ಹೊಳಲ್ಕೆರೆÜ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಎಂ.ಚಂದ್ರಪ್ಪ ಬುಧವಾರ ನಾಮಪತ್ರ ಸಲ್ಲಿಸಿದರು. ಈ ಸಂಬಂಧ ನಡೆದ ರೋಡ್‌ಶೋ ನಲ್ಲಿ 25 ಸಹಸ್ರಕ್ಕೂ ಹೆಚ್ಚು ಬಿಜೆಪಿ ಬೆಂಬಲಿಗರು ಪಾಲ್ಗೊಂಡಿದ್ದರು. ಇಡೀ ಹೊಳಲ್ಕೆರೆ ಕೇಸರಿ ಬಣ್ಣದಲ್ಲಿ ಮಿಂದೆದ್ದಂತೆ ಕಂಡು ಬಂತು. ಕೈಯಲ್ಲಿ ಬಿಜೆಪಿ ಬಾವುಟ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ ಬೆಂಬಲಿಗರು ಮೋದಿ ಪರವಾಗಿ ಘೋಷಣೆ ಕೂಗುತ್ತಾ ಸಾಗಿದ್ದು ವಿಶೇಷವಾಗಿತ್ತು.

ಹೊಳಲ್ಕೆರೆ (ಏ.20) : ಹೊಳಲ್ಕೆರೆÜ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಎಂ.ಚಂದ್ರಪ್ಪ ಬುಧವಾರ ನಾಮಪತ್ರ ಸಲ್ಲಿಸಿದರು. ಈ ಸಂಬಂಧ ನಡೆದ ರೋಡ್‌ಶೋ ನಲ್ಲಿ 25 ಸಹಸ್ರಕ್ಕೂ ಹೆಚ್ಚು ಬಿಜೆಪಿ ಬೆಂಬಲಿಗರು ಪಾಲ್ಗೊಂಡಿದ್ದರು. ಇಡೀ ಹೊಳಲ್ಕೆರೆ ಕೇಸರಿ ಬಣ್ಣದಲ್ಲಿ ಮಿಂದೆದ್ದಂತೆ ಕಂಡು ಬಂತು. ಕೈಯಲ್ಲಿ ಬಿಜೆಪಿ ಬಾವುಟ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ ಬೆಂಬಲಿಗರು ಮೋದಿ ಪರವಾಗಿ ಘೋಷಣೆ ಕೂಗುತ್ತಾ ಸಾಗಿದ್ದು ವಿಶೇಷವಾಗಿತ್ತು.

ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಎಂ.ಚಂದ್ರಪ್ಪ(M Chandrappa), ಕಳೆದ ಐದು ವರ್ಷಗಳಿಂದ ಹೊಳಲ್ಕೆರೆ(Holalkere constituency) ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಹಗಲು-ರಾತ್ರಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ನಾನು ಮಾತನಾಡಲ್ಲ. ನನ್ನ ಅಭಿವೃದ್ಧಿ ಕೆಲಸಗಳೇ ಮಾತನಾಡುತ್ತವೆ. ಮಾಡಿದ ಕೆಲಸಕ್ಕೆ ಜನರಿಂದ ಮತ ಕೂಲಿ ಕೇಳುತ್ತಿದ್ದೇನೆ ಎಂದರು.

ಆಂಜನೇಯರಿಂದ ನಯಾಪೈಸೆ ಕೆಲಸ ಆಗಿಲ್ಲ, ಈಗ ಗ್ಯಾರೆಂಟಿ ಕಾರ್ಡ್ ಯಾಕೆ?: ಶಾಸಕ ಎಂ ಚಂದ್ರಪ್ಪ ಕಿಡಿ

496 ಹಳ್ಳಿಗಳಲ್ಲಿ ಸಿಸಿ ರಸ್ತೆ, ಟಾರ್‌ ರಸ್ತೆ, ಕೆರೆ ಕಟ್ಟೆ, ಚೆಕ್‌ಡ್ಯಾಂಕ್‌ಗಳನ್ನು ನಿರ್ಮಿಸಿ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ಹಾಗೂ ವಿದ್ಯುತ್‌ ಸಮಸ್ಯೆ ನಿವಾರಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ. ಪಂಡರಹಳ್ಳಿ, ಮಧುರೆ, ಬೆಂಕಿಕೆರೆಯಿಂದ ಒಂದೊಂದು ದೊಡ್ಡ ಹೈಟೆನ್‌್ಷನ್‌ ವಿದ್ಯುತ್‌ ಲೈನ್‌ ತಂದು ದಿನಕ್ಕೆ ಐದಾರು ಗಂಟೆಗಳ ಕಾಲ ರೈತರಿಗೆ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ. ಇದರ ಜೊತೆಗೆ ಜೋಗ್‌ಫಾಲ್ಸ್‌ನ ಶರಾವತಿಯಿಂದ ನೇರವಾಗಿ ಚಿಕ್ಕಜಾಜೂರಿನ ಕೋಟೆಹಾಳ್‌ ಸಮೀಪ 220 ಮೆ.ವ್ಯಾ. ವಿದ್ಯುತ್‌ ತರಿಸಿಕೊಳ್ಳುವುದಕ್ಕಾಗಿ 250 ಕೋಟಿ ರು. ಖರ್ಚು ಮಾಡಲಾಗುತ್ತಿದೆ. ಇಲ್ಲಿಂದ ಗೆದ್ದು ಹೋಗಿ ಮಂತ್ರಿಯಾಗಿದ್ದವರು ಇಲ್ಲಿವರೆಗೂ ಕ್ಷೇತ್ರವನ್ನು ಏಕೆ ಅಭಿವೃದ್ಧಿ ಮಾಡಲಿಲ್ಲ. ಚುನಾವಣೆ ಸಮಯದಲ್ಲಿ ಗ್ಯಾರಂಟಿ ಕಾರ್ಡ್‌ ಕೊಡಲು ಬಂದರೆ ಜನ ಮರುಳಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.

ಹಿರಿಯೂರಿನ ವಾಣಿವಿಲಾಸ ಸಾಗರ(Vanivilas)ದಿಂದ ನೇರವಾಗಿ ನೀರು ತಂದು ಪ್ರತಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವುದಕ್ಕಾಗಿ ಐದು ನೂರ ಹತ್ತು ಕೋಟಿ ರು.ಗಳನ್ನು ಖರ್ಚು ಮಾಡಲಾಗಿದೆ ಎಂದರು.

ವಿಧಾನಪರಿಷತ್‌ ಸದಸ್ಯ ಕೆ.ಎಸ್‌. ನವೀನ್‌(KS Navin) ಮಾತನಾಡಿ, ಎಂ.ಚಂದ್ರಪ್ಪನವರು ಎಲ್ಲಾ ಇಲಾಖೆಗಳಿಂದ ಸಾವಿರಾರು ಕೋಟಿ ರು.ಗಳ ಅನುದಾನ ತಂದು ಹೊಳಲ್ಕೆರೆ ಪಟ್ಟಣವನ್ನು ಅಭಿವೃದ್ಧಿಪಡಿಸಿದ್ದಾರೆ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಧಾನಿ ಮೋದಿ ರಾಜ್ಯದ ಮುಖ್ಯಮಂತ್ರಿ ಬಸವರಾಜ್‌ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಮಹತ್ವಾಕಾಂಕ್ಷಿ ಯೋಜನೆಗಳನ್ನು ತಿಳಿಸಿ ಎಂ.ಚಂದ್ರಪ್ಪನವರನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗುತ್ತೇವೆಂದು ತಿಳಿಸಿದರು.

ಸುಳ್ಳು, ಭ್ರಷ್ಟಾಚಾರ ಹೊಳಲ್ಕೆರೆ ಬಿಜೆಪಿ ಶಾಸಕರ ಮನೆದೇವರು; ಮಾಜಿ ಸಚಿವ ಆಂಜನೇಯ ವಾಗ್ದಾಳಿ

ಜಿಲ್ಲಾಧ್ಯಕ್ಷ ಎ.ಮುರಳಿ, ಯುವ ಮುಖಂಡರಾದ ಜಿ.ಎಸ್‌.ಅನಿತ್‌ಕುಮಾರ್‌, ರಘುಚಂದನ್‌, ಮಂಡಲ ಅಧ್ಯಕ್ಷರಾದ ಸಿದ್ದೇಶ್‌, ಶೈಲೇಶ್‌, ವಕ್ತಾರರಾದ ನಾಗರಾಜ್‌ ಬೇದ್ರೆ, ದಗ್ಗೆ ಶಿವಪ್ರಕಾಶ್‌, ರೂಪಾ ಸುರೇಶ್‌, ಪ್ರವೀಣ, ಇಂದ್ರಪ್ಪ, ಡಿ.ಸಿ.ಮೋಹನ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ಡಿ.ವಿ.ಶರಣಪ್ಪ, ತಿಪ್ಪೇಸ್ವಾಮಿ, ಮಹೇಶ್ವರಪ್ಪ, ಚಿತ್ರಹಳ್ಳಿ ದೇವರಾಜ್‌, ಮಂಜಣ್ಣ ಕೋಗುಂಡೆ, ನ್ಯಾಯವಾದಿ ಶಿವಕುಮಾರ್‌ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.