ಬೆಂಗಳೂರು, [ಫೆ.2]: ರಾಜ್ಯ ಸಂಪುಟ ವಿಸ್ತರಣೆ ಇದೆ ಗುರುವಾರ ಅಂದ್ರೆ ಫೆ. 6ಕ್ಕೆ ಮುಹೂರ್ತ ನಿಗದಿಯಾಗಿದ್ದು, 13 ಶಾಸಕ ಸಚಿವ ರಾಗಿ ಪ್ರಮಾಣ ವಚನ ಸ್ವೀಕರಿಸುವುದು ಪಕ್ಕಾ ಆಗಿದೆ.

ಆದರೂ ಮತ್ತೊಂದೆಡೆ ಸಚಿವ ಸ್ಥಾನಕ್ಕಾಗಿ ಸಚಿವಾಕಾಂಕ್ಷಿಗಳು ಲಾಬಿ ಮುಂದುವರಿಸಿದ್ದಾರೆ. ಆದ್ರೆ, ಉಪಚುನಾವಣೆಯಲ್ಲಿ ಸೋತು ಮಂತ್ರಿ ಸ್ಥಾನ ನೀಡುವಂತೆ ಯಡಿಯೂರಪ್ಪನವರ ದುಂಬಾಲು ಬಿದ್ದಿದ್ದ ಎಂಟಿಬಿ ನಾಗರಾಜ್ ಸೈಲೆಂಟ್ ಆಗಿದ್ದಾರೆ. 

10+3 ಅಡಿಯಲ್ಲಿ ಸಂಪುಟ ವಿಸ್ತರಣೆ: ಗೆದ್ದ ಓರ್ವ ಶಾಸಕನಿಗಿಲ್ಲ ಮಂತ್ರಿಗಿರಿ.!

ಇಂದು [ಭಾನುವಾರ] ಯಡಿಯೂರಪ್ಪನವರನ್ನ ಭೇಟಿ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ,   ಯಡಿಯೂರಪ ಕೊಟ್ಟ ಭರವಸೆಗಳನ್ನು ಒಂದಲ್ಲಾ ಒಂದು ದಿನ ಈಡೇರಿಸ್ತಾರೆ ಎಂಬ ಭರವಸೆ ಇದೆ. ಮಂತ್ರಿ ಸ್ಥಾನದ ವಿಚಾರದಲ್ಲಿ ಯಾರ್ಯಾರು ನನ್ನ ಪರವಾಗಿ ಮಾತನಾಡಿದ್ದಾರೆ ಎಲ್ಲರಿಗೂ ಧನ್ಯವಾದಗಳು ಎಂದು ಹೇಳುವ ಮೂಲಕ ಮಂತ್ರಿ ಸ್ಥಾನದ ಆಸೆ ಕೈಬಿಟ್ಟರು.

ಇದೇ ತಿಂಗಳ 9ರಂದು ನಗರಸಭೆ ಚುನಾವಣೆ ಇದೆ. ಈ ಸಂಬಂಧ ಚರ್ಚೆ ಮಾಡಲು ಬಂದಿದ್ದೆ. ಸಂಪುಟ ವಿಸ್ತರಣೆ ವಿಚಾರ ಕೂಡ ಚರ್ಚೆ ಮಾಡಿದೆ. ನನ್ನ ಕ್ಷೇತ್ರ ದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದೆ. ಸಿಎಂ ನಮ್ಮ ನಾಯಕರು, ಅವರ ಮೇಲೆ ವಿಶ್ವಾಸ ಇದೆ. ಯಾವುದೇ ಕಂಡಿಷನ್ ಹಾಕಿ  ಬಿಜೆಪಿ ಸೇರಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಎಸ್ ವೈ  ಕೊಟ್ಟ ಭರವಸೆಗಳನ್ನು ಒಂದಲ್ಲಾ ಒಂದು ದಿನ ಈಡೇರಿಸ್ತಾರೆ ಎಂಬ ಭರವಸೆ ಇದೆ
ನೀವು ನಮ್ಮ ಮೇಲೆ ಭರವಸೆ ಇಟ್ಟು ಪಕ್ಷಕ್ಕೆ ಸೇರ್ಪಡೆಯಾಗಿದ್ದೀರಾ, ನಿಮ್ಮನ್ನು ಗೌರವಯುತವಾಗಿ ನಡೆಸಿಕೊಳ್ತೇವೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಶಂಕರ್ ಅವನ್ನು ಎಂ ಎಲ್ ಸಿ ಮಾಡಿ ಸಚಿವರನ್ನಾಗಿ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಸಂಪುಟ ವಿಸ್ತರಣೆ ಫಿಕ್ಸ್ ಆಗುತ್ತಿದ್ದಂತೆಯೇ ಸಂಭವನೀಯ ಸಚಿವರಿಂದ ಖಾತೆಗಾಗಿ ಪೈಪೋಟಿ

ನಾವು ಎಲ್ಲಾ ಒಗ್ಗಟ್ಟಿನಿಂದ ಇದ್ದೇವೆ. ನನ್ನ ಸೋಲಿಗೆ ತಂದೆ ಮಗ ಕಾರಣ.  ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ವಂತೆ ಹೈಕಮಾಂಡ್ ಗೆ ದೂರು ನೀಡಿದ್ದೇವೆ. ಸಂಪುಟ ವಿಸ್ತರಣೆ ಬಳಿಕ ಮತ್ತೆ ಸಿಎಂ ಜೊತೆ ಅಪ್ಪ ಮಕ್ಕಳ ವಿಚಾರ ಚರ್ಚೆ ಮಾಡುವೆ ಎಂದು ತಿಳಿಸಿದರು.

ಒಟ್ಟಿನಲ್ಲಿ ಈ ಮೊದಲ ಸಚಿವ ಸ್ಥಾನಕ್ಕಾಗಿ ಬಿಗಿಪಟ್ಟು ಹಿಡಿದಿದ್ದ ಎಂಟಿಬಿಯನ್ನು ಬಿಎಸ್ ವೈ ಸಮಾಧಾನ ಮಾಡಿದ್ದಾರೆ ಎನ್ನುವುದು ನಾಗರಾಜ್ ಅವರ ಮಾತಿನಲ್ಲಿ ತಿಳಿಯುತ್ತದೆ. ಎಂಟಿಬಿಯನ್ನು ಸಮಧಾನವೇನು ಮಾಡಿದ್ದಾಯ್ತು. ಮತ್ತೋರ್ವ ಅನರ್ಹ ಶಾಸಕ ವಿಶ್ವನಾಥ್ ಅವರನ್ನು ಶಾಂತ ಮಾಡಬೇಕಾದ ಟಾಸ್ಕ್ ಯಡಿಯೂರಪ್ಪನವರ ಮುಂದಿದೆ.