ತನಿಖೆ ಮಾಡುವವರ ವಿರುದ್ಧ ಆರೋಪ ಮಾಡುವುದು ಎಷ್ಟು ಸರಿ: ಎ.ಎಸ್.ಪೊನ್ನಣ್ಣ ಅಸಮಾಧಾನ
ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಅವರು ಅಧಿಕಾರಿ ಒಬ್ಬರಿಂದ 20 ಕೋಟಿ ಲಂಚ ಕೇಳಿದ್ದಾರೆ ಎಂದು ಆಡಿಯೋ ಒಂದನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿ ಆರೋಪಿಸಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಸೆ.28): ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಅವರು ಅಧಿಕಾರಿ ಒಬ್ಬರಿಂದ 20 ಕೋಟಿ ಲಂಚ ಕೇಳಿದ್ದಾರೆ ಎಂದು ಆಡಿಯೋ ಒಂದನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿ ಆರೋಪಿಸಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಚೇರಂಬಾಣೆಯಲ್ಲಿ ನಡೆದ ಕೊಡವ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಲೋಕಾಯುಕ್ತ ಅಧಿಕಾರಿಗಳು ಲಂಚ ಪಡೆದರೆ ನಾವೇನು ಮಾಡಬಹುದು, ಲೋಕಾಯುಕ್ತ ಸಂಸ್ಥೆ ಸರ್ಕಾರದ ಕೆಳಗೆ ಇದೆಯಾ.? ಅದೊಂದು ಕಾನೂನು ಬದ್ಧವಾಗಿ ರಚನೆಯಾಗಿರುವ ಸ್ವತಂತ್ರ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ಆದರೆ ತಮ್ಮ ವಿರುದ್ಧ ತನಿಖೆ ಮಾಡುವವರ ವಿರುದ್ಧವೇ ಆರೋಪ ಮಾಡುವುದು ಸರಿಯಲ್ಲ. ಎಸ್ ಐಟಿ ಯಾರ ವಿರುದ್ಧ ತನಿಖೆ ನಡೆಸುತ್ತಿದೆ, ಯಾರು ತನಿಖೆ ಮಾಡುತ್ತಿದ್ದಾರೋ ಅವರ ವಿರುದ್ಧ ಆರೋಪ ಮಾಡುವುದು ಅವರ ಚಾಳಿ. ತನಿಖೆ ಮಾಡವವರ ವಿರುದ್ಧವೇ ಆರೋಪ ಮಾಡಬಹುದಾ.
ಚಾಮರಾಜನಗರದ ಜನನ ಮಂಟಪದಲ್ಲೂ ನಡೆಯಲಿದೆ ಚಾಮರಾಜೇಶ್ವರರ ದರ್ಬಾರ್
ಈಗ ನಮ್ಮ ವಿರುದ್ಧವೂ ಲೋಕಾಯುಕ್ತ ತನಿಖೆ ನಡೆಯುತ್ತಿದೆಯಲ್ಲಾ, ನಾವು ಲೋಕಾಯುಕ್ತ ಅಧಿಕಾರಿಗಳ ವಿರುದ್ಧ ಆರೋಪ ಮಾಡಬಹುದೇ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಎ. ಎಸ್ ಪೊನ್ನಣ್ಣ ಹರಿಹಾಯ್ದರು. ಇನ್ನಷ್ಟು ಆಡಿಯೋಗಳು ಇವೆ, ಅವುಗಳನ್ನು ಬಿಟ್ಟರೆ ನಾಲ್ಕೈದು ಸಚಿವರು ರಾಜೀನಾಮೆ ಕೊಡಬೇಕಾಗುತ್ತದೆ ಎಂಬ ಹೆಚ್ ಡಿಕೆ ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಆಡಿಯೋ ಬಿಟ್ಟು ರಾಜೀನಾಮೆ ತೆಗೆದುಕೊಳ್ಳಲಿ ಬಿಡಿ ಎಂದು ಎಚ್ ಡಿಕೆ ಹೇಳಿಕೆಯನ್ನು ಪೊನ್ನಣ್ಣ ಗೇಲಿ ಮಾಡಿದರು.
ಇನ್ನು ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಅವಕಾಶ ನೀಡುವಂತೆ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿರುವುದಕ್ಕೆ ಸಂಬಂಧಿಸಿದಂತೆ ಅದರ ಸಾಧಕ ಬಾಧಕ ಕುರಿತು ಚರ್ಚಿಸಿದ್ದೇವೆ ಎಂದು ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಹೇಳಿದ್ದಾರೆ. ಮೈಸೂರಿನಲ್ಲಿ ಸಿಎಂ ಮನೆಯಲ್ಲಿ ಸಚಿವರು ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪೊನ್ನಣ್ಣ ನಾನೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಲೋಕಾಯುಕ್ತ ಎಫ್ಐಆರ್ ಆಗಿದೆ. ಮತ್ತೊಂದೆ ಸಿಬಿಐ ತನಿಖೆಗೆ ವಹಿಸುವಂತೆ ರಿಟ್ ಅರ್ಜಿ ಸಲ್ಲಿಸಲಾಗಿದೆ.
ಸಂಸ್ಕೃತ ಕಲಿಯೋಕೆ ಇಸ್ರೇಲ್‌ನಿಂದ ಚಿಕ್ಕಮಗಳೂರಿಗೆ ಬಂದ ವಿದೇಶಿ ಟೀಮ್: ರಾಮಾಯಣದ ಈ ಶ್ಲೋಕಗಳನ್ನು ಕಲಿಯುತ್ತಿದ್ದಾರೆ!
ಅದರಿಂದ ಇವುಗಳಲ್ಲೆದರ ಬಗ್ಗೆ ಸಮಾಲೋಚನೆ ಮಾಡುವುದು ಸಹಜ ಅಲ್ಲವೆ? ಎಂದು ಪೊನ್ನಣ್ಣ ಹೇಳಿದ್ದಾರೆ. ನ್ಯಾಯಾಲಯದಲ್ಲಿ ಏನು ಏನೆಲ್ಲಾ ನಡೆಯುತ್ತಿದೆ, ಅದಕ್ಕೆ ಸೂಕ್ತವಾದ ರೀತಿಯಲ್ಲಿ ಸ್ಪಂದಿಸಬೇಕಲ್ಲ. ಒಟ್ಟಿನಲ್ಲಿ ಸಿಎಂ ವಿರುದ್ಧ ಎಲ್ಲಾ ರೂಪದ ಷಡ್ಯಂತ್ರ ನಡೆಯುತ್ತಿದೆ. ರಾಜಕೀಯ ಷಡ್ಯಂತ್ರದಲ್ಲಿ ಬೇರೆ ಬೇರೆ ಅಂಶಗಳಿವೆ. ಅವೆಲ್ಲವನ್ನೂ ಎದುರಿಸಬೇಕಾಗುತ್ತದೆ ಎಂದಿದ್ದಾರೆ. ಬಳಿಕ ಚೇರಂಬಾಣೆಯ ಕೊಡವ ಸಮಾಜದಲ್ಲಿ ನಡೆದ ಕೊಡಗಿನ ಆದಿಕವಿ ಹಾರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯವರ 157 ನೇ ಜನ್ಮದಿನಾಚರಣೆಯ ಅಂಗವಾಗಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಕೊಡವ ಸಮುದಾಯದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.