ಹಿಂದಿನ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ವಿರುದ್ಧ ನಿರ್ಲಕ್ಷ್ಯ ವಹಿಸಿದ್ದರೆ, ನಮ್ಮ ಸರ್ಕಾರ ಎಡಿಜಿಪಿ ದರ್ಜೆಯ ಅಧಿಕಾರಿಯನ್ನು ಬಂಧಿಸಿ ದಿಟ್ಟತನ ತೋರಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ಜು.06): ಹಿಂದಿನ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ವಿರುದ್ಧ ನಿರ್ಲಕ್ಷ್ಯ ವಹಿಸಿದ್ದರೆ, ನಮ್ಮ ಸರ್ಕಾರ ಎಡಿಜಿಪಿ ದರ್ಜೆಯ ಅಧಿಕಾರಿಯನ್ನು ಬಂಧಿಸಿ ದಿಟ್ಟತನ ತೋರಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಸ್‌ಐ ನೇಮಕಾತಿ ಅವ್ಯವಹಾರ ಪ್ರಕರಣ ತನಿಖಾ ವಿಷಯದಲ್ಲಿ ಸರ್ಕಾರ ಅತ್ಯಂತ ಪಾರದರ್ಶಕವಾಗಿ ನಡೆದುಕೊಂಡಿದೆ.
ಪ್ರಕರಣದಲ್ಲಿ ಭಾಗಿಯಾದ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿಐಡಿಗೆ ವಹಿಸಲಾದ ಯಾವುದೇ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣಲಿಲ್ಲ. ಎಫ್‌ಐಆರ್ ಆದ ಪ್ರಕರಣಗಳಲ್ಲಿ ಚಾಜ್‌ರ್‍ಶೀಟ್ ಹಾಕಲಿಲ್ಲ. ಆದರೆ, ಎಡಿಜಿಪಿ ದರ್ಜೆಯ ಅಧಿಕಾರಿ ಬಂಧನ ಮಾಡಿದ ನಮ್ಮ ಸರ್ಕಾರದ ಬದ್ಧತೆ ಬಗ್ಗೆ ಕಾಂಗ್ರೆಸ್ ನಾಯಕರು ಗೋಬೆ ಕೂರಿಸುತ್ತಿದ್ದಾರೆ. ಇದರಲ್ಲಿ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಅಗ್ನಿಶಾಮಕಕ್ಕೆ ಈ ವರ್ಷ 2000 ಜನ ನೇಮಕ: ಗೃಹ ಸಚಿವ ಜ್ಞಾನೇಂದ್ರ
ಪ್ರಚಾರ ಖರ್ಗೆ: ಕಾಂಗ್ರೆಸ್ ಪಕ್ಷದ ನಾಯಕರ ಬಳಿ ಯಾವುದೇ ವ್ಯಕ್ತಿಯ ವಿರುದ್ಧ ಸಾಕ್ಷ್ಯಗಳು ಅಥವಾ ಅಧಾರಗಳು ಇದ್ದಲ್ಲಿ ಸಿಐಡಿಗೆ ಒದಗಿಸಲಿ. ಈ ಪ್ರಕರಣ ಸಂಬಂಧ ಶಾಸಕ ಪ್ರಿಯಾಂಕ ಖರ್ಗೆ ಸಾಕ್ಷ್ಯಗಳಿವೆ ಎಂದು ಮಾಧ್ಯಮಗಳ ಎದುರು ಹೇಳಿದ್ದರು. ಸಿಐಡಿ ಸಾಕ್ಷ್ಯ ಕೇಳಿದರೆ ಕೊಡಲಿಲ್ಲ. ಪ್ರಿಯಾಂಕ ಖರ್ಗೆ ಪ್ರಚಾರ ಖರ್ಗೆ ಆಗಿದ್ದಾರೆ. ಸಾಕ್ಷ್ಯ ಇಲ್ಲದೆ ಮಾಧ್ಯಮಗಳ ಎದುರು ಮಾತನಾಡುತ್ತಾರೆ ಅಷ್ಟೇ ಎಂದರು.
ಸದನದಲ್ಲಿ ಉತ್ತರ ನೀಡುವಾಗ ಸಾಕ್ಷ್ಯಾಧಾರ ಇರಲಿಲ್ಲ: ಪಿಎಸ್‌ಐ ಪರೀಕ್ಷೆ ಹಗರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಮೃತ್ ಪಾಲ್ ಬಂಧನದಿಂದ ಸರ್ಕಾರಕ್ಕೆ ಮುಜುಗರ ಆಗುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಸೋಮವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸದನದಲ್ಲಿ ಉತ್ತರ ನೀಡುವ ವೇಳೆ ಆಗ ಸೂಕ್ತ ಸಾಕ್ಷ್ಯಾಧಾರ ಇರಲಿಲ್ಲ. ತಿದ್ದಿದ್ದ ಒಎಂಆರ್ ಶಿಟ್ ದೊರಕಿದ ತಕ್ಷಣ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಉನ್ನತ ತನಿಖೆಗಾಗಿ ಸಿಐಡಿಗೆ ನೀಡಲಾಯಿತು. ಎರಡು ಗಂಟೆಯಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಯಿತು ಎಂದರು.
ಅತ್ಯಂತ ಪಾರದರ್ಶಕವಾಗಿ ವಿಚಾರಣೆಯಾಗಿದೆ. ಸರ್ಕಾರದ ಯಾವುದೇ ಹಸ್ತಕ್ಷೇಪ ಇಲ್ಲದೆ ವಿಚಾರಣೆ ನಡೆದಿದೆ. ಪರೀಕ್ಷೆಯಲ್ಲಾಗುವ ಅಪರಾಧ ತಡೆಗಟ್ಟಲು ತನಿಖೆ ನಡೆಸಿ ಪ್ರಕರಣದ ರೂವಾರಿಗಳನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮದ ಬಗ್ಗೆ ಸಾಕ್ಷ್ಯಾಧಾರ ಸಿಕ್ಕಿದ ಬಳಿಕ ತನಿಖೆ ನಡೆದಿದ್ದು, ಹಲವರನ್ನು ಬಂಧಿಸಲಾಗಿದೆ. ಈಗ ಹಿರಿಯ ಪೊಲೀಸ್ ಅಧಿಕಾರಿ ಅಮೃತ್ ಪಾಲ್ ಬಂಧನವಾಗಿದೆ ಎಂದು ಹೇಳಿದರು. ವರ್ಷಗಟ್ಟಲೇ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳು ಬೀದಿಯಲ್ಲಿ ನಿಂತಿದ್ದಾರೆ. ಅವರ ಬಾಯಿಗೆ ಮಣ್ಣು ಹಾಕುವ ಕೆಲಸವನ್ನು ಮಾಡಲಾಗಿದೆ.
Udaipur Murder; ಬುದ್ದಿ ಜೀವಿಗಳ ನಾಲಿಗೆಗೆ ಲಕ್ವಾ ಹೊಡೆದಿದೆಯಾ? :ಗೃಹ ಸಚಿವ
ಇನ್ನು ಮುಂದೆ ದುಡ್ಡು ಕೊಟ್ಟರೆ ಜೈಲಿಗೆ ಹೋಗಲಾಗುತ್ತದೆ ಎಂಬುದನ್ನು ನಮ್ಮ ಸರ್ಕಾರ ತೋರಿಸಿಕೊಟ್ಟಿದೆ. ಸದನದಲ್ಲಿ ಉತ್ತರ ನೀಡುವ ವೇಳೆ ಆಗ ಸೂಕ್ತ ಸಾಕ್ಷ್ಯಾಧಾರ ಇರಲಿಲ್ಲ. ತಿದ್ದಿದ್ದ ಒಎಂಆರ್ ಶಿಟ್ ದೊರಕಿದ ತಕ್ಷಣ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಉನ್ನತ ತನಿಖೆಗಾಗಿ ಸಿಐಡಿಗೆ ನೀಡಲಾಯಿತು. ಎರಡು ಗಂಟೆಯಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಯಿತು. ಸತ್ಯಾಸತ್ಯತೆ ತಿಳಿಯುವವರೆಗೆ ಹೇಗೆ ಉತ್ತರ ನೀಡಲು ಸಾಧ್ಯ? ನಾನು ಉತ್ತರ ನೀಡುವ ದಿನ ತನಿಖೆಗೆ ಆದೇಶ ಆಗಿರಲಿಲ್ಲ ಎಂದರು. ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ವರ್ಷ ಸರ್ಕಾರ ನಡೆಸಿದವರು.
