ಬೆಂಗಳೂರು, (ಫೆ.02): ರಾಜ್ಯ ಸಂಪುಟ ವಿಸ್ತರಣೆ ಫೆ.6ಕ್ಕೆ ಫಿಕ್ಸ್ ಆಗಿದೆ. 10+3 ಅಂದ್ರೆ 10 ನೂತನ ಶಾಸಕರು ಹಾಗೂ ಮೂವರು ಬಿಜೆಪಿ ಹಿರಿಯ ಶಾಸಕರು ಸಚಿವರಾಗುವುದು ನಿಶ್ಚಿತವಾಗಿದೆ.

ರಾಣೇಬೆನ್ನೂರು ಶಾಸಕ ಅರುಣ್ ಪೂಜಾರಿ ಹಾಗೂ ಅಥಣಿ ನೂತನ ಶಾಸಕ ಮಹೇಶ್ ಕಮಟಳ್ಳಿ ಹೊರತುಪಡಿಸಿ ಇನ್ನುಳಿದ ಬೈ ಎಲೆಕ್ಷನ್‌ನಲ್ಲಿ ಗೆದ್ದ 10 ನೂತನ ಶಾಸಕರು ಮಂತ್ರಿಯಾಗಲಿದ್ದಾರೆ.

ಇನ್ನು ಮೂಲ ಬಿಜೆಪಿಗರಲ್ಲಿ ಅರವಿಂದ್ ಲಿಂಬಾವಳಿ, ಉಮೇಶ ಕತ್ತಿ ಮತ್ತು ಸಿ.ಪಿ.ಯೋಗೇಶ್ವರ್ ಅವರು ಸಂಪುಟಕ್ಕೆ ಸೇರುವುದು ಪಕ್ಕಾ ಆಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

10+3 ಅಡಿಯಲ್ಲಿ ಸಂಪುಟ ವಿಸ್ತರಣೆ: ಗೆದ್ದ ಓರ್ವ ಶಾಸಕನಿಗಿಲ್ಲ ಮಂತ್ರಿಗಿರಿ.!

ಒಟ್ಟು 13 ಶಾಸಕರುಗಳು ಫೆ.6ರಂದು ಪ್ರಮಾಣ ವಚನವೆನೋ ಸ್ವೀಕರಿಸಲಿದ್ದಾರೆ. ಆದ್ರೆ,ಯಾರಿಗೆ ಯಾವ ಖಾತೆ ಎನ್ನುವುದು ಭಾರೀ ಕುತೂಹಲ ಕೆರಳಿಸಿದೆ. 

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಬೇಕು. ಇಲ್ಲವಾದಲ್ಲಿ ಖಾತೆಗಳಗಾಗಿ ಕಿತ್ತಾಟ ಶುರುವಾಗಲಿದೆ ಎನ್ನುವ ಭಯದಿಂದ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಬೇಕೆನ್ನುವುದು ಬಿಎಸ್‌ವೈ ತೀರ್ಮಾನಿಸಿದ್ದಾರೆ.
 
ಮತ್ತೊಂದೆಡೆ ಸಂಪುಟಕ್ಕೆ ಸೇರಿಸಿಕೊಳ್ಳುವುದು ಖಚಿತವಾಗುತ್ತಿದ್ದಂತೆಯೇ ಸಂಭವನೀಯ ಸಚಿವರು ಖಾತೆಗಾಗಿ ಪೈಪೋಟಿ ನಡೆಸಿದ್ದಾರೆ ಎನ್ನುವ ಮಾಹಿತಿ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ.  

ಅದರಲ್ಲೂ ಪ್ರಮುಖ ಖಾತೆಗಳಾದ ಲೋಕೋಪಯೋಗಿ, ಜಲಸಂಪನ್ಮೂಲ ಮತ್ತು ಇಂಧನ ಖಾತೆಗಳಿಗಾಗಿ ಲಾಬಿಗಳು ಜೋರಾಗಿವೆ. ಹಾಗಾದ್ರೆ,  ಯಾರು ಯಾವ ಖಾತೆಗೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ. 

1. ಎಸ್.ಟಿ ಸೋಮಶೇಖರ್ - ಇಂಧನ/ ಬೆಂಗಳೂರು ನಗರಾಭಿವೃದ್ದಿ.. 
2. ಬೈರತಿ ಬಸವರಾಜ್ - ನಗರಾಭಿವೃದ್ಧಿ.. (ಬೆಂಗಳೂರು ನಗರಾಭಿವೃದ್ದಿ ಹೊರತುಪಡಿಸಿ.)
3. ಶಿವರಾಮ್ ಹೆಬ್ಬಾರ್ - ಅರಣ್ಯ ಖಾತೆ ಮತ್ತು ಸಣ್ಣ ನೀರಾವರಿ. 
4. ಬಿ.ಸಿ ಪಾಟೀಲ್ - ಗೃಹ/ಆಹಾರ ಮತ್ತು ನಾಗರಿಕ ಪೂರೈಕೆ.. 
5. ರಮೇಶ್ ಜಾರಕಿಹೊಳಿ - ಸಮಾಜ ಕಲ್ಯಾಣ/ಜಲಸಂಪನ್ಮೂಲ.. 
6. ಸುಧಾಕರ್ - ವೈದ್ಯಕೀಯ ಶಿಕ್ಷಣ/ಆರೋಗ್ಯ..
7. ಗೋಪಾಲಯ್ಯ - ಪಶುಸಂಗೋಪನೆ ಮತ್ತು ರೇಷ್ಮೆ..
8. ಶ್ರೀಮಂತ ಪಾಟೀಲ್ - ಸಕ್ಕರೆ.. 
9. ಆನಂದ ಸಿಂಗ್ -  ಪ್ರವಾಸೋದ್ಯಮ, ಯುವಜನ ಕ್ರೀಡೆ
10. ನಾರಾಯಣ ಗೌಡ - ಐ.ಟಿ ಬಿಟಿ ಮತ್ತು ಸಣ್ಣ ಕೈಗಾರಿಕೆ.. 
11. ಉಮೇಶ್ ಕತ್ತಿ - ಕೃಷಿ ಮತ್ತು ಸಹಕಾರ
12. ಅರವಿಂದ ಲಿಂಬಾವಳಿ - ಉನ್ನತ ಶಿಕ್ಷಣ
13. ಸಿ.ಪಿ ಯೋಗೇಶ್ವರ್ - ಪೌರಾಡಳಿತ