣಿಕ ಕಾರ್ಯಕರ್ತನನ್ನು ನಾವು ಕಳೆದುಕೊಂಡಿದ್ದೇವೆ. ಆ ಕ್ಷೇತ್ರ, ಜಿಲ್ಲೆಗೆ, ಆ ಮನೆಗೆ ನ್ಯಾಯ ಸಿಗಬೇಕು. ಈ ಅನ್ಯಾಯ ಸರಿಪಡಿಸಲು ನಾನು ಅವರ ಪರ ಇದ್ದೇನೆ ಎಂದು ಪುತ್ರನಿಗೆ ಟಿಕೆಟ್ ನೀಡುವ ಪರ ಬ್ಯಾಟ್ ಮಾಡಿದರು.
ಎಚ್ಡಿಕೆ ನಡೆಯಿಂದ ಮೈತ್ರಿ ಸರ್ಕಾರ ಪತನ: ನಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಕಹಿ ನುಂಗಿ ಕಳೆದ ಬಾರಿ ಮುಖ್ಯಮಂತ್ರಿಯಾಗಲು ಕುಮಾರಸ್ವಾಮಿ ಅವರನ್ನು ಬೆಂಬಲಿಸಿದೆವು. ಆದರೆ, ಶಾಸಕರನ್ನು ಅವರು ಸರಿಯಾಗಿ ನಡೆಸಿಕೊಳ್ಳದ ಪರಿಣಾಮ ಮೈತ್ರಿ ಸರ್ಕಾರ ಬಿದ್ದು ಹೋಯಿತು. ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಎಚ್.ವಿಶ್ವನಾಥ್ ಸೇರಿದಂತೆ ಅವರ ಪಕ್ಷದ ಶಾಸಕರೇ ಅವರ ನಡೆಯಿಂದ ಬೇಸತ್ತು ಬಿಜೆಪಿ ಹೋದರು. ಆದರೆ ಕುಮಾರಸ್ವಾಮಿ ನಮ್ಮ ಮೇಲೆ ಆರೋಪ ಹೊರೆಸುವುದು ಎಷ್ಟುಸರಿ ಎಂದು ಸಂಸದ ಡಿ.ಕೆ. ಸುರೇಶ್ ವಾಗ್ದಾಳಿ ನಡೆಸಿದರು.
ಚುನಾವಣೆ ಸಂದರ್ಭ ಅಬಕಾರಿ ಅಕ್ರಮ ತಡೆಗಟ್ಟಲು ವಿಶೇಷ ತಂಡ ರಚನೆ
ನಗರದಲ್ಲಿ ತಾಲೂಕು ಕಾಂಗ್ರೆಸ್ ಹಮ್ಮಿಕೊಂಡಿದ್ದ ಗ್ಯಾರೆಂಟಿ ಕಾರ್ಡ್ ವಿತರಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ಪತನಕ್ಕೆ ಎಚ್‌ಡಿಕೆ ಶಾಸಕರನ್ನು ಕಡೆಗಣಿಸಿದ್ದೆ ಕಾರಣ. ಕುದುರೆ ವ್ಯಾಪಾರ ನಡೆಸಿದ ಬಿಜೆಪಿ ವಾಮಮಾರ್ಗದಿಂದ ಅಧಿಕಾರಕ್ಕೆ ಬಂತೆ ಹೊರತು ಸರ್ಕಾರ ಬೀಳಲು ಕಾಂಗ್ರೆಸ್ ಕಾರಣವಲ್ಲ. ಡಿ.ಕೆ.ಶಿವಕುಮಾರ್ ಸರ್ಕಾರವನ್ನು ಉಳಿಸಲು ಸಾಕಷ್ಟು ಶ್ರಮಪಟ್ಟರು. ಆದರೆ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ಮುಖ್ಯಮಂತ್ರಿಗಳೇ ಆ ಕೆಲಸವನ್ನು ಮಾಡಲಿಲ್ಲ. ನಮ್ಮ ಪಕ್ಷದ ಶಾಸಕರಿರಲಿ ಸ್ವತಃ ಅವರ ಪಕ್ಷದ ಶಾಸಕರೇ ಪಕ್ಷಬಿಟ್ಟು ಹೋದರು. ಸರಕಾರ ಬೀಳಲು ಕುಮಾರಸ್ವಾಮಿ ಅವರ ಧೋರಣೆಯೇ ಕಾರಣ ಎಂದರು.
