Asianet Suvarna News Asianet Suvarna News

Kolar: ಎದುರಾಳಿಗಳಿಗೆ ಟಕ್ಕರ್ ಕೊಟ್ಟ ಮಾಲೂರು ಬಿಜೆಪಿ ಸಂಭಾವ್ಯ ಅಭ್ಯರ್ಥಿ ಹೂಡಿ ವಿಜಯಕುಮಾರ್!

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಇದ್ದು ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಕಸರತ್ತು ಶುರು ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಇಂದು ಕೋಲಾರ ಜಿಲ್ಲೆ ಮಾಲೂರು ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ ಅವರು ಸಖತ್ ಆಕ್ಟೀವ್ ಆಗಿದ್ದಾರೆ.

Hoodi Vijayakumar the potential candidate of the Malur BJP who gave a bump to the opponents gvd
Author
First Published Mar 19, 2023, 1:00 AM IST

ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಮಾ.19): ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಇದ್ದು ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಕಸರತ್ತು ಶುರು ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಇಂದು ಕೋಲಾರ ಜಿಲ್ಲೆ ಮಾಲೂರು ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ ಅವರು ಸಖತ್ ಆಕ್ಟೀವ್ ಆಗಿದ್ದು, ದಾಖಲೆ ಪ್ರಮಾಣದಲ್ಲಿ ಮಹಿಳೆಯನ್ನು ಸೇರಿಸಿ ಮಹಾಲಕ್ಷ್ಮೀ ನಮೋಸ್ತುತೆ ಅನ್ನೋ ಹೆಸರಿನಲ್ಲಿ ಸುಮಾರು 20 ಸಾವಿರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಸುವ ಮೂಲಕ ತಮ್ಮ ವಿರೋಧಿಗಳಿಗೆ ನಡುಕ ಉಂಟುಮಾಡಿದ್ದಾರೆ.

ಸ್ವ ಪಕ್ಷದವರಿಂದಲೇ ಆರಂಭದಲ್ಲಿ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುವ ಪ್ರಯತ್ನ ಮಾಡಿ ನಿಗಧಿ ಆಗಿದ್ದ ಕಾರ್ಯಕ್ರಮದ ಸ್ಥಳದಲ್ಲಿ ತೊಂದರೆ ನೀಡಿದ್ರು.ಆದ್ರೆ ಬಿಜೆಪಿ ಟಿಕೇಟ್ ಗಾಗಿ ಫುಲ್ ಆಕ್ಟೀವ್ ಆಗಿ ಸಂಘಟನೆ ಮಾಡಿರುವ ಹೂಡಿ ವಿಜಯ್ ಕುಮಾರ್ ಅವರು ತಮ್ಮ ಎದುರಾಳಿಗಳಿಗೆ ಇಂದು ಟಕ್ಕರ್ ಕೊಡುವ ಮೂಲಕ ಆತಂಕ ಹೆಚ್ಚು ಮಾಡಿದ್ದಾರೆ. ಹೌದು! ಮಾಲೂರು ಪಟ್ಟಣದ ವೈಟ್ ಗಾರ್ಡನ್ ಬಡಾವಣೆಯಲ್ಲಿ ಬಿಜೆಪಿ ಪಕ್ಷದ ಸಂಭಾವ್ಯ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ ಹಮ್ಮಿಕೊಂಡಿದ್ದ ತಾಯಂದಿರ ಆಶೀರ್ವಾದಕ್ಕಾಗಿ ಮಹಾಲಕ್ಷ್ಮಿ ನಮೋಸ್ತುತೆ ಕಾರ್ಯಕ್ರಮದಲ್ಲಿ  ಬರೋಬರಿ 20 ಸಾವಿರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಆಯೋಜನೆ ಮಾಡುವುದರ ಜೊತೆಗೆ, ಕೊಲ್ಲಾಪುರದಿಂದ ವಿಶೇಷ ಪೂಜೆ ಸಲ್ಲಿಸಿ ತಂದಿದ್ದ ಮಹಾಲಕ್ಷ್ಮಿಗೆ ಬೃಹತ್ ವೇದಿಕೆಯ ಮೇಲೆ ಪೂಜೆ ಸಲ್ಲಿಸುವುದರ ಜೊತೆಗೆ ಸೇರಿದ್ದ ಮಹಿಳೆಯರಿಗೆ ಸೀರೆ, ಲಕ್ಷ್ಮೀ ಫೋಟೋ ಹಾಗೂ ಪೂಜಾ ಸಾಮಗ್ರಿಗಳನ್ನು ನೀಡುವ ಮೂಲಕ ದಾಖಲೆ ಪ್ರಮಾಣದಲ್ಲಿ ಕಾರ್ಯಕ್ರಮ ನಡೆಸುವ ಮೂಲಕ ತಮ್ಮ ರಾಜಕೀಯ ವಿರೋಧಿಗಳಿಗೆ ನಡುಕ ಉಂಟುಮಾಡಿದ್ದಾರೆ.

ಮಹಿಳಾ ಸಬಲೀಕರಣಕ್ಕೆ ಬಿಜೆಪಿ ಸರ್ಕಾರ ಬದ್ಧ: ಶೋಭಾ ಕರಂದ್ಲಾಜೆ

ಇನ್ನು ವಿಶೇಷವಾಗಿ ಈ ಕಾರ್ಯಕ್ರಮಕ್ಕೆ ಶ್ರೀ ಮಹರ್ಷಿ ಆನಂದ ಗುರೂಜಿ ಸಹ ಆಗಮಿಸಿ,ವೇದಿಕೆಯಲ್ಲಿ ಮಹಾಲಕ್ಷ್ಮೀ ವಿಗ್ರಹಕ್ಕೆ ಅರ್ಚನೆಯ ಜೊತೆ ಜೊತೆಗೆ ನೆರೆದಿದ್ದ ಮಹಿಳೆಯರಿಗೆ ಆಶೀರ್ವಚನ ನೀಡಿ ಮಾತನಾಡಿದ್ರು,ಮಾಲೂರು ತಾಲೂಕಿನ ಜನತೆ ಸುಖ ಶಾಂತಿ ನೆಮ್ಮದಿಯಿಂದ  ಜೀವನ ನಡೆಸಲು ಮಹಾಲಕ್ಸ್ಮಿಯ ಆಶೀರ್ವಾದಕ್ಕಾಗಿ ದೇವರು ನೀಡಿದ್ದನ್ನು ಸಮಾಜಕ್ಕೆ ನೀಡಬೇಕೆಂದು ಆಶಯ ಹೊತ್ತಿರುವ ಹೂಡಿ ವಿಜಯ್ ಕುಮಾರ್ ಅವರಿಗೆ ಮಹಾಲಕ್ಷ್ಮಿ ದೇವಿಯ ಆಶೀರ್ವಾದ ಹಾಗೂ ಮಹಿಳೆಯರ ಆಶೀರ್ವಾದ ದೊರೆಯಲಿದೆ,ತಾಲೂಕಿನ ಅಭಿವೃದ್ಧಿಗಾಗಿ ತನ್ನದೇ ಆದ ಕನಸನ್ನು ಹೊತ್ತಿರುವ ವಿಜಯ್ ಕುಮಾರ್ ಅವರು ಕಳೆದ ನಾಲ್ಕು ವರ್ಷಗಳಿಂದ ಮಾಲೂರು ತಾಲೂಕಿನಲ್ಲಿ ನಿರಂತರವಾಗಿ ಸಮಾಜ ಸೇವೆಯ ಮೂಲಕ ಜನಸೇವೆಯನ್ನು ಮಾಡುತ್ತಿದ್ದಾರೆ ಅವರ ಸೇವೆಯು ಈ ತಾಲೂಕಿನ ಜನತೆಗೆ ಮತ್ತಷ್ಟು ಸಿಗಲು ಮುಂಬರುವ ಚುನಾವಣೆಯಲ್ಲಿ ಹೂಡಿ ವಿಜಯ್ ಕುಮಾರ್ ಅವರನ್ನು ತಾಯಂದರು   ಬೆಂಬಲಿಸುವಂತೆ ಮನವಿ ಮಾಡಿದರು.

ಇನ್ನು ಇದೇ ವೇಳೆ ಮಹಾಲಕ್ಷ್ಮೀ ನಮೋಸ್ತುತೆ ಕಾರ್ಯಕ್ರಮಕ್ಕೆ ಆರಂಭದಲ್ಲಿ ಅಡ್ಡಿಪಡಿಸಿದ ಸ್ವಪಕ್ಷದ ನಾಯಕರು ಹಾಗೂ ರಾಜಕೀಯ ವಿರೋಧಿಗಳ ವಿರುದ್ಧ  ಕಿಡಿಕಾರಿದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಹೂಡಿ ವಿಜಯಕುಮಾರ್,ತಾಲೂಕಿನ ಜನರಿಗೆ ಲಕ್ಷ್ಮಿ ಒಳ್ಳೆಯದನ್ನು ಮಾಡಲಿ ಎಂದು ಆನಂದ ಗುರೂಜಿ ಅವರೊಂದಿಗೆ ಮಹಾರಾಷ್ಟ್ರದ ಕೊಲ್ಲಾಪುರ ಲಕ್ಷ್ಮಿ ದೇವಾಲಯಕ್ಕೆ ತೆರಳಿ ತಾಲೂಕಿನ ಒಳತಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದೇನೆ.ಲಕ್ಷ್ಮಿ ದರ್ಶನ ಪಡೆದು ಮಾಲೂರು ಪಟ್ಟಣದಲ್ಲಿ ತಾಯಂದಿರ ಆಶೀರ್ವಾದಕ್ಕಾಗಿ ಮಹಾಲಕ್ಷ್ಮಿ ನಮೋಸ್ತುತೆ ಕಾರ್ಯಕ್ರಮವನ್ನು ಏರ್ಪಡಿಸಿ ತಾಯಂದಿರ ಕೈಯಿಂದ ಮಹಾಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.ಪಟ್ಟಣದ ಹೋಂಡಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲು ಸಿದ್ಧತೆಗಳನ್ನು ನಡೆಸಲಾಗಿತ್ತು. 

ಆದರೆ ಕೆಲವರು ನೀಡಿದ ತೊಂದರೆಯಿಂದ ವೈಟ್ ಗಾರ್ಡನ್ನಲ್ಲಿ ಆನಂದ್ ಗುರೂಜಿಯವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ತಾಲೂಕಿನ ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ನಾಲ್ಕು ವರ್ಷಗಳ ಕೆಲಸ ನನ್ನ ಸೇವೆ ನನಗೆ ತೃಪ್ತಿ ತಂದಿದೆ ಈ ದಿನ ಫಲ ಕೊಟ್ಟಿದೆ ತಾಲೂಕಿನ ಜನತೆ ನನ್ನನ್ನು ರಾಜಕೀಯವಾಗಿ ಬೆಂಬಲಿಸಿದರೆ ಮತ್ತಷ್ಟು ಜನ ಸೇವೆ ಮಾಡಲು ನಾನು ತಾಲೂಕಿನ ಅಭಿವೃದ್ಧಿ ಬಗ್ಗೆ ಕನಸು ಕಂಡಿರುವ ಕನಸನ್ನು ನನಸಾಗಿಸಲಾಗುವುದು. ಜೆಡಿಎಸ್ ಅಭ್ಯರ್ಥಿ ರಾಮೇಗೌಡ ಅವರು 10 ಸಾವಿರ ನಿವೇಶನಗಳನ್ನು ನೀಡುವುದಾಗಿ ಹೇಳುತ್ತಾರೆ.

ಚುನಾವಣೆಗೆ ಮೊದಲೇ ನಿವೇಶನಗಳನ್ನು ನೀಡಿ ಸ್ಪರ್ಧಿಸಲಿ ಎಂದರು.ಇನ್ನು ಹಾಲಿ ಶಾಸಕ ಕೆ ವೈ ನಂಜೇಗೌಡ ಅವರು ತಾಲೂಕಿನ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದಾರೆ ರಸ್ತೆಗಳ ಅಭಿವೃದ್ಧಿಗೆ ಕಾಳಜಿ ತೋರದ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ ರಸ್ತೆಗಳು ಅದಕ್ಕೆ ಗಳಿಂದ ಅಪಘಾತಗಳು ಹೆಚ್ಚಾಗಿ ಹಲವಾರು ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದರು. ಇನ್ನು ಕಾರ್ಯಕ್ರಮ ಆರಂಭಕ್ಕೂ ಮುನ್ನ ಮಾಲೂರು ಗ್ರಾಮ ದೇವತೆ ಮಾರಿಕಾಂಬ ದೇವಾಲಯಕ್ಕೆ ಮಹರ್ಷಿ ಆನಂದ್ ಗುರೂಜಿ ದಂಪತಿಗಳು ಹಾಗೂ ಹೂಡಿ ವಿಜಯ್ ಕುಮಾರ್ ದಂಪತಿಗಳು ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.ಅಲ್ಲಿಂದ ವಿವಿಧ ಕಲಾತಂಡಗಳೊಂದಿಗೆ ಪಲ್ಲಕ್ಕಿ ಉತ್ಸವ ಮೆರವಣಿಗೆಯೊಂದಿಗೆ ವೈಟ್ ಗಾರ್ಡನ್ ಬಳಿ ಹಮ್ಮಿಕೊಂಡಿದ್ದ ಮಹಾಲಕ್ಷ್ಮಿ ನಮೋಸ್ತುತೆ ಕಾರ್ಯಕ್ರಮದ ವೇದಿಕೆಗೆ ಆಗಮಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಧೂಳಿಪಟ ಗ್ಯಾರಂಟಿ: ಸಿ.ಟಿ.ರವಿ

ಮಾಲೂರು ಕ್ಷೇತ್ರದ 20 ಸಾವಿರಕ್ಕೂ ಹೆಚ್ಚು ಮಹಿಳೆಯರು ಕಾರ್ಯಕ್ರಮ ದಲ್ಲಿ ಬಾಗಿಯಾಗಿದ್ದರು ಕಾರ್ಯಕ್ರಮಕ್ಕೆ ಆಗಮಿಸಿದ ಮಹಿಳೆಯರಿಗೆ ಮಹಾಲಕ್ಷ್ಮಿ ಪೂಜೆಗೆ ಪೂಜಾ ಸಾಮಗ್ರಿಗಳು  ಹಾಗೂ ಪುಳಿಯೋಗರೆ ವ್ಯವಸ್ತೆ ಮಾಡಲಾಗಿತ್ತು.ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರ ಹಾದಿಯಲ್ಲಿ  ನಡೆಯುವ ಮೂಲಕ ಹೂಡಿ ವಿಜಯ್ ಕುಮಾರ್ ಅವರು ಮಹರ್ಷಿ ಆನಂದ್ ಗುರೂಜಿ ಅವರಿಂದ ಏಕಕಾಲದಲ್ಲಿ 20 ಸಾವಿರಕ್ಕೂ ಹೆಚ್ಚು ಮಹಿಳೆಯರಿಂದ ಲಕ್ಷ್ಮೀ ಪೂಜೆ  ಮಾಡಿಸಿದರು. ಈ ಸಂದರ್ಭದಲ್ಲಿ  ಶ್ವೇತಾ ವಿಜಯ್ ಕುಮಾರ್, ಬಿಜೆಪಿ ಮುಖಂಡರುಗಳಾದ  ಹನುಮಪ್ಪ ಆರ್ ಪ್ರಭಾಕರ್, ಪಿ ನಾರಾಯಣ ಸ್ವಾಮಿ, ವೆಂಕಟೇಶ್ ಗೌಡ ,ಬಿ ಆರ್ ವೆಂಕಟೇಶ್, ಹರೀಶ್ ಗೌಡ, ರಾಮಮೂರ್ತಿ ಇನ್ನಿತರರು ಹಾಜರಿದ್ದರು.

Follow Us:
Download App:
  • android
  • ios