Asianet Suvarna News Asianet Suvarna News

ನಾನು ಬಿಜೆಪಿ, ಕಾಂಗ್ರೆಸ್‌ಗೆ ಟಾರ್ಗೆಟ್‌: ಎಚ್‌.ಡಿ.ಕುಮಾರಸ್ವಾಮಿ

ಬಿಜೆಪಿ ಹಾಗೂ ಕಾಂಗ್ರೆಸ್‌ನವರಿಗೆ ನಾನು ಟಾರ್ಗೆಟ್‌ ಆಗಿದ್ದೇನೆ. ಪಂಚರತ್ನ ಯಾತ್ರೆಯ ವೇಗವನ್ನು ಎರಡೂ ಪಕ್ಷಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದನ್ನು ಹೇಗೆ ಕಟ್ಟಿ ಹಾಕಬೇಕು.

I am a Target for BJP and Congress Says HD Kumaraswamy gvd
Author
First Published Feb 16, 2023, 4:00 AM IST | Last Updated Feb 16, 2023, 4:00 AM IST

ರಾಣಿಬೆನ್ನೂರು (ಫೆ.16): ಬಿಜೆಪಿ ಹಾಗೂ ಕಾಂಗ್ರೆಸ್‌ನವರಿಗೆ ನಾನು ಟಾರ್ಗೆಟ್‌ ಆಗಿದ್ದೇನೆ. ಪಂಚರತ್ನ ಯಾತ್ರೆಯ ವೇಗವನ್ನು ಎರಡೂ ಪಕ್ಷಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದನ್ನು ಹೇಗೆ ಕಟ್ಟಿ ಹಾಕಬೇಕು, ಕುಮಾರಸ್ವಾಮಿಯ ಯಾತ್ರೆಗೆ ಬರುವ ಜನರ ಸಂಖ್ಯೆಯನ್ನು ಹೇಗೆ ಕಡಿಮೆ ಮಾಡಬೇಕು ಎಂದು ಎರಡೂ ಪಕ್ಷಗಳು ತಲೆ ಕೆಡಿಸಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು. ತಾಲೂಕಿನ ಹಲಗೇರಿಯಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿ, ಎರಡೂ ಪಕ್ಷಗಳ ಬಗ್ಗೆ ಜನರಿಗೆ ಭ್ರಮ ನಿರಸನ ಆಗಿದೆ. ರಾಜಕೀಯ ಬ್ರಹ್ಮಾಸ್ತ್ರವನ್ನು ನಮ್ಮ ಮೇಲೆ ಬಿಟ್ಟರೂ ಜೆಡಿಎಸ್‌ನ್ನು ತಡೆಯಲು ಆಗಲ್ಲ ಎಂದರು.

ರಮ್ಯಾ ನನ್ನ ಸಹೋದರಿ: ನಟಿ ರಮ್ಯಾ ಅಥವಾ ನಟ ಸುದೀಪ ಅವರು ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ರಮ್ಯಾ ನನ್ನ ಸಹೋದರಿ ಸಮಾನ. ನನ್ನ ವಿರುದ್ಧ ನಿಲ್ಲಬೇಕು ಅಂತ ಇದ್ದರೆ ನಿಲ್ಲಬಹುದು. ನಿಲ್ಲಬೇಡಿ ಅಂತ ಹೇಳುವುದಕ್ಕೆ ಆಗಲ್ಲ. ಅಂತಿಮವಾಗಿ ಜನತಾ ಜನಾರ್ದನನ ತೀರ್ಮಾನವೇ ಎಲ್ಲದಕ್ಕೂ ಸೂಕ್ತ ಉತ್ತರ ನೀಡುತ್ತದೆ ಎಂದರು. ರಾಜ್ಯದ ಅಭಿವೃದ್ಧಿ ಮಾಡದ ಬಿಜೆಪಿಯವರಿಗೆ ನರೇಂದ್ರ ಮೋದಿಯವರ ಮುಖ ತೋರಿಸಿ ಜನರಿಂದ ಓಟು ಕೇಳುವ ಪರಿಸ್ಥಿತಿ ಬಂದಿದೆ. 

ಕಾಂಗ್ರೆಸ್ಸಿನದು ಟಿಪ್ಪು ಸಂತಾನ: ನಳಿನ್‌ಕುಮಾರ್‌ ಕಟೀಲ್‌ ವಾಗ್ದಾಳಿ

ಬಿಜೆಪಿ ಶಾಸಕರೇ ಟೆಂಡರ್‌ ಪ್ರೋಸೆಸ್‌ನಲ್ಲಿ ಸಾವಿರಾರು ಕೋಟಿ ಅವ್ಯವಹಾರ ಆಗಿದೆ ಎಂದು ಸದನದಲ್ಲಿ ಆರೋಪ ಮಾಡಿದ್ದಾರೆ. ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಈ ಬಗ್ಗೆ ಮಾತಾಡಿದ್ದಾರೆ. ಬಿಜೆಪಿಯವರು ದಾಖಲೆ ಇಡಿ ಎನ್ನುತ್ತಿದ್ದಾರೆ. ಕಮಿಷನ್‌ ತಗೊಂಡಿರೋದಕ್ಕೆ ದಾಖಲೆ ಇಡೋಕಾಗುತ್ತಾ? ಇವರೇನು ಕಮಿಷನ್‌ನ್ನು ವೈಟ್‌ನಲ್ಲಿ ತೆಗೆದುಕೊಂಡಿದ್ದಾರಾ? ಎಲ್ಲ ಬ್ಲಾಕ್‌ ದುಡ್ಡು ತೆಗೆದುಕೊಂಡಿರುತ್ತಾರೆ. ಈ ಸಮಯದಲ್ಲಿ ದಾಖಲೆ ಎಲ್ಲಿ ಇಡಲು ಸಾಧ್ಯ? ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಸ್ಯಾಂಟ್ರೋ ರವಿ ಬಂಧನ ಮಾಡಿದ್ರಲ್ಲ. ವಿಡಿಯೋಗಳು ಬಂದವಲ್ವಾ?. ಭ್ರಷ್ಟಾಚಾರದ ಬಗ್ಗೆ ಅದಕ್ಕಿಂತ ದಾಖಲೆ ಬೇಕಾ ಎಂದು ಪ್ರಶ್ನಿಸಿದರು.

ಕೋಲಾರದಿಂದ ಸ್ಪರ್ಧೆ, ಸಿದ್ದು ಕೈಗೊಂಡ ತಪ್ಪು ನಿರ್ಧಾರ: ಸಿ.ಎಂ.ಇಬ್ರಾಹಿಂ

ಜೆಡಿಎಸ್‌ ಮುಖಂಡ ಪ್ರಭಾಕರ ರೆಡ್ಡಿ ಮನೆ ಮೇಲೆ ಐಟಿ ದಾಳಿ ಕುರಿತು ಪ್ರತಿಕ್ರಿಯಿಸಿ, ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ಅಲ್ಲಿನ ವಿರೋಧ ಪಕ್ಷಗಳ ಮುಖಂಡರ ಮನೆ ಮೇಲೆ ಐಟಿ ರೇಡ್‌ ಆಗುತ್ತವೆ. ಬಿಜೆಪಿ ಸರ್ಕಾರ ಬಂದ ಮೇಲೆ ಇದು ನಡೆದುಕೊಂಡು ಬಂದಿದೆ. ಬಿಜೆಪಿಯವರ ಚುನಾವಣಾ ವ್ಯವಸ್ಥೆಯೇ ಹೀಗಿದೆ. ಬಿಬಿಸಿಯವರನ್ನೇ ಬಿಟ್ಟಿಲ್ಲ. ಇನ್ನೂ ವಿರೋಧ ಪಕ್ಷದವರು ಯಾವ ಲೆಕ್ಕ ಅವರಿಗೆ. ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಯವರು ಇದನ್ನೇ ಮಾಡಿದ್ದಾರೆ ಎಂದು ಆರೋಪಿಸಿದರು. ಜನಾರ್ದನ ರೆಡ್ಡಿ ಪಕ್ಷದ ಕುರಿತು ಪ್ರತಿಕ್ರಿಯಿಸಿ, ಅವರ ಪಕ್ಷದಿಂದ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಹೊಡೆತ ಬೀಳುತ್ತದೆಯೇ ಹೊರತು ಜೆಡಿಎಸ್‌ಗೆ ಸಮಸ್ಯೆಯಾಗದು ಎಂದರು.

Latest Videos
Follow Us:
Download App:
  • android
  • ios