ನಾನು ಮೋದಿಗೆ ಹೆದರಲ್ಲ, ಅಮಿತ್ ಶಾಗೂ ಹೆದರಲ್ಲ, ಅಲ್ಲದೇ ನಾನು ಯಾರಿಗೂ ಹೆದರಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿ (ಮೇ.01): ನಾನು ಮೋದಿಗೆ ಹೆದರಲ್ಲ, ಅಮಿತ್ ಶಾಗೂ ಹೆದರಲ್ಲ, ಅಲ್ಲದೇ ನಾನು ಯಾರಿಗೂ ಹೆದರಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಮೋದಿ ಸರ್ಕಾರದ ಜನ ವಿರೋಧ ಧೋರಣೆ ವಿರೋಧಿಸಿ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಈ ರ್ಯಾಲಿ ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ. ಎಚ್ಚರಿಕೆ ಗಂಟೆ ಕೊಡುವ ಕೆಲಸ ಇಲ್ಲಿಂದ ನಡೀತಿದೆ. ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ಸಂವಿಧಾನ ಇದೆ, ಅದಕ್ಕಾಗಿ ನಾವೆಲ್ಲರೂ ಸ್ವತಂತ್ರವಾಗಿ ಮಾತನಾಡೋ ಶಕ್ತಿ ಇದೆ. ಕಾಂಗ್ರೆಸನ್ನು ಬೆಂಬಲಿಸುವವರ ಮೇಲೆ ಇಡಿ, ಸಿಬಿಐ ತೋರಿಸಿ ಧಮ್ಕಿ ಹಾಕ್ತಿದೆ. ಇದರ ವಿರುದ್ಧ ಹೋರಾಟ ಮಾಡಬೇಕಿದೆ ಎಂದರು.

ಸಂವಿಧಾನ ಬಲಪಡಿಸೋ ಕೆಲಸ ಮಾಡಬೇಕಿದೆ. ಕೆಲವರು ಹೀಯಾಳಿಸಿ ಮಾತನಾಡ್ತಾರೆ. ಎಲ್ಲದಕ್ಕೂ ಟೀಕೆ ಮಾಡ್ತಾರೆ. ಜಾತಿ ಜನಗಣತಿ ಮಾಡಬಹುದು ಅಂತ ಕೇಂದ್ರ ನಿರ್ಣಯ ಕೈಗೊಳ್ಳದೆ, ಇದಕ್ಕಾಗಿ ನಾವು ಸಾಕಷ್ಟು ಪ್ರಯತ್ನ ಮಾಡಿದ್ದೆವು. ನಾವು ಹೇಳಿದಾಗ ಅವರು ಕೇಳಲಿಲ್ಲ. ಜನರ ಒತ್ತಡ ಹೆಚ್ಚಾದ ಮೇಲೆ ಸರ್ಕಾರ ಬಗ್ಗಿದೆ. ಜಾತಿ ಜನಗಣತಿ ಮಾಡ್ತೇವೆ ಅಂತ ಹೇಳಿದ್ದಾರೆ. ನಾನು ಮೋದಿಗೆ ಹೆದರಲ್ಲ, ಅಮಿತ್ ಶಾಗೂ ಹೆದರಲ್ಲ. ಜಾತಿ ಜನಗಣತಿ ವಿಚಾರದಲ್ಲಿ ಕೇಂದ್ರದ ಮಂತ್ರಿಯೊಬ್ಬರು ರಾಹುಲ್ ಗಾಂಧಿ ನಿಲುವು ಸರಿಯಿಲ್ಲ ಅಂತ ಹೇಳಿದರು. ಬಾಯಿಗೆ ಬಂದಂತೆ ಮಾತನಾಡಿದರು ಜಾತಿ ಜಾತಿಗೆ ಜಗಳ ಹಚ್ಚುತ್ತಿದ್ದಾರೆ.ದೇಶದ ತುಂಡಾಗುತ್ತೆ ಅಂತ ಹೇಳಿದರು. ಈಗ ಅವರದೇ ಸರ್ಕಾರ ಜಾತಿ ಜನಗಣತಿ ಮಾಡ್ತಿದೆ. ಟೀಕೆ ಮಾಡಿದ್ರೆ ನೀವೇ ಅದರ ಪರಿಣಾಮ ಎದುರಿಸಬೇಕಾಗುತ್ತೆ. 

ನಾವು ಇರುತ್ತೇವೆ, ಹೋಗುತ್ತೇವೆ, ಆದರೆ ದೇಶ ರಕ್ಷಣೆ ಮುಖ್ಯ: ಖರ್ಗೆ

ಶೇ 50 ರಷ್ಟು ಮೀಸಲಾತಿಗೆ ಮಿತಿ ಇದೆ. ಈ ಮಿತಿ ತೆಗೆದು ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು. ನಮ್ಮ ರಾಜ್ಯದ ಸಿಎಂ ಮತ್ತು ಮಂತ್ರಿಗಳು ತಯಾರಿದ್ದಾರೆ. ಆದರೆ ಕೇಂದ್ರ ಸರ್ಕಾರ ಅದಕ್ಕೆ ಅವಕಾಶ ಕೊಡ್ತಿಲ್ಲ. ಪ್ರತಿ 10 ವರ್ಷಕ್ಕೊಮ್ಮೆ ಜಾತಿ ಜನಗಣತಿ ಮಾಡಬೇಕು. ಮೂರು ತಿಂಗಳಲ್ಲಿ ಕೇಂದ್ರ ಸರ್ಕಾರ ಮಾಡ್ಲೇಬೇಕು. ಇಲ್ಲದಿದ್ದಲ್ಲಿ ನಿಮಗೆ ನಿರಾಸಕ್ತಿ ಇದೆ ಅಂತ ಅರ್ಥ ಮಾಡಿಕೊಳ್ತೇವೆ. ಪಹಲ್ಗಾಮ್ ವಿಶೇಷ ಅಧಿವೇಶನ ಕರೆಯಿರಿ. ಲೋಪದೋಷ ಯಾರದ್ದು, ಇದಕ್ಕೆ ಕಾರಣರಾದವರು ಯಾರು..?. ಮೂರು ಸೆಕ್ಯೂರಿಟಿ ಇದ್ದರೂ ಹೇಗೆ ದಾಳಿ ನಡೀತು..? ಸರ್ವ ಪಕ್ಷ ಸಭೆಗೆ ಪ್ರಧಾನಿಯೇ ಬರಲಿಲ್ಲ ಅಂದ್ರೆ ಹೇಗೆ..? ಮೋದಿ ಬಿಹಾರಕ್ಕೆ ಹೋಗಿ ಭಾಷಣ ಮಾಡ್ತಿದ್ದರು. ನೀವು ಏನಾದ್ರು ಭಾಷಣ ಮಾಡಿ, ಆದ್ರೆ ನಮಗೆ ಬೇಕಿರೋದು ರಕ್ಷಣೆ. ದೇಶದ ವಿಚಾರದಲ್ಲಿ ಎಲ್ಲರೂ ಒಂದಾಗಿರಬೇಕು. ನಮಗೆ ದೇಶದ ಮುಖ್ಯ, ಉಳಿದದ್ದು ನಂತರ ಎಂದರು.

ಹುಬ್ಬಳ್ಳಿಯ ಈ‌ ಸಮಾವೇಶ ಕೇವಲ ರಾಜ್ಯದಲ್ಲಿ ಮಾತ್ರವಲ್ಲ, ಸಂವಿಧಾನ ವಿರೋಧಿಗಳಿಗೆ ಎಚ್ಚರಿಕೆ. ಸ್ವತಂತ್ರವಾಗಿ‌ ಮಾತನಾಡುವ ‌ಶಕ್ತಿ ದೋರಕಿದ್ದು‌ ಸಂವಿಧಾನದ ಮೂಲಕ. ಮೋದಿಯವರು‌ ಇದನ್ನ‌ ಮೊಟಕುಗೋಳಿಸುತ್ತಿದ್ದಾರೆ. ಯಾರು ಮೋದಿ ಬಗ್ಗೆ ಮಾತನಾಡ್ತಾರೆ ಅಂತರವನ್ನು ಟಾರ್ಗೆಟ್ ಮಾಡಿ ಜೈಲಿಗೆ ಕಳಿಸುವ ಕೆಲಸ‌ ಮಾಡುತ್ತಿದ್ದಾರೆ. ಯಾರು ಕಾಂಗ್ರೆಸ್ ಬೆಂಬಲಿಸ್ತಾರೆ ಅಂತರಿಗೆ ಇಡಿ-ಐಟಿ ಬೆದರಿಕೆ ತೋರಿಸಲಾಗುತ್ತಿದೆ. ದೇಶ ಉಳಿಯಬೇಕು ಎಂಬ ಉದ್ದೇಶದಿಂದ ನಾವು ಪ್ರಯತ್ನಿಸುತ್ತಿದ್ದೇವೆ. ನಾವು ಏನೇ ಕೆಲಸ ಮಾಡಿದ್ರು ಅದನ್ನು ಟಿಕಿಸುತ್ತೆ. ಮೋದಿ ಸರ್ಕಾರ ಜಾತಿ ಗಣತಿ ಮಾಡಲು ನಿರ್ಣಯ ತೆಗೆದುಕೊಂಡಿದೆ. ಇಂತಹದ್ದೇ ನಿರ್ಣಯ ತೆಗೆದುಕೊಳ್ಳಲು ನಾನು, ರಾಹುಲ್ ಗಾಂಧಿ ಒತ್ತಾಯಿಸಿದ್ದೆವು. 

ಪಹಲ್ಗಾಂನಲ್ಲಿ ಧರ್ಮ ಕೇಳಿ ಮಾರಣಹೋಮ ಮಾಡಲಾಯಿತು: ಮಲ್ಲಿಕಾರ್ಜುನ ಖರ್ಗೆ

ಎರಡು ವರ್ಷದ ಹಿಂದೆಯೇ ಮೋದಿಯವರಿಗೆ ಒತ್ತಾಯಿಸಿದ್ದೆ. ನಾನು ಏಪ್ರಿಲ್ 16 ಕ್ಕೆ‌ ನಾನು‌ಪತ್ರ ಬರೆದಿದ್ದೆ ಒತ್ತಾಯಿಸಿದ್ದೆ. ಸಾಮಾಜಿಕ, ಆರ್ಥಿಕ , ಸ್ಥಿತಿಗತಿಗಳು ತಿಳಿಯಲು ಅನುಕೂಲ ಆಗುತ್ತೆ ಅಂತ ಹೇಳಿದ್ದೆ. ಇವತ್ತು ಮೋದಿ ಸರ್ಕಾರವೇ ಒಪ್ಪಿಕೊಂಡಿದೆ. ಈ‌ ಮಾತನ್ನು ಯಾಕೆ ಆಗಲೇ ಹೇಳಲಿಲ್ಲ. ಇಲ್ಲಿನ ಮಂತ್ರಿಯ ಹೆಸರು ತೆಗೆದುಕೊಳ್ಳುವುದಿಲ್ಲ. ನಾನು ಹೆದರಿಕೆಯಿಂದ ಹೆಸರು ತೆಗೆದುಕೊಳ್ಳಲುತ್ತಿಲ್ಲ ಎಂದು ತಿಳಿಬೇಡಿ. ಮೋದಿ.. ಶಾ ಗೆ ಎದರಲಿಲ್ಲ, ನಿಮಗೆ ಯಾಕೆ‌ ಹೆದರಿಲಿ? ನಾವು ಜಾತಿ ಗಣತಿಗೆ ಒತ್ತಾಯಿಸಿದ್ದಾಗ ವಿರೋಧಿಸಿದ್ರಿ. ಈಗ ಯಾಕೆ ಒಪ್ಪಿಕೊಂಡ್ರಿ? ಎಂದು ಕೇಂದ್ರ ಸರ್ಕಾರದದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.