ಮಾಜಿ ಸಿಎಂ ಸಿದ್ದರಾಮಯ್ಯ ರಾಜಕಾರಣದಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರದಿಂದಾಗಿ ಕೋಲಾರ ಕ್ಷೇತ್ರದ ಚುನಾವಣೆಯು ಅವರ ಕೊನೆಯ ಚುನಾವಣೆಯಾಗಲಿದೆ ಎಂದು ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದರು. 

ಕೋಲಾರ (ಫೆ.16): ಮಾಜಿ ಸಿಎಂ ಸಿದ್ದರಾಮಯ್ಯ ರಾಜಕಾರಣದಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರದಿಂದಾಗಿ ಕೋಲಾರ ಕ್ಷೇತ್ರದ ಚುನಾವಣೆಯು ಅವರ ಕೊನೆಯ ಚುನಾವಣೆಯಾಗಲಿದೆ ಎಂದು ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದರು. ಎಪಿ ಪ್ಲಾಜಾದಲ್ಲಿ ಜೆಡಿಎಸ್‌ ಪಕ್ಷದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯರ ರಾಜಕಾರಣ ಕೊನೆಯಾಗಿ ವಿಶ್ರಾಂತಿ ಪಡೆಯಲು ಮನೆಗೆ ಹೋಗಲಿದ್ದು, ಜೆಡಿಎಸ್‌ ಪಕ್ಷದ ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಭವಿಷ್ಯ ನುಡಿದರು.

ಸಿದ್ದರಾಮಯ್ಯ ಸ್ವಾರ್ಥಿ: ಸಿದ್ದರಾಮಯ್ಯರನ್ನು ಎರಡು ಬಾರಿ ಮುಖ್ಯಮಂತ್ರಿ ಮಾಡಿದೆ. ಆದರೆ ನನ್ನನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲು ಕೇಳಿದರೆ ಮಾಡಲಿಲ್ಲ. ಹೋಗಲಿ ಈಗ ಜೊತೆಯಲ್ಲಿರುವ ನಸೀರ್‌ ಅಹ್ಮದ್‌ರನ್ನಾದರೂ ಮಾಡಿದರೇ, ಅವರನ್ನು ಮಾಡಲಿಲ್ಲ. ಸಿದ್ದರಾಮಯ್ಯ ಸ್ವಾರ್ಥಿಗಳು ಯಾರನ್ನು ಬೆಳೆಯಲು ಅವಕಾಶ ನೀಡುವುದಿಲ್ಲ, ನಾನು ಕಾಂಗ್ರೆಸ್‌ ಬಿಟ್ಟನಂತರ ನಸೀರ್‌ಅಹ್ಮದ್‌ರಿಗೆ ಹೆಚ್ಚಿನ ಮರ್ಯಾದೆ ಸಿಗುತ್ತಿದೆ, ನನ್ನ ಮಗನಿಗೆ ಸೀಟು ಕೊಡು ಎಂದರೂ ಕೊಡಲಿಲ್ಲ. ಅಲ್ಪಸಂಖ್ಯಾತರಿಗೆ ಅವರ ಅಧಿಕಾರದಲ್ಲಿ ಯಾವುದೇ ನೆರವು ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಫೆ.20ರಂದು ಶೃಂಗೇರಿ ಮಠಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಭೇಟಿ

ಶ್ರೀನಿವಾಸಪುರ ಘಟಬಂಧನ್‌ ಶಾಸಕರ ಮಾತು ಕೇಳಿ ಕೆ.ಎಚ್‌.ಮುನಿಯಪ್ಪ ವಿರುದ್ಧವಾಗಿ ಕೆಲಸ ಮಾಡಿ ಸೋಲಿಸಿ ಬಿಜೆಪಿಯನ್ನು ಗೆಲ್ಲಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಜಮೀರ್‌ ಆಹ್ಮದ್‌ರನ್ನು ಸೋಲಿಸಿ ಕೆ. ಶ್ರೀನಿವಾಸಗೌಡರನ್ನು ಗೆಲ್ಲಿಸಿದರು. ಗೆದ್ದಿರುವ ಸಂಸದ ಮುಸ್ಲಿಮರ ಬಳಿ ಮಾವು ಖರೀದಿಸುವುದು ಬೇಡ, ಕ್ಲಾಕ್‌ ಟವರ್‌ ಮೇಲೆ ಜಂಡಾ ಹರಿಸುವುದಾಗಿ ಅದನ್ನು ನಿಮ್ಮಪ್ಪ ಅಂತ ಕೇಳುತ್ತಾನೆ. ಅದಕ್ಕೆ ಆ ಟವರ್‌ ಮೇಲೆ ನನ್ನ ಅಪ್ಪನದು ಎಂದು ಇದೆ ಹೋಗಿ ನೋಡು ಎಂದು ಜಮೀರ್‌ ಆಹ್ಮದ್‌ ಎಂದು ತಿರುಗೇಟು ನೀಡಿದ್ದಾರೆ ಎಂದು ನೆನಪಿಸಿದರು.

ಅಧಿವೇಶನದ ಬಳಿಕ ಪಕ್ಷಕ್ಕೆ ಹಲವರ ಸೇರ್ಪಡೆ: ಫೆಬ್ರವರಿ ಕಳೆದ ನಂತರ ವಿಧಾನಸಭಾ ಅಧಿವೇಶನ ನಂತರ ಜೆಡಿಎಸ್‌ಗೆ ಕಾಂಗ್ರೆಸ್‌ ಮತ್ತು ಬಿಜೆಪಿಯ ಹಲವಾರು ಶಾಸಕರು ಸೇರ್ಪಡೆಯಾಗಲಿದ್ದಾರೆ. ಕುಮಾರಸ್ವಾಮಿ ಸರ್ಕಾರ ಬಿಜೆಪಿ ಪಕ್ಷಕ್ಕೆ ಪಕ್ಷಾಂತರ ಮಾಡಿದವರ ಬಾಂಬೆ ಫ್ರೆಂಡ್‌್ಸ 12 ಮಂದಿ ಶಾಸಕರ ಸಿಡಿಗಳು ನಮಗೆ ಸಿಕ್ಕಿದೆ ಅವರನ್ನು ನಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ. ಭ್ರಷ್ಟರನ್ನು ನಾವು ಹತ್ತಿರಕ್ಕೆ ಸೇರಿಸುವುದಿಲ್ಲ. ಕಾಂಗ್ರೆಸ್‌ ಕೋಲಾರದ ಇತಿಹಾಸದಲ್ಲಿ 40 ಸಾವಿರ ಮತಗಳಿಗಿಂತ ಹೆಚ್ಚಿನ ಮತಗಳನ್ನು ಪಡೆದಿಲ್ಲ, ಜೆಡಿಎಸ್‌ ಪಕ್ಷಕ್ಕೆ ಈ ಚುನಾವಣೆಯಲ್ಲಿ ಹಿಂದು ಮತ್ತು ಮುಸ್ಲಿಮರ ಎರಡು ಸಮುದಾಯದ ಮತಗಳು ಶಕ್ತಿ ತುಂಬಲಿದ್ದು ಶ್ರೀನಾಥ್‌ ಜಯಭೇರಿ ಬಾರಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಮೊದಲು ಆರೆಸ್ಸೆಸ್‌ ನಿಷೇಧಿಸಲಿ: ಸೋಮವಾರ ಜೆಡಿಎಸ್‌ ಪಕ್ಷದಿಂದ ಸದಸ್ಯರು ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಜಿಲ್ಲಾಧಿಕಾರಿಗೆ ದೂರು ನೀಡಿ ಕ್ರಮ ಕೈಗೊಳ್ಳಲು ಮನವಿ ಮಾಡಲಾಗುವುದು. ಪಿ.ಎಫ್‌.ಐ. ಸಂಘಟನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸುವವರು ಮೊದಲು ಆರ್‌ಎಸ್‌ಎಸ್‌ ಸಂಘಟನೆಯನ್ನು ನಿಷೇಸಲಿ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯ ಎಂದು ಸಂವಿಧಾನದಲ್ಲಿ ಇಲ್ಲ ಎಂದರು.

ಕೋಟೆನಾಡಿನಲ್ಲಿ ಆಸ್ತಿಗಾಗಿ ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡ ದಾಯಾದಿಗಳು

ಜೆಡಿಎಸ್‌ ಅಭ್ಯರ್ಥಿ ಸಿ.ಎಂ.ಆರ್‌. ಶ್ರೀನಾಥ್‌, ಅಲ್ಪಸಂಖ್ಯಾತರ ರಾಜ್ಯಾಧ್ಯಕ್ಷ ಷಂಷೂದ್ದೀನ್‌ ಹರ್‌ ಖಾನ್‌,ಬೆಂಗಳೂರಿನ ಕಾಪೋರ್‍ರೇಟರ್‌ ಇಮ್ರಾನ್‌ಪಾಷ, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಟ್ರಾಕ್ಟರ್‌ ಮುಸ್ತಪಾ, ನಗರಸಭೆ ಮಾಜಿ ಅಧ್ಯಕ್ಷ ಎಲ್‌.ಖಲೀಲ್‌, ಕೆಜಿಎಫ್‌ ಜೆ.ಡಿ.ಎಸ್‌ ಅಭ್ಯರ್ಥಿ ಡಾ.ರಮೇಶ್‌ ಬಾಬು, ಜಿ.ಪಂ ಮಾಜಿ ಸದಸ್ಯ ಬಾಲಾಜಿ ಚೆನ್ನಯ್ಯ, ಜಿಲ್ಲಾ ಜೆಡಿಎಸ್‌ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್‌, ಕುರುಬರ ಸಂಘದ ನಿರ್ದೇಶಕ ಅಶೋಕ್‌, ಅಭೀದ್‌ ಆಸ್ಲಾಂ, ಅಜೀಜ್‌ ಬೇಗ್‌ ಇದ್ದರು.