ಮಾಡಾಳ್‌ ಕೇಸ್‌ನಲ್ಲಿ ಸರ್ಕಾರ ಮೂಗು ತೂರಿಸಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಬಂಧನ ಯಾವಾಗ, ಹೇಗೆ ಮಾಡಬೇಕು ಎಂಬುದನ್ನು ಲೋಕಾಯುಕ್ತ ಪೊಲೀಸ್‌ ನಿಶ್ಚಯ ಮಾಡುತ್ತದೆ. ಈ ಕೇಸ್‌ನಲ್ಲಿ ಸರ್ಕಾರ ಯಾವುದೇ ರೀತಿ ಮೂಗು ತೂರಿಸಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. 

home minister araga jnanendra reaction on prashanth madal case at chikkamagaluru gvd

ಬಾಳೆಹೊನ್ನೂರು (ಮಾ.05): ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಬಂಧನ ಯಾವಾಗ, ಹೇಗೆ ಮಾಡಬೇಕು ಎಂಬುದನ್ನು ಲೋಕಾಯುಕ್ತ ಪೊಲೀಸ್‌ ನಿಶ್ಚಯ ಮಾಡುತ್ತದೆ. ಈ ಕೇಸ್‌ನಲ್ಲಿ ಸರ್ಕಾರ ಯಾವುದೇ ರೀತಿ ಮೂಗು ತೂರಿಸಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ರಂಭಾಪುರಿ ಪೀಠದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಅವರ ಭ್ರಷ್ಟಾಚಾರಗಳಿಂದ ತಪ್ಪಿಸಿಕೊಳ್ಳಲು ಈ ಹಿಂದೆ ಲೋಕಾಯುಕ್ತದ ಕತ್ತು ಹಿಸುಕಿ ಇಟ್ಟಿದ್ದರು. ಆ ಕಾರಣಕ್ಕಾಗಿ ನಾವು ಇಂದು ಲೋಕಾಯುಕ್ತಕ್ಕೆ ಶಕ್ತಿ ನೀಡಿದ್ದೇವೆ. ಅವರು ಕೇಳಿದ ಪೊಲೀಸ್‌ ಅಧಿಕಾರಿಗಳನ್ನು ಕೊಟ್ಟಿದ್ದೇವೆ. ಅವರು ಕೇಳಿದ ಎಲ್ಲಾ ಅಧಿಕಾರಿಗಳನ್ನು ನೀಡಿದ್ದೇವೆ. ಹಾಗಾಗಿ ಲೋಕಾಯುಕ್ತ ಇಂದು ಬಲಗೊಂಡಿದೆ.

ಈ ಹಿಂದೆ ಲೋಕಾಯುಕ್ತ ಬಲಯುತವಾಗಿದ್ದರೆ ಇಂದು ಬಹಳಷ್ಟುಜನ ಕಾಂಗ್ರೆಸ್‌ನವರು ಜೈಲಿನಲ್ಲಿರುತ್ತಿದ್ದರು. ಆ ಕಾರಣಕ್ಕಾಗಿಯೇ ಕಾಂಗ್ರೆಸ್‌ನವರು ಲೋಕಾಯುಕ್ತವನ್ನು ಹಿಡಿದಿಟ್ಟರು. ಲೋಕಾಯುಕ್ತದ ಕೈ ಕಾಲು ಮುರಿದಿಟ್ಟರು. ಯಾವ ಅಧಿಕಾರ ಇಲ್ಲದಂತೆ ಮಾಡಿದರು. ಆದರೆ ನಮ್ಮ ಸರ್ಕಾರ ಹಾಗೆ ಮಾಡಿಲ್ಲ. ಮಾಡಾಳು ಘಟನೆ ಆಗಿದೆ. ಅದಕ್ಕೆ ಕಾನೂನು ಕಾಯ್ದೆ ಪ್ರಕಾರ ಕ್ರಮಕೈಗೊಳ್ಳಲಿದ್ದಾರೆ. ಬಿಜೆಪಿ ಸರ್ಕಾರದ ಬಗ್ಗೆ ಮಾತನಾಡಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಯಾರು? ಅವರ ಪಕ್ಷದ ಕೇಂದ್ರ, ರಾಜ್ಯ ನಾಯಕರು ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಇನ್ನೊಬ್ಬರ ಮೇಲೆ ಏನು ಹೇಳುವುದು ಕಾಂಗ್ರೆಸ್‌ನವರು.

ಚುನಾವಣೆ ವೇಳೆ ಶಾಸಕ ಶರತ್‌ ರಾಜಕೀಯ ನಾಟಕ: ಸಚಿವ ಎಂಟಿಬಿ ನಾಗರಾಜ್‌

ಮಾಡಾಳು ಘಟನೆ ಆಗಿಲ್ಲ ಎಂದು ನಾನು ಸಮರ್ಥನೆ ಮಾಡಲ್ಲ. ಅಲ್ಲಿ ವಿಚಾರಣೆ ಆಗುತ್ತಿದೆ. ತಪ್ಪು ನಡೆದಿದ್ದರೆ ಅವರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. 40% ಕಮೀಷನ್‌ ವಿಚಾರ ಚುನಾವಣಾ ಅಸ್ತ್ರ ಆಗೋದಿಲ್ಲ. ನಿರಾಧಾರ, ಅನವಶ್ಯಕವಾಗಿ ಏನು ಬೇಕಾದರೂ ಹೇಳಬಹುದು. 40% ಘಟನೆ ಬಗ್ಗೆ ದಾಖಲಾತಿ ಎಲ್ಲಿದೆ? ಗುತ್ತಿಗೆದಾರರ ಸಂಘದ ಅಧ್ಯಕ್ಷ ಯಾರೋ ಒಬ್ಬರು ದೂರಿದರೆ ಘಟನೆ ನಡೆದಿದೆ ಎನ್ನಲಾಗುವುದೇ? ನಿರ್ದಿಷ್ಟವಾಗಿ 40% ಕಮಿಷನ್‌ ಪಡೆದಿದ್ದಾರೆ ಎಂದು ಯಾರಾದರೂ ದೂರು ನೀಡಿದ್ದಾರೆಯೇ. ಕಾಂಗ್ರೆಸ್‌ ಕಾಲದಲ್ಲಿ ಕೇಂದ್ರ ಸರ್ಕಾರದಲ್ಲಿ ಸಾವಿರ, ಲಕ್ಷ ಕೋಟಿ ಹಗರಣಗಳು ನಡೆದಿವೆ. ಆದರೆ ಇವರು (ಕಾಂಗ್ರೆಸ್‌) ಈಗ ದೇಶಕ್ಕೆ ಆಚಾರ ಹೇಳುತ್ತಾರೆ ಎಂದು ದೂರಿದರು.

ತೀರ್ಥಹಳ್ಳಿ ಕ್ಷೇತ್ರ ಅಭಿ​ವೃ​ದ್ಧಿಗೆ 3250 ಕೋಟಿ ಬಿಡು​ಗ​ಡೆ: ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ವಿಕಾಸಕ್ಕೆ ಆಡಳಿತಾರೂಢ ಸರ್ಕಾರವು ಸುಮಾರು 3250 ಕೋಟಿಗಳಿಗೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದೆ. ರಸ್ತೆ, ಸೇತುವೆ, ಕುಡಿಯುವ ನೀರು ಸೇರಿದಂತೆ ಅನೇಕ ಮಹತ್ವದ ಹಾಗೂ ಜನರ ನಿರೀಕ್ಷೆಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟ​ಣಕ್ಕೆ ಸಮೀಪದ ಮತ್ತೂರಿನ ಅಮೃತ ಭಾರತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಜನೂರು ಭಾಗದ ಸುಮಾರು 73 ಬಗರ್‌ಹುಕುಂ ಸಾಗುವಳಿದಾರರ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತ​ನಾ​ಡಿ​ದರು. ಬಿಜೆಪಿ ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ ಭರವಸೆಗಳಂತೆ ಹಲವು ದಶಕಗಳಿಂದ ಉಳುಮೆ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದ ಅರ್ಹ ಫಲಾನುಭವಿಗಳಿಗೆ ಗುರುತಿಸಿ, ಪಕ್ಷಾತೀತವಾಗಿ ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದರು.

ಶಿರಸಿಯಲ್ಲಿ ಅಬ್ಬರದ ಬೇಡರ ವೇಷದ ಸಂಭ್ರಮ: ರೌದ್ರರಮಣೀಯ ಬೇಡರ ವೇಷ ನೋಡಲು ಸಹಸ್ರಾರು ಜನ

ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಗರ್‌ಹುಕುಂ ಸಮಿತಿಯನ್ನು ಹೆಚ್ಚುವರಿಯಾಗಿ ಹೋಬಳಿ ಮಟ್ಟದಲ್ಲಿ ರಚಿಸಲು ಸರ್ಕಾರದಿಂದ ಅನುಮತಿ ಕೊಡಿಸಿ, ಸುತ್ತಮುತ್ತಲ ಪ್ರದೇಶದ 5-6 ಗ್ರಾಮಗಳ ಸದಸ್ಯರನ್ನೊಳಗೊಂಡಂತೆ ಸಮಿತಿಯನ್ನು ರಚಿಸಿ, ಅವರ ಮೂಲಕ ಕಾಲಕಾಲಕ್ಕೆ ಸಭೆಗಳನ್ನು ನಡೆಸಿ, ದಾಖಲೆಗಳನ್ನು ಪರಿಶೀಲಿಸಲಾಗಿದೆ. ನಂತರ ಅರ್ಹರಾದ 73 ಫಲಾನುಭವಿಗಳಿಗೆ ಹಕ್ಕುಪತ್ರದೊಂದಿಗೆ ತಹಸೀಲ್ದಾರ್‌ ಕಚೇರಿಯಿಂದ ನೀಡಬಹುದಾದ ಎಲ್ಲ ಅಧಿಕೃತ ದಾಖಲೆಗಳನ್ನು ನೀಡಲಾಗಿದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios